ಫಲಾನುಭವಿಗಳು ಬಯಸಿದಷ್ಟು ಕಾಲ ಮೀಸಲಾತಿ ಇರಬೇಕೆಂಬುದೂ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ನಿಲುವು
ಮೈಸೂರು

ಫಲಾನುಭವಿಗಳು ಬಯಸಿದಷ್ಟು ಕಾಲ ಮೀಸಲಾತಿ ಇರಬೇಕೆಂಬುದೂ ರಾಷ್ಟ್ರೀಯ ಸ್ವಯಂ ಸೇವಕ್ ಸಂಘದ ನಿಲುವು

November 7, 2021

ಮೈಸೂರು,ನ.6(ಪಿಎಂ)- ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರ್‍ಎಸ್‍ಎಸ್) ಎಂದೂ ಮೀಸಲಾತಿ ವಿರೋಧಿಸಿಲ್ಲ. ಈ ಸೌಲಭ್ಯ ಪಡೆಯುವವರು ಸಾಕು ಎನ್ನು ವವರೆಗೂ ಇದು ಮುಂದುವರೆಯ ಬೇಕೆಂಬುದೂ ಸಂಘದ ನಿಲುವು. ಸಾಮಾಜಿಕ ಅಸಮಾನತೆ ನಿವಾರಣೆಗಾಗಿ ಮೀಸಲಾತಿ ಜಾರಿಯಲ್ಲಿದ್ದು, ಅದು ಅನಿವಾರ್ಯ ಎಂದು ಆರ್‍ಎಸ್‍ಎಸ್‍ನ ಬೆಂಗಳೂರು ನಗರ ಪ್ರಚಾರ ಪ್ರಮುಖ್ ರಾಧಾಕೃಷ್ಣ ಹೊಳ್ಳ ಅಭಿಪ್ರಾಯಪಟ್ಟಿದ್ದಾರೆ.
ಮೈಸೂರಿನ ಹೋಟೆಲ್ ಸಂದೇಶ್ ಪ್ರಿನ್ಸ್ ಸಭಾಂಗಣದಲ್ಲಿ ಶನಿವಾರ ಆರ್‍ಎಸ್‍ಎಸ್ ವತಿಯಿಂದ ಹಮ್ಮಿಕೊಂಡಿದ್ದ `ಸಂಪಾದಕ ರೊಂದಿಗೆ ಸಂವಾದ’ದಲ್ಲಿ ಈ ವಿಚಾರವನ್ನು ಅವರು ಸ್ಪಷ್ಟಪಡಿಸಿದರು. ಹಿಂದಿನಿಂದಲೂ ಸಂಘ ಮೀಸಲಾತಿ ಬೆಂಬಲಿಸಿದೆ. ಸಾಮಾ ಜಿಕ ಅಸಮಾನತೆ ನಿವಾರಣೆ ಉದ್ದೇಶದಿಂದ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿದೆ. ಆರ್ಥಿಕ ಅಸಮಾನತೆ ನಿವಾರಣೆಯ ಹಿನ್ನೆಲೆಯನ್ನು ಮೀಸಲಾತಿ ಪರಿಕಲ್ಪನೆ ಹೊಂದಿಲ್ಲ. ಅಂದರೆ ಸಾಮಾಜಿಕ ಅಸಮಾನತೆ ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಮೀಸಲಾತಿ ಇರಬೇಕಾಗುತ್ತದೆ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇ ಡ್ಕರ್ ವಿಚಾರಧಾರೆಗಳ ಬಗ್ಗೆ ಪ್ರತಿಕ್ರಿಯಿ ಸಿದ ಅವರು, ಸಂಘದ ಶಿಕ್ಷ ವರ್ಗದಲ್ಲಿ ಅಂಬೇಡ್ಕರ್ ಅವರ ವಿಚಾರಗಳ ಬಗ್ಗೆ ಚರ್ಚೆ, ಸಂವಾದ ಕಾರ್ಯಕ್ರಮಗಳು ನಡೆಯು ತ್ತಿವೆ. ಅಂಬೇಡ್ಕರ್ ಅವರ ಜೀವನ ಮತ್ತು ಸಾಮಾಜಿಕ ಕಾರ್ಯದ ಬಗ್ಗೆ `ಸಾಮಾ ಜಿಕ ಕ್ರಾಂತಿ ಸೂರ್ಯ’ ಕೃತಿ ಹೊರತರ ಲಾಗಿದೆ. ಅಂಬೇಡ್ಕರ್ ಅವರ ಜನ್ಮ ಶತ ಮಾನೋತ್ಸವವನ್ನು ಕೂಡ ಸಂಘ ಆಚರಿ ಸಿದೆ ಎಂದು ವಿವರಿಸಿದರು.
ಸಂಘದಲ್ಲಿ ದಲಿತ ಸಮುದಾಯವಿದೆ: ತಳ ಸಮುದಾಯದವರು ಸಂಘದಲ್ಲಿ ತೊಡಗಿಸಿ ಕೊಳ್ಳುವ ಅವಕಾಶದ ಬಗ್ಗೆ ಪ್ರತಿಕ್ರಿಯಿಸಿ, `ಸಂಘ’ ಮೊದಲಿನಿಂದಲೂ ಸರ್ವಸ್ಪರ್ಶಿ. ಇಲ್ಲಿ ಎಲ್ಲಾ ಸಮುದಾಯದವರು ಬರಬೇಕು ಎಂಬ ಆಶಯವನ್ನು ಸಂಘ ಮೊದಲಿ ನಿಂದಲೂ ಹೊಂದಿದೆ. ಸುಮಾರು 40 ವರ್ಷದ ಹಿಂದೆ ಮೇಲ್ಜಾತಿಯವರೇ ಹೆಚ್ಚಿನ ಸಂಖ್ಯೆ ಯಲ್ಲಿ ಸಂಘದಲ್ಲಿದ್ದರು. ಶಿಕ್ಷಣ ಪಡೆದ ಹಿನ್ನೆಲೆ ಸೇರಿ ಮತ್ತಿತರರ ಕಾರಣದಿಂದ ಹೀಗಾಗಿರಬಹುದು. ಆದರೆ ಇಂದು ಎಲ್ಲಾ ಜಾತಿ-ಸಮುದಾಯದವರು ಸಂಘದಲ್ಲಿ ದ್ದಾರೆ. ಮಾತ್ರವಲ್ಲ ಹಲವು ಜವಾಬ್ದಾರಿ ಗಳನ್ನು ನಿಭಾಯಿಸುತ್ತಿದ್ದಾರೆ ಎಂದರು.

ಈ ವಿಚಾರದಲ್ಲಿ ಕಳೆದ ಕೆಲವು ವರ್ಷ ಗಳಲ್ಲಿ ಒಳ್ಳೆಯ ಬೆಳವಣಿಗೆ ಇದೆ. ಗ್ರಾಮಾಂ ತರ, ನಗರದ ಕೊಳಚೆ ಪ್ರದೇಶಗಳಲ್ಲಿ ಸಂಘ ಚಟುವಟಿಕೆಯಿಂದ ಇದೆ. ದಲಿತ ಸಮುದಾಯ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಂಘದಲ್ಲಿದೆ. ಈ ನಿಟ್ಟಿನಲ್ಲಿ ಉತ್ತಮ ಬೆಳವಣಿಗೆ ಇದೆ ಎಂದು ತಿಳಿಸಿದರು.
ಸ್ಥಳೀಯವಾಗಿಯೂ ಸಂಘ ಸ್ಪಂದಿಸುತ್ತಿದೆ: ಸ್ಥಳೀಯ ಸಮಸ್ಯೆಗಳಿಗೆ ಆರ್‍ಎಸ್‍ಎಸ್ ಸಂಪೂರ್ಣವಾಗಿ ಸ್ಪಂದಿಸುತ್ತಿಲ್ಲ. ದೇವಾ ಲಯ ತೆರವು ಕಾರ್ಯಾಚರಣೆ ಸಂಬಂಧ ಹೆಚ್ಚಿನ ಸ್ಪಂದನೆ ದೊರೆತಿಲ್ಲ ಎಂಬ ಆರೋಪ ವಿದೆ ಎಂಬ ವಿಚಾರವಾಗಿ ವಿವರಣೆ ನೀಡಿದ ಹೊಳ್ಳ, ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ 2018ರಲ್ಲೇ ಅಧಿಕೃತಗೊಳಿಸಿ ಕೊಳ್ಳುವ ನಿಟ್ಟಿನಲ್ಲಿ ತಯಾರಾಗಲು ಸಂಘ, ದೇವಸ್ಥಾನಗಳ ಆಡಳಿತ ಮಂಡಳಿಗಳಿಗೆ ತಿಳಿ ಸಿತ್ತು. ವಿಹೆಚ್‍ಪಿ, ಗ್ರಾಮ ವಿಕಾಸ ಸೇರಿದಂತೆ ಇನ್ನಿತರ ಸಂಘಟನೆಗಳ ಮೂಲಕ ದೇವಾ ಲಯಗಳ ಜೀರ್ಣೋದ್ಧಾರ ಕಾರ್ಯ ಸತತ ವಾಗಿ ಸಂಘದಿಂದ ನಡೆಯುತ್ತಿದೆ ಎಂದರು.

ನಮ್ಮೂರಿನ ಉದಾಹರಣೆ ಹೇಳುವು ದಾದರೆ, ಹಳೇ ದೇವಸ್ಥಾನವೊಂದರ ಜೀರ್ಣೋದ್ಧಾರವನ್ನು ಸಂಘದ ಸ್ವಯಂ ಸೇವಕರೇ ಸೇರಿಕೊಂಡು ಮಾಡಿದ್ದಾರ ಲ್ಲದೇ, ಎಲ್ಲಾ ಸಮುದಾಯದವರಿಗೆ ಪ್ರವೇಶ ಘೋಷಣೆ ಮಾಡಿದ್ದಾರೆ. ನಮ್ಮದೇ `ಇತಿ ಹಾಸ ಸಂಕಲನ ಸಮಿತಿ’ ಸಂಘಟನೆಯು ಐತಿಹಾಸಿಕ ಮಹತ್ವ ಹೊಂದಿರುವ ಸ್ಥಳ, ದೇವಸ್ಥಾನ ಗುರುತಿಸಿ, ಮಾಹಿತಿ ಸಂಗ್ರಹಿ ಸುವ ಕೆಲಸ ಮಾಡುತ್ತಿದೆ. ಹೀಗೆ ಸಂಘ ಸ್ಥಳೀಯವಾಗಿಯೂ ಶಕ್ತಿ ಮೀರಿ ತೊಡ ಗಿಸಿಕೊಂಡಿದೆ ಎಂದು ಹೇಳಿದರು.

ಶತಮನೋತ್ಸವ ಸಂಭ್ರಮದತ್ತ ಸಂಘ: ನಾಲ್ಕು ವರ್ಷಗಳಲ್ಲಿ ಸಂಘ ಶತಮಾನೋ ತ್ಸವ ಸಂಭ್ರಮ ತಲುಪಲಿದೆ. ಯಾವ ಉದ್ದೇ ಶಕ್ಕೆ ಸಂಘ ಪ್ರಾರಂಭವಾಯಿತೋ ಆ ಹಾದಿ ಯಲ್ಲಿ ಬಹಳ ದೂರವೇ ಸಂಘ ಕ್ರಮಿಸಿದೆ. ಸಂಘದ ಧ್ಯೇಯ ಇಂದಿಗೂ ಪ್ರಸ್ತುತ ಎಂದು ಮನಗಂಡ ಹೊಸ ತಲೆ ಮಾರಿನವರು ಸಂಘದೊಂದಿಗೆ ಬರುತ್ತಿದ್ದಾರೆ. ಸಂಘದ ಪ್ರಾರಂಭದಿಂದಲೂ ತನ್ನ ಚಟುವಟಿಕೆ ವಿಸ್ತರಿಸಿದ ಹಿನ್ನೆಲೆಯಲ್ಲಿ ಇದು ಸಾಧ್ಯ ವಾಗಿದೆ ಎಂದು ಹೇಳಿದರು.

ಒಂದು ಸಮಾಜದ ಸರ್ವಾಂಗೀಣ ಪ್ರಗತಿಗೆ ಯಾವೆಲ್ಲಾ ಅಂಶಗಳ ಅಗತ್ಯ, ಅನಿವಾರ್ಯತೆ ಇದೆಯೋ ಅಲ್ಲಿ ಭಾರ ತೀಯ ಚಿಂತನೆಯ ಆಧಾರದ ವ್ಯವಸ್ಥೆ ತರುವ ಪ್ರಯತ್ನವನ್ನು ಸಂಘ ಮಾಡಿ ಕೊಂಡು ಬರುತ್ತಿದೆ ಎಂದರು.

ಸಂಘ ಇಂದು ಕೇವಲ ಒಂದು ಸಂಘ ಟನೆಯಾಗಿ ಮಾತ್ರ ಉಳಿದಿಲ್ಲ. ನಮ್ಮದೇ ವಿಚಾರ ಇಟ್ಟುಕೊಂಡು ಪ್ರತ್ಯೇಕ ಸಂಘಟನೆ ಗಳು ಕಾರ್ಯನಿರ್ವಹಿಸುತ್ತಿವೆ. ಅಸ್ಪøಶ್ಯತೆ ನಮ್ಮ ಧರ್ಮದಲ್ಲಿ ಕಾಲಕ್ರಮೇಣವಾಗಿ ಬಂದ ಕೆಟ್ಟ ಆಚರಣೆ. ಇದಕ್ಕೆ ಯಾವುದೇ ಶಾಸ್ತ್ರ ಗಳ ಸಮ್ಮತಿ ಇಲ್ಲ ಎಂದು ಸಂಘದವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಸಂಘದ ಭಾರತೀಯ ಮಜ್ದೂರ್ ಸಂಘ ಬಂದ ಮೇಲೆ ಕಾರ್ಮಿಕರ ನೈಜ ಸಮಸ್ಯೆ ಅರ್ಥವಾಗುವಂತಾಯಿತು. ಪರಿಸರ ಸಂರ ಕ್ಷಣೆ ಪ್ರತ್ಯೇಕ ವಿಭಾಗವಿದೆ. ಗೋ ಸಂರ ಕ್ಷಣೆ, ಕೌಟುಂಬಿಕ ಮೌಲ್ಯ ಎತ್ತಿಹಿಡಿಯುವ ಕೆಲಸವನ್ನು ಸಂಘ ಮಾಡುತ್ತಿದೆ ಎಂದರು.

ಭ್ರಷ್ಟರ ಸಂಘ ಪೋಷಿಸಲ್ಲ: ಅಧಿಕಾರ ದಲ್ಲಿರುವವರು ಭ್ರಷ್ಟಾಚಾರ ನಡೆಸಿ, ತಾವು ಈ ಹಿಂದೆ ಆರ್‍ಎಸ್‍ಎಸ್‍ನಲ್ಲಿದ್ದವರು ಎಂದು ಸಂಘದ ಹೆಸರು ದುರ್ಬಳಕೆ ಮಾಡಿ ಕೊಳ್ಳುವ ಬಗ್ಗೆ ಪ್ರತಿಕ್ರಿಯಿಸಿ, ಸಂಘದ ಬಗ್ಗೆ ಸಮಾಜದಲ್ಲಿ ಒಳ್ಳೆಯ ಅಭಿಪ್ರಾಯ ಇರುವ ಕಾರಣ ಅನೇಕ ಸಂದರ್ಭದಲ್ಲಿ ಸಂಘದ ಹೆಸರು ಬಳಸಿಕೊಳ್ಳುವುದಿದೆ. ಇದನ್ನು ಸಂಘ ಮಾತ್ರವಲ್ಲ, ಸಮಾಜವೂ ಪ್ರಶ್ನೆ ಮಾಡಬೇಕು. ಸಂಘ ಆದರ್ಶ ಮಾತ್ರ ಹೇಳಿಕೊಡಲಿದೆ ಎಂಬುದು ಸಮಾಜಕ್ಕೆ ಸ್ಪಷ್ಟವಾಗಿ ಗೊತ್ತಿದೆ ಎಂದು ಪ್ರತಿಪಾದಿಸಿದರು.

ಪ್ರತಿಯೊಂದಕ್ಕೂ ಸಂಘ ಮೂಗು ತೂರಿ ಸಲ್ಲ: ಅಧಿಕಾರಕ್ಕಾಗಿ ಬೇರೆ ಪಕ್ಷದಿಂದ ಬಿಜೆಪಿಗೆ ಬಂದು ಸಚಿವರಾದವರ ವರ್ತನೆ ಬಗ್ಗೆ ಸಾಕಷ್ಟು ಆಕ್ಷೇಪ ಇದೆ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯಂತೆ ಆರ್‍ಎಸ್‍ಎಸ್ ಅಧೀನದಲ್ಲಿ 40ಕ್ಕೂ ಹೆಚ್ಚು ಸಂಘಟನೆಗಳು ಪ್ರತ್ಯೇಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಸಂಘದ ಪ್ರಮುಖರು ನಿರ್ದೇಶನ ನೀಡು ವುದು ಇದೆಯಾದರೂ ಪ್ರತಿಯೊಂದು ಆಗು ಹೋಗುಗಳಲ್ಲಿ ಸಂಘ ಮೂಗು ತೂರಿಸುವು ದಿಲ್ಲ. ಸಂಘದ ಯಾವುದೇ ಸಂಘಟನೆಗಳಲ್ಲಿ ಇರುವ ತಂಡ ಚರ್ಚೆ ಮಾಡಿ ಅವರ ಕ್ಷೇತ್ರಕ್ಕೆ ಯಾವುದು ಒಳ್ಳೆಯದೆಂದು ನಿರ್ಧಾರ ಕೈಗೊಳ್ಳುತ್ತದೆ. ಬಿಜೆಪಿ ದೃಷ್ಟಿಯಲ್ಲಿ ನೋಡು ವುದಾದರೆ ಅಲ್ಲಿನ ಕಷ್ಟನಷ್ಟ ಅವರೇ ಎದು ರಿಸಬೇಕು. ಈ ಹಿನ್ನೆಲೆಯಲ್ಲಿ ಎಲ್ಲವನ್ನೂ ಸಂಘ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ರಾಧಾಕೃಷ್ಣ ಹೊಳ್ಳ ಹೇಳಿದರು.

ಆರ್‍ಎಸ್‍ಎಸ್‍ನ ಮೈಸೂರು ನಗರ ಸಂಘ ಚಾಲಕ ವಾಸುದೇವ ಭಟ್ ವೇದಿಕೆಯಲ್ಲಿ ದ್ದರು. `ಮೈಸೂರು ಮಿತ್ರ’ ಮತ್ತು `ಸ್ಟಾರ್ ಆಫ್ ಮೈಸೂರ್’ ಸಂಪಾದಕ ಎಂ.ಗೋವಿಂದೇ ಗೌಡ, ವಿಜಯವಾಣಿ ಸ್ಥಾನಿಕ ಸಂಪಾದಕ ಸಿ.ಕೆ.ಮಹೇಂದ್ರ ಸೇರಿದಂತೆ ವಿವಿಧ ಪತ್ರಿಕೆ ಸಂಪಾದಕರು, ಸ್ಥಾನಿಕ ಸಂಪಾದಕರು ಹಾಗೂ ಮುಖ್ಯ ವರದಿಗಾರರು, ವರದಿಗಾರರು ಸಂವಾದದಲ್ಲಿ ಪಾಲ್ಗೊಂಡಿದ್ದರು.

Translate »