ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕತೆಯ ಜೀವಾಳ: ಜಿಟಿಡಿ
ಮೈಸೂರು

ಸಹಕಾರಿ ಸಂಸ್ಥೆಗಳು ದೇಶದ ಆರ್ಥಿಕತೆಯ ಜೀವಾಳ: ಜಿಟಿಡಿ

July 31, 2022

ದೇಶದಲ್ಲಿದ್ದಾರೆ ೩೦ ಕೋಟಿ ಸಹಕಾರಿ ಸದಸ್ಯ ಬಳಗ

೮.೫ ಲಕ್ಷ ಸಹಕಾರಿ ಸಂಸ್ಥೆಗಳು

೪ ಲಕ್ಷಕ್ಕೂ ಅಧಿಕ ಮಂದಿಗೆ ಉದ್ಯೋಗ

ಸಹಕಾರ ಕ್ಷೇತ್ರ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಜಾಗೃತಿ ಯಿಂದ, ಬದ್ಧತೆಯಿಂದ, ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕು. ಸರ್ಕಾರದ ಮಧ್ಯಪ್ರವೇಶ ಇರ ಬಾರದು. ಸಹಕಾರಿಗಳು ಬದ್ಧತೆಯಿಂದ ಸಂಸ್ಥೆಗಳನ್ನು ಕಟ್ಟಿ, ಬೆಳೆಸಿ, ಪೋಷಿಸಬೇಕು. ಇದರಿಂದ ಸಹಕಾರ ಚಳವಳಿ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ.
– ಜಿ.ಟಿ.ದೇವೇಗೌಡ, ಸಹಕಾರಿ ಧುರೀಣ.

ಹುಣಸೂರು, ಜು.೩೦- ಭಾರತ ಸಹಕಾರ ಕ್ಷೇತ್ರ ೩೦ ಕೋಟಿಗೂ ಅಧಿಕ ಸದಸ್ಯ ಬಳಗ, ೮.೫ ಲಕ್ಷ ವಿವಿಧ ರೀತಿಯ ಸಹಕಾರ ಸಂಘಗಳನ್ನು ಹೊಂದಿದೆ. ೧೧ ಲಕ್ಷ ಕೋಟಿಗಳಿಗೂ ಅಧಿಕ ಬಂಡವಾಳ, ೬ ಲಕ್ಷ ಕೋಟಿ ರೂಗೂ ಅಧಿಕ ಠೇವಣ ಹೊಂದುವ ಮೂಲಕ ವಿಶ್ವದ ಗಮನ ಸೆಳೆದಿದೆ ಎಂದು ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷರೂ ಆದ ಶಾಸಕ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು.

ಪಟ್ಟಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಶನಿವಾರ ನಡೆದ ಸಹಕಾರ ಸಮ್ಮಿಲನ ಕಾರ್ಯ ಕ್ರಮದಲ್ಲಿ ವಿವಿಧ ಡೈರಿ ಮತ್ತು ಸಹಕಾರ ಸಂಘದ ಕಟ್ಟಡಗಳ ಶಂಕುಸ್ಥಾಪನೆ, ನೂತನ ಬಿಎಂಸಿ ಕೇಂದ್ರಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ೪೬ ಸಾವಿರಕ್ಕೂ ಅಧಿಕ ಸಹಕಾರ ಸಂಘಗಳು ನೋಂದಣ ಯಾಗಿದ್ದು, ೨.೩೦ ಕೋಟಿ ಸದಸ್ಯ ಬಳಗವನ್ನು ಹೊಂದಿದೆ. ಇವುಗಳಲ್ಲಿ ೪೦ ಸಾವಿರ ಸಹಕಾರ ಸಂಘಗಳು ಕಾರ್ಯನಿರ್ವಹಿಸು ತ್ತಿದ್ದು, ೬೩೪೪ ಕೋಟಿ ರೂ.

ಷೇರು ಬಂಡವಾಳ, ೧ ಲಕ್ಷ ೫೬ ಸಾವಿರ ಕೋಟಿ ರೂ. ದುಡಿಯುವ ಬಂಡವಾಳ, ೧ ಲಕ್ಷ ೧೫ ಸಾವಿರ ಕೋಟಿ ರೂ. ಠೇವಣ ಇದ್ದು, ಸಹಕಾರ ಸಂಸ್ಥೆಗಳ ಮೂಲಕ ೪ ಲಕ್ಷಕ್ಕೂ ಅಧಿಕ ಉದ್ಯೋಗ ಸೃಷ್ಟಿ ಸಲಾಗಿದೆ ಎಂದರು. ಕಳೆದ ವರ್ಷ ಕೇಂದ್ರ ಸರ್ಕಾರ ಸಹಕಾರ ವ್ಯವಸ್ಥೆ ಬಲಪಡಿಸುವ ಉದ್ದೇ± Àದಿಂದ ಕೇಂದ್ರದಲ್ಲಿ ಸಹಕಾರ ಸಚಿವಾಲಯ ರಚಿಸಿ ಸಹಕಾರಿ ಮುಖಂಡರು ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಜವಾಬ್ದಾರಿ ವಹಿಸಿರುವುದು ಸ್ವಾಗತಾರ್ಹ ಎಂದರು. ಅಮುಲ್ ಸಂಸ್ಥೆ ಕಳೆದ ಸಾಲಿನಲ್ಲಿ ೬೧ ಸಾವಿರ ಕೋಟಿ ವ್ಯವಹಾರ ನಡೆಸಿದ್ದು, ಗುಜರಾತ್ ರಾಜ್ಯವೊಂದರಲ್ಲೇ ಒಂದು ಲಕ್ಷ ಕೋಟಿ ರೂ.ಗೂ ಅಧಿಕ ವ್ಯವಹಾರ ನಡೆದಿರುವುದು ಹೆಮ್ಮೆಯ ವಿಚಾರವಾ ಗಿದೆ. ಹಾಲು ಉತ್ಪಾದನೆಯಲ್ಲಿ ಗುಜರಾತ್ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ೨ನೇ ಸ್ಥಾನದಲ್ಲಿದೆ. ಗುಜ ರಾತ್‌ನಲ್ಲಿ ೩೬ ಲಕ್ಷ, ಕರ್ನಾಟಕದಲ್ಲಿ ೨೬ ಲಕ್ಷ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕರ್ನಾಟಕದಲ್ಲಿ ೧೫ ಸಾವಿರಕ್ಕೂ ಅಧಿಕ ಹಾಲು ಉತ್ಪಾದಕರ ಸಹಕಾರ ಸಂಘಗಳು, ೧೬ ಜಿಲ್ಲಾ ಹಾಲು ಒಕ್ಕೂಟಗಳು ಮತ್ತು ಕೆಎಂಎಫ್ ಸೇರಿ ೨೦ ಸಾವಿರ ಕೋಟಿ ರೂ.ಗಳಿಗೂ ಅಧಿಕ ವ್ಯವಹಾರ ನಡೆಸುತ್ತಿವೆೆ. ಹುಣಸೂರಿನಲ್ಲಿ ಇದೀಗ ೨೦೦ನೇ ಹಾಲು ಉತ್ಪಾದಕರ ಕೇಂದ್ರ ಸ್ಥಾಪನೆಯಾಗಿದ್ದು, ೧೭೫೮೮ ಸದಸ್ಯರು ಪ್ರತಿ ತಿಂಗಳು ೪೪.೭೮ ಲಕ್ಷ ರೂ. (ವಾರ್ಷಿಕ ೧೪ ಕೋಟಿ ರೂ.) ವಹಿವಾಟು ನಡೆಸು ತ್ತಿದ್ದಾರೆ. ಪ್ರತಿಯೊಬ್ಬ ಸಹಕಾರಿ ಸದಸ್ಯರು ಇದನ್ನು ಅರ್ಥ ಮಾಡಿಕೊಂಡು ಸಹಕಾರಿ ಸಂಘಗಳ ಅಗತ್ಯತೆ ಅರಿಯಬೇಕು ಎಂದರು.

ಪ್ರತಿವರ್ಷ ೧೫ ಲಕ್ಷ ಕೋಟಿ ನೆರವು: ಪ್ರತಿವರ್ಷ ದೇಶದಲ್ಲಿ ೧೫ ಲಕ್ಷ ಕೋಟಿ ರೂ.ಗೂ ಅಧಿಕ ಆರ್ಥಿಕ ನೆರವನ್ನು ಸಹ ಕಾರ ಸಂಘಗಳು, ಡಿಸಿಸಿ ಬ್ಯಾಂಕ್‌ಗಳು, ಅಪೆಕ್ಸ್ ಬ್ಯಾಂಕ್ ಮತ್ತು ರಾಷ್ಟಿçÃಕೃತ, ವಾಣ ಜ್ಯ ಬ್ಯಾಂಕುಗಳ ಮೂಲಕ ನೀಡಲಾಗುತ್ತಿದೆ. ವಿಶೇಷವಾಗಿ ಸಹಕಾರ ಸಂಸ್ಥೆಗಳು ರೈತರಿಗೆ ಸುಲಭವಾಗಿ ಸಾಲ ನೀಡುವ ವ್ಯವಸ್ಥೆ ಅಳವಡಿಸಿಕೊಂಡಿದ್ದು, ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರೂ. ಅಲ್ಪಾವಧಿ ಸಾಲ ಮತ್ತು ೧೦ ಲಕ್ಷ ರೂ.ವರೆಗೆ ಮಧ್ಯಮಾವಧಿ ಸಾಲ ನೀಡುತ್ತಿದೆ ಎಂದರು.
ರಾಜ್ಯ ಸಹಕಾರ ಅಪೆಕ್ಸ್ ಬ್ಯಾಂಕ್, ೨೧ ಡಿಸಿಸಿ ಬ್ಯಾಂಕುಗಳು ಮತ್ತು ೫ ಸಾವಿರಕ್ಕೂ ಅಧಿಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಈ ವರ್ಷ ೩೩ ಲಕ್ಷ ರೈತರಿಗೆ ಅಂದಾಜು ೨೪ ಸಾವಿರ ಕೋಟಿ ಕೃಷಿ ಸಾಲ ನೀಡಲಾಗುತ್ತಿದೆ. ರೈತರು ಸಹ ಕಾರ ಸಂಘಗಳ ಮೂಲಕ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ, ಸಾಮಾಜಿಕವಾಗಿ ಸ್ವಾವಲಂಬಿಗಳಾಗುವುದರ ಮೂಲಕ ಉತ್ತಮ ಜೀವನ ನಡೆಸಲು ಸಹಕಾರಿಯಾಗಲಿದೆ ಎಂದು ಅವರು ತಿಳಿಸಿದರು.

ಕೆಎಂಎಫ್‌ನಿAದ ೯೬ ಲಕ್ಷ ಲೀಟರ್ ಹಾಲು ಸಂಗ್ರಹ: ಈ ವೇಳೆ ವರ್ಗೀಸ್ ಕುರಿಯನ್ ಮತ್ತು ಎಂ.ವಿ.ಕೃಷ್ಣಪ್ಪ ಅವ ರನ್ನು ಮತ್ತೊಮ್ಮೆ ಸ್ಮರಿಸುತ್ತೇನೆ. ಪ್ರತಿದಿನ ಕೆಎಂಎಫ್ ಅಂದಾಜು ೯೬ ಲಕ್ಷ ಲೀಟರ್ ಹಾಲು ಸಂಗ್ರಹಣೆ ಜೊತೆಗೆ ೨೭ ಕೋಟಿ ರೂ.ಗಳನ್ನು ರೈತರಿಗೆ ಬಟವಾಡೆ ಮಾಡು ತ್ತಿರುವ ಕಾರ್ಯ ಶ್ಲಾಘನೀಯ ಎಂದರು.

ಅಮುಲ್ ಮಾದರಿಯಲ್ಲಿ ಕೆಎಂಎಫ್ ಕೂಡ ಹಾಲು, ಮೊಸರು, ಮಜ್ಜಿಗೆ ಮಾರಾಟದ ಜೊತೆಗೆ ಹೆಚ್ಚುವರಿ ಹಾಲನ್ನು ಹಾಲಿನ ಪುಡಿಯಾಗಿ ತಯಾರಿಸಿ, ಕ್ಷೀರ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯದ ಅಂದಾಜು ೬೪ ಲಕ್ಷ ಶಾಲಾ ಮಕ್ಕಳು ಮತ್ತು ೩೯ ಲಕ್ಷ ಅಂಗನವಾಡಿ ಮಕ್ಕಳಿಗೆ ಪೌಷ್ಠಿಕಾಂಶಭರಿತ ಹಾಲಿನ ಪುಡಿಯನ್ನು ರಾಜ್ಯ ಸರ್ಕಾರದ ನೆರವಿನೊಂದಿಗೆ ವಿತರಿಸುತ್ತಿರುವುದು ಮತ್ತು ೧೪೫ಕ್ಕೂ ಅಧಿಕ ಬಗೆಯ ಸಿಹಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿರುವುದರಿಂದ ರಾಜ್ಯದ ಹೈನುಗಾರರು ಆರ್ಥಿಕವಾಗಿ ಚೈತನ್ಯ ಶೀಲರಾಗಿದ್ದಾರೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದನೆ ಒಂದು ಕೋಟಿ ಲೀಟರ್ ದಾಟಲಿದ್ದು, ವಿಶೇಷ ವಾಗಿ ಹೈನುಗಾರಿಕೆಯಲ್ಲಿ ಮಹಿಳೆಯರು ತೊಡಗಿಸಿಕೊಂಡಿರುವುದಕ್ಕೆ ನಾನು ಅವ ರನ್ನು ಅಭಿನಂದಿಸುತ್ತೇನೆ ಎಂದರು.

೧೫೨೪ ಪಟ್ಟಣ ಸಹಕಾರ ಬ್ಯಾಂಕ್: ಪಟ್ಟಣ ಪ್ರದೇಶಗಳ ಸಹಕಾರಿಗಳಿಗೆ ಅನುಕೂಲ ವಾಗುವಂತೆ ದೇಶದಲ್ಲಿ ೧೫೨೪ ಪಟ್ಟಣ ಸಹಕಾರ ಬ್ಯಾಂಕುಗಳಿದ್ದು, ೩ ಲಕ್ಷ ಕೋಟಿ ರೂ. ಠೇವಣ ಹೊಂದಿವೆ. ಹಾಗೆಯೇ, ರಾಜ್ಯದಲ್ಲಿ ೨೬೩ ಪಟ್ಟಣ ಸಹಕಾರ ಬ್ಯಾಂಕುಗಳು ೪೫ ಸಾವಿರ ಕೋಟಿ ರೂ. ಠೇವಣ ಹೊಂದಿದ್ದು, ೩೪ ಸಾವಿರ ಕೋಟಿ ರೂ. ಸಾಲ ವಿತರಿಸಿ ಉತ್ತಮ ಸೇವೆ ನೀಡುತ್ತಿವೆ. ಕೃಷಿಗೆ ಪೂರಕವಾಗಿ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ನೇತೃತ್ವದಲ್ಲಿ ರೈತರಿಗೆ ಬೇಡಿಕೆಗೆ ತಕ್ಕಂತೆ ರಸಗೊಬ್ಬರಗಳನ್ನು ಸರಬರಾಜು ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಷ್ಟçದ ಪ್ರತಿಷ್ಠಿತ ಸಹಕಾರ ಸಂಸ್ಥೆ ಇಫ್ಕೋ ವಾರ್ಷಿಕ ೯೫ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಉತ್ಪಾದನೆ ಮಾಡು ತ್ತಿದ್ದು, ವಾರ್ಷಿಕ ೬೦ ಸಾವಿರ ಕೋಟಿ ರೂ. ವ್ಯವಹಾರ ನಡೆಸುತ್ತಿದೆ. ಹಾಗೆಯೇ ಕ್ರಿಬ್ಕೋ ಸಂಸ್ಥೆಯು ೫೦ ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ಉತ್ಪಾ ದನೆ ಮತ್ತು ಬಿತ್ತನೆ ಬೀಜಗಳ ಸರಬರಾಜು ಮಾಡು ವುದರ ಮೂಲಕ ವಾರ್ಷಿಕ ೧೫ ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದರು.

Translate »