ಮಳೆಯಿಂದ ನರಸಿಂಹರಾಜ ಕ್ಷೇತ್ರದಲ್ಲಿ ಭಾರೀ ಅವಾಂತರ: ರಸ್ತೆಗಳು ಕೆಸರು ಗುಂಡಿ
ಮೈಸೂರು

ಮಳೆಯಿಂದ ನರಸಿಂಹರಾಜ ಕ್ಷೇತ್ರದಲ್ಲಿ ಭಾರೀ ಅವಾಂತರ: ರಸ್ತೆಗಳು ಕೆಸರು ಗುಂಡಿ

November 7, 2021

ಮೈಸೂರು, ನ.6(ಎಸ್‍ಬಿಡಿ)- ಮೈಸೂ ರಿನ ನರಸಿಂಹರಾಜ ವಿಧಾನಸಭಾ ಕ್ಷೇತ್ರ ದಲ್ಲಿ ಮಳೆಯಿಂದ ಹಾನಿಯಾಗಿರುವ ಜನವಸತಿ ಪ್ರದೇಶಗಳಿಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಸ್ಥಳೀಯ ಕಾರ್ಪೊರೇಟರ್‍ಗಳು ಹಾಗೂ ಪಾಲಿಕೆ ಅಧಿಕಾರಿಗಳ ತಂಡ ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿತು.

ಒಂದು ತಿಂಗಳಿಂದ ಮೈಸೂರನ್ನು ಕಾಡುತ್ತಿರುವ ಮಳೆ, ಹಲವೆಡೆ ಅವಾಂ ತರ ಸೃಷ್ಟಿಸಿದೆ. ಹಾಗೆಯೇ ನರಸಿಂಹರಾಜ ಕ್ಷೇತ್ರದ ಯರಗನಹಳ್ಳಿ, ಶಕ್ತಿನಗರ, ಟೀಚರ್ಸ್ ಲೇಔಟ್, ತ್ರಿವೇಣಿ ವೃತ್ತ, ವಿದ್ಯಾಶಂಕರ ಬಡಾವಣೆ ಸೇರಿದಂತೆ ಮಳೆಯಿಂದ ಹೈರಾ ಣಾಗಿರುವ ಬಡಾವಣೆಗಳಿಗೆ ಭೇಟಿ ನೀಡಿ, ಕೆಸರು ಗುಂಡಿಯಾಗಿರುವ ರಸ್ತೆಗಳು, ಮಳೆನೀರು ಚರಂಡಿ ಗೋಡೆ ಕುಸಿದಿರು ವುದು, ಯುಜಿಡಿ ಅವ್ಯವಸ್ಥೆ ಇನ್ನಿತರ ಸಮಸ್ಯೆಗಳ ಪಟ್ಟಿ ಮಾಡಲಾಯಿತು.

ಈ ವೇಳೆ ಮಾತನಾಡಿದ ಮಾಜಿ ಮೇಯರ್ ಸಂದೇಶ್ ಸ್ವಾಮಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ಅನುಮೋದನೆಯೊಂದಿಗೆ ನಿರ್ಮಿಸ ಲಾಗಿರುವ ಹಲವು ಖಾಸಗಿ ಬಡಾವಣೆ ಗಳನ್ನು 2016-17ನೇ ಸಾಲಿನಲ್ಲಿ ಮೈಸೂರು ನಗರಪಾಲಿಕೆಗೆ ಹಸ್ತಾಂತರಿಸಲಾಗಿದೆ. ಆ ಸಂದರ್ಭದಲ್ಲಿ ಮೂಲ ಸೌಕರ್ಯ ಸಮ ರ್ಪಕವಾಗಿರಲಿಲ್ಲ. ಆದರೂ ಬಾಕಿ ಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ಮುಡಾ ಭರವಸೆ ನೀಡಿದ್ದರಿಂದ ಹಸ್ತಾಂ ತರ ಮಾಡಿಕೊಳ್ಳಲಾಗಿದೆ. ಆದರೆ ಮುಡಾ ಹಾಗೂ ನಗರ ಪಾಲಿಕೆ ಅಧಿಕಾರಿಗಳ ಬೇಜವಾಬ್ದಾರಿತನ ಹಾಗೂ ಸಮನ್ವಯತೆ ಕೊರತೆಯಿಂದ ಸಮಸ್ಯೆಗಳು ವಿಪರೀತ ವಾಗಿ ಜನ ಕಷ್ಟ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಯರಗನಹಳ್ಳಿ, ಶಕ್ತಿನಗರ, ವಿದ್ಯಾಶಂಕರ ಬಡಾವಣೆ, ಟೀಚರ್ಸ್ ಲೇಔಟ್ ಸೇರಿ ದಂತೆ ಪಾಲಿಕೆಯ 35, 36 ಹಾಗೂ 37ನೇ ವಾರ್ಡ್‍ಗಳ ಹಲವು ಪ್ರದೇಶಗಳಿಗೆ ಇಂದು ಭೇಟಿ ನೀಡಿ, ಪರಿಶೀಲಿಸ ಲಾಯಿತು. ನಿಜಕ್ಕೂ ನರಸಿಂಹರಾಜ ಕ್ಷೇತ್ರ ವನ್ನು ಸಂಪೂರ್ಣವಾಗಿ ಕಡೆಗಣಿಸ ಲಾಗಿದೆ. ಚಾಮರಾಜ ಹಾಗೂ ಕೃಷ್ಣರಾಜ ಕ್ಷೇತ್ರದಲ್ಲಿ ನೂರಾರು ಕೋಟಿ ರೂ. ಅನು ದಾನದಲ್ಲಿ ಸಾಕಷ್ಟು ಕಾಮಗಾರಿ ನಡೆಸ ಲಾಗಿದೆ. ಆದರೆ ಕೊಳಚೆ ಪ್ರದೇಶಗಳು ಹೆಚ್ಚಿರುವ, ಕಡು ಬಡವರೇ ಹೆಚ್ಚು ವಾಸ ವಿರುವ ನರಸಿಂಹರಾಜ ಕ್ಷೇತ್ರ ಮೂಲ ಸೌಕರ್ಯದಿಂದಲೂ ವಂಚಿತವಾಗಿದೆ. ಮೂರ್ನಾಲ್ಕು ದಶಕಗಳಿಂದ ಯಾವ ಕೆಲಸವೂ ಆಗುತ್ತಿಲ್ಲ. ಶಾಸಕರು ಹಾಗೂ ಅಧಿಕಾರಿಗಳು ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಭಾವನೆ ತಳೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಪೋರೇಟರ್‍ಗಳಾದ ಸಾತ್ವಿಕ್ ಸಂದೇಶ್‍ಸ್ವಾಮಿ, ಅಶ್ವಿನಿ ಅನಂತು, ಯರಗನ ಹಳ್ಳಿ ಮುಖಂಡ ಅಣ್ಣಯ್ಯ, ನಗರಪಾಲಿಕೆಯ ಎಸ್‍ಇ ಮಹೇಶ್, ಅಭಿ ವೃದ್ಧಿ ಅಧಿಕಾರಿ ಅನೀಶ್, ಇಂಜಿನಿಯರ್ ಮಂಜುನಾಥ್ ಇನ್ನಿತರ ಅಧಿಕಾರಿಗಳು ಪರಿಶೀಲನೆಯಲ್ಲಿ ಪಾಲ್ಗೊಂಡಿದ್ದರು.

Translate »