ಮೈಸೂರಲ್ಲಿ ನಿರಂತರ ಮಳೆ: ಅಲ್ಲಲ್ಲಿ ಸಣ್ಣಪುಟ್ಟ ಅನಾಹುತ
ಮೈಸೂರು

ಮೈಸೂರಲ್ಲಿ ನಿರಂತರ ಮಳೆ: ಅಲ್ಲಲ್ಲಿ ಸಣ್ಣಪುಟ್ಟ ಅನಾಹುತ

November 20, 2021

ಮೈಸೂರು,ನ.19-ಮೈಸೂರಲ್ಲಿ ಶುಕ್ರ ವಾರ ಮಳೆ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿತ್ತಾ ದರೂ ಜನ ಜೀವನಕ್ಕೆ ಅಡ್ಡಿಯುಂಟಾಗಿತ್ತು.
ಇಂದು ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಬೆಳಗ್ಗೆ ಕೆಲ ಹೊತ್ತು ಮಳೆ ಸುರಿದು ಸ್ವಲ್ಪ ಸಮಯ ಬಿಡುವು ನೀಡಿತು. ಹೀಗೆ ಬಿಟ್ಟು ಬಿಟ್ಟು ಸುರಿದ ಮಳೆ ಯಿಂದ ಜನ ಹೈರಾಣಾದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ಹೋಗು ವವರು ಛತ್ರಿ ಆಸರೆ ಪಡೆದಿದ್ದರು. ಬೀದಿ ಬದಿ ವ್ಯಾಪಾರಿಗಳೂ ದೊಡ್ಡ ಛತ್ರಿಯಡಿ ಎಂದಿನಂತೆ ವ್ಯಾಪಾರ ನಡೆಸಿದರು. ಜಿಟಿ ಜಿಟಿ ಮಳೆಯಿಂದ ರಸ್ತೆಗಳೆಲ್ಲಾ ಜಲಮಯ ವಾಗಿದ್ದವು. ತಗ್ಗು ಪ್ರದೇಶದಲ್ಲಿ ನೀರು ನಿಂತು, ಅಲ್ಲಲ್ಲಿ ರಾಡಿಯಾಗಿತ್ತು. ಪಾದ ಚಾರಿಗಳು, ದ್ವಿಚಕ್ರ ವಾಹನ ಸವಾರರಲ್ಲಿ ಕೆಲವರು ರೈನ್‍ಕೋಟ್ ಧರಿಸಿದ್ದರೆ, ಮತ್ತಷ್ಟು ಮಂದಿ ಛತ್ರಿ ಹಿಡಿದು ರಸ್ತೆಗಿಳಿ ದಿದ್ದು ಕಂಡು ಬಂದಿತು.

ಕುವೆಂಪುನಗರದ ಸಿ ಅಂಡ್ ಡಿ ಬ್ಲಾಕ್‍ನ ಕೆ.ಎನ್.ಯೋಗೇಶ್ ಅವರ ಮನೆ ಹಿಂಭಾ ಗದ ತೆಂಗಿನ ಮರ ಬುಡÀ ಸಮೇತ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಜಗನ್ಮೋಹನ ಅರಮನೆ-ಅಂಬಾವಿಲಾಸ ಅರಮನೆ ರಸ್ತೆಯಲ್ಲಿ ಎಂ ಸ್ಯಾಂಡ್ ತುಂಬಿದ್ದ ಲಾರಿ ಚಕ್ರ ಹೂತು ಕೊಂಡಿದ್ದರಿಂದ ಕೆಲಕಾಲ ಸಂಚಾರ ಅಸ್ತವ್ಯವಸ್ತವಾಗಿತ್ತು. ನಿರಂತರ ಸುರಿಯು ತ್ತಿರುವ ಮಳೆಯಿಂದಾಗಿ ಚರಂಡಿ ಪಕ್ಕ ದಲ್ಲಿ ಭೂಮಿ ಹಸಿಯಾಗಿತ್ತು. ಅದೇ ಸ್ಥಳ ದಲ್ಲಿ ಲಾರಿ ಸಾಗಿದ್ದರಿಂದ ಚಕ್ರ ಹೂತು ಕೊಂಡಿತ್ತು. ಲೋಡ್ ಇಳಿಸಿ, ನಂತರ ಲಾರಿಯನ್ನು ಮೇಲಕ್ಕೆತ್ತಿಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಹಾತ್ಮಗಾಂಧಿ ರಸ್ತೆ, ಮಾಲ್ ಆಫ್ ಮೈಸೂರ್ ಬಳಿ ಮ್ಯಾನ್‍ಹೋಲ್ ಛಿದ್ರ ವಾಗಿದೆ. ಸುತ್ತಲೂ ಕೊರಕಲು ಗುಂಡಿ ನಿರ್ಮಾಣವಾಗಿದೆ. ಅಕ್ಕಪಕ್ಕದಲ್ಲಿ ದೊಡ್ಡ ಹೊಂಡಗಳಿವೆ. ಮಳೆ ನೀರಿನ ಅಪಾಯ ವನ್ನು ಗುರುತಿಸಲು ಸಾಧ್ಯವೇ ಇಲ್ಲ. ದ್ವಿಚಕ್ರ ವಾಹನಗಳಿರಲಿ ಕಾರುಗಳ ಸಂಚಾರಕ್ಕೂ ಇಲ್ಲಿ ಸಂಚಕಾರವಿದೆ. ಸದ್ಯ ಸಂಚಾರ ಪೊಲೀಸರು ಬ್ಯಾರಿಕೇಡ್ ಇಟ್ಟು, ಸಾರ್ವ ಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಜೋರು ಮಳೆಯಾದಾಗ ಬ್ಯಾರಿಕೇಡ್ ಉರುಳಿ ಬಿದ್ದರೆ ಈ ಅಪಾಯಕಾರಿ ಸ್ಥಳದಲ್ಲಿ ಅಪ ಘಾತ ಸಂಭವಿಸುವುದು ಖಚಿತ. ಮೈಸೂ ರಿನ ಹಲವೆಡೆ ಇದೇ ದುಸ್ಥಿತಿ ಇದ್ದು, ನಗರ ಪಾಲಿಕೆ ತುರ್ತು ಪರಿಹಾರ ಕ್ರಮ ಕೈಗೊಳ್ಳದಿದ್ದರೆ ಸಾರ್ವಜನಿಕರು ದುಷ್ಪರಿ ಣಾಮ ಎದುರಿಸಬೇಕಾಗುತ್ತದೆ.

Translate »