ಪೆಟ್ರೋಲ್ ಮಾಫಿಯಾ ಬಯಲು ಹಾಸನದಿಂದ ಬಂದ ಟ್ಯಾಂಕರ್‌ನಲ್ಲಿ 200 ಲೀಟರ್ ಪೆಟ್ರೋಲ್ ನಾಪತ್ತೆ
ಮೈಸೂರು

ಪೆಟ್ರೋಲ್ ಮಾಫಿಯಾ ಬಯಲು ಹಾಸನದಿಂದ ಬಂದ ಟ್ಯಾಂಕರ್‌ನಲ್ಲಿ 200 ಲೀಟರ್ ಪೆಟ್ರೋಲ್ ನಾಪತ್ತೆ

July 31, 2022

ಪೆಟ್ರೋಲ್ ಅಳತೆ ಮಾಡುವ ಅಳತೆಗೋಲು ಮಾರ್ಪಾಡು
ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲು
ಪೆಟ್ರೋಲ್ ಮಾಫಿಯಾದ ವಿರುದ್ಧ ಡೀಲರ್‌ಗಳ ಆಕ್ರೋಶ
ಟ್ಯಾಂಕರ್ ವಶ; ಅಧಿಕಾರಿಗಳಿಂದ ಚಾಲಕ, ಕ್ಲೀನರ್ ವಿಚಾರಣೆ
ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ದೂರು
ಮೈಸೂರು, ಜು.೩೦(ಆರ್‌ಕೆ)-ಮೈಸೂರಲ್ಲಿ ಮತ್ತೊಮ್ಮೆ ಪೆಟ್ರೋಲ್ ಮಾಫಿಯಾ ಬಯಲಾಗಿದೆ. ಹಾಸನದಿಂದ ಬಂದ ಟ್ಯಾಂಕರ್‌ನಲ್ಲಿ ೨೦೦ ಲೀಟರ್ ಪೆಟ್ರೋಲ್ ನಾಪತ್ತೆ ಪ್ರಕರಣ ಶುಕ್ರವಾರ ರಾತ್ರಿ ಮೈಸೂರಲ್ಲಿ ಬೆಳಕಿಗೆ ಬಂದಿದೆ. ಇದು ಬಹಳ ಹಿಂದಿನಿAದಲೂ ನಡೆದುಕೊಂಡು ಬಂದಿದೆ ಎಂದು ಕೆಲ ಬಂಕ್‌ನವರು ದೂರಿದ್ದಾರೆ.

ಹಾಸನದ ಹಿಂದೂಸ್ಥಾನ್ ಪೆಟ್ರೋಲಿಯಂ ಕಾರ್ಪೊ ರೇಷನ್ ಲಿಮಿಟೆಡ್ (ಊPಅಐ) ಟರ್ಮಿನಲ್‌ನಿಂದ ಮೈಸೂರಿನ ದಾಸಪ್ಪ ಸರ್ಕಲ್‌ನ ಶ್ರೀ ಗಣೇಶ ಸರ್ವೀಸ್ ಸ್ಟೇಷನ್ ಬಂಕ್‌ಗೆ ಬಂದ ಟ್ಯಾಂಕರ್‌ನಲ್ಲಿ ೨೦೦ ಲೀಟರ್ ಪೆಟ್ರೋಲ್ ಕಡಿಮೆ ಇರುವುದು ಬೆಳಕಿಗೆ ಬಂದಿದೆ.

ಬAಕ್‌ಗೆ ಬಂದ ಟ್ಯಾಂಕರ್‌ನ ಮುಚ್ಚಳ ತೆಗೆದು ನೋಡಿದಾಗ ಪೆಟ್ರೋಲ್ ಪ್ರಮಾಣ ಕಡಿಮೆ ಇತ್ತು. ಅಲ್ಲದೇ ಅವರು ತಂದಿದ್ದ ಅಳತೆಗೋಲು (ಡಿಪ್ ರಾಡ್) ಸಹ ಅದಕ್ಕೆ ತಕ್ಕಂತೆ ತುಂಡಾಗಿದ್ದು, ಪೆಟ್ರೋಲ್ ಕಳವಾಗಿರುವುದು ಖಚಿತವಾಗುತ್ತಿದ್ದಂತೆಯೇ ಬಂಕ್ ಮಾಲೀಕರಾದ ನಿರ್ಮಲಾ ಅವರು ಪೆಟ್ರೋಲ್ ಡೀರ‍್ಸ್ ಅಸೋಸಿಯೇಷನ್ ಪದಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸಂಘದ ಪದಾಧಿಕಾರಿಗಳು, ಟ್ಯಾಂಕರ್ ಚಾಲಕ ಹಾಸನದ ಬಾಲರಾಜು ಮತ್ತು ಕ್ಲೀನರ್‌ನನ್ನು ವಿಚಾರಿಸಿದಾಗ ಆರಂಭದಲ್ಲಿ ನಮಗೇನೂ ಗೊತ್ತಿಲ್ಲ. ಪೆಟ್ರೋಲ್ ಲೋಡ್ ಆಗಿ ಸೀಲ್ ಮಾಡಿದ ನಂತರ ನಾವು ಎಲ್ಲಿಯೂ ನಿಲ್ಲಿಸಿಲ್ಲ. ಬೇಕಿದ್ದರೆ ಟ್ಯಾಂಕರ್ ಜೊತೆಯಲ್ಲಿರುವ ಅಳತೆಗೋಲಿನಿಂದ ಚೆಕ್ ಮಾಡಿಕೊಳ್ಳಿ ಎಂದು ವಾದಿಸಿದ್ದಾರೆ. ಕಡೆಗೆ ಟ್ಯಾಂಕರ್ ಬೀಗ ತೆಗೆದು ಪರೀಕ್ಷಿಸಲು ಮುಂದಾದಾಗ ಅಳತೆ ಗೋಲು ತುಂಡಾಗಿರುವುದು ಕಂಡು ಬಂತು. ಅವರ ಕೃತ್ಯಕ್ಕೆ ತಕ್ಕಂತೆ ಅದನ್ನು ಮಾರ್ಪಾಡು ಮಾಡಲಾಗಿತ್ತು. ಹಾಗಾಗಿ ಅದರಿಂದ ಅಳತೆ ಮಾಡಿದರೆ ಅಳತೆ ಸರಿ ಯಾಗಿತ್ತು. ಆದರೆ ಪೆಟ್ರೋಲ್ ಬಂಕ್‌ನಲ್ಲಿದ್ದ ಅಳತೆ ಗೋಲಿನಿಂದ ಪರಿಶೀಲಿಸಿದಾಗ ಪೆಟ್ರೋಲ್ ಕಡಿಮೆ ಇರುವುದು ಸ್ಪಷ್ಟವಾಯಿತು. ಟ್ಯಾಂಕರ್ ಮತ್ತು ಚಾಲಕ ನನ್ನು ರಾತ್ರಿ ಬಂಕ್‌ನಲ್ಲಿಯೇ ಇರಿಸಿಕೊಂಡಿದ್ದ ಮಾಲೀಕರು, ಇಂದು ಬೆಳಗ್ಗೆ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿ ಗಳನ್ನು ಕರೆಸಿ, ಮಹಜರು ನಡೆಸಿದಾಗ ೨೦೦ ಲೀಟರ್ ಪೆಟ್ರೋಲ್ ಕಡಿಮೆ ಇರುವುದು ತಿಳಿಯಿತು. ಇಲಾಖೆ ಉಪ ನಿರ್ದೇಶಕಿ ಸರಳಾ ಅವರ ನೇತೃತ್ವದಲ್ಲಿ ಸುಮಾರು ಎರಡು ತಾಸು ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಟರ್ಮಿನಲ್‌ನಲ್ಲಿ ಲೋಡ್ ಆದ ನಂತರ ಮೈಸೂರಿಗೆ ಬರುವ ಮಾರ್ಗ ಮಧ್ಯೆ ಟ್ಯಾಂಕರ್‌ನಿAದ ಪೆಟ್ರೋಲ್ ತೆಗೆದು, ಹಾಲಿ ಅಳತೆ ತೋರಿಸುವಂತೆ ಅಳತೆ ಗೋಲನ್ನು ತುಂಡರಿಸಿದ್ದಾರೆ ಎಂಬುದು ತಿಳಿಯಿತು.

ಪ್ರಕರಣ ದಾಖಲಿಸಿಕೊಂಡಿರುವ ತೂಕ ಮತ್ತು ಅಳತೆ (ಮಾಪನ) ಇಲಾಖೆ ಅಧಿಕಾರಿಗಳು, ಟ್ಯಾಂಕರ್ ಅನ್ನು ಇಂಧನ ಸಮೇತ ಜಪ್ತಿ ಮಾಡಿದ್ದು, ಚಾಲಕ ಮತ್ತು ಕ್ಲೀನರ್‌ನನ್ನು ತೀವ್ರ ವಿಚಾರಣೆಗೊಳಪಡಿಸಿ ದ್ದಾರೆ. ಹಾಸನದ ಹೆಚ್‌ಪಿಸಿಎಲ್ ಟರ್ಮಿನಲ್‌ನಿಂದ ಪ್ರತೀ ದಿನ ಸುಮಾರು ೫೦೦ ಟ್ಯಾಂಕರ್‌ಗಳು ಹಲವು ಪೆಟ್ರೋಲ್ ಬಂಕ್‌ಗಳಿಗೆ ಇಂಧನ ಪೂರೈಸುತ್ತಿದ್ದು, ಮಾರ್ಗ ಮಧ್ಯೆ ಪೆಟ್ರೋಲ್ ಕಳವು, ಕಲಬೆರಕೆ ಮಾಡುವ ಮಾಫಿಯಾ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಡೀಲರ್‌ಗಳು ಗಂಭೀರ ಆರೋಪ ಮಾಡಿದ್ದಾರೆ.

ಪ್ರತೀ ಟ್ಯಾಂಕರ್‌ನಿAದ ೧೦೦ ರಿಂದ ೨೦೦ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ಕಳವು ಮಾಡುತ್ತಿದ್ದು, ಕೆಲವು ಟ್ಯಾಂಕರ್‌ಗಳಲ್ಲಿ ಇಂಧನ ತೆಗೆದು ಸೀಮೆಎಣ್ಣೆ ಬೆರೆಸಿ ಪೂರೈಸುತ್ತಿರುವುದರಿಂದ ಕೋಟ್ಯಾಂತರ ರೂ. ನಷ್ಟವಾಗುತ್ತಿದೆ ಎಂದು ಪೆಟ್ರೋಲ್ ಡೀಲರ್‌ಗಳು ಆಪಾದಿಸುತ್ತಿದ್ದು, ತೈಲ ನಿಗಮದ ಅಧಿಕಾರಿಗಳೂ ಟ್ಯಾಂಕರ್ ಚಾಲಕರು ಮತ್ತು ಮಾಲೀಕರೊಂದಿಗೆ ಶಾಮೀಲಾಗಿ ಈ ಕೃತ್ಯ ನಡೆಸುತ್ತಿದ್ದಾರೆ. ಈ ಮಾಫಿಯಾ ವ್ಯಾಪಕವಾಗಿ ಕಾರ್ಯ ಪ್ರವೃತ್ತವಾಗಿದೆ ಎಂದು ದೂರು ನೀಡಿದ್ದಾರೆ. ಇಂದು ಸಂಜೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಅವರನ್ನು ಭೇಟಿ ಮಾಡಿದ ಸಂಘಗಳ ಪದಾಧಿಕಾರಿಗಳು ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ, ಮಾಫಿಯಾಗೆ ಕಡಿವಾಣ ಹಾಕಬೇಕು. ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಲಿಖಿತ ದೂರು ಸಲ್ಲಿಸಿದರು.

ಅಖಿಲ ಕರ್ನಾಟಕ ಪೆಟ್ರೋಲ್ ಡೀರ‍್ಸ್ ಫೆಡ ರೇಷನ್ ಅಧ್ಯಕ್ಷ ಕೆ.ಎಂ.ಬಸವೇಗೌಡ, ಜಿಲ್ಲಾಧ್ಯಕ್ಷೆ ಶಶಿಕಲಾ ನಾಗರಾಜ್, ಕಾರ್ಯದರ್ಶಿ ರಂಜಿತ ಹೆಗ್ಡೆ, ಪದಾಧಿಕಾರಿಗಳಾದ ಎಂ.ಎಸ್. ಲೋಕೇಶ್, ಎಸ್.ಆರ್. ಪಾಟೀಲ್ ಸೇರಿದಂತೆ ಹಲವು ಪೆಟ್ರೋಲ್ ಬಂಕ್ ಮಾಲೀಕರು ಈ ಸಂದರ್ಭ ಉಪಸ್ಥಿತರಿದ್ದರು.

ನಂತರ ಜಿಲ್ಲಾಧಿಕಾರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಂಟಿ ನಿರ್ದೇಶಕರಿಗೂ ದೂರು ನೀಡಿರುವ ಸಂಘದ ಪದಾಧಿಕಾರಿಗಳು, ಪೆಟ್ರೋಲ್, ಡೀಸೆಲ್ ಕಳವು ಮತ್ತು ಕಲಬೆರಕೆ ಮಾಫಿಯಾ ತಡೆಗಟ್ಟುವಂತೆ ಮನವಿ ಮಾಡಿದ್ದಾರೆ.

 

Translate »