ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಜಿ.ಮಂಜು ಸ್ಪರ್ಧೆ
ಮೈಸೂರು

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಜಿ.ಮಂಜು ಸ್ಪರ್ಧೆ

November 7, 2021

ಮೈಸೂರು,ನ.6(ಎಂಟಿವೈ)-ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಬಯ ಸಿರುವುದರಿಂದ ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀ ನಾಮೆ ನೀಡುತ್ತಿರುವುದಾಗಿ ಸಂಘದ ಅಧ್ಯಕ್ಷ ಜಿ.ಮಂಜು ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯದ ಎಲ್ಲಾ ಸಮು ದಾಯಗಳಲ್ಲಿ ಒಕ್ಕಲಿಗ ಸಮುದಾಯ ಪ್ರಮುಖದ್ದಾಗಿದೆ. ರಾಜ್ಯ ಒಕ್ಕಲಿ ಗರ ಸಂಘದ ಪದಾಧಿಕಾರಿಗಳ ಆಯ್ಕೆಗಾಗಿ ಚುನಾ ವಣೆ ದಿನಾಂಕ ನಿಗದಿಯಾಗಿದೆ. ರಾಜ್ಯದ ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ನೈತಿಕತೆ ಉಳಿಸಿಕೊಳ್ಳುವ ಸಲುವಾಗಿ ಹಾಲಿ ಅಧ್ಯಕ್ಷ ನಾಗಿರುವ ಮೈಸೂರು-ಚಾಮರಾಜನಗರ ಜಿಲ್ಲಾ ಒಕ್ಕಲಿಗ ಸಂಘದ ಸ್ಥಾನಕ್ಕೆ ನ.16ರಂದು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಎಲ್ಲ ಹಂತಗಳಲ್ಲಿ ನನಗೆ ಉತ್ತಮ ಅವಕಾಶ ನೀಡಿ ರುವ ಸಮುದಾಯಸ್ಥರ ಆಶಾಭಾವನೆ ಮತ್ತು ನಂಬಿಕೆಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಸಲುವಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆಯೇ ಹೊರತು. ಇದರ ಹಿಂದೆ ಯಾವುದೇ ರೀತಿಯ ಒತ್ತಡ ಇಲ್ಲ ಎಂದು ಜಿ.ಮಂಜು ಸ್ಪಷ್ಟಪಡಿಸಿದರು.

ಕೊರೊನಾದಂತಹ ಸಂಕಷ್ಟ ಕಾಲದಲ್ಲಿ 50 ದಿನಗಳು ಶಿಕ್ಷಣ ಸಂಸ್ಥೆಯಾದ ಭಾಗ್ಯಸಾಗರ್ ಎಜುಕೇಷನ್ ಟ್ರಸ್ಟ್, ಅಶ್ವಿನಿ ಎಂಟರ್ ಪ್ರೈಸಸ್ ಅಶ್ವಿನಿ ಗೋಲ್ಡ್ ಪ್ಯಾಲೆಸ್, ಅಶ್ವಿನಿ ಬಿಲ್ಡರ್ಸ್ ಮೂಲಕ ಪೌರಕಾರ್ಮಿಕರು, ನಿರ್ಗತಿಕ ರಿಗೆ ಪ್ರತಿನಿತ್ಯ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ, ವಿವಿಧ ಸಂಘ ಸಂಸ್ಥೆಗಳು, ಸಾರ್ವಜನಿಕವಾಗಿ ಸ್ಟೀಮರ್, ಹ್ಯಾಂಡ್ ಸ್ಯಾನಿಟೈಸರ್, ಮಾಸ್ಕ್‍ಗಳನ್ನು ಉಚಿತವಾಗಿ ನೀಡಲಾಗಿದೆ ಎಂದು ತಿಳಿಸಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟ ಬಡ ಕುಟುಂಬ ಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ಪೆÇೀಷಕರನ್ನು ಕಳೆದುಕೊಂಡು ಅಕ್ಷರಶಃ ಅನಾಥರಾದ ಮಕ್ಕಳಿಗೆ ನೈತಿಕ ಸ್ಥೈರ್ಯ ತುಂಬಿ ಅವರ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸಮಾ ಜದ ಎಲ್ಲ ಸ್ತರಗಳ ಜನರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸ ಬೇಕೆನ್ನುವ ಇಚ್ಛೆಯೊಂದಿಗೆ ಮತ್ತೊಂದು ಮೇಲ್ಮಟ್ಟದ ಚುನಾ ವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದೇನೆ. ಸಮುದಾಯದ ಬಂಧುಗಳು ಸಹಕಾರ ನೀಡಬೇಕೆಂದು ಎಂದು ಮನವಿ.

Translate »