ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ
ಮೈಸೂರು

ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಲು ಕೇಂದ್ರಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ

June 11, 2020

ಮೈಸೂರು, ಜೂ.10- ಬಂಟ್ವಾಳ-ಬೆಂಗ ಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಹಳ ತುರ್ತಾಗಿ ಕೈಗೊಳ್ಳಬೇಕಾದ 2 ಕಾಮಗಾರಿಗಳನ್ನು ಮಳೆಗಾಲ ಆರಂಭ ವಾಗುವ ಆತಂಕ ಹಾಗೂ ಅನಿವಾರ್ಯತೆ ಯಲ್ಲಿ ಟೆಂಡರ್‍ಗೆ ಕಾಯದೇ ಆರಂಭಿಸ ಲಾಗಿದೆ. ಈ ಕಾಮಗಾರಿಗಳನ್ನು ಯಥಾ ರೀತಿ ಮುಂದುವರಿಸಲು ಅವಕಾಶ ಮಾಡಿ ಕೊಡಬೇಕು ಎಂದು ಸಂಸದ ಪ್ರತಾಪ ಸಿಂಹ ಅವರು ಕೇಂದ್ರ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ.

ಎನ್‍ಹೆಚ್ 275ರಲ್ಲಿ 93.20 ಕಿಮೀ ನಿಂದ 132.34 ಕಿ.ಮೀವರೆಗಿನ ಮಡಿಕೇರಿ -ಕುಶಾಲನಗರ ಹೆದ್ದಾರಿಯ ಅಭಿವೃದ್ಧಿ ಕಾಮಗಾರಿ (ಅಂದಾಜು 24.73 ಕೋಟಿ ರೂ. ಮೌಲ್ಯದ), ಮೈಸೂರು ರಿಂಗ್ ರಸ್ತೆ ಅಭಿವೃದ್ಧಿ ಮತ್ತು ಬಂಟ್ವಾಳ-ಮೈಸೂರು-ಸಂಪಾಜೆ ವಿಭಾಗದ ಎನ್‍ಹೆಚ್ 275ರಲ್ಲಿ ಸಂಪಾಜೆ ಘಾಟಿ ಬಳಿ ಕಾಂಕ್ರೀಟ್ ಚರಂಡಿ ಮತ್ತು ತಡೆಗೋಡೆ (ಅಂದಾಜು 47.27 ಕೋಟಿ ರೂ.) ನಿರ್ಮಾಣ ಕಾಮಗಾರಿ ಗಳು ಬಹುತೇಕ ಅಂತಿಮ ಹಂತಕ್ಕೆ ಬಂದಿವೆ. ಈ ಕಾಮಗಾರಿಗಳಿಗೆ ಜಿಎಸ್‍ಟಿ ಹೊರತು ಪಡಿಸಿ ಟೆಂಡರ್ ಕರೆದು ಕನಿಷ್ಠ ಟೆಂಡರ್ ದಾರರಿಗೂ ಕೆಲಸ ವಹಿಸಲಾಗಿತ್ತು. ಕಳೆದೆ ರಡು ವರ್ಷಗಳ ಅತಿವೃಷ್ಟಿ ಮತ್ತು ಪ್ರವಾ ಹದ ಪರಿಣಾಮಗಳನ್ನು ಕಂಡಿದ್ದರಿಂದ ಈ ಕಾಮಗಾರಿಗಳನ್ನು ಮಳೆಗಾಲ ಆರಂ ಭಕ್ಕೂ ಮುನ್ನವೇ ಪೂರ್ಣಗೊಳಿಸುವ ಉದ್ದೇಶದಿಂದ ಆರಂಭಿಸಲಾಗಿತ್ತು. ಹಾಗಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿ ಸಲು ಅನುಮತಿ ನೀಡಬೇಕು ಎಂದು ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾ ಲಯದ ಮಹಾ ನಿರ್ದೇಶಕ ಐ.ಕೆ.ಪಾಂಡೆ ಅವರನ್ನು ನವದೆಹಲಿಯಲ್ಲಿ ಭೇಟಿ ಮಾಡಿದ ಸಂಸದರು ಮನವಿ ಮಾಡಿದ್ದಾರೆ.

ಒಂದೊಮ್ಮೆ ಈ ಕಾಮಗಾರಿಗಳನ್ನು ಆದಷ್ಟೂ ಶೀಘ್ರ ಪೂರ್ಣಗೊಳಿಸದೇ ಇದ್ದರೆ, ಪ್ರಸಕ್ತ ಮಳೆಗಾಲದಲ್ಲಿ ಹೆದ್ದಾರಿ ಸಂಚಾರ ಬಹಳ ಕಷ್ಟವಾಗಲಿದೆ. ಅಲ್ಲದೇ, ರಸ್ತೆಗಳ ನಿರ್ವಹಣೆಯೂ ಅಸಾಧ್ಯವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ಏನಾ ದರೂ ಟೆಂಡರ್ ಕರೆದರೆ ಅದರಿಂದ ಕಾಮ ಗಾರಿ 120 ದಿನಗಳಷ್ಟು ವಿಳಂಬವಾಗಲಿದೆ. ಮುಂಗಾರು ಮಳೆ ಆರ್ಭಟಿಸಲಾರಂಭಿಸಿ ದರೆ ವರ್ಷಾಂತ್ಯ ವೇಳೆಗೂ ಈ ಕಾಮಗಾರಿ ಯಲ್ಲಿ ಪ್ರಗತಿ ಕಾಣಲಾಗದು ಎಂದಿದ್ದಾರೆ.

Translate »