4ನೇ ಅಲೆ ಬಂದರೂ ಎದುರಿಸಲು ನಾವ್ ರೆಡಿ
ಮೈಸೂರು

4ನೇ ಅಲೆ ಬಂದರೂ ಎದುರಿಸಲು ನಾವ್ ರೆಡಿ

April 22, 2022

ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಈಗಲೂ ಕಡ್ಡಾಯ
ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ

ಮೈಸೂರು,ಏ.೨೧(ಆರ್‌ಕೆ)-ಒಂದು ವೇಳೆ ಕೋವಿಡ್ ೪ನೇ ಅಲೆ ಬಂದರೂ ಎದುರಿಸಲು ಮೈಸೂರು ಜಿಲ್ಲಾಡಳಿತ ಸರ್ವ ರೀತಿಯಲ್ಲಿ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಕೋವಿಡ್ ಸೋಂಕು ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ದಲ್ಲೂ ನಾಲ್ಕನೇ ಅಲೆ ಅಪ್ಪಳಿಸಬಹುದೆಂದು ಹೇಳುತ್ತಿರುವ ಕುರಿತಂತೆ `ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿಗಳು, ಕೋವಿಡ್-೧೯ ಪರಿಸ್ಥಿತಿ ಎದುರಿಸಲು ನಾವು ೩ನೇ ಅಲೆಯಲ್ಲೇ ಸಂಪೂರ್ಣವಾಗಿ ಸಜ್ಜಾಗಿದ್ದೆವು. ಮಂಡಕಳ್ಳಿಯ ಮುಕ್ತ ವಿಶ್ವವಿದ್ಯಾನಿಲಯದ ಭವನ, ಕೆಆರ್‌ಎಸ್ ರಸ್ತೆಯ ಇಎಸ್‌ಐ ಆಸ್ಪತ್ರೆಗಳಲ್ಲಿ ಯಾವಾಗ ಬೇಕಾದರೂ ಸೋಂಕಿತರನ್ನು ಸೇರಿಸಿ ಚಿಕಿತ್ಸೆ ನೀಡಬಹುದಾಗಿದೆ ಎಂದರು.

ಆಸ್ಪತ್ರೆಗಳಲ್ಲಿ ಹಾಸಿಗೆ, ಆಕ್ಸಿಜನ್ ವ್ಯವಸ್ಥೆ, ಔಷಧಿ, ಪರೀಕ್ಷಾ ಉಪಕರಣಗಳು, ಆಕ್ಸಿಜನ್ ಪ್ಲಾಂಟ್‌ಗಳು, ಐಸಿಯು ಬೆಡ್, ವೆಂಟಿಲೇಟರ್ ಸಿದ್ಧವಾಗಿವೆ. ೩ನೇ ಅಲೆವರೆಗೂ ಕೋವಿಡ್ ನಿಯಂತ್ರಣದಲ್ಲಿ ಅನುಭವ ವಾಗಿರುವುದರಿಂದ ನಾಲ್ಕನೇ ಅಲೆ ಎದುರಿ ಸುವುದು ಕಷ್ಟವೇನಲ್ಲ ಎಂದು ತಿಳಿಸಿದರು.

ಕೋವಿಡ್ ಪರೀಕ್ಷೆ, ಲಸಿಕೆ, ವೈದ್ಯಕೀಯ ಉಪ ಕರಣಗಳು, ವೈದ್ಯರು, ಸ್ಟಾಫ್ ನರ್ಸ್, ವೈದ್ಯಕೇತರ ಸಿಬ್ಬಂದಿಯನ್ನು ಕೋವಿಡ್ ಕರ್ತವ್ಯಕ್ಕೆ ನಿಯೋ ಜಿಸುವುದು ಈಗ ಮತ್ತಷ್ಟು ಸುಲಭ ಎಂದರು.

ಕೋವಿಡ್ ಪ್ರಕರಣಗಳು ಕಡಿಮೆಯಾಗಿರಬಹು ದಾದರೂ, ಕೇಂದ್ರ ಸರ್ಕಾರದ ಕೆಲ ಮಾರ್ಗ ಸೂಚಿಗಳು ಈಗಲೂ ಜಾರಿಯಲ್ಲಿವೆ. ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಪಾಡುವುದು, ಕಡ್ಡಾಯವಾಗಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುವುದು, ಲಸಿಕೆ ಪಡೆಯ ಬೇಕೆಂಬ ನಿಯಮಗಳನ್ನು ತೆರವುಗೊಳಿಸಿಲ್ಲ ಎಂದು ಡಾ. ಬಗಾದಿ ಗೌತಮ್ ತಿಳಿಸಿದರು.

ಆದರೆ ಕೋವಿಡ್ ಪಾಸಿಟಿವ್ ಕೇಸ್‌ಗಳ ಸಂಖ್ಯೆ ತೀವ್ರ ಗತಿಯಲ್ಲಿ ಕಡಿಮೆಯಾಗಿ ರುವುದರಿಂದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾ ಡುವುದನ್ನು ಜನರು ಮರೆತಂತಿದೆ. ನಮ್ಮ ಆರೋಗ್ಯ ಕಾಪಾಡಿಕೊಂಡು ಇತರರನ್ನೂ ಕೊರೊನಾ ಸೋಂಕಿನಿAದ ರಕ್ಷಿಸುವುದು ಅತೀ ಮುಖ್ಯವಾಗಿ ರುವುದರಿಂದ ಕೋವಿಡ್ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸುವಂತೆಯೂ ಸಲಹೆ ನೀಡಿದ್ದಾರೆ.

ಪಾಸಿಟಿವ್ ಪ್ರಕರಣಗಳು ಪತ್ತೆಯಾಗದೇ, ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಪದೇ ಪದೆ ಒತ್ತಾಯ ಪೂರ್ವಕವಾಗಿ ಹೇಳು ತ್ತಿದ್ದರೆ ಅನಾವಶ್ಯಕವಾಗಿ ಜನರು ಗಾಬರಿಯಾಗಿ ಆತಂಕ ಪಡುತ್ತಾರೆಂಬ ಕಾರಣಕ್ಕೆ ನಿಯಮ ಗಳನ್ನು ಜಾರಿ ಮಾಡುತ್ತಿಲ್ಲ. ಆದರೆ ಮಾರ್ಗ ಸೂಚಿಗಳು ಪ್ರಸ್ತುತ ಜಾರಿಯಲ್ಲಿವೆ ಎಂದರು.

ಈಗಾಗಲೇ ಅಧಿಕಾರಿಗಳು, ವೈದ್ಯರು, ಸಿಬ್ಬಂದಿ ಗಳಿಗೆ ಕೋವಿಡ್ ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು. ೩ನೇ ಅಲೆಯಲ್ಲಿ ಉಂಟಾದ ಸಮಸ್ಯೆ ಮತ್ತೆ ಮರುಕಳಿಸದಂತೆ ತಯಾರಿ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ. ಯಾವ ಸಂದರ್ಭದಲ್ಲಾದರೂ ಬರಲಿ, ೪ನೇ ಅಲೆ ಎದುರಿ ಸಲು ಸಜ್ಜಾಗಿರುವಂತೆ ನಿರ್ದೇಶನ ನೀಡಲಾಗಿದೆ ಎಂದರು. ಕೋವಿಡ್ ಕೇರ್ ಸೆಂಟರ್ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸರ್ವ ಸೌಲಭ್ಯ ಸಿದ್ಧವಿರುವು ದರಿಂದ ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾವ ಸಂದರ್ಭದಲ್ಲಾದರೂ ಜಿಲ್ಲಾಡಳಿತ ಸಜ್ಜುಗೊಂ ಡಿದೆ ಎಂದು ಡಾ.ಬಗಾದಿ ಗೌತಮ್ ನುಡಿದರು.

Translate »