ದಸರಾ ಗೋಲ್ಡನ್ ಪಾಸ್‌ನಲ್ಲಿಪ್ಯಾಕೇಜ್ ಟೂರ್‌ಗೆ ಅವಕಾಶ
ಮೈಸೂರು

ದಸರಾ ಗೋಲ್ಡನ್ ಪಾಸ್‌ನಲ್ಲಿಪ್ಯಾಕೇಜ್ ಟೂರ್‌ಗೆ ಅವಕಾಶ

July 31, 2022

ಪ್ರವಾಸೋದ್ಯಮ ನಿಗಮ ನಿರ್ಧಾರ

ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು, ಜು.೩೦-ನಾಡಹಬ್ಬ ಮೈಸೂರು ದಸರಾ ವೇಳೆಯಲ್ಲಿ ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಪ್ರವಾಸಿಗರನ್ನು ಸೆಳೆಯಲು ಪ್ಯಾಕೇಜ್ ಟೂರುಗಳ ಏರ್ಪಡಿಸಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಅಲ್ಲದೆ ಮೈಸೂರು ದಸರಾಕ್ಕಾಗಿ ೧,೦೦೦ ಗೋಲ್ಡನ್ ಪಾಸ್‌ಗೆ ಅನುಮೋದನೆ ನೀಡುವಂತೆ ರಾಜ್ಯ ಪ್ರವಾಸೋದ್ಯಮ ನಿಗಮ, ಸರ್ಕಾರವನ್ನು ಕೋರಿದೆ. ಈ ಪಾಸ್‌ನಿಂದ ಜಂಬೂ ಸವಾರಿ ವೀಕ್ಷಣೆ ಮಾತ್ರವಲ್ಲದೇ, ಚಿಕ್ಕಮಗಳೂರು, ಮಡಿಕೇರಿ, ಮೇಲುಕೋಟೆ, ಬೇಲೂರು ಮತ್ತು ಹಳೇಬೀಡುಗಳಂತಹ ಪ್ರವಾಸಿ ತಾಣಗಳಿಗೆ ತೆರಳಲು ಬಳಸಿಕೊಳ್ಳಬಹುದಾಗಿದೆ.
ನಾಡಹಬ್ಬ ನೋಡಲು ಆಗಮಿಸುವ ಪ್ರವಾಸಿಗರಿಗೆ ಥೀಮ್ ಆಧಾರಿತ ಪ್ಯಾಕೇಜ್ ಟೂರ್ ಅವಕಾಶ ನೀಡಲಾಗುತ್ತಿದೆ. ಎರಡು ವರ್ಷಗಳ ನಂತರ ಈ ಬಾರಿಯ ದಸರಾ ಹಬ್ಬ ವಿಜೃಂಭಣೆಯಿAದ ನಡೆಯಲಿದೆ. ಮೈಸೂರಿಗೆ ಮಾತ್ರವಲ್ಲದೇ ರಾಜ್ಯಕ್ಕೆ ಹೆಚ್ಚಿನ ಪ್ರವಾಸಿಗರನ್ನು ಸೆಳೆಯಲು ಇದೊಂದು ಸದವಕಾಶವಾಗಿದೆ ಎಂದು ಕೆಎಸ್‌ಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಜಗದೀಶ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಈ ಬಾರಿ ೧,೦೦೦ ಗೋಲ್ಡನ್ ಪಾಸ್ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾ ಗಿದೆ. ಇದರಿಂದ ಹೆಚ್ಚಿನ ಜನರನ್ನು ಸೆಳೆಯ ಬಹುದಾಗಿದೆ. ಜನರಿಗಾಗಿ ಡೇ ಮತ್ತು ದೀರ್ಘ ಅವಧಿಯ ಪ್ಯಾಕೇಜ್ ಟೂರ್‌ಗೂ ಚಿಂತನೆ ನಡೆಸಲಾಗುತ್ತಿದೆ. ಪ್ರತಿ ಗೋಲ್ಡ್ ಕಾರ್ಡ್ಗೆ ೫,೦೦೦ ದರ ನಿಗದಿ ಮಾಡಲಿದ್ದು, ಇದರ ಮೂಲಕ ದಸರಾ ವೀಕ್ಷಿಸುವ ಪ್ರವಾಸಿಗರು ಇತರ ಸ್ಥಳಗಳಿಗೂ ಭೇಟಿ ನೀಡಬಹುದಾಗಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಆದಾಯ ಹೆಚ್ಚಳ ಇದರ ಗುರಿ ಯಾಗಿದೆ. ದಸರಾ ವೇಳೆಯಲ್ಲಿ ಇ- ಬ್ರೋಚರ್ ಸೇವೆಗೂ ಚಾಲನೆ ನೀಡಲಾಗುವುದು. ಅದರಲ್ಲಿ ಹೋಟೆಲ್, ಸೇವೆಗಳ ವಿವರ ಮತ್ತು ಬುಕ್ಕಿಂಗ್‌ಗಾಗಿ ಕ್ವಿಆರ್ ಕೋಡ್ ಅನ್ನು ಪ್ರವಾಸಿಗರು ಸ್ಕಾ÷್ಯನ್ ಮಾಡಬಹುದು.

Translate »