35 ವರ್ಷ ಮೇಲ್ಪಟ್ಟ ಪುರುಷರು, 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಿ
ಮೈಸೂರು

35 ವರ್ಷ ಮೇಲ್ಪಟ್ಟ ಪುರುಷರು, 40 ವರ್ಷ ಮೇಲ್ಪಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳಿ

November 4, 2021

ಮೈಸೂರು, ನ. ೩(ಆರ್‌ಕೆ)- ೩೫ ವರ್ಷ ಮೇಲ್ಪಟ್ಟ ಪುರುಷರು ಹಾಗೂ ೪೦ ವರ್ಷ ಮೇಲ್ಪಟ್ಟ ಮಹಿಳೆ ಯರು ವರ್ಷಕ್ಕೊಮ್ಮೆಯಾದರೂ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಬೆಂಗಳೂ ರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರೂ ಆದ ಖ್ಯಾತ ಹೃದ್ರೋಗ ತಜ್ಞ ಡಾ. ಸಿ.ಎನ್. ಮಂಜುನಾಥ್ ಸಲಹೆ ನೀಡಿದ್ದಾರೆ.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ತೀವ್ರ ಹೃದಯಾಘಾತದಿಂದ ಹಠಾತ್ ವಿಧಿವಶರಾ ಗಿರುವುದರಿಂದ ಗಾಬರಿಗೊಂಡಿರುವ ಜನರು, ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನವೆಂಬರ್ ೧ರಂದು ೧,೨೦೦ ಮಂದಿ ಹಾಗೂ ನವೆಂಬರ್ ೨ರಂದು ೧,೭೦೦ ಮಂದಿ ಹೊರರೋಗಿ ಯಾಗಿ ಚಿಕಿತ್ಸೆ ಪಡೆದಿದ್ದು, ದೀಪಾವಳಿ ಹಬ್ಬದ ದಿನ ವಾದ ಇಂದೂ ೧,೦೦೦ ರೋಗಿಗಳು ತಪಾಸಣೆ ಗೊಳಗಾಗಿದ್ದಾರೆ ಎಂದು ಅವರು ತಿಳಿಸಿದರು.

ಪುನೀತ್ ರಾಜ್‌ಕುಮಾರ್ ಸಾವಿನ ಸುದ್ದಿಯನ್ನು ಟಿವಿ ಮುಂದೆ ಕುಳಿತು ನಿರಂತರವಾಗಿ ವೀಕ್ಷಿಸಿದ್ದರಿಂದ ಕೆಲವರಿಗೆ ಸಣ್ಣಪುಟ್ಟ ಎದೆ ನೋವು, ಎಡಗೈ, ಭುಜದ ಬಳಿ ನೋವು ಕಾಣ ಸಿಕೊಂಡಿರುವುದರಿAದ ಹೃದಯಾ ಘಾತದ ಲಕ್ಷಣ ಎಂದು ಭಾವಿಸಿ ಆಸ್ಪತ್ರೆಗೆ ಬರು ತ್ತಿದ್ದಾರೆ. ಅಷ್ಟು ಮಾತ್ರಕ್ಕೆ ಆತಂಕ, ಗಾಬರಿ ಯಾಗು ವುದು ಬೇಡ. ಆದರೆ ನಿರ್ಲಕ್ಷö್ಯವೂ ಸಲ್ಲದು, ವರ್ಷ ಕ್ಕೊಮ್ಮೆ ತಪ್ಪದೇ ಹೃದಯದ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ನಮ್ಮ ದೇಶದಲ್ಲಿ ಶೇ.೨೫ರಷ್ಟು ಮಂದಿಗೆ ಹೃದಯಾಘಾತವಾಗುತ್ತಿದ್ದು, ಆ ಪೈಕಿ ಶೇ.೩೦ರಷ್ಟು ೪೦ ವರ್ಷದೊಳಗಿನವರು ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿರುವುದ ರಿಂದ ೩೫ ವರ್ಷ ಮೇಲ್ಪಟ್ಟ ಪುರುಷರು ಹಾಗೂ ೪೦ ವರ್ಷ ಮೇಲ್ಟಟ್ಟ ಮಹಿಳೆಯರು ವರ್ಷಕ್ಕೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಂಡು ಸಲಹೆ, ಸೂಕ್ತ ಚಿಕಿತ್ಸೆ ಪಡೆಕೊಳ್ಳಬೇಕೆಂದು ಡಾ.ಮಂಜುನಾಥ್ ತಿಳಿಸಿದರು.
ಸಾಂಕ್ರಾಮಿಕ ರೋಗ ಅಲ್ಲ: ಹೃದಯಾಘಾತ ಎಂಬುದು ಸಾಂಕ್ರಾಮಿಕ ರೋಗವಲ್ಲ. ಒಬ್ಬರಿಗೆ ಹೃದಯಾ ಘಾತವಾದರೆ ಇತರರಿಗೂ ತೊಂದರೆಯಾಗುತ್ತದೆ ಎಂದು ಭಾವಿಸುವುದು ಬೇಡ. ಪುನೀತ್ ರಾಜ್ ಕುಮಾರ್ ಅವರಿಗೆ ತೀವ್ರ ಹೃದಯಾಘಾತವಾಯಿ ತೆಂದು ಜನರು ಗಾಬರಿಯಾಗಬೇಕಾಗಿಲ್ಲ. ಹೃದಯಾ ಘಾತಕ್ಕೂ ಒಂದು ನಿರ್ದಿಷ್ಟ ಲಕ್ಷಣಗಳಿವೆ. ಕೇವಲ ಎದೆ ನೋವು, ಎದೆ ಉರಿ, ಎಡಗೈ, ಕುತ್ತಿಗೆ, ಎಡ ಭುಜ ದಲ್ಲಿ ನೋವು ಕಾಣ ಸಿಕೊಂಡ ತಕ್ಷಣ ಘಾಸಿಯಾಗು ವುದು ಬೇಡ. ಅಗತ್ಯವಿದ್ದರೆ ಹೃದ್ರೋಗ ತಜ್ಞರಿಂದ ಸಲಹೆ ಪಡೆಯಿರಿ ಎಂದು ಅವರು ಕಿವಿಮಾತು ಹೇಳಿದ್ದಾರೆ.

ವ್ಯಾಯಾಮ ನಿಲ್ಲಿಸಬೇಡಿ: ಯಾವುದೇ ಕಾರಣಕ್ಕೂ ವ್ಯಾಯಾಮ, ಯೋಗ, ವಾಕಿಂಗ್‌ನAತಹ ದೈಹಿಕ ಶ್ರಮದ ಚಟುವಟಿಕೆಗಳನ್ನು
ನಿಲ್ಲಿಸಬಾರದು. ಆದರೆ, ನಿಮ್ಮ ದೇಹದ ತೂಕ, ವಯಸ್ಸು, ನಿತ್ಯ ಕಾರ್ಯಚಟುವಟಿಕೆ, ಒತ್ತಡಗಳಿಗನುಸಾರವೇ ವ್ಯಾಯಾಮ ಮಾಡಬೇಕು. ಅತೀ ಹೆಚ್ಚು ದೈಹಿಕ ಶ್ರಮವೂ ಅಪಾಯಕಾರಿ ಎಂದು ಡಾ. ಸಿ.ಎನ್. ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.

ಹೃದಯಾಘಾತದ ಲಕ್ಷಣಗಳಿವು: ಕಡಿದಾದ ರಸ್ತೆಯಲ್ಲಿ ನಡೆಯುವಾಗ, ಮೆಟ್ಟಿಲು ಹತ್ತುವಾಗ, ನಡೆಯುವಾಗ, ಓಡುವಾಗ ಎದೆನೋವು, ಉಬ್ಬಸ ಕಾಣ ಸಿಕೊಂಡರೆ, ಸಕಾರಣವಿಲ್ಲದೇ ಮೈ ಬೆವರುವುದು ಕಂಡುಬAದಲ್ಲಿ ತಡ ಮಾಡದೇ ವೈದ್ಯರ ಬಳಿಗೆ ತಕ್ಷಣ ತೆರಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Translate »