ಮೈಸೂರು, ಜು.21(ಆರ್‍ಕೆಬಿ)- ಮೈಸೂ ರಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ಮತ್ತು ಸಾವುಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಜಂಟಿಯಾಗಿ `ಮನೆಮದ್ದು’ ಅಭಿಯಾನಕ್ಕೆ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದವು.
ಗೋಮೂತ್ರ, ಸಗಣಿ, ಬೇವಿನಸೊಪ್ಪು, ಅಡುಗೆ ಅರಿಶಿನದ ಮಿಶ್ರಣದ ಸ್ಯಾನಿಟೈಸರ್ ನಿಂದ ಮನೆ ಅಂಗಳವನ್ನು ಸಾರಿಸಿದರೆ ಮನೆ ಯತ್ತ ಯಾವುದೇ ವೈರಸ್ ಸುಳಿಯದಂತೆ ತಡೆಯಬಹುದು. ಈ ಕ್ರಮ ಬಹಳ ಹಿಂದಿ ನಿಂದಲೂ ಗ್ರಾಮಾಂತರ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಕೊರೊನಾ ಸೋಂಕು ತಡೆಗೂ ಸ್ಯಾನಿಟೈಸರ್ ರೀತಿ ಇದನ್ನು ಬಳಸ ಬಹುದಾಗಿದೆ ಎಂಬ ಮನೆಮದ್ದು ಅಭಿ ಯಾನದಲ್ಲಿ ತಿಳಿಸಿಕೊಡಲಾಯಿತು.
ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಎಲ್.ನಾಗೇಂದ್ರ, ಮನೆಮದ್ದಿನ ಈ ಮಿಶ್ರಣ ವನ್ನು ಮನೆ ಮುಂದೆ ನೆಲದ ಮೇಲೆ ಹರಡಿ ದಂತೆ ಚೆಲ್ಲಿ, ಇಡೀ ಅಂಗಳ ಅಥವಾ ರಸ್ತೆಗೂ ಹರಡುವಂತೆ ಕಡ್ಡಿಪೊರಕೆಯಿಂದ ಗುಡಿಸಬೇಕು. ಈ ಕ್ರಮದಿಂದ ಕೊರೊನಾ ಸೋಂಕು ಜನವಸತಿ ಪ್ರದೇಶದತ್ತ ಬಾರದಂತೆ ತಡೆಯಲು ಸಾಧ್ಯವಿದೆ ಎಂದರು.
ಡಿಸಿಪಿ ಎ.ಎನ್.ಪ್ರಕಾಶ್‍ಗೌಡ, ನೈಸರ್ಗಿಕ ಸ್ಯಾನಿಟೈಸರ್ ನೆಲಕ್ಕೆ ಹಾಕಿ, ಹೇಗೆ ಹರಡ ಬೇಕು ಎಂಬುದನ್ನು ತೋರಿಸಿಕೊಟ್ಟರು. ಕೊರೊನಾ ಸೋಂಕು, ಡೆಂಗ್ಯು, ಚಿಕುನ್ ಗುನ್ಯಾ ರೋಗ ಹರಡುವ ನೊಣ, ಸೊಳ್ಳೆ ಗಳಿಂದ ರಕ್ಷಿಸಿಕೊಳ್ಳಲು ಈ ಸ್ಯಾನಿಟೈಸರ್ ಹೆಚ್ಚು ಉಪಯುಕ್ತ ಎಂದರು. ಪಾಲಿಕೆ ಸದಸ್ಯ ಜೆ.ಗೋಪಿ, ಆರೋಗ್ಯಾಧಿಕಾರಿ ಡಾ.ನಾಗ ರಾಜ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗ ಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್. ಶಿವರಾಮು, ಡಾ.ತಿಮ್ಮಯ್ಯ, ನಟರಾಜ್ ಜೋಯಿಸ್, ರಘುರಾಂ ವಾಜಪೇಯಿ, ಸೋಮಶೇಖರಗೌಡ, ಎಂ.ಚಂದ್ರಶೇಖರ್, ಮಡ್ಡಿಕೆರೆ ಗೋಪಾಲ್ ಇನ್ನಿತರರಿದ್ದರು.