ಮೈಸೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ಮೈಸೂರು

ಮೈಸೂರಲ್ಲಿ ಭಾರೀ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು

June 30, 2020

ಮೈಸೂರು, ಜೂ.29(ಎಂಕೆ)- ಮೈಸೂರು ನಗರ ಮತ್ತು ಜಿಲ್ಲೆಯ ಹಲ ವೆಡೆ ಭಾನುವಾರ ಸುರಿದ ಭಾರೀ ಮಳೆಗೆ ವಿವಿಧೆಡೆ ಆರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, 4 ಟ್ರಾನ್ಸ್‍ಫಾರ್ಮರ್ ಘಟಕಗಳು ಹಾಳಾಗಿವೆ.

ನಗರದ ಎನ್.ಆರ್.ಮೊಹಲ್ಲಾ ಮತ್ತು ವಿವಿ ಮೊಹಲ್ಲಾ ವ್ಯಾಪ್ತಿಯಲ್ಲಿ ತಲಾ ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, ವಿವಿ ಮೊಹಲ್ಲಾದಲ್ಲಿ 4 ಟ್ರಾನ್ಸ್ ಫಾರ್ಮರ್ ಘಟಕಗಳು ಹಾಳಾಗಿವೆ ಎಂದು ಸೆಸ್ಕ್‍ನ ಮೈಸೂರು ಕಾರ್ಯ ಮತ್ತು ಪಾಲನ ವೃತ್ತ ಅಧೀಕ್ಷಕ ಇಂಜಿ ನಿಯರ್ ಕೆ.ಎಂ.ಮುನಿಗೋಪಾಲರಾಜು ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಭಾನುವಾರ ಸುರಿದ ಧಾರಾಕಾರ ಮಳೆಗೆ ಹಲವಾರು ರಸ್ತೆಗಳು ಜಲಾವೃತ್ತ ಗೊಂಡಿದ್ದರೂ ಯುಜಿ (ಅಂಡರ್ ಗ್ರೌಂಡ್) ಕೇಬಲ್‍ಗೆ ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದರು.

ಮುಂದುವರಿದ ಮಳೆ: ಮೈಸೂರಿನಲ್ಲಿ ಮಳೆ ಮುಂದುವರೆದಿದ್ದು, ಸೋಮವಾರ ನಗರದ ಕೆಲವೆಡೆ ಸಾಧಾರಣ ಮಳೆಯಾ ಯಿತು. ಸಂಜೆ 5 ಗಂಟೆ ವೇಳೆಗೆ ಆರಂಭ ವಾದ ಮಳೆ ಬೋಗಾದಿ, ಬೋಗಾದಿ 2ನೇ ಹಂತ, ಕುವೆಂಪುನಗರ, ಶಾರದಾದೇವಿ ನಗರ, ನಿವೇದಿತಾನಗರ ಸೇರಿದಂತೆ ಕೆಲ ವೆಡೆ ಕೆಲಕಾಲ ಸುರಿಯಿತು. ಇದರಿಂದ ವಾಹನ ಸವಾರರು ಮನೆಗೆ ತೆರಳಲು ಹರ ಸಾಹಸ ಪಡಬೇಕಾಯಿತು. ರಸ್ತೆ ಬದಿ ವ್ಯಾಪಾರಿ ಗಳು ತೊಂದರೆಗೆ ಒಳಗಾದರು. ಕೆಲ ಪಾದ ಚಾರಿಗಳು ಕೊಡೆಯ ಆಶ್ರಯ ಪಡೆದರೆ ಮತ್ತೆ ಕೆಲವರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿದ್ದ ದೃಶ್ಯ ಕಂಡು ಬಂದಿತು.

Translate »