ಸಿಇಟಿ ಫಲಿತಾಂಶ ಪ್ರಕಟರ‍್ಯಾಂಕ್‌ಗಳೆಲ್ಲಾ ಸಿಬಿಎಸ್‌ಇ ವಿದ್ಯಾರ್ಥಿಗಳ ಪಾಲು
ಮೈಸೂರು

ಸಿಇಟಿ ಫಲಿತಾಂಶ ಪ್ರಕಟರ‍್ಯಾಂಕ್‌ಗಳೆಲ್ಲಾ ಸಿಬಿಎಸ್‌ಇ ವಿದ್ಯಾರ್ಥಿಗಳ ಪಾಲು

July 31, 2022

ಬೆಂಗಳೂರು ವಿದ್ಯಾರ್ಥಿಗಳ ಪಾರುಪತ್ಯ
ಮೈಸೂರಿಗಿಲ್ಲ ಈ ಬಾರಿ ರ‍್ಯಾಂಕ್
ಸೆ.೧ರಿAದ ದಾಖಲಾತಿ ಪರಿಶೀಲನೆ

ಬೆಂಗಳೂರು, ಜು.೩೦(ಕೆಎಂಶಿ)- ವೃತ್ತಿಪರ ಕೋರ್ಸ್ಗಳ ಪ್ರವೇಶ ಪರೀಕ್ಷೆಯಲ್ಲಿ (ಸಿಇಟಿ) ಬಾಲಕರೇ ಮೇಲುಗೈ ಸಾಧಿ ಸಿದ್ದಾರೆ. ಕೇಂದ್ರ ಸ್ವಾಮ್ಯದ ಸಿಬಿಎಸ್‌ಇ ವಿದ್ಯಾರ್ಥಿಗಳು ಐದು ವಿಭಾಗಗಳಲ್ಲೂ ರ‍್ಯಾಂಕ್‌ಗಳನ್ನು ದೋಚಿಕೊಂಡಿದ್ದಾರೆ.

ಐದು ವಿಭಾಗಗಳಲ್ಲಿ ಮೊದಲ ಹತ್ತು ರ‍್ಯಾಂಕ್‌ಗಳ ಸಿಂಹ ಪಾಲು ಬೆಂಗಳೂರಿನ ವಿದ್ಯಾರ್ಥಿಗಳ ಪಾಲಾಗಿದ್ದರೆ, ನಂತರದ ಸ್ಥಾನ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಸಂದಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್ನಾರಾಯಣ್, ಸೆಪ್ಟೆಂಬರ್ ೧ರಿಂದ ಪ್ರವೇಶ ಪ್ರಕ್ರಿಯೆಗೆ ಸಂಬAಧಿಸಿದAತೆ ದಾಖಲೆಗಳ ಪರಿಶೀಲನೆ ನಡೆಯಲಿದೆ ಎಂದರು. ಈ ಬಾರಿ ೨,೧೦,೮೨೯ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಇಂಜಿನಿಯರಿAಗ್ ವಿಭಾಗಕ್ಕೆ ೧,೭೧,೬೫೬ ವಿದ್ಯಾರ್ಥಿಗಳು ರ‍್ಯಾಂಕ್ ಪಡೆದಿದ್ದಾರೆ. ಕೃಷಿ ವಿಭಾಗದಲ್ಲಿ ೧,೩೯,೯೬೮ ವಿದ್ಯಾರ್ಥಿಗಳು, ಪಶುಸಂಗೋಪನೆ ೧,೪೨,೮೨೦, ಯೋಗ ಮತ್ತು ನ್ಯಾಚುರೋಥೆರಪಿ ೧,೪೨,೭೫೦, ಬಿ-ಫಾರ್ಮಾ ೧,೭೪,೫೬೮ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ ಎಂದರು. ರ‍್ಯಾಂಕ್ ತಡೆಹಿಡಿಯಲ್ಪಟ್ಟಿರುವ ಅಭ್ಯರ್ಥಿಗಳು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಸಿಇಟಿ ಕಚೇರಿಗೆ ಖುದ್ದಾಗಿ ಸಲ್ಲಿಸಿ, ರ‍್ಯಾಂಕ್ ಪಡೆದುಕೊಳ್ಳಬಹುದಾಗಿದೆ.ರ‍್ಯಾಂಕ್ ಪಡೆದ ಮಾತ್ರಕ್ಕೆ ಸೀಟು ಹಂಚಿಕೆ ಸಾಧ್ಯವಿಲ್ಲ. ದಾಖಲಾತಿ ಪರಿ ಶೀಲನೆಯ ನಂತರ ಅರ್ಹತೆಯನ್ನು ಪರಿಗಣ ಸಲಾಗುವುದು.

ನೀಟ್ ಪರೀಕ್ಷೆಯ ಫಲಿತಾಂಶ ಬಂದ ನಂತರ ಅದರ ಅಂಕಗಳ ಆಧಾರದ ಮೇಲೆ ವೈದ್ಯಕೀಯ, ದಂತ ವೈದ್ಯಕೀಯ ಮತ್ತು ಭಾರತೀಯ ವೈದ್ಯ ಪದ್ಧತಿ ಹಾಗೂ ಹೋಮಿ ಯೋಪತಿ ಕೋರ್ಸ್ ಗಳ ಪ್ರವೇಶಕ್ಕೆ ಪರಿ ಗಣ ಸಲಾಗುವುದು ಎಂದರು.
ಯಾವುದಾದರೂ ಅರ್ಹ ಅಭ್ಯರ್ಥಿಗೆ ರ‍್ಯಾಂಕ್ ನೀಡದೇ ಇದ್ದ ಪಕ್ಷದಲ್ಲಿ ಅಭ್ಯರ್ಥಿಯು ತನ್ನ ಎರಡನೇ ವರ್ಷದ ಪಿಯುಸಿ ಫೋಟೋ ಪ್ರತಿಯನ್ನು ಪ್ರಾಧಿ ಕಾರದ ಇ-ಮೇಲ್ ವಿಳಾಸಕ್ಕೆ ಕಳುಹಿಸಿ, ರ‍್ಯಾಂಕ್ ಪಡೆಯಬಹು ದಾಗಿದೆ ಎಂದರು.

ಯಲಹಂಕದ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿನಿಯಾದ ಅಪೂರ್ವ (ಶೇ.೯೭) ಮೊದಲ ಸ್ಥಾನ ಪಡೆದಿದ್ದಾರೆ. ಮಾರತಹಳ್ಳಿಯ ಶ್ರೀಚೈತನ್ಯ ಟೆಕ್ನೋ ಸ್ಕೂಲ್‌ನ ಸಿದ್ಧಾರ್ಥ್ ಸಿಂಗ್ (ಶೇ.೯೭) ದ್ವಿತೀಯರಾಗಿದ್ದಾರೆ. ಕೆಇಎ ವೆಬ್‌ಸೈಟ್ ಞeಚಿ.ಞಚಿಡಿ.ಟಿiಛಿ.iಟಿನಲ್ಲಿಯೂ ಫಲಿತಾಂಶ ವೀಕ್ಷಿಸಬಹುದಾಗಿದೆ. ಜೂನ್ ೧೬ ರಿಂದ ೧೮ರವರೆಗೆ ಇಂಜಿನಿಯರಿAಗ್, ಕೃಷಿ, ಪಶು ವೈದ್ಯಕೀಯ, ಫಾರ್ಮಸಿ ಹೀಗೆ ಮುಂತಾದ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಪರೀಕ್ಷೆ ನಡೆದಿತ್ತು. ಸೆಪ್ಟೆಂಬರ್ ೧ರಿಂದ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ.

Translate »