ಖಾತೆಹಂಚಿಕೆ ಸಿಎಂ, ಡಿಸಿಎಂ ಬಳಿ ಭರಪೂರ ಅಧಿಕಾರ
ಮೈಸೂರು

ಖಾತೆಹಂಚಿಕೆ ಸಿಎಂ, ಡಿಸಿಎಂ ಬಳಿ ಭರಪೂರ ಅಧಿಕಾರ

June 9, 2018

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಚಿವರು ಗಳಿಗೆ ಖಾತೆಗಳನ್ನು ಹಂಚಿಕೆ ಮಾಡಲಾ ಗಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಹಣಕಾಸು, ಗುಪ್ತಚರ, ಇಂಧನ, ವಾರ್ತಾ ಮತ್ತು ಪ್ರಸಾರ, ಯೋಜನಾ ಮತ್ತು ಸಾಂಖ್ಯಿಕ ಸೇರಿದಂತೆ 11 ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಜಿ.ಪರಮೇ ಶ್ವರ್ ಅವರಿಗೆ ಗೃಹ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಗಳನ್ನು ನೀಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು 30 ಸಾವಿರಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಸೋಲಿಸಿ ದಾಖಲೆ ನಿರ್ಮಿಸಿದ ಜಿ.ಟಿ.ದೇವೇಗೌಡ ರಿಗೆ ಉನ್ನತ ಶಿಕ್ಷಣ ಖಾತೆಯನ್ನು ನೀಡ ಲಾಗಿದೆ. ಕೆ.ಆರ್.ನಗರದಲ್ಲಿ ಹ್ಯಾಟ್ರಿಕ್ ಬಾರಿ ಸಿರುವ ಸಾ.ರಾ.ಮಹೇಶ್ ಅವರಿಗೆ ಪ್ರವಾ ಸೋದ್ಯಮ ಮತ್ತು ರೇಷ್ಮೆ ಖಾತೆಗಳನ್ನು ನೀಡಲಾಗಿದೆ. ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಅವರಿಗೆ ಸಣ್ಣ ನೀರಾ ವರಿ, ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಅವರಿಗೆ ಸಾರಿಗೆ ಖಾತೆ, ಚಾಮರಾಜನಗರ ದಲ್ಲಿ ಹ್ಯಾಟ್ರಿಕ್ ಬಾರಿಸಿರುವ ಕಾಂಗ್ರೆಸ್ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರಿಗೆ ಹೊಸದಾಗಿ ಸೃಷ್ಟಿಸಲಾಗಿರುವ ಹಿಂದು ಳಿದ ವರ್ಗಗಳ ಕಲ್ಯಾಣ ಖಾತೆ ಮತ್ತು ಕೊಳ್ಳೇಗಾಲದಿಂದ ಜಯ ಗಳಿಸಿರುವ ಬಿಎಸ್ ಪಿಯ ಏಕೈಕ ಶಾಸಕ ಎನ್.ಮಹೇಶ್ ಅವರಿಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ನೀಡಲಾಗಿದೆ. ಹೊಳೆನರಸೀಪುರ ಶಾಸಕ ಹೆಚ್.ಡಿ.ರೇವಣ್ಣ ಅವರಿಗೆ ನಿರೀಕ್ಷೆ ಯಂತೆ ಲೋಕೋಪಯೋಗಿ ಖಾತೆಯನ್ನು ಕಲ್ಪಿಸಲಾಗಿದೆ.

ಕಾಂಗ್ರೆಸ್‍ನ ಹಿರಿಯ ಮುಖಂಡ ಆರ್.ವಿ.ದೇಶಪಾಂಡೆ ಅವರಿಗೆ ಕಂದಾಯ ಮತ್ತು ಕೌಶಲ್ಯಾಭಿವೃದ್ಧಿ ಖಾತೆಗಳನ್ನು ನೀಡ ಲಾಗಿದ್ದು, ಕಾಂಗ್ರೆಸ್‍ನ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಅವರಿಗೆ ಜಲ ಸಂಪ ನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಖಾತೆ ಗಳನ್ನು ನೀಡಲಾಗಿದೆ. ಕಳೆದ ಸರ್ಕಾರದಲ್ಲಿ ಕೃಷಿ ಸಚಿವರಾಗಿದ್ದ ಕೃಷ್ಣಭೈರೇಗೌಡರಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಕಾನೂನು ಮತ್ತು ಸಂಸ ದೀಯ ವ್ಯವಹಾರ ಖಾತೆ ಗಳನ್ನು ಒದಗಿ ಸಲಾಗಿದೆ. ಎಂ.ಸಿ.ಮನಗುಳಿ ಅವರಿಗೆ ತೋಟಗಾರಿಕೆ, ಹೆಚ್.ಹೆಚ್. ಶಿವಶಂಕರ ರೆಡ್ಡಿ ಅವರಿಗೆ ಕೃಷಿ, ಎಸ್.ಆರ್.ಶ್ರೀನಿವಾಸ್ ಅವರಿಗೆ ಸಣ್ಣ ಕೈಗಾರಿಕೆ, ಮಾಜಿ ಸಚಿವ ಸತೀಶ್ ಜಾರಕಿ ಹೊಳಿ ಸಹೋದರ ರಮೇಶ್ ಜಾರಕಿ ಹೊಳಿ ಅವರಿಗೆ ಪೌರಾಡಳಿತ, ಬಂದರು ಮತ್ತು ಒಳನಾಡು ಸಂಚಾರ ಖಾತೆಗಳನ್ನು ನೀಡಲಾಗಿದೆ. ವೆಂಕಟರಾವ್ ನಾಡಗೌಡ ಅವರಿಗೆ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಖಾತೆ ಒದಗಿಸಲಾಗಿದೆ. ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ಅವರಿಗೆ ಸಮಾಜ ಕಲ್ಯಾಣ, ಹಿಂದಿನ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದ ಯು.ಟಿ.ಖಾದರ್ ಅವರಿಗೆ ಪೌರಾಡಳಿತ, ವಸತಿ ಖಾತೆಗಳನ್ನು ಒದಗಿಸಲಾಗಿದೆ. ಚಾಮರಾಜಪೇಟೆ ಶಾಸಕ ಜಮೀರ್ ಅಹ ಮದ್ ಅವರಿಗೆ ಆಹಾರ ಮತ್ತು ನಾಗರಿಕ ಸರಬರಾಜು, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ವಕ್ಫ್ ಖಾತೆಗಳನ್ನು ನೀಡಲಾಗಿದೆ. ಶಿವಾನಂದ ಪಾಟೀಲ್ ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ, ವೆಂಕಟರಮಣಪ್ಪ ಅವರಿಗೆ ಕಾರ್ಮಿಕ, ರಾಜಶೇಖರ ಪಾಟೀಲ್ ಅವರಿಗೆ ಗಣ ಮತ್ತು ಭೂ ವಿಜ್ಞಾನ ಹಾಗೂ ಮುಜರಾಯಿ, ಆರ್.ಶಂಕರ್ ಅವರಿಗೆ ಅರಣ್ಯ ಮತ್ತು ಜಯಮಾಲ ಅವರಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಕನ್ನಡ ಮತ್ತು ಸಂಸ್ಕøತಿ ಖಾತೆಗಳನ್ನು ನೀಡಲಾಗಿದೆ.

 

Translate »