ಮೈಸೂರು, ನ.೩(ಎಂಕೆ)- ಮೂರು ದಿನಗಳ ಕಾಲ ಸಡಗರ-ಸಂಭ್ರಮದೊAದಿಗೆ ಜರುಗುವ ಬೆಳಕಿನ ಹಬ್ಬ ದೀಪಾವಳಿ ಹಿನ್ನೆಲೆ ಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಹೂ, ಹಣ್ಣು-ತರಕಾರಿ, ದಿನಸಿ ಪದಾರ್ಥಗಳ ಬೆಲೆಯಲ್ಲಿ ಏರಿಕೆಯಾಗ ದಿರುವುದು, ಅಡುಗೆ ಎಣ್ಣೆ ಬೆಲೆ ಇಳಿಕೆ ಕಂಡಿರು ವುದು ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ನಿಟ್ಟುಸಿರು ಬಿಡುವಂತಾಗಿದೆ.
ಕೊರೊನಾ ಕಾರಣದಿಂದ ಕಳೆದ ಎರಡು ವರ್ಷಗಳಿಂದ ದೀಪಾವಳಿ ಹಬ್ಬವನ್ನು ಸಡಗರ-ಸಂಭ್ರಮದಿAದ ಆಚರಿಸಲು ಸಾಧ್ಯವಾಗಿರ ಲಿಲ್ಲ. ಹೀಗಾಗಿ ಈ ಬಾರಿ ಹಬ್ಬವನ್ನು ಸಂಭ್ರಮ ದಿಂದ ಆಚರಿಸಲು ಪೂರ್ವ ತಯಾರಿ ಮಾಡಿ ಕೊಂಡಿರುವ ಜನರು, ಭರ್ಜರಿ ಖರೀದಿಗೆ ಮುಂದಾಗಿದ್ದಾರೆ. ದೇವರಾಜ ಮಾರುಕಟ್ಟೆ, ವಾಣ ವಿಲಾಸ(ಅಗ್ರಹಾರ) ಮಾರುಕಟ್ಟೆ, ಎಂ.ಜಿ.ರಸ್ತೆ ಮಾರುಕಟ್ಟೆ, ಮಂಡಿಮೊಹಲ್ಲಾದ ಚಿಕ್ಕ ಮಾರುಕಟ್ಟೆ, ಗಾಂಧಿನಗರ ಮಾರುಕಟ್ಟೆ ಸೇರಿದಂತೆ ವಿವಿಧ ಮಾರುಕಟ್ಟೆಗಳು ಜನ ಜಂಗುಳಿಯಿAದ ತುಂಬಿ ತುಳುಕುತ್ತಿವೆ.
ಕೊರೊನಾ ಜೊತೆ ಜೊತೆಗೆ ಸತತ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಗ್ರಾಹಕರಿಗೆ ಹೂ, ಹಣ್ಣು-ತರಕಾರಿ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಾಗದಿರುವುದು ಹಾಗೂ ಅಡುಗೆ ಎಣ್ಣೆ ಬೆಲೆ ಕಡಿಮೆಯಾಗಿರುವುದು ನಿಟ್ಟುಸಿರು ಬಿಡುವಂತೆ ಮಾಡಿದೆ.
ಎಣ್ಣೆ ಬೆಲೆ ಇಳಿಕೆ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸುಮಾರು ೭೦-೮೦ ರೂ.ವರೆಗೆ ಹೆಚ್ಚಳವಾಗಿದ್ದ ಅಡುಗೆ ಎಣ್ಣೆ ಬೆಲೆ ೧೫-೨೦ ರೂ., ಕಡಿಮೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ. ಒಂದು ಲೀಟರ್‌ಗೆ ೧೬೫ ರೂ.ಇದ್ದ ಸನ್‌ಪ್ಯೂರ್ ಎಣ್ಣೆ ಈಗ ೧೪೨ ರೂ. ಇದ್ದು, ಇತರೆ ಬ್ರಾಂಡ್‌ಗಳ ಅಡುಗೆ ಎಣ್ಣೆ ಬೆಲೆಗಳಲ್ಲಿಯೂ ಇಳಿಕೆಯಾಗಿದೆ. ಹರಳೆಣ್ಣೆ ೧೫೦-೧೬೦ ರೂ., ಕೊಬ್ಬರಿ ಎಣ್ಣೆ ೨೦೦-೨೨೦ ರೂ., ವನಸ್ಪತಿ ತುಪ್ಪ ೧೨೦ ರೂ., ಇದೆ ಎಂದು ದೇವರಾಜ ಮಾರುಕಟ್ಟೆ ಶ್ರೀ ವೆಂಕಟೇಶ್ವರ ಟ್ರೇರ‍್ಸ್(ಎಣ್ಣೆ ಮಾರಾಟ ಅಂಗಡಿ)ನ ಶಾಲಿನಿ ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.
ಹೂ, ಹಣ್ಣು-ತರಕಾರಿ: ಹೂ ಮತ್ತು ಹಣ್ಣು-ತರಕಾರಿ ಬೆಲೆ ಯಥಾಸ್ಥಿತಿಯಲ್ಲಿರುವುದು ಖರೀದಿಯನ್ನು ಹೆಚ್ಚಿಸಿದೆ. ಸೇವಂತಿಗೆ ಹೂ ಮಾರಿಗೆ ೨೦-೩೦ ರೂ., ಕೆ.ಜಿ ಮಲ್ಲಿಗೆ ಹೂ ೧೪೦೦-೧೬೦೦ ರೂ., ಕನಕಾಂಬರ ೪೦೦-೬೦೦ ರೂ., ಕಾಕಡ ೪೦೦-೫೦೦ ರೂ., ಚೆಂಡು ಹೂ ೩೦-೪೦ ರೂ., ಇದೆ. ಹಣ್ಣುಗಳಲ್ಲಿ ಸೇಬು ೧೨೦-೧೪೦ ರೂ., ದಾಳಿಂಬೆ ೧೮೦-೨೦೦ ರೂ., ದ್ರಾಕ್ಷಿ ೧೬೦ ರೂ., ಕಪ್ಪು ದ್ರಾಕ್ಷಿ ೧೨೦ ರೂ., ಕಿತ್ತಳೆ ೪೦-೫೦ ರೂ., ಮೊಸಂಬಿ ೬೦ ರೂ., ಕಲ್ಲಂಗಡಿ ೨೦ ರೂ., ಸಪೋಟ ೩೦-೫೦ ರೂ., ಅನಾನಸ್ ೩೦ ರೂ., ಏಲಕ್ಕಿ ಬಾಳೆ ೬೦-೮೦ ರೂ., ಪಚ್ಚ ಬಾಳೆ ೩೦ ರೂ. ಇದೆ ಎಂದು ಹಣ ್ಣನ ವ್ಯಾಪಾರಿ ಬಾಬು ತಿಳಿಸಿದರು.
ದುಬಾರಿ ಟೊಮ್ಯಾಟೋ: ತರಕಾರಿಗಳಲ್ಲಿ ಟೊಮ್ಯಾಟೋ ಬೆಲೆ ಏರಿಕೆಯಾಗಿದ್ದು, ಕೆ.ಜಿಗೆ ೪೦ ರೂ.,ನಂತೆ ಮಾರಾಟ ಮಾಡಲಾಗುತ್ತಿದೆ. ಇನ್ನುಳಿದ ತರಕಾರಿಗಳ ಬೆಲೆಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಕೆ.ಜಿ ಕ್ಯಾರೆಟ್ ೪೦ ರೂ., ಬಿನ್ಸ್ ೪೦ ರೂ., ಬಿಟ್‌ರೋಟ್ ೨೦ ರೂ., ಹಸಿಮೆಣಸಿನಕಾಯಿ ೨೫-೩೫ ರೂ., ಹಸಿಶುಂಠಿ ೫೦ ರೂ., ಎಲೆಕೋಸು ೮ ರೂ., ಮಂಗಳೂರು ಸೌತೆಕಾಯಿ ೧೨ ರೂ., ಸೊರೆಕಾಯಿ ೧೫ ರೂ., ಗೆಡ್ಡೆಕೋಸು ೨೫ ರೂ., ಸಿಹಿ ಕುಂಬಳ ೧೫ ರೂ., ಬೂದುಗುಂಬಳಕಾಯಿ ೧೫-೨೦ ರೂ., ಹೀರೆಕಾಯಿ ೩೦ ರೂ., ಪಡವಲಕಾಯಿ ೨೦ ರೂ., ಹೂ ಕೋಸು ೪೦ ರೂ., ದಪ್ಪ ಮೆಣಸಿನಕಾಯಿ ೧೦೦ ರೂ., ಸೌತೆಕಾಯಿ ೧೫ ರೂ., ಬದನೆಕಾಯಿ ೧೬ ರೂ., ಈರುಳ್ಳಿ ೪೦-೫೦ ರೂ., ಆಲೂಗೆಡ್ಡೆ ೨೫-೩೦ ರೂ., ಬೆಳ್ಳುಳ್ಳಿ ೮೦-೧೦೦ ರೂ. ಹಾಗೂ ಸಾಂಬಾರ್ ಈರುಳ್ಳಿ ೬೦ ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ತರಕಾರಿ ವ್ಯಾಪಾರಿ ಇಬ್ರಾಹಿಂ ಅಬು ತಿಳಿಸಿದರು.
ದಿನಸಿ ಪದಾರ್ಥಗಳು: ಅಕ್ಕಿ, ಬೆಳೆ ಮುಂತಾದ ದಿನಸಿ ಪದಾರ್ಥಗಳ ಬೆಲೆ ಎಂದಿನAತಿದೆ. ಒಣ ಮೆಣಸಿಕಾಯಿ ಕೆ.ಜಿಗೆ ೧೩೦ ರೂ., ಬ್ಯಾಡಗಿ ಮೆಣಸಿನಕಾಯಿ ೩೨೦ ರೂ., ಅಲಸಂದೆ ಕಾಳು ೮೦-೧೦೦ ರೂ., ತೊಗರಿ ಬೆಳೆ ೧೦೬ ರೂ., ಹಸಿರು ಬೆಳೆ ಮತ್ತು ಹಸಿರು ಕಾಳು ೧೦೨ ರೂ., ಕಡಳೆ ಕಾಳು ೮೪ ರೂ., ಉದ್ದಿನ ಕಾಳು ಮತ್ತು ಬೆಳೆ ೧೧೬-೧೧೮ ರೂ., ರಾಜಮುಡಿ ಅಕ್ಕಿ ೪೬ ರೂ., ಹಾಗೂ ಬುಲೇಟ್ ರೈಸ್ ಕೆ.ಜಿಗೆ ೬೮ ರೂ.ನಂತೆ ಮಾರಾಟ ಮಾಡಲಾಗುತ್ತಿದೆ. ವರಮಹಾಲಕ್ಷಿö್ಮ ಹಬ್ಬದಂದು ಲಕ್ಷಿö್ಮ ಪೂಜೆ ಮಾಡದವರು ದೀಪಾವಳಿ ಹಬ್ಬದಲ್ಲಿ ಲಕ್ಷಿö್ಮ ಪೂಜೆ ಮಾಡುವ ಹಿನ್ನೆಲೆಯಲ್ಲಿ ಬಾಳೆ ಕಂದು ಹಾಗೂ ಕಬ್ಬಿನ ಜಲ್ಲೆಗಳ ಮಾರಾಟವೂ ಜೋರಾಗಿತ್ತು. ಜೋಡಿ ಬಾಳೆ ಕಂದಿಗೆ ೨೦ ರೂ. ಹಾಗೂ ಕಬ್ಬಿನ ಜಲ್ಲೆಗೆ ೧೦ ರೂ.ನಂತೆ ಮಾರಲಾಗುತ್ತಿದೆ.
ಸಮಾಧಾನ ತಂದಿದೆ: ಅಡುಗೆ ಎಣ್ಣೆ ಕಡಿಮೆಯಾಗಿರುವುದು ಸ್ವಲ್ಪ ಸಮಾಧಾನ ತಂದಿದೆ. ಕೊರೊನಾ ಲಾಕ್‌ಡೌನ್ ವೇಳೆ ತುಂಬಾ ಜಾಸ್ತಿಯಾಗಿತ್ತು. ಕೆಲಸವೂ ಇಲ್ಲದೆ ಇದ್ದಿದ್ದರಿಂದ ಆಹಾರ ಪದಾರ್ಥಗಳನ್ನು ಕೊಂಡುಕೊಳ್ಳುವುದೇ ತುಂಬಾ ಕಷ್ಟವಾಗಿತ್ತು. ಈಗ ಕೊರೊನಾ ಜೊತೆಗೆ ಕೆಲವು ಆಹಾರ ಪದಾರ್ಥಗಳ ಬೆಲೆಯೂ ಕಡಿಮೆಯಾಗಿದೆ. ಇರುವ ಹಣದಲ್ಲೇ ಸರಿದೂಗಿಸಲು ಮೊದಲು ಬೆಲೆ ಕೇಳಿ ಖರೀದಿ ಮಾಡುತ್ತಿದ್ದೇವೆ ಎಂದು ಕುವೆಂಪುನಗರದ ನಿವಾಸಿಯೊಬ್ಬರು ತಿಳಿಸಿದರು.