ಮುಡಾ ಕಾರ್ಯಾಚರಣೆ: ವಿಜಯನಗರ 3ನೇ ಹಂತದಲ್ಲಿ 100 ಕೋಟಿ ರೂ. ಮೌಲ್ಯದ ಆಸ್ತಿ ರಕ್ಷಣೆ
ಮೈಸೂರು

ಮುಡಾ ಕಾರ್ಯಾಚರಣೆ: ವಿಜಯನಗರ 3ನೇ ಹಂತದಲ್ಲಿ 100 ಕೋಟಿ ರೂ. ಮೌಲ್ಯದ ಆಸ್ತಿ ರಕ್ಷಣೆ

April 22, 2022

ಆಟದ ಮೈದಾನಕ್ಕಾಗಿ ಮೀಸಲಾದ ೬-೧೩ ಎಕರೆ ಜಾಗದಲ್ಲಿ ತಲೆ ಎತ್ತಿದ್ದ ಶೆಡ್‌ಗಳ ತೆರವು

ಮೈಸೂರು, ಏ.೨೧(ಆರ್‌ಕೆ)- ಆಟದ ಮೈದಾನ ಕ್ಕೆಂದು ಮೀಸಲಿರಿಸಿದ್ದ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್‌ಗಳನ್ನು ತೆರವುಗೊಳಿಸಿರುವ ಮುಡಾ ಅಧಿಕಾರಿಗಳು ಸುಮಾರು ೧೦೦ ಕೋಟಿ ರೂ. ಮೌಲ್ಯದ ೬-೧೩ ಎಕರೆ ಜಾಗವನ್ನು ವಶಕ್ಕೆ ಪಡೆದಿದ್ದಾರೆ.
ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ನಿರ್ದೇ ಶನದಂತೆ ಗುರುವಾರ ಮುಂಜಾನೆ ೫.೩೦ರಿಂದ ಮಧ್ಯಾಹ್ನ ೧.೩೦ ಗಂಟೆವರೆಗೆ ಕಾರ್ಯಾಚರಣೆ ನಡೆಸಿದ ಅಧಿ ಕಾರಿಗಳು, ಶೆಡ್ ನಿರ್ಮಿಸಿ ಹಸುಗಳನ್ನು ಸಾಕುತ್ತಿದ್ದವ ರನ್ನು ತೆರವುಗೊಳಿಸಿ ಆಸ್ತಿಯನ್ನು ವಶಕ್ಕೆ ಪಡೆದರು.

ಮೈಸೂರು ತಾಲೂಕು ಕಸಬಾ ಹೋಬಳಿ, ಹಿನ ಕಲ್ ಗ್ರಾಮದ ಸರ್ವೆ ನಂ.೨೬೪ರಲ್ಲಿ ೬-೧೩ ಎಕರೆ ಜಾಗ ವನ್ನು ವಿಜಯನಗರ ೩ನೇ ಹಂತದ ಬಡಾವಣೆಗಾಗಿ ೧೯೮೪ರಲ್ಲಿ ಅಧಿಸೂಚನೆ ಹೊರಡಿಸಿ ಸ್ವಾಧೀನಪಡಿಸಿ ಕೊಂಡಿದ್ದು, ಆ ವೇಳೆ `ಬೀಳು’ ಎಂದು ನಮೂದಿಸ ಲಾಗಿತ್ತು. ಭೂ ಸ್ವಾಧೀನ ಸಂದರ್ಭ ದಾಖಲೆಗಳಂತೆ ಈ ಆಸ್ತಿ ಸರ್ಕಾರಿ ಬೀಳು ಎಂದು ದಾಖಲಾಗಿದ್ದ ರಿಂದ ಸರ್ಕಾರದ ಹೆಸರಲ್ಲಿ ೧೯೮೬ರಲ್ಲಿ ಬಂದೋ ಬಸ್ತ್ ಮಾಡಲಾಗಿತ್ತು. ಜಮೀನಿನ ಸಂಬAಧ ಕೆಲ ವರು ಸಲ್ಲಿಸಿದ್ದ ದಾಖಲೆಯನ್ನು ಹೈಕೋರ್ಟ್ ತಿರ ಸ್ಕರಿಸಿ ಅಧಿಸೂಚಿತ ಉದ್ದೇಶಕ್ಕೆ ಆ ಜಾಗವನ್ನು ಬಳಸಬೇಕೆಂದು ತೀರ್ಪು ನೀಡಿತ್ತು.

ಭೂಸ್ವಾಧೀನ ಪ್ರಕ್ರಿಯೆ ಕೈಗೊಂಡು, ವಶಕ್ಕೆ ಪಡೆದು, ಬಡಾವಣೆ ನಿರ್ಮಿಸಿದ್ದಾಗ್ಯೂ ಆರ್‌ಟಿಸಿಯಲ್ಲಿ ಸರ್ಕಾರಿ ಬೀಳು ಎಂದು ನಮೂದಾಗಿದ್ದರಿಂದ ಭೂ ಪರಿಹಾರ ವಿತರಿಸದಿರುವ ಅಂಶವನ್ನು ಗಮನಿಸಿ ಅದರ ಲಾಭ ಪಡೆಯಲು ಕೆಲವರು ಸುಳ್ಳು ದಾಖಲೆ ಸೃಷ್ಟಿಸಿ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ ಅಕ್ರಮ ವಾಗಿ ಆದೇಶ ಪಡೆದಿರುವುದು ದಾಖಲೆಗಳಿಂದ ಕಂಡುಬAದಿತ್ತು ಎಂದು ಆಯುಕ್ತರು ತಿಳಿಸಿದ್ದಾರೆ.

ಕ್ರೀಡಾಂಗಣದ ಉದ್ದೇಶಕ್ಕೆ ಕಾಯ್ದಿರಿಸಿದ್ದ ಈ ಜಾಗ ದಲ್ಲಿ ಒತ್ತುವರಿ ಮಾಡಿ ಅನಧಿಕೃತವಾಗಿ ಶೆಡ್‌ಗಳನ್ನು ನಿರ್ಮಿಸಿ ಹಸುಗಳನ್ನು ಸಾಕುತ್ತಿದ್ದರಿಂದ ಇಂದು ಅವ ರನ್ನು ತೆರವುಗೊಳಿಸಿ ೧೦೦ ಕೋಟಿ ರೂ. ಮೌಲ್ಯದ ೬-೧೩ ಎಕರೆ ಪ್ರದೇಶದ ಜಾಗವನ್ನು ವಿಜಯನಗರ ೩ನೇ ಹಂತ `ಇ’ ಬ್ಲಾಕ್‌ನಲ್ಲಿ (ಬಸವರಾಜ ಸರ್ಕಲ್ ಬಳಿ) ವಶಕ್ಕೆ ಪಡೆಯಲಾಗಿದೆ ಎಂದೂ ಆಯುಕ್ತರು ತಿಳಿಸಿದರು. ಎಗ್ಸಿಕ್ಯೂಟಿವ್ ಇಂಜಿನಿಯರ್‌ಗಳಾದ ಸುನಿಲ್, ಮೋಹನ್, ಅಸಿಸ್ಟೆಂಟ್ ಎಗ್ಸಿಕ್ಯೂಟಿವ್ ಇಂಜಿನಿ ಯರ್‌ಗಳಾದ ಕೆ.ಆರ್.ಮಹೇಶ್, ನಾಗೇಶ್, ಯಾದವ ಗಿರಿ ರವೀಂದ್ರಕುಮಾರ್, ರಾಘವೇಂದ್ರ ಹಾಗೂ ಇತ ರರು ತೆರವು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

Translate »