ಜಯದೇವ ಸೇರಿದಂತೆ ಮೈಸೂರಿನ ಆಸ್ಪತ್ರೆಗಳಲ್ಲಿ ಜನವೋ ಜನ
ಮೈಸೂರು

ಜಯದೇವ ಸೇರಿದಂತೆ ಮೈಸೂರಿನ ಆಸ್ಪತ್ರೆಗಳಲ್ಲಿ ಜನವೋ ಜನ

November 4, 2021

ಮೈಸೂರು, ನ.೩(ಆರ್‌ಕೆ)-ನಾಯಕ ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನದ ಹಿನ್ನೆಲೆಯಲ್ಲಿ ಆತಂಕಗೊAಡಿರುವ ಜನರು ತಮ್ಮ ಹೃದಯದ ಆರೋಗ್ಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಮುಗಿ ಬೀಳುತ್ತಿದ್ದಾರೆ.

ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದ ೪೬ ವರ್ಷದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದಾಗಿ ಚಿಕಿತ್ಸೆ ಪಡೆ ಯಲೂ ಆಗದೇ ಸಾವನ್ನಪ್ಪಿದ ಘಟನೆಯಿಂದ ಗಾಬರಿ ಗೊಂಡಿರುವ ಎಲ್ಲಾ ವಯೋಮಾನದ ಜನರೂ ಮುಂಜಾಗ್ರತೆಯಾಗಿ ಹೃದಯ ಸುರಕ್ಷೆ ಖಾತರಿಪಡಿಸಿ ಕೊಳ್ಳಲು ಮುಂದಾಗಿದ್ದಾರೆ. ಕಳೆದ ಶನಿವಾರದಿಂದಲೇ ಮೈಸೂರಿನ ಕೆಆರ್‌ಎಸ್ ರಸ್ತೆಯಲ್ಲಿರುವ ಶ್ರೀ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಕೇಂದ್ರದ ಆಸ್ಪತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಿಧನರಾಗುವ ಮುನ್ನ ಸಾಮಾನ್ಯವಾಗಿ ದಿನಕ್ಕೆ ೫೦೦ ರಿಂದ ೬೦೦ ಮಂದಿ ಹೊರರೋಗಿಗಳು ತಪಾಸಣೆ ಮಾಡಿಸಿಕೊಳ್ಳುತ್ತಿದ್ದರು. ಆದರೆ, ಶನಿವಾರ ದಿಂದೀಚೆಗೆ ದಿನಕ್ಕೆ ೧,೦೦೦ ದಿಂದ ೧,೨೦೦ ಮಂದಿ ಆಗಮಿಸುತ್ತಿದ್ದಾರೆ ಎಂದು ಜಯದೇವ ಹೃದ್ರೋಗ ಆಸ್ಪತ್ರೆ ಮುಖ್ಯಸ್ಥರಾದ ಖ್ಯಾತ
ಹೃದ್ರೋಗ ತಜ್ಞ ಡಾ.ಕೆ.ಎಸ್. ಸದಾನಂದ ಅವರು ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಅದೇ ರೀತಿ ಮುಂಜಾಗರೂಕತೆಗಾಗಿ ಮಾಸ್ಟರ್ ಹೆಲ್ತ್ ಚೆಕ್‌ಅಪ್ ಮಾಡುವ ವಿಶೇಷ ಹೊರರೋಗಿ ವಿಭಾಗ(Sಠಿeಛಿiಚಿಟ ಔPಆ)ದಲ್ಲಿ ಈಗ ೫೦ ರಿಂದ ೬೦ ಮಂದಿ ಆರೋಗ್ಯ ತಪಾಸಣೆ ಮಾಡಿಸುತ್ತಿದ್ದಾರೆ. ಸಾಮಾನ್ಯ ದಿನಗಳಲ್ಲಿ ಪ್ರತೀ ದಿನ ೧೦ ರಿಂದ ೧೫ ಮಂದಿ ಮಾತ್ರ ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಿಕೊಳ್ಳುತ್ತಿದ್ದರು ಎಂದೂ ಅವರು ತಿಳಿಸಿದ್ದಾರೆ. ಈವರೆಗೆ ಸಾಮಾನ್ಯವಾಗಿ ೫೦ ವರ್ಷ ಮೇಲ್ಪಟ್ಟವರು ಹೆಚ್ಚಾಗಿ ನಮ್ಮ ಆಸ್ಪತ್ರೆಗೆ ಬರುತ್ತಿದ್ದರು. ಆ ಪೈಕಿ ಹೃದಯ ಸಮಸ್ಯೆ ಇದ್ದವರನ್ನು ಮಾತ್ರ ಒಳರೋಗಿಯಾಗಿ ದಾಖಲಿಸಿಕೊಂಡು ಅಗತ್ಯವಿದ್ದವರಿಗೆ ಮಾತ್ರ ಆಂಜಿಯೋಗ್ರಾA ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಮತ್ತು ತೆರೆದ ಹೃದಯ ಶಸ್ತçಚಿಕಿತ್ಸೆ ಮಾಡುತ್ತಿದ್ದೆವು. ಆದರೆ, ಪುನೀತ್ ರಾಜ್‌ಕುಮಾರ್ ಸಾವಿನ ನಂತರ ೩೦ ವರ್ಷ ಮೇಲ್ಪಟ್ಟವರೂ ಸಹ ಹೃದಯ ತಪಾಸಣೆಗೆಂದು ಬರುತ್ತಿರುವುದು ವಿಶೇಷ ಎಂದ ಡಾ.ಸದಾನಂದ, ಮುಂಜಾಗ್ರತೆಯಾಗಿ ಆಗಿಂದಾಗ್ಗೆ ಹೃದಯದ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಒಳಿತಾದರೂ ಆತಂಕಗೊAಡು ಚಿಕ್ಕಪುಟ್ಟ ವಯಸ್ಸಿನವರೂ ಆತುರಾತುರವಾಗಿ ಆಸ್ಪತ್ರೆಗೆ ಮುಗಿ ಬೀಳುವ ಅಗತ್ಯವಿಲ್ಲ ಎಂದು ಸಲಹೆ ನೀಡಿದರು.
ಸ್ಪೆಷಲ್ ಓಪಿಡಿಯಲ್ಲಿ ನೋಂದಣ , ಇಸಿಜಿ, ಎಕೋ ಕಾರ್ಡಿಯಾಲಜಿ, ಟ್ರೆಡ್‌ಮಿಲ್, ವಿವಿಧ ರಕ್ತ ಪರೀಕ್ಷೆ ವಿಭಾಗದಲ್ಲಿ ಈಗ ನೂಕು-ನುಗ್ಗಲು ಉಂಟಾಗಿದ್ದು, ರೋಗಿಗಳನ್ನು ನಿಯಂತ್ರಿಸಿ ನಿರ್ವಹಿಸುವುದೇ ಒಂದು ಸವಾಲಾಗಿದೆ, ಹೊರರೋಗಿ ವಿಭಾಗದಲ್ಲಂತೂ ಭಾರೀ ಸಂಖ್ಯೆಯಲ್ಲಿ ತಪಾಸಣೆಗೆ ಬರುತ್ತಿದ್ದಾರೆ. ವೈದ್ಯರು, ನರ್ಸ್ಗಳು, ಟೆಕ್ನಿಷಿಯನ್‌ಗಳ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಗೆ ಬಿಡುವೇ ಇಲ್ಲದಂತಾಗಿದೆ ಎಂದೂ ಅವರು ಹೇಳಿದರು. ಹಬ್ಬ, ರಜಾದಿನಗಳಲ್ಲಿ ರೋಗಿಗಳ ಸಂಖ್ಯೆ ತೀರಾ ಕಡಿಮೆ ಇರುತ್ತಿತ್ತು. ಕೆಲವೊಮ್ಮೆ ಹಬ್ಬದ ದಿನಗಳಲ್ಲಿ ಅರ್ಧ ದಿನ ಮಾತ್ರ ಹೊರ ರೋಗಿಗಳಿಗೆ ತಪಾಸಣೆ, ಚಿಕಿತ್ಸೆ ಮಾಡುತ್ತಿದ್ದೆವು. ಆದರೆ ಇಂದು ದೀಪಾವಳಿ ಹಬ್ಬದಂದೂ ಸಾವಿರಕ್ಕೂ ಹೆಚ್ಚು ಮಂದಿ ಓಪಿಡಿಯಲ್ಲಿ ನೋಂದಣ ಯಾಗಿದ್ದಾರೆ. ೫೦ಕ್ಕೂ ಹೆಚ್ಚು ಮಂದಿ ಮಾಸ್ಟರ್ ಹೆಲ್ತ್ ಚೆಕಪ್ ಮಾಡಿಸಿಕೊಂಡಿದ್ದಾರೆ ಎಂದೂ ಡಾ.ಸದಾನಂದ ತಿಳಿಸಿದರು.

ನಮ್ಮ ಆಸ್ಪತ್ರೆಯಲ್ಲಿ ೫೫ಕ್ಕೂ ಹೆಚ್ಚು ವೈದ್ಯರಿದ್ದಾರೆ. ಒಟ್ಟು ೫೦೦ ಮಂದಿ ಸಿಬ್ಬಂದಿ ಗಳಿದ್ದಾಗ್ಯೂ, ಕಳೆದ ಶನಿವಾರದಿಂದ ಬರುತ್ತಿರುವ ರೋಗಿಗಳನ್ನು ನಿರ್ವಹಿಸುವುದರಲ್ಲಿ ನಾವೆಲ್ಲಾ ಬ್ಯುಸಿಯಾಗಿದ್ದೇವೆ. ಎಷ್ಟೇ ತೊಂದರೆಯಾದರೂ, ಬರುವ ಎಲ್ಲಾ ರೋಗಿಗಳಿಗೂ ಪ್ರೋಟೋಕಾಲ್‌ನಂತೆ ಎಲ್ಲ ವಿಧದ ತಪಾಸಣೆ ಮಾಡಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು. ಮೈಸೂರಷ್ಟೇ ಅಲ್ಲ, ಬೆಂಗಳೂರಿನ ಶ್ರೀ ಜಯದೇವ ಆಸ್ಪತ್ರೆಯಲ್ಲೂ ಈಗ ರೋಗಿಗಳ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳವಾಗಿದೆ, ವೈದ್ಯರು ಹಾಗೂ ಸಿಬ್ಬಂದಿ ತಾಳ್ಮೆಯಿಂದ ನಿಭಾಯಿಸುತ್ತಿ ದ್ದಾರೆ ಎಂದು ಡಾ.ಸದಾನಂದ ಅವರು ನುಡಿದರು. ಅದೇ ರೀತಿ ನಾರಾಯಣ ಹೃದಯಾಲಯ, ಕಾವೇರಿ, ಜೆಎಸ್‌ಎಸ್, ಕೊಲಂಬಿಯಾ ಏಷಿಯಾ, ಬಿಜಿಎಸ್ ಅಪೋಲೋ ಸೇರಿದಂತೆ ಮೈಸೂರಿನ ಹಲವು ಖಾಸಗಿ ಆಸ್ಪತ್ರೆಗಳಿಗೂ ಹೃದಯ ತಪಾಸಣೆಗಾಗಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರಲ್ಲದೆ, ಖಾಸಗಿ ಕ್ಲಿನಿಕ್‌ಗಳಲ್ಲೂ ಹೃದ್ರೋಗ ತಜ್ಞರ ಬಳಿಗೆ ಹೆಚ್ಚಿನ ಜನರು ತೆರಳುತ್ತಿರುವುದು ಕಂಡು ಬಂದಿದೆ.

Translate »