ಲಿಂಗಾAಬುದಿ ಕೆರೆಯ ನೀರಿನಿಂದ ನೂರಾರು ಮನೆಗಳು ಜಲಾವೃತ
ಮೈಸೂರು

ಲಿಂಗಾAಬುದಿ ಕೆರೆಯ ನೀರಿನಿಂದ ನೂರಾರು ಮನೆಗಳು ಜಲಾವೃತ

November 19, 2021

ಸಾವಿರಾರು ನಿವಾಸಿಗಳು ಕಂಗಾಲು

ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳದ ಮುಡಾ ಅಧಿಕಾರಿಗಳಿಗೆ ಹಿಡಿಶಾಪ

ಮೈಸೂರು, ನ.೧೮(ಎಂಟಿವೈ)- ಮುಡಾ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಲಿಂಗಾAಬುದಿ ಕೆರೆಯ ಪೂರ್ವ ದಿಕ್ಕಿನಲ್ಲಿರುವ ಕೋಡಿಯ ಕಟ್ಟೆಯನ್ನು ಒಡೆದು ನೀರನ್ನು ಹೊರಬಿಟ್ಟ ಪರಿಣಾಮ ಕೆಲ ಬಡಾವಣೆಗಳ ನೂರಾರು ಮನೆಗಳು ಜಲಾವೃತವಾಗಿ ನಿವಾಸಿಗಳು ನರಕಯಾತನೆ ಅನುಭವಿಸುವಂತಾಗಿದೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚುತ್ತಿದೆ. ಲಿಂಗಾAಬುದಿ ಕೆರೆ ಭರ್ತಿಯಾಗುತ್ತಿದ್ದು, ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಲು ೪ ಅಡಿ ಮಾತ್ರ ಬಾಕಿಯಿದೆ. ಕೆರೆಯ ಭದ್ರತಾ ದೃಷ್ಟಿಯಿಂದ ಮುಡಾ ಅಧಿಕಾರಿಗಳು ಬುಧವಾರ ಬೆಳಗ್ಗೆ ಕೆರೆಯ ಪೂರ್ವ ದಿಕ್ಕಿನಲ್ಲಿರುವ ಸರ್ವೆ ನಂ.೨೦ರಲ್ಲಿ ನಿರ್ಮಿಸಿರುವ ಕೋಡಿಕಟ್ಟೆಯನ್ನು ಎರಡೂವರೆ ಅಡಿ ಒಡೆದು ನೀರನ್ನು ಹೊರ ಬಿಟ್ಟಿದ್ದಾರೆ. ಕೆರೆಯ ನೀರು ಸರಾಗವಾಗಿ ಹರಿದು ಹೋಗಲು ರಾಜಕಾಲುವೆ ನಾಪತ್ತೆಯಾಗಿದೆ. ಈಗ ಅವುಗಳ ಸಂಪರ್ಕ ಕಡಿತ ಗೊಂಡಿರುವುದರಿAದ ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಬುಧವಾರ ಕಾಲುವೆ ಯೊಂದನ್ನು ತೋಡಲಾಗಿತ್ತು. ಆದರೆ ಕೆರೆಯಿಂದ ಹೊರ ಬಂದ ನೀರಿನ ಪ್ರಮಾಣ ಹೆಚ್ಚಾಗಿದ್ದ ಪರಿಣಾಮ ನೀರು ರಸ್ತೆ ಮೇಲೆ ಹರಿದು ಚರಂಡಿಗಳು ತುಂಬಿ ಹರಿಯುತ್ತಿವೆ. ಅಲ್ಲದೆ, ರಸ್ತೆಗಳಲ್ಲೆಲ್ಲಾ ನೀರು ನಿಂತು ಅಪರ್ಣ ಲೇಔಟ್, ವೀರರಾಜ ಅರಸ್ ಲೇಔಟ್, ಕೆಎಸ್‌ಆರ್‌ಟಿಸಿ ಲೇಔಟ್ ಸೇರಿದಂತೆ ಕೆಲ ಬಡಾವಣೆಗಳ ನೂರಾರು ಮನೆಗಳು ಜಲಾವೃತವಾಗಿವೆ. ಕೆಲವೆಡೆ ಮನೆಗಳಿಗೂ ನೀರು ನುಗ್ಗಿರುವ ಬಗ್ಗೆ ವರದಿಯಾಗಿದೆ.

Hundreds of houses with the waters of the Lingabudi Lake Aquatic

ಕೆರೆಯ ತಗ್ಗುಪ್ರದೇಶದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಲ್ಲಿರುವ ಚರಂಡಿ ಹಾಗೂ ಒಳಚರಂಡಿ ತುಂಬಿ ಹರಿಯುತ್ತಿವೆ. ರಸ್ತೆಗಳಲ್ಲಿ ನದಿಯಂತೆ ರಭಸವಾಗಿ ನೀರು ಹರಿಯುತ್ತಿರುವುದರಿಂದ ನಿವಾಸಿಗಳು ಮಕ್ಕಳನ್ನು ಹೊರಬಿಡಲು ಭಯಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಮುಡಾ ಅಧಿಕಾರಿಗಳ ಈ ಕ್ರಮದಿಂದಾಗಿ ಮನೆಗಳಿಗೆ ಕೆರೆಯ ನೀರು ನುಗ್ಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಕೆರೆಯ ಹಿನ್ನೀರಿನಲ್ಲಿರುವ ಪ್ರಭಾವಿಗಳ ಜಮೀನಿಗೆ ನೀರು ನುಗ್ಗುವುದನ್ನು ತಡೆಯುವ ಉದ್ದೇಶದಿಂದ ಅಧಿಕಾರಿಗಳು ಕೋಡಿ ಕಟ್ಟೆಯನ್ನೇ ಒಡೆದಿದ್ದಾರೆ ಎಂದು ಕೆಲವರು ಆಪಾದಿಸಿದ್ದು, ಕೆರೆಯ ಭದ್ರತೆಗಾಗಿ ಕೋಡಿಕಟ್ಟೆ ಒಡೆಯಬೇಕಾದ ಅನಿವಾರ್ಯತೆ ಇದ್ದಲ್ಲಿ ಹೊರ ಬಿಡುವ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕಾಗಿತ್ತು. ರಾಜಕಾಲುವೆಗೆ ಸಂಪರ್ಕ ಕಲ್ಪಿಸಲು ಅಗತ್ಯ ಕ್ರಮ ಕೈಗೊಂಡ ನಂತರ ಕೋಡಿಕಟ್ಟೆ ಒಡೆಯಬೇಕಿತ್ತು. ಆದರೆ ಕಟ್ಟೆ ಒಡೆದು ನೀರು ರಸ್ತೆಗೆ ಹರಿಯಲಾರಂಭಿಸಿದ ನಂತರ ಮುಚ್ಚಿ ಹೋಗಿರುವ ರಾಜಕಾಲುವೆಯನ್ನು ತೋಡಿ ಸಂಪರ್ಕ ಕಲ್ಪಿಸಲು ಕೆಲಸ ಮಾಡುತ್ತಿರುವುದು ಅಧಿಕಾರಿಗಳ ಬೇಜವಬ್ದಾರಿತನ ಎಂದು ದೂಷಿಸಿದ್ದಾರೆ.
ಈ ಸಂಬAಧ ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿದ ಮುಡಾ ಆಯುಕ್ತ ಡಾ. ಡಿ.ಬಿ. ನಟೇಶ್, ಕೆರೆಯ ಭದ್ರತೆ ದೃಷ್ಟಿಯಿಂದ ಕೋಡಿಕಟ್ಟೆಯ ಸುಮಾರು ಎರಡೂವರೆ ಅಡಿ ಒಡೆದು ನೀರನ್ನು ಹೊರಬಿಡಲಾಗಿದೆ. ಅರಣ್ಯ ಇಲಾಖೆಯವರು ಹೆಚ್ಚುವರಿಯಾಗಿ ನಿರ್ಮಿಸಿದ್ದ ಎರಡೂವರೆ ಅಡಿಯನ್ನಷ್ಟೇ ಒಡೆಯಲಾಗಿದ್ದು, ನೀರು ಹರಿದು ಹೋಗಲು ರಾಜಕಾಲುವೆ ಇದೆ. ಆದರೆ ಕಾಲುವೆ ಕೆಲವೆಡೆ ಮುಚ್ಚಿಹೋಗಿದ್ದು, ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಕಳೆದ ೨ ದಿನಗಳಿಂದಲೂ ಜೆಸಿಬಿ ಮೂಲಕ ಕಾಲುವೆಗಳನ್ನು ತೋಡಿ ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕಾರ್ಯ ನಡೆಯುತ್ತಿದೆ. ರಾಜಕಾಲುವೆಯ ಸಂಪರ್ಕ ಕಡಿತದಿಂದ ಕೆಲವೆಡೆ ರಸ್ತೆಗೆ ನೀರು ಹರಿದಿದೆ. ಆದರೆ ಮನೆಗಳಿಗೆ ನೀರು ನುಗ್ಗಿಲ್ಲ. ರಾಜಕಾಲುವೆಗೆ ಸಂಪರ್ಕ ಕಲ್ಪಿಸುವ ಕೆಲಸ ತ್ವರಿತಗತಿಯಿಂದ ನಡೆಯುತ್ತಿದ್ದು, ನಾಳೆ ವೇಳೆಗೆ ಸಮಸ್ಯೆ ಬಗೆಹರಿಯಲಿದೆ ಎಂದರು.

Translate »