ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಭಾರೀ ಪ್ರತಿಭಟನೆ
ಮೈಸೂರು

ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಭಾರೀ ಪ್ರತಿಭಟನೆ

July 31, 2022

ಚಾಮರಾಜನಗರ, ಜು.೩೦-ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ನಗರದಲ್ಲಿ ಶನಿವಾರ ಭಾರೀ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ಚಾಮರಾಜೇಶ್ವರಸ್ವಾಮಿ ದೇವಾಲ ಯದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಭುವ ನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ತೆರಳಿ ಭವನದ ಪ್ರವೇಶ ದ್ವಾರದ ಮುಂದೆ ಕೆಲ ಕಾಲ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾ ರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ಗಳ ಮೂಲಕ ಅಶಾಂತಿ ಸೃಷ್ಟಿಸಿ, ಹಿಂದೂಗಳ ಪರವಾಗಿ ಧ್ವನಿ ಎತ್ತುವವರನ್ನು ಕೊಲೆ ಮಾಡುವ ಮೂಲಕ ಜನರಲ್ಲಿ ಭಯದ ವಾತಾವರಣ ಉಂಟು ಮಾಡುತ್ತಿರುವ ರಾಷ್ಟçದ್ರೋಹಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ರಾಷ್ಟçದ್ರೋಹಿ ಕೆಲಸ ದಲ್ಲಿ ತೊಡಗಿರುವ ಎಸ್‌ಡಿಪಿಐ, ಪಿಎಫ್‌ಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪರಿವಾರ ಸಂಘಟನೆಯ ಪ್ರವೀಣ್ ನೆಟ್ಟಾರು ಹತ್ಯೆ ಸಾಮಾನ್ಯ ವ್ಯಕ್ತಿಗಳಲ್ಲಿ ಭಯದ ವಾತಾ ವರಣ ಸೃಷ್ಟಿಸಿದೆ. ಹಿಂದೂ ಪರ ಹೋರಾಟ ಗಳಲ್ಲಿ ಯಾರೂ ಭಾಗವಹಿಸಬಾರದು ಎಂಬ ಭಯ ಉಂಟು ಮಾಡಲು ಇಂತಹ ಕೃತ್ಯ ಮಾಡುತ್ತಿದ್ದು, ಅರಾಜಕತೆ ಸೃಷ್ಟಿಸಲಾಗುತ್ತಿದೆ ಎಂದು ದೂರಿದರು.

ಹಿಂದಿನಿAದಲೂ ನಿರಂತರವಾಗಿ ನಡೆಯು ತ್ತಿರುವ ಹಿಂದೂ ಕಾರ್ಯಕರ್ತರ ಹತ್ಯೆ ಪ್ರಕರಣ ಗಳನ್ನು ತ್ವರಿತಗತಿಯಲ್ಲಿ ವಿಚಾರಣೆ ನಡೆಸಿ, ಅಪರಾಧಿಗಳನ್ನು ನಿರ್ದಾಕ್ಷಿಣ್ಯವಾಗಿ ಮರಣ ದಂಡನೆಗೆ ಒಳಪಡಿಸಬೇಕು ಎಂದು ಆಗ್ರ ಹಿಸಿದ ಪ್ರತಿಭಟನಾಕಾರು, ಸರ್ಕಾರ ಇಂತಹ ಪ್ರಕರಣಗಳು ಮರುಕಳಿಸದಂತೆ ಕಠಿಣ ನಿಲುವು ತೆಗದುಕೊಳ್ಳಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಶಾಸಕ ಸಿ.ಎಸ್.ನಿರಂಜನ ಕುಮಾರ್, ಮಾಜಿ ಶಾಸಕ ಶಾಸಕರಾದ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ನಂಜುAಡ ಸ್ವಾಮಿ, ಕಾಡಾ ಅಧ್ಯಕ್ಷ ಜಿ.ನಿಜಗುಣರಾಜು, ಬರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ. ರಾಮಚಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಸುಂದರ್, ಚಾ.ನಗರ ನಗರಸಭಾ ಅಧ್ಯಕ್ಷೆ ಆಶಾ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಎಂ. ಬಸವಣ್ಣ, ಚಾಮುಲ್ ಅಧ್ಯಕ್ಷ ನಾಗೇಂದ್ರ, ಜಿಪಂ ಮಾಜಿ ಅಧ್ಯಕ್ಷೆ ಜಿ. ನಾಗಶ್ರೀಪ್ರತಾಪ್, ಆರ್‌ಎಸ್‌ಎಸ್ ಮುಖಂಡ ಸಂದೇಶ್, ಬಿಜೆಪಿ ಮುಖಂಡರಾದ ಅಮ್ಮನಪುರ ಮಲ್ಲೇಶ್, ಮಂಗಲ ಶಿವಕುಮಾರ್, ಕುಲಗಾಣ ಶಾಂತ ಮೂರ್ತಿ, ಎಂಆರ್‌ಎಫ್ ನಾಗರಾಜು, ಮನೋಜ್ ಪಟೇಲ್, ಮಹೇಶ್, ದತ್ತೇಶ್‌ಕುಮಾರ್, ಡಾ. ಎ.ಆರ್.ಬಾಬು, ಸೋಮನಾಯಕ, ವೃಷ ಬೇಂದ್ರಪ್ಪ, ಬಸವಣ್ಣ, ಶಿವಕುಮಾರ್, ಶಿವರಾಜು, ಎಂ.ರೇವಣ್ಣ, ಎಸ್.ಬಾಲಸುಬ್ರಮಣ್ಯ, ಕೆ.ವೀರ ಭದ್ರಸ್ವಾಮಿ ಇತರರು ಪ್ರತಿಭಟನೆಯಲ್ಲಿದ್ದರು.

Translate »