ಚಾಮುಂಡಿಬೆಟ್ಟದಲ್ಲಿ ಮತ್ತೆ ಭಾರೀ ಭೂಕುಸಿತ ಮಳೆ ನಿಲ್ಲದಿದ್ದರೆ ದೊಡ್ಡ ಹಾನಿ ಸಂಭವ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಮತ್ತೆ ಭಾರೀ ಭೂಕುಸಿತ ಮಳೆ ನಿಲ್ಲದಿದ್ದರೆ ದೊಡ್ಡ ಹಾನಿ ಸಂಭವ

November 19, 2021

ಮೈಸೂರು,ನ.೧೮(ಎAಟಿವೈ)- ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚಾಮುಂಡಿಬೆಟ್ಟದ ನಂದಿ ರಸ್ತೆ ಅಪಾಯದ ಸ್ಥಿತಿ ತಲುಪಿದ್ದು, ಗುರುವಾರ ಮುಂಜಾನೆಯೂ ದೊಡ್ಡ ಪ್ರಮಾಣ ದಲ್ಲಿ ಭೂಕುಸಿತ ಸಂಭವಿಸಿದೆ. ಈ ರಸ್ತೆಯಲ್ಲಿ ನಾಲ್ಕನೇ ಬಾರಿ ಭೂಕುಸಿತವಾಗುತ್ತಿದ್ದು, ಭಾರೀ ಕಂದಕ ಉಂಟಾಗಿದೆ. ಇದರಿಂದ ಈ ರಸ್ತೆ ಸಂಪೂರ್ಣವಾಗಿ ಬಂದ್ ಆಗಿದೆ. ಮಳೆ ಹೀಗೆ ಮುಂದು ವರೆದರೆ ಮತ್ತಷ್ಟು ಅನಾಹುತ ಸಂಭವಿಸುವ ಸಾಧ್ಯತೆಗಳಿವೆ.

ನ.೧೩ರಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಭೇಟಿ ನೀಡಿ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸುವ ಮೂಲಕ ಬೆಟ್ಟದ ಕುಸಿತ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬೆನ್ನ ಹಿಂದೆಯೇ ಬೆಟ್ಟದ ನಂದಿ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಕಳೆದ ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಈ ಹಿಂದೆ ಕುಸಿದಿದ್ದ ಭಾಗದಲ್ಲೇ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿದೆ. ಈ ಹಿಂದೆ ಕುಸಿದಿದ್ದ ಸ್ಥಳಕ್ಕೆ ಹೊಂದಿಕೊAಡAತೆ ಎರಡೂ ಬದಿಯಲ್ಲೂ ಭಾರೀ ಪ್ರಮಾಣದಲ್ಲಿ ಮಣ್ಣು ಹಳ್ಳಕ್ಕೆ ಜಾರಿದೆ. ಇದರಿಂದ ಆ ಭಾಗದಲ್ಲಿ ರಸ್ತೆ ಪೂರ್ಣ ಪ್ರಮಾಣದಲ್ಲಿ ನಾಶವಾ ಗಿದೆ. ಈ ಹಿಂದೆ ರಸ್ತೆ ಕೆಲವೊಂದಷ್ಟು ಭಾಗ ಕುಸಿದಿತ್ತು. ಈಗ ರಸ್ತೆ ದಿಬ್ಬದ ಅಂಚಿನವರೆಗೂ ಭಾರಿ ಗಾತ್ರದಲ್ಲಿ ಕೊರೆತ ಉಂಟಾಗಿರುವುದರಿAದ ನಂದಿ ಮಾರ್ಗದ ರಸ್ತೆ ಶಾಶ್ವತವಾಗಿ ಕಣ್ಮರೆಯಾಗುವ ಆತಂಕ ಎದುರಾಗಿದೆ. ಮಳೆ ಹೆಚ್ಚಾಗಿ ಬಿದ್ದ ಪರಿಣಾಮ ನೀರು ಇಂಗುವಿಕೆ ಪ್ರಮಾಣ
ಹೆಚ್ಚಾಗಿ ತೇವಾಂಶದಿAದ ಸಡಿಲಗೊಂಡಿದ್ದ ಮಣ್ಣು ಕುಸಿದಿದೆ ಎಂದು ತಜ್ಞರು ಈಗಾಗಲೇ ಅಭಿಪ್ರಾಯಪಟ್ಟಿದ್ದಾರೆ. ಗುಡ್ಡಗಾಡು ಪ್ರದೇಶದಲ್ಲಿ ಮಳೆ ಹೆಚ್ಚಾಗಿ ನೀರು ಇಂಗುವಿಕೆ ಪ್ರಮಾಣ ಹೆಚ್ಚಾದಾಗ ಸಡಿಲಗೊಂಡ ಮಣ್ಣು ಕುಸಿಯುವುದು ಸಾಮಾನ್ಯ. ನೀರು ಹೆಚ್ಚಾಗಿ ಇಂಗಿದಾಗÀ ತೇವಾಂಶ ಅತಿಯಾಗಿ ಮೇಲೆ ಬಂದು ಮಣ್ಣು ಸಡಿಲಗೊಳ್ಳುತ್ತದೆ ಎಂದು ತಂತ್ರಜ್ಞರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಇಂಡಿಯನ್ ಇನ್ಸ್ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆ ನೀಡಿದ ಸಲಹೆಯನ್ನು ಲೋಕೋಪಯೋಗಿ ಇಲಾಖೆ ಸಕಾರಾತ್ಮಕವಾಗಿ ಪರಿಗಣ ಸಿದ್ದು, ಮಳೆ ನಿಂತ ನಂತರ ಜಿಯೋ ಟ್ರೇಲ್ ಟೆಕ್ನಾಲಜಿ ಬಳಸಿ ರಿಟೇನಿಂಗ್ ವಾಲ್ ನಿರ್ಮಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ಜಿಯೋ ಟ್ರೇಲ್ ಟೆಕ್ನಾಲಜಿಯಿಂದ ಕಲ್ಲು ಹಾಗೂ ಜಿಯೋ ಮೆಸ್ ಹಾಕಿ ವಾಲ್ ಕಟ್ಟಲಾಗುತ್ತದೆ. ಎಷ್ಟೇ ನೀರು ಹರಿದು ಬಂದರೂ ರಸ್ತೆಗೆ ಯಾವುದೇ ಹಾನಿಯಾಗುವುದಿಲ್ಲ, ಕುಸಿಯುವುದೂ ಇಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Translate »