ಹುಬ್ಬಳ್ಳಿ ಗಲಭೆ: `ಮಾಸ್ಟರ್ ಮೈಂಡ್’ ಬಂಧನ
ಮೈಸೂರು

ಹುಬ್ಬಳ್ಳಿ ಗಲಭೆ: `ಮಾಸ್ಟರ್ ಮೈಂಡ್’ ಬಂಧನ

April 22, 2022

ತನಿಖೆ ನಂತರ ಅನೇಕ ಸಹಚರರು ವಶಕ್ಕೆ
ವೀಡಿಯೋ ಹೊರ ಬಿಟ್ಟ ಕೆಲ ಗಂಟೆಯಲ್ಲೇ ಸಿಕ್ಕಿಬಿದ್ದ

ಹುಬ್ಬಳ್ಳಿ, ಏ.೨೧-ಹುಬ್ಬಳ್ಳಿ ಹಿಂಸಾಚಾರದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ಸೇರಿದಂತೆ ಏಳು ಮಂದಿ ಸಹಚರರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ. ಧಾರ್ಮಿಕ ಮುಖಂಡನೆAದು ಗುರ್ತಿಸಿಕೊಂಡಿದ್ದ ವಾಸೀಂ ಪಠಾಣ್, ಮುಖಂಡ ಮೊಹಮ್ಮದ್ ಆರೀಫ್, ಇಬ್ಬರು ರೌಡಿಶೀಟರ್‌ಗಳು ಸೇರಿದಂತೆ ಏಳು ಮಂದಿಯನ್ನು ತೀವ್ರ ವಿಚಾರಣೆಗೊಳಪಡಿಸಿದ ಪೊಲೀಸರು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಪರೀಕ್ಷೆಗೆಂದು ಕರೆದೊಯ್ದಿದ್ದಾರೆ ಎನ್ನಲಾಗಿದೆ.

ವೈದ್ಯಕೀಯ ಪರೀಕ್ಷೆ ಮುಗಿದ ನಂತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರುವ ಸಾಧ್ಯತೆ ಇದೆ. ಇದುವರೆವಿಗೂ ಹುಬ್ಬಳ್ಳಿ ಹಿಂಸಾಚಾರ ಪ್ರಕರಣಕ್ಕೆ ಸಂಬAಧಿಸಿದAತೆ ಒಟ್ಟು ೧೩೩ ಮಂದಿಯನ್ನು ಬಂಧಿಸಿದAತಾಗಿದೆ. ಪ್ರಚೋದನಾಕಾರಿ ವಾಟ್ಸಾಪ್ ಸ್ಟೇಟಸ್‌ನಿಂದ ರೊಚ್ಚಿಗೆದ್ದ ಸಾವಿರಾರು ಮಂದಿ ದಾಂಧಲೆ ನಡೆಸಿ, ಹುಬ್ಬಳ್ಳಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪೊಲೀಸ್ ಜೀಪನ್ನು ಉರುಳಿಸಿ ಕಲ್ಲು ತೂರಾಟ ನಡೆಸಿದ್ದರು. ಇದರಿಂದ ೧೫ ಮಂದಿ ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಗಾಯಗೊಂಡಿದ್ದರು.
ಘಟನೆ ಸಂದರ್ಭದಲ್ಲಿ ಪೊಲೀಸ್ ಠಾಣೆ ಮುಂದೆ ನಿಂತಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಾರಿನ ಮೇಲೆ ನಿಂತು ವಸೀಂ ಪಠಾಣ್ ಮತ್ತು ಆತನ ಸಹಚರರು, ಉದ್ರಿಕ್ತ ಗುಂಪನ್ನುದ್ದೇಶಿಸಿ ಪ್ರಚೋದನಾಕಾರಿ ಹೇಳಿಕೆ ನೀಡಿದ್ದರು. ಈ ವೀಡಿಯೋ ಭಾರೀ ವೈರಲ್ ಆಗಿತ್ತು. ಈ ವೇಳೆ ಸ್ಥಳದಲ್ಲಿದ್ದ ವಸೀಂ ಪಠಾಣ್ ಬೆಂಬಲಿಗನೆನ್ನಲಾದ ಮೊಮಹ್ಮದ್ ಆರೀಫ್ ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿ, ಹಿಂಸಾಚಾರವನ್ನು ಬೆಂಬಲಿಸಿದ್ದನೆAದು ಹೇಳಲಾಗಿದೆ. ಘಟನೆಯ ನಂತರ ವಾಸೀಂ ಪಠಾಣ್ ಮತ್ತು ಆತನ ಸಹಚರರು ತಲೆಮರೆಸಿಕೊಂಡು ಮುಂಬೈನ ಅಜ್ಞಾತ ಸ್ಥಳದಲ್ಲಿ ಅಡಗಿದ್ದರು. ಈ ಮಧ್ಯೆ ಇಂದು ಬೆಳಗ್ಗೆ ವಾಸೀಂ ಪಠಾಣ್ ವೀಡಿಯೋವೊಂದನ್ನು ಬಿಡುಗಡೆ ಮಾಡಿ, “ನನಗೆ ಜೀವ ಭಯ ಇರುವುದರಿಂದ ತಲೆ ಮರೆಸಿಕೊಂಡಿದ್ದೇನೆ. ಶೀಘ್ರದಲ್ಲೇ ಪೊಲೀಸರ ಮುಂದೆ ಹಾಜರಾಗಿ ಎಲ್ಲವನ್ನೂ ಹೇಳುತ್ತೇನೆ. ನಾನು ಈ ಪ್ರಕರಣದ ಮಾಸ್ಟರ್ ಮೈಂಡ್ ಅಲ್ಲ’’ ಎಂಬಿತ್ಯಾದಿ ಹೇಳಿಕೆ ನೀಡಿದ್ದ. ತಕ್ಷಣ ಕಾರ್ಯ ಪ್ರವೃತ್ತರಾದ ಹುಬ್ಬಳ್ಳಿ ಪೊಲೀಸರು ಇದರ ಜಾಡು ಬೆನ್ನತ್ತಿ ವಾಸೀಂ ಪಠಾಣ್ ಮತ್ತು ಆತನ ಸಹಚರರನ್ನು ಮಧ್ಯಾಹ್ನದ ವೇಳೆಗೆ ಹೆಡೆಮುರಿ ಕಟ್ಟಿ ಕರೆತಂದು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಸಂಜೆಯವರೆಗೂ ವಿಚಾರಣೆ ನಡೆಸಿ ಮಹತ್ವದ ಮಾಹಿತಿ ಸಂಗ್ರಹಿಸಿದರು ಎನ್ನಲಾಗಿದೆ. ಆರೋಪಿ ಹೇಳಿಕೆ ಮತ್ತು ಸುಳಿವಿನ ಮೇರೆಗೆ ಮತ್ತಷ್ಟು ಜನರನ್ನು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ವಾಸೀA ಪಠಾಣ್ ಸಿಕ್ಕಿದ್ದು ಹೇಗೆ?: ವಾಸೀಂ ಪಠಾಣ್ ಗಲಭೆಯ ನಂತರ ಮುಂಬೈಗೆ ಹೋಗಿ ತಲೆ ಮರೆಸಿಕೊಂಡಿದ್ದ. ಅಲ್ಲಿಂದಲೇ ಹುಬ್ಬಳ್ಳಿಯಲ್ಲಿರುವ ತನ್ನ ಆಪ್ತನಿಗೆ ಮೊಬೈಲ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದುಕೊAಡು ಹುಬ್ಬಳ್ಳಿಯ ವಿದ್ಯಮಾನಗಳನ್ನು ತಿಳಿದುಕೊಳ್ಳುತ್ತಿದ್ದ. ಈ ವಿಷಯ ತಿಳಿದ ಪೊಲೀಸರು ವಾಸೀಂ ಜೊತೆ ಸಂಪರ್ಕ ಮುಂದುವರೆಸಿಕೊAಡು ಹೋಗುವಂತೆ ಸೂಚಿಸಿ, ಮೊಬೈಲ್ ಟ್ರಾಕ್ ಮೂಲಕ ಆತ ಮುಂಬೈನಲ್ಲಿ ತಲೆ ಮರೆಸಿಕೊಂಡಿರುವುದನ್ನು ಪತ್ತೆ ಹಚ್ಚಿದರು.

ನಂತರ ಶರಣಾಗುವಂತೆ ಇಲ್ಲದಿದ್ದರೆ ಪೊಲೀಸರು ಎನ್‌ಕೌಂಟರ್ ಮಾಡುವುದಾಗಿ ವಾಸೀಂ ಪಠಾಣ್‌ಗೆ ಆಪ್ತನ ಮೂಲಕ ವಿಷಯ ತಲುಪುವಂತೆ ಮಾಡಲಾಯಿತು. ಈ ವಿಷಯ ತಿಳಿಯುತ್ತಿದ್ದಂತೆ ವಾಸೀಂ ಮುಂಬೈನಿAದ ಬೆಳಗಾವಿಗೆ ಬರುತ್ತಿರುವುದಾಗಿ ತನ್ನ ಆಪ್ತನಿಗೆ ತಿಳಿಸಿದ್ದ. ಅದರಂತೆ ಇಂದು ಬೆಳಗಾವಿಗೆ ಬಂದ ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

 

 

 

Translate »