- ನಿಗದಿತ ಬೆಳಗ್ಗೆ 6ರಿಂದ 10 ಗಂಟೆ ನಂತರ ಮನೆಯಿಂದ ಹೊರಬಂದವರಿಗೆ ಪೊಲೀಸರ ಲಾಠಿ ರುಚಿ
- ವಿನಾಯ್ತಿ ಇದ್ದ ಸೇವೆ, ಸರಕು ಮಾರಾಟ-ಖರೀದಿಗೆ ಅವಕಾಶ
- ಗೂಡ್ಸ್ ವಾಹನಗಳಿಗೆ ಮುಕ್ತಾವಕಾಶ
- ಹೋಟೆಲ್, ಬೇಕರಿಗಳಲ್ಲಿ ಪಾರ್ಸಲ್ಗೆ ಅಡ್ಡಿಯಿಲ್ಲ
ಬೆಂಗಳೂರು, ಏ. 28(ಕೆಎಂಶಿ)- ಕೊರೊನಾ ತಡೆಗಾಗಿ ರಾಜ್ಯದಲ್ಲಿ ಘೋಷಿ ಸಲಾಗಿರುವ 14 ದಿನಗಳ ಜನತಾ ಕಫ್ರ್ಯೂಗೆ ಬೇಡವಾಗಿದ್ದರೂ ಜನತೆ ಸ್ಪಂದಿಸಿದ್ದಾರೆ.
ಸೋಂಕಿನ ಭೀತಿಯಲ್ಲಿರುವ ಜನತೆ ಸರ್ಕಾರದ ನಿರ್ಧಾರವನ್ನು ಪಾಲಿಸು ತ್ತಿರುವುದಲ್ಲದೆ, ತಮ್ಮ ಹೊಟ್ಟೆಪಾಡಿಗಾಗಿ ಕೆಲವರು ಬೀದಿಗೆ ಬಂದಾಗ ಅಂತಹವರ ಮೇಲೆ ಪೊಲೀಸರು ಕೆಲವೆಡೆ ಅಟ್ಟಾಡಿ ಸಿದ್ದಾರೆ. ಸೋಂಕು ತಡೆಗಾಗಿ ಸರ್ಕಾರ ರಾಜ್ಯಾದ್ಯಂತ ಬಿಗಿ ಬಂದೋಬಸ್ತ್ ಮಾಡಿದೆ. ಅನಗತ್ಯವಾಗಿ ರಸ್ತೆಗಿಳಿಯುವುದನ್ನು ತಪ್ಪಿಸಲು ಪೊಲೀಸರು ಲಾಠಿ ಹಿಡಿದು ಬೆದರಿಸಿದ್ದಾರೆ. ರಾಜ್ಯ ಸರ್ಕಾರ ತಂದಿ ರುವ ಜನತಾ ಕಫ್ರ್ಯೂವನ್ನು ಸಮರ್ಪಕ ವಾಗಿ ಅನುಷ್ಠಾನಗೊಳಿಸುವ ಹೊಣೆ ಗಾರಿಕೆಯನ್ನು ಸಂಬಂಧಪಟ್ಟ ಜಿಲ್ಲಾಧಿ ಕಾರಿ ಮತ್ತು ತಾಲೂಕು ತಹಶೀಲ್ದಾರ್ ಅವರಿಗೆ ವಹಿಸಿದೆ. ಜೊತೆಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಹಿರಿಯ ಪೊಲೀಸ್ ಅಧಿಕಾರಿಗಳನ್ನೇ ನಿಯೋಜಿಸಲಾಗಿದೆ. ಇದರಿಂದ ಕಫ್ರ್ಯೂ ಬಹುತೇಕ ಯಶಸ್ವಿ ಕಂಡಿದೆ.
ಬೆಳಗ್ಗೆ 6 ರಿಂದ 10 ಗಂಟೆಯವರೆಗೂ ಅವಶ್ಯಕ ವಸ್ತುಗಳನ್ನು ಖರೀದಿಸಲು ಮುಕ್ತ ಅವಕಾಶ ಕೊಡಲಾಗಿದೆ. ಆನಂತರ ಅಗತ್ಯ ಸೇವೆಯಿಂದ ಹೊರತುಪಡಿಸಿ, ಬೇರೆ ಯವರು ರಸ್ತೆಗಿಳಿದರೆ, ಪೊಲೀಸರು ಬೆತ್ತದ ರುಚಿ ತೋರಿದ್ದಾರೆ. ನಿಗದಿತ ಸಮಯದ ನಂತರವೂ ಹೊಟ್ಟೆಪಾಡಿಗಾಗಿ ಸಣ್ಣ ವ್ಯಾಪಾರ ಮಾಡುತ್ತಿದ್ದವರಿಗೂ ಅವಕಾಶ ಮಾಡಿಕೊಟ್ಟಿಲ್ಲ. ಆಸ್ಪತ್ರೆ ಮತ್ತು ವೈದ್ಯಕೀಯ ಸೇವೆಗಳಿಗೆ ತೆರಳುವವರಿಗೆ ಯಾವುದೇ ನಿರ್ಬಂಧ ವಿಧಿಸಿರಲಿಲ್ಲ. ಇನ್ನು ಸರ್ಕಾರಿ ಕಚೇರಿ, ಬ್ಯಾಂಕುಗಳು, ಕೈಗಾ ರಿಕಾ ಕಾರ್ಮಿಕರು ಸೇವೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಗುರುತಿನ ಚೀಟಿ ಯನ್ನು ಕಡ್ಡಾಯವಾಗಿ ಪೊಲೀಸರಿಗೆ ತೋರಿಸಿ, ಮುಂದೆ ಸಾಗಬೇಕು.
ಇನ್ನು ರಾಜಧಾನಿ ಬೆಂಗಳೂರು ಸರ ಹದ್ದನ್ನು ಸಂಪೂರ್ಣ ಬಂದ್ ಮಾಡ ಲಾಗಿದೆ. ರಾಜ್ಯದಲ್ಲಿ ಹೆಚ್ಚು ಸೋಂಕು ಕಾಣುತ್ತಿರುವ ಹಿನ್ನೆಲೆಯಲ್ಲಿ ವಿನಾಕಾರಣ ಯಾರೂ ಹೊರಗೆ ಹೋಗುವಂತಿಲ್ಲ. ಹಾಗೆಯೇ ಹೊರಗಿನವರು ಒಳಗೆ ಬರುವಂತಿಲ್ಲ. ಆದರೆ ಸರಕು ಸಾಗಾಣಿಕೆ ಮತ್ತು ಅತ್ಯವಶ್ಯಕ ಸೇವೆಗಳ ವಾಹನಗಳಿಗೆ ರಾಜ್ಯಾದ್ಯಂತ ಮುಕ್ತ ಅವಕಾಶ ನೀಡಲಾ ಗಿದೆ. ಈ ಮಧ್ಯೆ ಪೊಲೀಸ್ ಮಹಾ ನಿರ್ದೇಶಕರು ಯಾರು ರಸ್ತೆಯಲ್ಲಿ ಸಂಚರಿಸಬೇಕು ಅಂತಹವರು ಯಾವ್ಯಾವ ಪಾಸುಗಳನ್ನು ಹೊಂದಿರಬೇಕು ಎಂಬು ದರ ಬಗ್ಗೆ ಮಾಹಿತಿ ಬಿಡುಗಡೆ ಮಾಡಿ ದ್ದಾರೆ. ಒಂದು ವೇಳೆ ತುರ್ತಾಗಿ ಪ್ರಯಾಣ ಬೆಳಸಬೇಕಿದ್ದರೆ, ಕಾರಣ ಮತ್ತು ದಾಖಲೆ ನೀಡಿ, 12 ಗಂಟೆಗಳ ಮಟ್ಟಿಗೆ ಪಾಸ್ ಪಡೆದು, ಪ್ರಯಾಣ ಮಾಡಬಹುದಾಗಿದೆ. ಕಫ್ರ್ಯೂ ಬಗ್ಗೆ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂಕಷ್ಟ ಎದುರಿಸಲು ಇಂತಹ ಕಠಿಣ ನಿಲುವು ಅನಿವಾರ್ಯ ವಾಗಿದೆ. ಜನರು ಸರ್ಕಾರದೊಂದಿಗೆ ಕೈಜೋಡಿಸಿ, ಮನೆಯಲ್ಲೇ ಉಳಿದು ಕೊಂಡು ಸೋಂಕು ನಿವಾರಣೆಗೆ ಸಹಕರಿಸಬೇಕೆಂದು ಮನವಿ ಮಾಡಿದ್ದಾರೆ.