ದಸರಾ ವೇಳೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತ
ಮೈಸೂರು

ದಸರಾ ವೇಳೆಗೆ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ಸಂಚಾರಕ್ಕೆ ಮುಕ್ತ

April 22, 2022

ಸಂಸದ ಪ್ರತಾಪ್ ಸಿಂಹ ವಿವರಣೆ

೩೨ ಕಿ.ಮೀ. ಬೈಪಾಸ್ ರಸ್ತೆ; ೧೨೦೦ ಕೋಟಿ ಅಧಿಕ ವೆಚ್ಚ

೧೧೮ ಕಿ.ಮೀ. ಹೆದ್ದಾರಿ; ೭೫ ನಿಮಿಷಕ್ಕೆ ಕ್ರಮಿಸುವ ಸಾಧ್ಯತೆ

ಮೈಸೂರು, ಏ.೨೧(ಎಂಟಿವೈ)- ಬೆಂಗಳೂರು-ಮೈಸೂರು ದಶಪಥ ರಾಷ್ಟಿçÃಯ ಹೆದ್ದಾರಿ ಯೋಜನೆಯು ನಿಗದಿತ ಕಾಲಮಿತಿಯೊಳಗೆ ಪೂರ್ಣ ಗೊಳ್ಳಲಿದ್ದು, ಮೊದಲ ಹಂತದಲ್ಲಿ ಬೆಂಗಳೂರಿ(ನೈಸ್ ರಸ್ತೆ ಜಂಕ್ಷನ್)ನಿAದ ನಿಡಘಟ್ಟದವರೆಗೆ ಜೂನ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ. ಎರಡನೇ ಹಂತದಲ್ಲಿ ನಿಡಘಟ್ಟದಿಂದ ಮೈಸೂರು ರಿಂಗ್ ರಸ್ತೆ ಜಂಕ್ಷನ್‌ವರೆಗೆ ದಸರಾ ವೇಳೆಗೆ ಉದ್ಘಾಟನೆಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

ಮೈಸೂರಿನ ಜಲದರ್ಶಿನಿ ಅತಿಥಿಗೃಹದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ಮಹಾನಗರಗಳ ನಡುವೆ ಪ್ರಯಾಣದ ಅವಧಿ ಗಣನೀಯವಾಗಿ ಕಡಿತಗೊಳಿಸುವ ನಿಟ್ಟಿನಲ್ಲಿ ದಶಪಥ ರಸ್ತೆ ಸಹಕಾರಿಯಾಗ ಲಿದೆ. ಈ ಹಿಂದೆ ಪ್ರಕಟಿಸಿದ್ದಂತೆ ನಿಗಧಿತ ಕಾಲಮಿತಿಯೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ. ಎರಡು ಹಂತದಲ್ಲಿ ೧೧೮ ಕಿ.ಮೀ. ರಸ್ತೆ ನಿರ್ಮಿಸ ಲಾಗುತ್ತಿದ್ದು, ಕೇವಲ ೭೫ ನಿಮಿಷದಲ್ಲಿ ಒಂದೆಡೆಯಿAದ ಮತ್ತೊಂದೆಡೆಗೆ ಕ್ರಮಿಸಬಹುದಾಗಿದೆ. ಕೆಂಗೇರಿ(ನೈಸ್‌ರಸ್ತೆ ಜಂಕ್ಷನ್)ಯಿAದ ನಿಡಘಟ್ಟವರೆಗೆ ಮೊದಲ ಹಂತದ ಕಾಮಗಾರಿ ಹಾಗೂ ನಿಡಘಟ್ಟದಿಂದ ಮೈಸೂರಿನ ಮಣ ಪಾಲ್ ಆಸ್ಪತ್ರೆ ಜಂಕ್ಷನ್‌ವರೆಗೆ ಕಾಮಗಾರಿ ಭರದಿಂದ ಸಾಗುತ್ತಿದೆ.

ಈ ದಶಪಥ ರಸ್ತೆಯಲ್ಲಿ ಶ್ರೀರಂಗಪಟ್ಟಣ, ಮಂಡ್ಯ, ಮದ್ದೂರು, ರಾಮನಗರ, ಬಿಡದಿ ಸೇರಿದಂತೆ ವಿವಿಧೆಡೆ ಒಟ್ಟು ೩೨ ಕಿ.ಮಿ ಬೈಪಾಸ್ ರಸ್ತೆ ನಿರ್ಮಿಸ ಲಾಗಿದೆ. ಹಾಗಾಗಿಯೇ ದಶಪಥ ರಸ್ತೆಯ ೧೧೮ ಕಿ.ಮೀ. ದೂರವನ್ನು ೭೫ ನಿಮಿಷದಲ್ಲಿ ಕ್ರಮಿಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಹೆಚ್ಚುವರಿ ೧೨೦೦ ಕೋಟಿ. ರೂ ವಿನಿಯೋಗ: ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆಗೆ ಈ ಮೊದಲು ೮.೩೦೦ ಕೋಟಿ ಯೋಜನಾ ವೆಚ್ಚ ನಿಗದಿ ಯಾಗಿತ್ತು. ಆದರೆ ಇದೀಗ ಇನ್ನು ೯ ಕಾಮಗಾರಿಗಳನ್ನು ಹೆಚ್ಚುವರಿಯಾಗಿ ಕೈಗೊಳ್ಳಲಾಗಿದ್ದು, ಅದಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡು ಕಾಮಗಾರಿ ನಡೆಸುವುದಕ್ಕಾಗಿ ೧೨೦೦ ಕೋಟಿ ರೂ.ಗಳನ್ನು ಹೆಚ್ಚುವರಿಗೆ ವಿನಿಯೋಗಿಸ ಲಾಗುತ್ತಿದೆ. ಇದರಿಂದ ಈ ಯೋಜನೆಯ ಪೂರ್ಣ ವೆಚ್ಚ ೯.೫೦೦ ಕೋಟಿ ರೂ. ಆಗಿದ್ದು, ದೇಶದಲ್ಲಿಯೇ ಬೃಹತ್ ಯೋಜನೆಯಾಗಿದೆ ಎಂದರು.

ಹೆಲಿಪ್ಯಾಡ್ ನಿರ್ಮಾಣ: ದಶಪಥ ರಸ್ತೆಯಲ್ಲಿ ಏನಾದರೂ ದುರ್ಘಟನೆ ಸಂಭವಿಸಿ, ಟ್ರಾಫಿಕ್ ಜಾಮ್ ಆದರೆ ಅಥವಾ ಇನ್ನಿತರೆ ತುರ್ತು ಸಂದರ್ಭ ದಲ್ಲಿ ಏರ್ ಲಿಫ್ಟ್ ಮಾಡಬೇಕಾದ ಅನಿವಾರ್ಯತೆ ಹಿನ್ನೆಲೆಯಲ್ಲಿ ಮಾರ್ಗ ಮಧ್ಯೆ ಹೆಲಿಪ್ಯಾಡ್ ನಿರ್ಮಿಸಲಾಗುತ್ತಿದೆ. ಅಲ್ಲದೆ ರಸ್ತೆಯ ಎರಡೂ ಮಾರ್ಗ ದಲ್ಲೂ ತಲಾ ಎರಡು ರೆಸ್ಟ್ ಏರಿಯಾ ನಿರ್ಮಿಸಲಾಗುತ್ತಿದ್ದು, ಅದರಲ್ಲಿ ಹೋಟೆಲ್, ಶೌಚಾಲಯ, ವಿಶ್ರಾಂತಿ ತಾಣ, ಕುಡಿಯುವ ನೀರಿನ ಸೌಲಭ್ಯ, ಪೆಟ್ರೋಲ್, ಡೀಸೆಲ್, ಗ್ಯಾಸ್ ಬಂಕ್, ಬ್ಯಾಟರಿ ಚಾಲಿತ ವಾಹನಗಳ ಚಾರ್ಜಿಂಗ್ ಪಾಯಿಂಟ್, ಕರಕುಶಲ ವಸ್ತುಗಳ ಮಾರಾಟ, ತಿಂಡಿ ತಿನಿಸುಗಳ ಮಳಿಗೆಗಳನ್ನು ನಿರ್ಮಿಸಲಾಗುತ್ತದೆ. ಪಾಂಡವಪುರ ರಸ್ತೆಗೆ ಸಂಪರ್ಕ ಕಲ್ಪಿಸಲು ೭೦೦ ಮೀಟರ್ ಸಂಪರ್ಕ ರಸ್ತೆ, ನೈಸ್ ರಸ್ತೆಗೆ ಸಂಪರ್ಕ ರಸ್ತೆ, ಮಣ ಪಾಲ್ ಆಸ್ಪತ್ರೆ ರಸ್ತೆ ಬಳಿ ಫ್ಲೆöÊಓವರ್, ರಸ್ತೆ ವಿಭಜಕಕ್ಕೆ ಯಾವುದಾದರೂ ವಾಹನ ಡಿಕ್ಕಿಯಾದರೆ ಪಕ್ಕದ ಟ್ರಾö್ಯಕ್‌ಗೆ ಹಾರುವ ಸಾಧ್ಯತೆ ಇರುವುದರಿಂದ ಅದನ್ನು ತಡೆಗಟ್ಟಲು ಮೆಟಲ್ ಬೀಮ್ ಕ್ರಾಶ್ ಬ್ಯಾರಿಯರ್, ೧೬ ಪ್ರಮುಖ ಸ್ಥಳಗಳಲ್ಲಿ ಎಂಟ್ರಿ ಪಾಯಿಂಟ್, ೯೬ ಕಡೆ ಬಸ್‌ಬೇ ಜೊತೆ ತಂಗುದಾಣ, ೧೮ ಸ್ಥಳಗಳಲ್ಲಿ ಪಾದಚಾರಿಗಳು ರಸ್ತೆ ದಾಟಲು ಫುಟ್ ಓವರ್ ಬ್ರಿಡ್ಜ್ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

೪ ಸಾವಿರ ಕೋಟಿ ವೆಚ್ಚ: ಮೈಸೂರು-ಕುಶಾಲನಗರ ಎನ್‌ಎಚ್‌ಗೆ ೪ ಸಾವಿರ ಕೋಟಿ ಆಗಲಿದೆ. ಪಶ್ಚಿಮ ವಾಹಿನಿಯಿಂದ ಪಿರಿಯಾಪಟ್ಟಣ, ಪಿರಿಯಾಪಟ್ಟಣ ಗುಡ್ಡೆ-ಹೊಸೂರು, ಗುಡ್ಡೆಹೊಸೂರಿನಿಂದ ಕುಶಾಲನಗರ ತನಕ ೧೨೦ ಕಿ.ಮೀ ತನಕ ಹೆದ್ದಾರಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಟೆಂಡರ್ ಪ್ರಕ್ರಿಯೆ ನಡೆಸಿ ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದರು.

ಗ್ಯಾಸ್ ಪೈಪ್‌ಲೈನ್ ವಿವಾದ ಅಂತ್ಯ: ಗ್ಯಾಸ್ ಪೈಪ್‌ಲೈನ್ ಅಳವಡಿಕೆ ವಿಚಾರ ದಲ್ಲಿ ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದ ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಅವರಿಗೆ ಇದರ ಅನಿವಾರ್ಯತೆ ಬಗ್ಗೆ ಮನವರಿಕೆ ಮಾಡಿ ಕೊಡಲಾಗಿದೆ. ಇದರೊಂದಿಗೆ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡರ ಸಹಕಾರವನ್ನೂ ಕೋರ ಲಾಗಿದ್ದು, ಮೈಸೂರಲ್ಲಿ ೫೦೦ ಕಿ.ಮಿ ಗ್ಯಾಸ್‌ಪೈಪ್‌ಲೈನ್ ಅಳವಡಿಕೆ ಕಾಮಗಾರಿ ನಡೆಸಲಾಗುತ್ತಿದೆ. ಪ್ರಸ್ತುತ ರಿಂಗ್ ರಸ್ತೆಯಲ್ಲಿ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಪ್ರಗತಿಯಲ್ಲಿದೆ. ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ಅನುಮತಿ ಪಡೆದು ಪಾಲಿಕೆ ವ್ಯಾಪ್ತಿಯಲ್ಲೂ ಕಾಮಗಾರಿ ಆರಂಭಿಸಲಾಗುತ್ತದೆ. ವಾಸ್ತವ ಸ್ಥಿತಿ ಎಲ್ಲರಿಗೂ ಅರ್ಥವಾಗಿದೆ. ರಸ್ತೆಯಲ್ಲಿ ಹಳ್ಳ ತೆಗೆದ ೨೪ ಗಂಟೆ ಒಳಗೆ ಕಾಮಗಾರಿ ಮುಗಿಸ ಲಾಗುವುದು. ಈ ಯೋಜನೆಯನ್ನು ನಂಜನಗೂಡು, ಹುಣಸೂರು, ಪಿರಿಯಾ ಪಟ್ಟಣ, ಕೊಡಗು ಜಿಲ್ಲೆಗೆ ವಿಸ್ತರಿಸಲಾಗುವುದು. ಈಗಾಗಲೇ ನಂಜನಗೂಡಿನ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ ಎಂದರು. ಗ್ಯಾಸ್ ಸಂಪರ್ಕ ಪಡೆಯಲು ಚಾಮರಾಜ ಕ್ಷೇತ್ರದಲ್ಲಿ ಗ್ರಾಹಕರ ನೋಂದಣ ಶುರುವಾಗಿದೆ. ೧೫ ಸಾವಿರ ಜನರು ನೋಂದಾಯಿಸಿದ್ದಾರೆ. ಪೈಪ್‌ಲೈನ್ ಅಳವಡಿಕೆಗೆ ಪಾಲಿಕೆಯಿಂದ ಒಪ್ಪಿಗೆ ಪಡೆಯಲಾಗುವುದು ಎಂದರು.

ಗ್ರೇಟರ್ ಮೈಸೂರು: ಮೈಸೂರು ಬೃಹತ್ ಮಹಾನಗರ ಪಾಲಿಕೆ ಮಾಡುವುದರ ಹಿಂದೆಯೇ ಮೊನೋ ಮತ್ತು ಮೆಟ್ರೋ ರೈಲು ಬರಬೇಕು ಎನ್ನುವ ಉದ್ದೇಶವಿದೆ. ಜನಸಂಖ್ಯೆ ಪ್ರಮಾಣ ಹೆಚ್ಚಿರಬೇಕು. ಸ್ಯಾಟಲೈಟ್ ರೈಲ್ವೆ ನಿರ್ಮಾಣ ಆಗಲಿದೆ. ಫೆರಿಪೆರಲ್ ರಿಂಗ್‌ರೋಡ್, ಮೆಟ್ರೋ ರೈಲು ಯೋಜನೆ ಬರಬೇಕು. ೨೦ ವರ್ಷಗಳ ಹಿಂದಕ್ಕೆ ಹೋಲಿಸಿದರೆ ಪುಣೆ ಮತ್ತು ಮೈಸೂರು ಸಮಾನ ಖ್ಯಾತಿಯನ್ನು ಹೊಂದಿತ್ತು. ಮುಂಬೈ ಮತ್ತು ಪುಣೆ ನಡುವೆ ನಿರ್ಮಿಸಿದ ಹೆದ್ದಾರಿ ಪುಣೆಯ ದಿಕ್ಕನ್ನೇ ಬದಲಿಸಿತು. ಹಾಗೆಯೇ ದಶಪಥ ರಸ್ತೆಯೂ ಮೈಸೂರಿನ ಅಭಿವೃದ್ಧಿ ಶರವೇಗದಲ್ಲಿ ಸಾಗಲು ಕಾರಣವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನ ಕಾರ್ಯದರ್ಶಿಗಳಾದ ಹೆಚ್.ಜಿ.ಗಿರಿಧರ್, ವಿ.ಸೋಮಸುಂದರ್, ವಾಣ Ãಶ್ ಕುಮಾರ್ ಉಪಸ್ಥಿತರಿದ್ದರು.

Translate »