ಕೆಆರ್‍ಎಸ್ ಹಿನ್ನೀರಲ್ಲಿ ಯಶಸ್ವಿಯಾಗಿ ನಡೆದ  ಜಲಸಾಹಸಿ ನೌಕಾ ಕ್ರೀಡೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಲ್ಲಿ ಯಶಸ್ವಿಯಾಗಿ ನಡೆದ ಜಲಸಾಹಸಿ ನೌಕಾ ಕ್ರೀಡೆ

August 22, 2021

ಶ್ರೀರಂಗಪಟ್ಟಣ, ಆ. 21(ವಿನಯ್ ಕಾರೇಕುರ)- ಕರ್ನಾಟಕ ಸ್ಟೇಟ್ ಸೈಯ್ಲಿಂಗ್ ಅಸೋಸಿಯೇಷನ್ (ಕೆಎಸ್ ಎಸ್‍ಎ) ಮತ್ತು ಮೈಸೂರು ಸೈಯ್ಲಿಂಗ್ ರೆಗಟ್ಟ (ಆರ್‍ಎಂಎಸ್‍ಸಿ) ಆಶ್ರಯ ದಲ್ಲಿ ಮೈಸೂರು ತಾಲೂಕು ಉಂಡು ವಾಡಿ ಗ್ರಾಮದ ಬಳಿ ಕೆಆರ್‍ಎಸ್ ಹಿನ್ನೀರಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮಟ್ಟದ ಜಲ ಸಾಹಸ ನೌಕಾ ಕ್ರೀಡೆ ಶನಿವಾರ ಕೆಲ ಗೊಂದಲಗಳ ನಡು ವೆಯೂ ಯಶಸ್ವಿಯಾಗಿ ನಡೆಯಿತು.

ಈ ಕ್ರೀಡೆಗಾಗಿ ಮೈಸೂರು ಎನ್‍ಸಿಸಿ ಯಿಂದ 20 ಸ್ಪರ್ಧಿಗಳು ಸೇರಿದಂತೆ ಭೋಪಾಲ್, ಮುಂಬೈ, ಚೆನ್ನೈ, ಕೇರಳ ಮತ್ತು ಪಾಂಡಿಚೇರಿಯಿಂದ ಆಗಮಿ ಸಿದ್ದ ಒಟ್ಟು 38 ಸ್ಪರ್ಧಿಗಳು ಉತ್ಸಾಹ ದಿಂದ ಭಾಗವಹಿಸಿದ್ದರು. ಕ್ರೀಡೆಗಾಗಿ ಸ್ಪರ್ಧಿಗಳೇ ಬೋಟ್‍ಗಳನ್ನು ಟ್ರಕ್‍ಗಳ ಮೂಲಕ ತಂದಿದ್ದರು.
ಶನಿವಾರ ಬೆಳಗ್ಗೆ 8.40ಕ್ಕೆ ಸ್ಪರ್ಧೆ ಆರಂಭಿಸುವ ವೇಳೆ ಕೆಲ ಗೊಂದಲ ಗಳು ಉಂಟಾದವು. ಮೊದಲಿಗೆ ಕೆಆರ್‍ಎಸ್ ಮತ್ತು ಇಲವಾಲ ಠಾಣೆ ಪೊಲೀಸರು ಆಗಮಿಸಿ ಸ್ಪರ್ಧೆ ನಡೆ ಯುತ್ತಿರುವ ಸ್ಥಳ ಯಾವ ವ್ಯಾಪ್ತಿಗೆ ಸೇರುತ್ತದೆ ಎಂಬ ವಿಚಾರವಾಗಿ ಪರಿ ಶೀಲಿಸಿ ಕೊನೆಗೆ ಈ ಸ್ಥಳ ಇಲವಾಲ ಠಾಣೆ ವ್ಯಾಪ್ತಿಗೆ ಬರುತ್ತದೆ ಎಂದು ಖಚಿತ ವಾದ ನಂತರ ಕೆಆರ್‍ಎಸ್ ಠಾಣೆ ಪೊಲೀಸರು ನಿರ್ಗಮಿಸಿದರು.

ಕಾವೇರಿ ನೀರಾವರಿ ನಿಗಮದ ಎಇಇ ತಮ್ಮೇಗೌಡ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಕೆಆರ್‍ಎಸ್ ಹಿನ್ನೀರಿ ನಲ್ಲಿ ಸ್ಪರ್ಧೆ ನಡೆಸಲು ಅನುಮತಿ ಪಡೆ ದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ ರಾದರೂ ಸ್ಪರ್ಧೆಯ ಆಯೋಜಕರಾಗಿ ರುವ ಆರ್‍ಎಂಸಿಎಸ್ ಸಂಸ್ಥಾಪಕ ಕ್ಯಾಪ್ಟನ್ ಅರವಿಂದ ಶರ್ಮಾ ಅವರು, ತಮಗೆ ಜಲಸಂಪನ್ಮೂಲ ಇಲಾಖೆಯ ಅನುಮತಿ ದೊರೆತಿದೆ ಎಂದು ತಿಳಿಸಿದ ಮೇರೆಗೆ ಸ್ಪರ್ಧೆಗೆ ಅವಕಾಶ ನೀಡ ಲಾಯಿತು. ಮಧ್ಯಾಹ್ನ 1.45ರವರೆಗೆ ಸಾಹಸ ಜಲಕ್ರೀಡೆ ಸ್ಪರ್ಧೆ ಸುಸೂತ್ರವಾಗಿ ನಡೆಯಿತು.

ಸ್ಪರ್ಧೆ ನಡೆಯುತ್ತಿದ್ದ ವೇಳೆ ಡ್ರೋನ್ ಮೂಲಕ ಚಿತ್ರೀಕರಣ ನಡೆಸುತ್ತಿದ್ದುದನ್ನು ಪೊಲೀಸರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಡ್ರೋನ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸ ಲಾಯಿತು. ಈ ಸ್ಪರ್ಧೆಯು ಆಗಸ್ಟ್ 24 ರವರೆಗೆ ನಡೆಯಲಿದೆ. ನಾಳೆ (ಭಾನು ವಾರ) ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿರುವ ಸ್ಪರ್ಧೆ ಯಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ ಕ್ಯಾಪ್ಟನ್ ಅರವಿಂದ ಶರ್ಮಾ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

ಕಾನೂನುಬದ್ಧವಾಗಿ ಸ್ಪರ್ಧೆ: ಈ ಸ್ಪರ್ಧೆ ಸಂಬಂಧ ಕಾವೇರಿ ನೀರಾವರಿ ನಿಗಮ ಮತ್ತು ಸ್ಥಳೀಯ ಪೊಲೀಸರಲ್ಲಿದ್ದ ಅನು ಮಾನಗಳನ್ನು ಸ್ವತಃ ತಾವೇ ನಿವಾರಣೆ ಮಾಡಿದ್ದಾಗಿ ಕ್ಯಾಪ್ಟನ್ ಅರವಿಂದ ಶರ್ಮಾ ‘ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ. ಈ ಭಾಗದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದ ಸೈಯ್ಲಿಂಗ್ ರೆಗಟ್ಟ ಸ್ಪರ್ಧೆ ಆಯೋ ಜಿಸಲಾಗಿದೆ. ಇದು ಕಾನೂನುಬದ್ಧ ವಾಗಿಯೇ ನಡೆಯುತ್ತಿದೆ. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನು ಪಡೆಯಲಾಗಿದೆ. ಆದರೆ, ಸ್ಥಳೀಯ ಅಧಿ ಕಾರಿಗಳಿಗೆ ಅನುಮತಿ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಸ್ವಲ್ಪ ಗೊಂದಲ ಉಂಟಾಗಿತ್ತು ಎಂದರು.

ನಾವು ಸ್ಪರ್ಧೆ ಆರಂಭಿಸಿದಾಗ ಕಾವೇರಿ ನೀರಾವರಿ ನಿಗಮದ ಎಇಇ ಅವರು ಬಂದು ತಮ್ಮ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿ ದ್ದರು. ಆದರೆ, ನಾವು ಜಲಸಂಪನ್ಮೂಲ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದಿರುವುದನ್ನು ಅವರಿಗೆ ಮನವರಿಕೆ ಮಾಡಿಕೊಟ್ಟೆವು. ಇಲವಾಲ ಪೊಲೀಸರಿಗೂ ಕೂಡ ಮೈಸೂರು ಜಿಲ್ಲಾ ಎಸ್ಪಿ ಚೇತನ್ ಮತ್ತು ಮೈಸೂರು ಜಿಲ್ಲಾಧಿ ಕಾರಿಗಳಿಂದ ಅನುಮತಿ ಪಡೆದಿರುವು ದನ್ನು ಸಹ ಮನವರಿಕೆ ಮಾಡಿಕೊಟ್ಟಿದ್ದೇವೆ. ಆನಂತರ ಸುಸೂತ್ರವಾಗಿ ಸ್ಪರ್ಧೆ ನಡೆದಿದೆ. ಪೊಲೀಸರಾಗಲೀ, ಕಾವೇರಿ ನೀರಾವರಿ ನಿಗಮದವರಾಗಲೀ, ನಮ್ಮ ಕಾರ್ಯ ಕ್ರಮವನ್ನು ಸ್ಥಗಿತಗೊಳಿಸಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಡ್ರೋನ್ ಬಳಕೆ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಕೆಲವು ಉತ್ಸಾಹಿಗಳು ಸ್ಪರ್ಧೆಯನ್ನು ಚಿತ್ರೀಕರಿಸಲು ಡ್ರೋನ್ ಕಾರ್ಯಾಚರಣೆ ನಡೆಸಿದರು. ಆದರೆ, ನಾವೇ ಅದನ್ನು ತಡೆ ದಿದ್ದೇವೆ. ಈ ವಿಷಯವನ್ನು ಪೊಲೀಸ ರಿಗೂ ಮನವರಿಕೆ ಮಾಡಿಕೊಡಲಾಗಿದೆ ಎಂದು ಹೇಳಿದರು. ಸ್ಪರ್ಧೆಯಲ್ಲಿ ಭಾಗ ವಹಿಸಿದ ಬಹುತೇಕ ಸ್ಪರ್ಧಾಳುಗಳು ವಿಮಾನದ ಮೂಲಕ ಆಗಮಿಸಿದ್ದು, ಕೋವಿಡ್ ನಿಯಮದಂತೆ ಕೋವಿಡ್ ಟೆಸ್ಟ್‍ಗೆ ಒಳಪಟ್ಟಿದ್ದಾರೆ. ಕೋವಿಡ್ ನಿಯಮ ಗಳನ್ನು ಸಂಪೂರ್ಣವಾಗಿ ಅನುಸರಿಸ ಲಾಗಿದೆ ಎಂದ ಅವರು, ಮೈಸೂರು ಜಿಲ್ಲೆ ಯಲ್ಲಿ ವೀಕೆಂಡ್ ಕಫ್ರ್ಯೂ ಜಾರಿಯಲ್ಲಿ ರುವುದರಿಂದ ಇಲ್ಲಿನ ಕ್ರೀಡಾಸಕ್ತರು ಬರಲು ಸಾಧ್ಯವಾಗುತ್ತಿಲ್ಲ. ಆದರೆ, ಸ್ಪರ್ಧಾಳುಗಳು ಬರಲು ಸೂಕ್ತ ಅನುಮತಿ ಯನ್ನು ಪಡೆಯಲಾಗಿದೆ ಎಂದು ಅರ ವಿಂದ್ ಶರ್ಮಾ ತಿಳಿಸಿದರು.

ಭೂ ಮಾಲೀಕನಿಗೆ ನೋಟಿಸ್: ಇಂದಿನ ಸಾಹಸ ಜಲಕ್ರೀಡೆ ಸ್ಪರ್ಧೆ ಮಧ್ಯಾಹ್ನ 1.45ಕ್ಕೆ ಮುಗಿಯಿತು. ಈ ಕ್ರೀಡೆ ನಡೆಸಲು ಕೆಆರ್‍ಎಸ್ ಹಿನ್ನೀರಿಗೆ ಹೊಂದಿಕೊಂ ಡಂತೆ ಇರುವ ಭೂಮಿಯಲ್ಲಿ ಸ್ಥಳಾವ ಕಾಶ ಮಾಡಿಕೊಟ್ಟಿದ್ದ ಭೂ ಮಾಲೀಕ ಸಂಜಯ್ ಎಂಬುವರಿಗೆ ಇಲವಾಲ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಹೆಚ್.ಕೆ. ನಿಖಿತಾ, ಮಧ್ಯಾಹ್ನ 3.30ರಲ್ಲಿ ನೋಟಿಸ್ ಜಾರಿ ಮಾಡಿದ್ದಾರೆ. ರಾಷ್ಟ್ರ ಮಟ್ಟದ ರೆಗಟ್ಟ ಕಾರ್ಯಕ್ರಮ ನಡೆ ಸಲು ಕೆಲವು ಷರತ್ತುಗಳೊಂದಿಗೆ ಅನುಮತಿ ನೀಡಲಾಗಿತ್ತು. ಕೋವಿಡ್ ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾರ್ಗ ಸೂಚಿಯನ್ನು ಹೊರಡಿಸಿದೆ. ರೆಗಟ್ಟ ಕಾರ್ಯಕ್ರಮದಲ್ಲಿ ಮಾರ್ಗಸೂಚಿ ಉಲ್ಲಂಘಿಸಿದ್ದರೆ, ಅದಕ್ಕೆ ನೀವೇ ಜವಾ ಬ್ದಾರರಾಗಿದ್ದು, ಮಾರ್ಗಸೂಚಿ ಉಲ್ಲಂ ಘನೆಯಾಗಿರುವುದು ಕಂಡುಬಂದರೆ ನಿಮ್ಮ ಮೇಲೆ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಈ ನೋಟಿಸ್ ಕುರಿತು ಪ್ರತಿಕ್ರಿಯಿಸಿದ ಅರವಿಂದ ಶರ್ಮಾ, ಇಲವಾಲ ಪೊಲೀಸರು ನೀಡಿರುವ ನೋಟಿಸ್ ಅನ್ನು ಸ್ವೀಕರಿಸಲಾಗಿದೆ. ಅದಕ್ಕೆ ಸೂಕ್ತ ಉತ್ತರ ಕೊಡಲಾಗು ವುದು ಎಂದರು. ಈ ಮಧ್ಯೆ ಅಗ್ನಿ ಶಾಮಕ ಇಲಾಖೆ ಹಾಗೂ ಆರೋಗ್ಯ ಇಲಾಖೆಯೂ ಸಹ ಸ್ಪರ್ಧೆಗೆ ಅನು ಮತಿ ನೀಡಿವೆ ಎಂದು ಹೇಳಲಾಗಿದೆ

Translate »