ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ವತಿಯಿಂದ ವೃಕ್ಷಲಕ್ಷ ಅಭಿಯಾನದ ಮುಡಾ ಅಧ್ಯಕ್ಷ ರಾಜೀವ್‍ಗೆ ಗೌರವ ಡಾಕ್ಟರೇಟ್
ಮೈಸೂರು

ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ವತಿಯಿಂದ ವೃಕ್ಷಲಕ್ಷ ಅಭಿಯಾನದ ಮುಡಾ ಅಧ್ಯಕ್ಷ ರಾಜೀವ್‍ಗೆ ಗೌರವ ಡಾಕ್ಟರೇಟ್

November 7, 2021

ಮೈಸೂರು, ನ.6(ಎಸ್‍ಬಿಡಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆದ ಸ್ನೇಹ ಬಳಗದ ಸಂಸ್ಥಾಪಕ ಹೆಚ್.ವಿ. ರಾಜೀವ್ ಅವರ ಪರಿಸರ ಕ್ಷೇತ್ರದಲ್ಲಿನ ಸಾಧನೆ ಗುರುತಿಸಿ ವೇದಿಕ್ ವೆಲ್ನೆಸ್ ಯೂನಿವರ್ಸಿಟಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ.

ಧರ್ಮಸ್ಥಳದ ಮಹೋತ್ಸವ ಸಭಾ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿಗಳಾದ ಶ್ರೀ ವಿರೇಂದ್ರ ಹೆಗ್ಗಡೆ ಅವರು ಹೆಚ್.ವಿ.ರಾಜೀವ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ಅಭಿನಂದಿಸಿದರು.

ಇದೇ ವೇಳೆ ಭರತನಾಟ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕ್ಯಾಥರಿನ್ ಕುನ್ಹಿರಾಮನ್, ಯೋಗ ಕ್ಷೇತ್ರದ ಸಾಧಕ ಡಾ.ಯೋಗನಾಥ್ ಅಂಡಿ ಯಪ್ಪನ್, ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಶೈಲಾ ತುಳ್ಳರಿ ಅವರಿಗೂ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಈ ವೇಳೆ ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್ ಮಾತನಾಡಿ, `ನನ್ನನ್ನು ಯಾರಾದರೂ ಗುರು ತಿಸಲಿ ಎಂಬ ಕಾರಣದಿಂದ ನಾನೆಂದೂ ಕೆಲಸ ಮಾಡಿದವನಲ್ಲ. ಮುಂದೆಯೂ ಹೀಗೆಯೇ ನನ್ನ ಕಾರ್ಯಚಟುವಟಿಕೆ ಮುಂದುವರೆಸು ತ್ತೇನೆ. ನನ್ನಿಂದ ಸಮಾಜಕ್ಕೆ ಏನಾದರೊಂದು ಒಳ್ಳೆಯ ಕೆಲಸವಾಗಬೇಕು ಎಂಬುದೊಂದೇ ನನ್ನ ಉದ್ದೇಶ. ಆದರೂ ವೇದಿಕ್ ವೆಲ್ನೆಸ್ ಯೂನಿ ವರ್ಸಿಟಿ ನನ್ನ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್ ನೀಡಿ, ಗೌರವಿಸಿರುವುದು ಸಂತಸ ತಂದಿದೆ. ಜೊತೆಗೆ ನನ್ನ ಸಾಮಾಜಿಕ ಜವಾ ಬ್ದಾರಿಯನ್ನೂ ಹೆಚ್ಚಿಸಿದೆ ಎಂದು ತಿಳಿಸಿದರು.

ಹೆಚ್.ವಿ.ರಾಜೀವ್ ಅವರು ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡುವ ಮೂಲಕ ಮಾದರಿ ಯಾಗಿದ್ದಾರೆ. ಸ್ನೇಹ ಬಳಗ, ಮೈಸೂರು ಹಸಿರು ಪ್ರತಿಷ್ಠಾನದ ಮೂಲಕ ಹಲವು ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿ ದ್ದಾರೆ. ಸ್ವಚ್ಛ ಭಾರತ ಅಭಿಯಾನಕ್ಕೂ ನಿರಂತರ ವಾಗಿ ಸಹಕಾರ ನೀಡಿದ್ದಾರೆ. ವೃಕ್ಷಲಕ್ಷ ಅಭಿಯಾನದ ಮೂಲಕ ಪ್ರತಿ ವರ್ಷ ಸಾವಿರಾರು ಗಿಡಗಳನ್ನು ನೆಡುವ ಕಾರ್ಯಕ್ಕೆ ಒತ್ತಾಸೆಯಾಗಿದ್ದಾರೆ.

Translate »