ಹುಣಸೂರು ಬಳಿ ಭೀಕರ ರಸ್ತೆ ಅಪಘಾತ:  ಮರಕ್ಕೆ ಬೊಲೆರೊ ಡಿಕ್ಕಿ ಕೊಡಗಿನ 6 ಮಂದಿ ಸಾವು
ಮೈಸೂರು

ಹುಣಸೂರು ಬಳಿ ಭೀಕರ ರಸ್ತೆ ಅಪಘಾತ: ಮರಕ್ಕೆ ಬೊಲೆರೊ ಡಿಕ್ಕಿ ಕೊಡಗಿನ 6 ಮಂದಿ ಸಾವು

April 21, 2022

ಮೂವರಿಗೆ ತೀವ್ರ ಗಾಯ, ಮೈಸೂರು ಆಸ್ಪತ್ರೆಗೆ ದಾಖಲು

ಮದುವೆ ಮುಗಿಸಿ ಹೋದವರು ಮಸಣಕ್ಕೆ

ರಾಯಚೂರು ಬಳಿ ನಡೆದ ಅಪಘಾತದಲ್ಲಿ ಮೂವರ ಸಾವು

ಹುಣಸೂರು, ಏ.೨೦ (ಕೆಕೆ, ಹೆಚ್‌ಎಸ್‌ಎಂ, ಮಹೇಶ)-ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ವಾಹನ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳ ದಲ್ಲಿ ಸಾವನ್ನಪ್ಪಿ, ಮೂವರು ತೀವ್ರವಾಗಿ ಗಾಯ ಗೊಂಡಿರುವ ದಾರುಣ ಘಟನೆ ಬುಧವಾರ ಮಧ್ಯಾಹ್ನ ಹುಣಸೂರು-ವಿರಾಜಪೇಟೆ ರಸ್ತೆಯ ಅರಸು ಕಲ್ಲಹಳ್ಳಿ ಬಳಿ ಸಂಭವಿಸಿದೆ.

ಕೊಡಗು ಜಿಲ್ಲೆ, ವಿರಾಜಪೇಟೆ ತಾಲೂಕಿನ ಪಾಲಿಬೆಟ್ಟದ ನಿವಾಸಿಗಳಾದ ಬಾಲ ಕೃಷ್ಣ ಅವರ ಪುತ್ರ ಸಂತೋಷ್(೪೭), ಬಾಳಪ್ಪರ ಮಗ ವಿನುತ್(೩೩), ಸಂಕಪ್ಪ ರೈ ಮಗ ದಯಾ ನಂದ್(೪೦), ರಾಘವ್ ಅವರ ಪುತ್ರ ಅನಿಲ್ (೪೪), ಗೋಪಾಲ್ ಅವರ ಪುತ್ರ ಬಾಬು (೪೭), ಸೋಮು ಅವರ ಪುತ್ರ ರಾಜೇಶ್ ಅಪಘಾತದಲ್ಲಿ ಅಸುನೀಗಿದವರಾಗಿದ್ದಾರೆ.

ತೀವ್ರವಾಗಿ ಗಾಯಗೊಂಡಿರುವ ದಿಲೀಪ್ (೬೫) ಅವರನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೂ, ಸುಂದರ್ ಮತ್ತು ಶಾಂತಿ ದಂಪತಿ ಪುತ್ರಿ ಕೀರ್ತನಾ(೨೨) ಹಾಗೂ ಶಾಮ್ಸನ್ ಮತ್ತು ಕೋಜಿ ದಂಪತಿ ಪುತ್ರಿ ಏಂಜೆಲ್(೧೪) ಅವರನ್ನು ಮೈಸೂರಿನ ಬೃಂದಾವನ ಆಸ್ಪತ್ರೆಗೆ ಸೇರಿಸಲಾಗಿದೆ. ಇವರುಗಳು ಆಸ್ಪತ್ರೆಯ ತೀವ್ರ ನಿಗಾ ಘಟಕ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೊಲೆರೊ ದಲ್ಲಿದ್ದವರೆಲ್ಲಾ ಪಾಲಿಬೆಟ್ಟದ ಒಂದೇ ಏರಿಯಾದ ನಿವಾಸಿಗಳಾಗಿದ್ದು, ಪರಸ್ಪರ ಸ್ನೇಹಿತರಾಗಿದ್ದರು ಎನ್ನಲಾಗಿದೆ.

ಹುಣಸೂರಿನ ಬೈಪಾಸ್ ರಸ್ತೆಯಲ್ಲಿ ರುವ ಅದುಲಾಮ್ ಕನ್ವೆನ್ಷನ್ ಹಾಲ್‌ನಲ್ಲಿ ಇಂದು ನಡೆಯುತ್ತಿದ್ದ ಪಾಲಿಬೆಟ್ಟದ ಸದಾ ನಂದ ಮತ್ತು ಹುಣಸೂರು ನಿವಾಸಿ ಜಯ ಕುಮಾರಿ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಪಾಲಿಬೆಟ್ಟದಿಂದ ತಮ್ಮ ಬೊಲೆರೊ ವಾಹನ (ಕೆಎ ೦೩, ಎಂಸಿ-೬೪೫೫)ದಲ್ಲಿ ಈ ೯ ಮಂದಿ ಬೆಳಗ್ಗೆ ಆಗಮಿಸಿದ್ದರು.

ಮದುವೆ ಮುಗಿಸಿಕೊಂಡು ಮಧ್ಯಾಹ್ನ ಪಾಲಿಬೆಟ್ಟಕ್ಕೆ ಹೋಗುತ್ತಿದ್ದಾಗ, ಚಾಲಕ ಸಂತೋಷ್ ಅವರ ನಿಯಂತ್ರಣ ತಪ್ಪಿದ ಬೊಲೆರೊ, ರಸ್ತೆ ಬದಿಯ ಮರಕ್ಕೆ ಮಧ್ಯಾಹ್ನ ಸುಮಾರು ೩.೩೦ರಲ್ಲಿ ಡಿಕ್ಕಿ ಹೊಡೆದಿದ್ದು, ಇದರಿಂದ ಮರದ ಮುಂದೆ ಚಾಚಿಕೊಂಡಿದ್ದ ಕೊಂಬೆಯೊAದು ಬೊಲೆರೊ ವಾಹನ ಮುಂಭಾಗ ಗ್ಲಾಸ್ ಭೇದಿಸಿ, ಒಳ ನುಗ್ಗಿದ್ದರಿಂದ ಚಾಲಕ ಸೇರಿ ೬ ಮಂದಿ ತೀವ್ರವಾಗಿ ಗಾಯಗೊಂಡು ವಾಹನದಲ್ಲೇ ಸಾವನ್ನಪ್ಪಿದರು.

Heavy road accident near Hunsur: 6 killed in Bolero collision with wood

ವಾಹನದ ಹಿಂಭಾಗದ ಸೀಟಿನಲ್ಲಿ ಕುಳಿತಿದ್ದ ದಿಲೀಪ್, ಕೀರ್ತನಾ ಮತ್ತು ಏಂಜೆಲ್ ಅವರುಗಳು ಗಾಯಗೊಂಡು, ಅದೃಷ್ಟವಶಾತ್ ಬದುಕುಳಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹುಣಸೂರು ಪಟ್ಟಣದಿಂದ ಸುಮಾರು ೭ ಕಿ.ಮೀ. ದೂರದಲ್ಲಿ ಈ ಅಪಘಾತ ಸಂಭವಿಸಿದ್ದು, ವಿಷಯ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತೆರಳಿ, ಸಾರ್ವಜನಿಕರ ಸಹಾಯದಿಂದ ಮರದ ಕೊಂಬೆಯಿAದ ವಾಹನವನ್ನು ಬೇರ್ಪಡಿಸಿ, ಸಾವನ್ನಪ್ಪಿದವರ ದೇಹಗಳನ್ನು ವಾಹನದಲ್ಲಿ ಹುಣಸೂರಿನ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದರಲ್ಲದೆ, ಗಾಯಗೊಂಡಿದ್ದ ಮೂವರನ್ನೂ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನ್, ಅಡಿಷನಲ್ ಎಸ್ಪಿ ಶಿವಕುಮಾರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಪಘಾತದಿಂದ ಬೊಲೆರೊ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದೆ.

ಭಾನುವಾರ ಮದುವೆ: ಈ ಅಪಘಾತದಲ್ಲಿ ಸಾವನ್ನಪ್ಪಿದ ಪಾಲಿಬೆಟ್ಟದ ಬಾಳಪ್ಪನವರ ಪುತ್ರ ವಿನುತ್ ಅವರ ವಿವಾಹ ಭಾನುವಾರ (ಏ.೨೪) ನಿಗದಿಯಾಗಿತ್ತು. ವಿವಾಹಕ್ಕೆ ಕೇವಲ ನಾಲ್ಕು ದಿನವಿದೆ. ಈ ಅಪಘಾತದಲ್ಲಿ ವಿನುತ್ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾಗಿ ಪೊಲೀಸರು ಹೇಳಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರ ಕುಟುಂಬಸ್ಥರು ಹುಣಸೂರು ಆಸ್ಪತ್ರೆಗೆ ಆಗಮಿಸಿ ಗೋಳಾಡುತ್ತಿದ್ದಾರೆ. ಗಾಯಗೊಂಡವರ ಸಂಬAಧಿಕರೂ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದಾರೆ. ಮೃತಪಟ್ವರೆಲ್ಲರೂ ಮಧ್ಯಮ ವರ್ಗದವರೇ ಆಗಿದ್ದು, ಸಂತೋಷ್ ಡ್ರೆöÊವರ್ (ಬೊಲೆರೊ ಚಾಲನೆ ಮಾಡುತ್ತಿದ್ದವರು). ಅನಿಲ್ ಗುತ್ತಿಗೆದಾರ, ರಾಜೇಶ್ ಗಾರೆ ಕೆಲಸದವ, ದಯಾನಂದ್ ಟಿಪ್ಪರ್ ಚಾಲಕ, ಬಾಬು ಪೆಟ್ರೋಲ್ ಬಂಕ್‌ನಲ್ಲಿ ಕೆಲಸಗಾರರಾಗಿದ್ದರು.

ರಾಯಚೂರು ವರದಿ: ಬೆಂಗಳೂರಿನಲ್ಲಿ ಮೃತಪಟ್ಟಿದ್ದ ಸ್ನೇಹಿತನ ಶವವನ್ನು ಊರಿಗೆ ಕೊಂಡೊಯ್ಯುವಾಗ ಮಾರ್ಗಮಧೆÀ್ಯ ನಡೆದಅಪಘಾತದಲ್ಲಿ ಮೂವರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಗೊಲ್ಲಪಲ್ಲಿ ಬಳಿ ಇಂದು ಮುಂಜಾನೆ ಸಂಭವಿಸಿದೆ. ಮೃತಪಟ್ಟವರನ್ನು ಅಂಬರೀಶ್(೩೦), ಗೋವಿಂದ(೩೫), ದೇವರಾಜ್(೩೪) ಎಂದು ಗುರುತಿಸಲಾಗಿದ್ದು, ಇವರು ಪ್ರಯಾಣ ಸುತ್ತಿದ್ದ ಕಾರಿನಲ್ಲಿದ್ದ ಮತ್ತಿಬ್ಬರು ಗಾಯಗೊಂಡಿದ್ದಾರೆ. ಮೃತರು ಬೆಂಗಳೂರಿನ ನಾಯಂಡಹಳ್ಳಿಯಲ್ಲಿ ಕಟ್ಟಡ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇವರ ಸ್ನೇಹಿತ ಬಸಯ್ಯ ಎಂಬಾತ ಹೃದಯಾಘಾತದಿಂದ ಮೃತಪಟ್ಟಿದ್ದು, ಆತನ ಶವವನ್ನು ಊರಿಗೆ ಕೊಂಡೊಯ್ಯುವಾಗ ಆಂಬುಲೆನ್ಸ್ ಜೊತೆ ಹೋಗುತ್ತಿದ್ದ ಇವರ ಕಾರಿಗೆ ಎದುರಿನಿಂದ ಬಂದ ಇವರ ಕಾರಿಗೆ ಮತ್ತೊಂದು ಕಾರು ಡಿಕ್ಕಿ ಹೊಡೆದ ಪರಿಣಾಮ ಈ ದುರಂತ ಸಂಭವಿಸಿದೆ.

Translate »