ಹೊಳೆನರಸೀಪುರ ಪುರಸಭೆ ಚುನಾವಣೆ: ಅಂತಿಮ ಕಣದಲ್ಲಿ 64 ಅಭ್ಯರ್ಥಿ
ಹಾಸನ

ಹೊಳೆನರಸೀಪುರ ಪುರಸಭೆ ಚುನಾವಣೆ: ಅಂತಿಮ ಕಣದಲ್ಲಿ 64 ಅಭ್ಯರ್ಥಿ

August 24, 2018

ಹೊಳೆನರಸೀಪುರ: ಹೊಳೆನರಸೀಪುರ ಪುರ ಸಭೆಯ 23 ವಾರ್ಡ್‍ಗಳ ಚುನಾವಣೆಗೆ 100 ಅಭ್ಯರ್ಥಿಗಳ ನಾಮಪತ್ರ ಕ್ರಮಬದ್ಧವಾಗಿತ್ತು. ಗುರುವಾರ 36 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಹಿಂಪಡೆದ ಹಿನ್ನಲೆಯಲ್ಲಿ 64 ಮಂದಿ ಅಂತಿಮ ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ಎಲ್ಲಾ ವಾರ್ಡ್‍ಗಳಲ್ಲಿ ಸ್ಪರ್ಧೆ ಮಾಡಿದ್ದು, ಬಿಜೆಪಿ 12, ಬಿಎಸ್‍ಪಿ 1 ವಾರ್ಡ್‍ನಲ್ಲಿ ಮಾತ್ರ ಸ್ಪರ್ಧೆ ಮಾಡಿದೆ. 5 ವಾರ್ಡ್‍ಗಳಲ್ಲಿ ಪಕ್ಷೇತರರು ಕಣದಲ್ಲಿದ್ದಾರೆ.

ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ವಿವರ: 1ನೇ ವಾರ್ಡ್‍ನಲ್ಲಿ ಸುಧಾ ನಳಿನಿ(ಜೆಡಿಎಸ್), ಎಂ.ಮಂಜುಳ (ಕಾಂಗ್ರೆಸ್), ಗಾಯತ್ರಿ(ಬಿಜೆಪಿ), 2ನೇ ವಾರ್ಡ್‍ನಲ್ಲಿ ಜ್ಯೋತಿ ಮಂಜುನಾಥ್(ಜೆಡಿಎಸ್), ಕವಿತಾ ಸುಬ್ರಮಣ್ಯ (ಕಾಂಗ್ರೆಸ್), 3ನೇ ವಾರ್ಡ್‍ನಲ್ಲಿ ಜ್ಹಕ್ಕರುಲ್ಲಾ(ಜೆಡಿಎಸ್), ಸೈಯದ್ ಮುಬಾರಕ್(ಕಾಂಗ್ರೆಸ್), 4ನೇ ವಾರ್ಡ್‍ನಿಂದ ಸುದರ್ಶನ್(ಜೆಡಿಎಸ್), ಪ್ರಭಾಕರ್(ಕಾಂಗ್ರೆಸ್), ಹೆಚ್.ಜೆ. ನಾಗರಾಜ್(ಬಿಜೆಪಿ), ಮಧುಮಾಲತಿ(ಪಕ್ಷೇತರ), 5ನೇ ವಾರ್ಡ್‍ನಿಂದ ಕೆ.ಎಂ.ಮಂಜುನಾಥ್(ಜೆಡಿಎಸ್), ಹೆಚ್.ಸಿ. ವೆಂಕಟೇಶ್(ಕಾಂಗ್ರೆಸ್), 6ನೇ ವಾರ್ಡ್‍ನಿಂದ ಸೈಯದ್ ವಾಸೀಂ್ಲ(ಜೆಡಿಎಸ್), ಹುಸೇನ್ ಆಲಿ(ಕಾಂಗ್ರೆಸ್), ಫಯಾಜ್ ಅಹಮದ್(ಪಕ್ಷೇತರ), 7ನೇ ವಾರ್ಡ್‍ನಿಂದ ಶಫಿನಾಜ್(ಜೆಡಿಎಸ್), ಶಹಿನಾ ಬಾನು(ಕಾಂಗ್ರೆಸ್), 8ನೇ ವಾರ್ಡ್‍ನಿಂದ ಎ.ಜಗನ್ನಾಥ್(ಜೆಡಿಎಸ್), ಕಿರಣ್(ಕಾಂಗ್ರೆಸ್), ಕೆ.ಬಿ.ಪ್ರಸನ್ನ(ಬಿಜೆಪಿ), ವೆಂಕಟೇಶ್(ಪಕ್ಷೇತರ), 9ನೇ ವಾರ್ಡ್‍ನಿಂದ ಸಿ.ವೀಣಾ(ಜೆಡಿಎಸ್), ಪುರುಷಿದ್(ಕಾಂಗ್ರೆಸ್), 10ನೇ ವಾರ್ಡ್‍ನಿಂದ ಕೆ.ಶ್ರೀಧರ(ಜೆಡಿಎಸ್), ಗಿರೀಶ್(ಕಾಂಗ್ರೆಸ್), ಹೆಚ್.ಮಂಜೇಗೌಡ (ಬಿಜೆಪಿ) ಕಣದಲ್ಲಿದ್ದಾರೆ.

11ನೇ ವಾರ್ಡ್‍ನಿಂದ ಕೆ.ಆರ್.ಸುಬ್ರಮಣ್ಯ(ಜೆಡಿಎಸ್), ಹೆಚ್.ಆರ್.ಗಿರೀಶ್(ಕಾಂಗ್ರೆಸ್), ವಸಂತ್‍ಕುಮಾರ್ (ಬಿಜೆಪಿ), 12ನೇ ವಾರ್ಡ್‍ನಿಂದ ಕುಮಾರ ಸ್ವಾಮಿ (ಜೆಡಿಎಸ್), ಕೃಷ್ಣಮೂರ್ತಿ(ಕಾಂಗ್ರೆಸ್), 13ನೇ ವಾರ್ಡ್ ನಿಂದ ಟಿ.ಶಾಂತಿ(ಜೆಡಿಎಸ್), ಹೇಮಾವತಿ(ಕಾಂಗ್ರೆಸ್), ಪದ್ಮ(ಬಿಜೆಪಿ), 14ನೇ ವಾರ್ಡ್‍ನಿಂದ ಹೆಚ್.ಕೆ ಪ್ರಸನ್ನ (ಜೆಡಿಎಸ್), ಹೇಮಚಂದ್ರ(ಕಾಂಗ್ರೆಸ್), ನಾಗರತ್ನ( ಬಿಜೆಪಿ), 15ನೇ ವಾರ್ಡ್‍ನಿಂದ ಹೆಚ್.ಎ.ಶಿವಣ್ಣ(ಜೆಡಿಎಸ್), ಡಿ.ಕೆ.ರುಕ್ಮಿಣಿ(ಕಾಂಗ್ರೆಸ್), 16ನೇ ವಾರ್ಡ್‍ನಿಂದ ಕಿರಣ್ ಕುಮಾರ್(ಜೆಡಿಎಸ್), ಎಂ.ಮಧುಕುಮಾರ್(ಕಾಂಗ್ರೆಸ್), 17ನೇ ವಾರ್ಡ್‍ನಿಂದ ನಾಗಮಣಿ(ಜೆಡಿಎಸ್), ಎಂ.ಎಸ್. ಶಾಂತಕುಮಾರಿ(ಕಾಂಗ್ರೆಸ್), ಎಂ.ಎನ್.ಕಮಲಮ್ಮ(ಬಿಜೆಪಿ), 18ನೇ ವಾರ್ಡ್‍ನಿಂದ ಎಂ.ನಿಂಗಯ್ಯ(ಜೆಡಿಎಸ್), ಹೆಚ್.ಎಸ್.ಗಂಗಾಧರಸ್ವಾಮಿ(ಕಾಂಗ್ರೆಸ್), 19ನೇ ವಾರ್ಡ್‍ನಿಂದ ತ್ರಿಲೇಚಲ(ಜೆಡಿಎಸ್), ಪದ್ಮಾ(ಕಾಂಗ್ರೆಸ್), ಹೇಮಲತಾ(ಬಿಜೆಪಿ), 20ನೇ ವಾರ್ಡ್‍ನಿಂದ ಹೆಚ್.ಆರ್. ಮಮತಾಕುಮಾರಿ(ಜೆಡಿಎಸ್), ಹೆಚ್.ಬಿ.ನಾಗ ರತ್ನ (ಕಾಂಗ್ರೆಸ್), ಹೆಚ್.ಬಿ.ನಾಗಮ್ಮ(ಬಿಜೆಪಿ), ರಾಘ ವೇಂದ್ರ(ಬಿಎಸ್‍ಪಿ), 21ನೇ ವಾರ್ಡ್‍ನಿಂದ ಹೆಚ್.ಜೆ. ಉಮೇಶ್(ಜೆಡಿಎಸ್), ಹೆಚ್.ಎನ್.ರಾಘವೇಂದ್ರ (ಕಾಂಗ್ರೆಸ್), ಗಂಗರಾಜು(ಬಿಜೆಪಿ), ದ್ಯಾವಯ್ಯ(ಪಕ್ಷೇತರ), ನಾಗರಾಜು(ಪಕ್ಷೇತರ), 22ನೇ ವಾರ್ಡ್ ಡಿ.ಜಯ ಲಕ್ಷ್ಮಿ(ಜೆಡಿಎಸ್), ಜಯಕಾಂತಮ್ಮ(ಕಾಂಗ್ರೆಸ್), ಹೇಮಲತಾ(ಬಿಜೆಪಿ), ಮಧು ಮಾಲತಿ(ಪಕ್ಷೇತರ), 23ನೇ ವಾರ್ಡ್‍ನಿಂದ ಸಾವಿತ್ರಿ(ಜೆಡಿಎಸ್), ಕೆ.ಎನ್.ಚೈತ್ರ(ಕಾಂಗ್ರೆಸ್), ಮೀನಾಕ್ಷಿ(ಬಿಜೆಪಿ) ಅವರು ಚುನಾವಣಾ ಕಣದಲ್ಲಿ ಉಳಿದ್ದಾರೆ.
ಚುನಾವಣಾ ಕಣದಲ್ಲಿ ಪಟ್ಟಣದಲ್ಲಿ ರಂಗೇರುತ್ತಿದ್ದು, ಈ ಬಾರಿಯ ಪುರಸಭೆಯ ಗದ್ದುಗೆ ಯಾರು ಹಿಡಿಯಲಿದ್ದಾರೆ ಎಂಬ ಕುತೂಹÀಲಕ್ಕೆ ಕೆಲವೇ ದಿನಗಳಲ್ಲಿ ಉತ್ತರ ದೊರೆಯಲಿದೆ.

Translate »