ವರಮಹಾಲಕ್ಷ್ಮಿ ಹಬ್ಬ: ಬೆಲೆ ಏರಿಕೆ ನಡುವೆ ಭರ್ಜರಿ ವ್ಯಾಪಾರ
ಹಾಸನ

ವರಮಹಾಲಕ್ಷ್ಮಿ ಹಬ್ಬ: ಬೆಲೆ ಏರಿಕೆ ನಡುವೆ ಭರ್ಜರಿ ವ್ಯಾಪಾರ

August 24, 2018

ಅಗತ್ಯ ವಸ್ತುಗಳು ದುಬಾರಿ, ಜನರಲ್ಲಿ ಕುಂದದಾ ಉತ್ಸಾಹ
ಹಾಸನ: ವರಮಹಾಲಕ್ಷ್ಮಿ ಹಬ್ಬದ ಮುನ್ನಾದಿನವಾದ ಗುರುವಾರ ಮಾರುಕಟ್ಟೆಯಲ್ಲಿ ಹೂ, ಹಣ್ಣಿನ ವ್ಯಾಪಾರ ಭರಾಟೆ ಜೋರಾಗಿ ನಡೆಯಿತು.

ಹಬ್ಬಕ್ಕೆ ಅಗತ್ಯವಾದ ಬಾಳೆಕಂದು, ಮಾವಿನ ಸೊಪ್ಪು, ತಾವರೆ ಹೂವು, ಡೇರೆ ಹೂವು, ಬಾಳೆಹಣ್ಣು, ತರಕಾರಿ ಹಾಗೂ ಅಲಂಕಾರಿಕ ವಸ್ತುಗಳನ್ನು ಕೊಳ್ಳಲು ಗ್ರಾಹಕರು ಮುಗಿಬಿದ್ದರು.

ನಗರದ ಕಸ್ತೂರಬಾ ರಸ್ತೆ ಹಾಗೂ ಕಟ್ಟಿನ ಕೆರೆ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಯಿಂದಲೇ ಮಹಿಳೆಯರು, ಯುವತಿ ಯರು ಸೇರಿದಂತೆ ಸುತ್ತಲಿನ ಗ್ರಾಮಗಳ ಜನರು ಬಂದು ಹಬ್ಬಕ್ಕೆ ಅಗತ್ಯವಾದ ವಸ್ತು ಗಳನ್ನು ಉತ್ಸಾಹದಿಂದ ಕೊಂಡುಕೊಳ್ಳು ತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಶ್ರಾವಣ ಮಾಸ ಆರಂಭದಿಂದ ಮಾರು ಕಟ್ಟೆಯಲ್ಲಿ ವ್ಯಾಪಾರ ಚಟುವಟಿಕೆ ಗರಿ ಗೆದರಲಿದೆ ಎನ್ನುವ ಮಾರಾಟಗಾರರ ಕನಸಿಗೆ ಮಳೆರಾಯ ತಣ್ಣೀರೆರಚಿದ್ದಾನೆ. ಜಿಲ್ಲೆಯಲ್ಲಿ ಸುರಿದ ಸತತ ಮಳೆ, ಶೀತ ಗಾಳಿ ಹಾಗೂ ಕೆಲವಡೆ ಉಂಟಾದ ಅತಿ ವೃಷ್ಠಿಯಿಂದ ಹಲವು ಅವಘಡಗಳು ಸಂಭವಿಸಿದವು. ಇದರ ಪರಿಣಾಮ ತರಕಾರಿ, ಹೂ, ಹಣ್ಣು ಗಳ ಬೆಳೆ ನಾಶವಾಗಿದೆ. ಕೈ ಬಂದಿರುವ ಅಲ್ಪ-ಸ್ವಲ್ಪ ಬೆಳೆಯೂ ಕೂಡ ಕೊಳೆ ಯುವಂತಾಗಿದ್ದು, ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

ದುಬಾರಿಯಾದ ಹೂ, ಹಣ್ಣು: ನಿರಂತರ ಮಳೆಯಿಂದ ಹೂ ಹಾಗೂ ಹಣ್ಣಿನ ಬೆಳೆಗಳ ಇಳುವರಿ ಕುಸಿತವಾಗಿದೆ. ಜೊತೆಗೆ ಪಕ್ಕದ ಕೊಡಗು ಜಿಲ್ಲೆಯಲ್ಲಿ ಉಂಟಾಗಿ ರುವ ಪ್ರವಾಹದಿಂದ ಅಗತ್ಯ ವಸ್ತುಗಳ ಪೂರೈಕೆ ಇಳಿಕೆಯಾಗಿದೆ. ಇದರಿಂದ ಮಾರು ಕಟ್ಟೆಗೆ ಹೂ, ಹಣ್ಣು, ತರಕಾರಿ ಪೂರೈಕೆ ಇಳಿಕೆಯಾಗಿದ್ದು, ಬೆಲೆ ಏರಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಸದ್ಯ ಮಾರುಕಟ್ಟೆಯಲ್ಲಿ ಸೇವಂತಿಗೆ 70 ರೂ., ಕಾಕಡ 80 ರೂ., ಮಲ್ಲಿಗೆ 70 ರಿಂದ 100ರೂ. ಚೆಂಡು 20ರೂ., ಗುಲಾಬಿ (ಒಂದಕ್ಕೆ) 10 ರಿಂದ 20 ರೂ. ಬೆಲೆ ನಿಗದಿ ಯಾಗಿದೆ. ಏಲಕ್ಕಿ ಬಾಳೆಹಣ್ಣು ಕೆಜಿಗೆ 100 ರಿಂದ 120 ರೂ. ಹಾಗೂ ಪಚ್ಚ ಬಾಳೆ 40 ರಿಂದ 50 ರೂ. ಬೆಲೆ ನಿಗದಿಯಾಗಿದೆ. ಬಾಳೆ ಕಂದು ಒಂದಕ್ಕೆ 10 ರಿಂದ 20 ಹಾಗೂ ಮಾವಿನ ಸೊಪ್ಪು ಒಂದು ಕಟ್ಟಿಗೆ 10 ರೂ.ಗೆ ಮಾರಾಟ ಮಾಡಲಾಗುತ್ತಿದೆ.

‘ಬೆಲೆ ಏರಿಕೆ ಹಾಗೂ ನಿರಂತರ ಮಳೆ ಯಿಂದ ಉಂಟಾಗಿರುವ ಅವಘಡದಿಂದ ಹಬ್ಬವನ್ನು ಸರಳವಾಗಿ ಆಚರಿಸುತ್ತಿದ್ದೇವೆ. ಆದರೂ, ಹಬ್ಬಕ್ಕೆ ಮುಖ್ಯವಾಗಿ ಬೇಕಾಗಿ ರುವ ಹೂ, ಹಣ್ಣು, ಬಾಳೆಕಂದು, ತರಕಾರಿ ಯನ್ನು ಸ್ವಲ್ಪ ಪ್ರಮಾಣದಲ್ಲಿ ಖರೀದಿಸು ತ್ತಿದ್ದೇನೆ’ ಎಂದು ನಗರದ ನಿವಾಸಿ ಪಾರ್ವತಮ್ಮ ಎಂಬುವವರು ತಿಳಿಸಿದರು.

ವ್ಯಾಪಾರ ಭರಾಟೆ ಜೋರು: ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಮಾರು ಕಟ್ಟೆಯಲ್ಲಿ ವ್ಯಾಪಾರ ಭರಾಟೆ ಜೋರಾ ಗಿದೆ. ಎತ್ತ ನೋಡಿದರೂ ಜನರು ಹೂ-ಹಣ್ಣುಗಳನ್ನು ಕೊಂಡುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕಳೆದ ಎರಡು ತಿಂಗಳಿನಿಂದ ಜಿಲ್ಲೆಯಲ್ಲಿ ಬಾರಿ ಮಳೆ ಬಂದು ಜನಜೀವನವೇ ಅಸ್ತವ್ಯಸ್ಥವಾಗಿತ್ತು. ಸದ್ಯ ಮೂರನಾಲ್ಕು ದಿನಗಳಿಂದ ಮಳೆರಾಯ ಬಿಡುವು ಕೊಟ್ಟಿರು ವುದರಿಂದ ಜನರು ನಿಟ್ಟುಸಿರುಬಿಟ್ಟಿದ್ದಾರೆ. ಹಬ್ಬದ ತಯಾರಿಗೆ ಮುಂದಾಗಿದ್ದಾರೆ.

‘ಮಾರುಕಟ್ಟೆಯಲ್ಲಿ ಬೆಳಿಗ್ಗೆಯಿಂದಲೇ ಗ್ರಾಹಕರು ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ದರೆ. ಈ ಬಾರಿ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಆದರೂ ಗ್ರಾಹಕರು ಉತ್ಸಾಹದಿಂದ ಹೂ, ಹಣ್ಣು ಖರೀದಿಸುತ್ತಿದ್ದಾರೆ’ ಎಂದು ವ್ಯಾಪಾರಿ ಯೊಬ್ಬರು ತಿಳಿಸಿದರು.

‘ಮಳೆ ಹಾಗೂ ಶೀತಗಾಳಿಯಿಂದ ತರಕಾರಿ ಹಾಗೂ ಹೂ ಬೇಗನೇ ಕೆಡುತ್ತದೆ. ಹಾಗಾಗಿ, ಅವುಗಳನ್ನು ಹೆಚ್ಚು ದಿನ ಸಂಗ್ರ ಹಿಸಿಡಲು ಸಾಧ್ಯವಾಗುತ್ತಿಲ್ಲ. ತರಕಾರಿ ಖರೀದಿ ಮಾಡುವವರು ಸ್ವಚ್ಛ ಹಾಗೂ ಶುದ್ಧತೆಯನ್ನು ಹೆಚ್ಚು ನಿರೀಕ್ಷೆ ಮಾಡು ತ್ತಾರೆ. ಹಾಗಾಗಿ, ಸ್ವಲ್ಪ ಹದಗೆಟ್ಟ ತರ ಕಾರಿಯನ್ನು ಖರೀದಿ ಮಾಡುವುದಿಲ್ಲ. ಇದರಿಂದ ಹೆಚ್ಚು ನಷ್ಟ ಉಂಟಾಗುತ್ತದೆ. ಹಾಗಾಗಿ, ಕಡಿಮೆ ಪ್ರಮಾಣದಲ್ಲಿ ಮಾತ್ರ ತರಕಾರಿಯನ್ನು ಮಾರಾಟಕ್ಕೆ ಇಟ್ಟಿ ದ್ದೇನೆ’ ಎಂದು ವ್ಯಾಪಾರಿ ರಂಗಸ್ವಾಮಿ ‘ಮೈಸೂರು ಮಿತ್ರ’ನಿಗೆ ತಿಳಿಸಿದರು.

Translate »