ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಹೋಟೆಲ್  ಉದ್ಯಮ ಪೂರಕ ತರಬೇತಿ ಕೇಂದ್ರ
ಮೈಸೂರು

ಫುಡ್ ಕ್ರಾಫ್ಟ್ ಸಂಸ್ಥೆಯಿಂದ ಹೋಟೆಲ್  ಉದ್ಯಮ ಪೂರಕ ತರಬೇತಿ ಕೇಂದ್ರ

July 7, 2018

ಮೈಸೂರು:  ಅತಿಥಿ ಸತ್ಕಾರ ಕ್ಷೇತ್ರದಲ್ಲಿ ನುರಿತ ಮತ್ತು ಅರ್ಹ ಮಾನವ ಸಂಪನ್ಮೂಲವನ್ನು ಹೋಟೆಲ್ ಉದ್ಯಮಕ್ಕೆ ಕೊಡುಗೆಯಾಗಿ ನೀಡುವ ನಿಟ್ಟಿನಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವಾಲಯದ ಫುಡ್ ಕ್ರಾಫ್ಟ್ ಸಂಸ್ಥೆ ಮೈಸೂರಿನಲ್ಲಿ ತರಬೇತಿ ಕೇಂದ್ರವನ್ನು ಆರಂಭಿಸುತ್ತಿದೆ ಎಂದು ಸಂಸ್ಥೆಯ ಉಪನ್ಯಾಸಕ ಜಗದೀಶ್ ತಿಳಿಸಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪ್ರವಾಸೋದ್ಯಮ ಸಚಿವಾಲಯ, ರಾಜ್ಯ ಪ್ರವಾಸೋದ್ಯಮ ಇಲಾಖೆ ಹಾಗೂ ನ್ಯಾಷನಲ್ ಕೌನ್ಸಿಲ್ ಫಾರ್ ಹೋಟೆಲ್ ಮ್ಯಾನೇಜ್ ಮೆಂಟ್ ಅಂಡ್ ಕೇಟರಿಂಗ್ ಟೆಕ್ನಾಲಜಿಯಿಂದ ಅನುಮೋದಿಸಲ್ಪಟ್ಟಿರುವ ಫುಡ್ ಕ್ರಾಪ್ಟ್ ಇನ್ಸ್ ಸ್ಟಿಟ್ಯೂಟ್ ಸೊಸೈಟಿಯು ಈ ತರಬೇತಿ ಕೇಂದ್ರ(ಕಾಲೇಜು)ವನ್ನು ಆರಂಭಿಸುತ್ತಿದೆ. ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಆರು ತಿಂಗಳ ಹಾಗೂ ಒಂದು ವರ್ಷದ ಡಿಪೆÇ್ಲಮಾ ಕೋರ್ಸ್‍ಗಳು ಮುಂದಿನ ಆಗಸ್ಟ್ ತಿಂಗಳಿನಿಂದ ಆರಂಭವಾಗ ಲಿದ್ದು, ಪಿಯುಸಿ ತೇರ್ಗಡೆಯಾದವರು ಅರ್ಜಿ ಸಲ್ಲಿಸಬಹುದು ಎಂದರು.

ಇದೇ ವೇಳೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಮಾತನಾಡಿ, ಹೋಟೆಲ್ ಉದ್ಯಮದಲ್ಲಿ ವಿಫುಲವಾದ ಉದ್ಯೋಗಾ ವಕಾಶವಿದೆ. 7 ಸಾವಿರದಿಂದ ರೂ.4 ಲಕ್ಷದವರೆಗೂ ವೇತನ ಪಡೆಯುವ ವಿವಿಧ ವಿಭಾಗಗಳ ಪರಿಣಿತರು ಇದ್ದಾರೆ. ಇಂದು ಹೋಟೆಲ್ ಉದ್ಯಮವನ್ನು ಸ್ನೇಹಮಯಿ ಗೊಳಿಸುವ ನಿಟ್ಟಿನಲ್ಲಿ ಉತ್ಕೃಷ್ಟ ತರಬೇತಿ ಅವಶ್ಯವಿದ್ದು, ಈ ಕಾಲೇಜಿನಿಂದ ಉತ್ತಮ ವಿದ್ಯಾರ್ಥಿಗಳು ಹೊರಹೊಮ್ಮುವ ಆಶಯವಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರು ಇದರ ಸದುಪಯೋಗಪಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಯಾವ ಯಾವ ತರಬೇತಿ : ಫುಡ್ ಪ್ರೊಡಕ್ಷನ್, ಬೇಕರಿ ಅಂಡ್ ಕನ್‍ಫೆಕ್ಷನರಿ, ಫುಡ್ ಅಂಡ್ ಬೆವರೇಜ್ ಸರ್ವೀಸ್, ಫ್ರಂಟ್ ಆಫೀಸ್ ಹಾಗೂ ಹೌಸ್ ಕೀಪಿಂಗ್ ವಿಭಾಗಗಳು ಸೇರಿದಂತೆ ರಾಜ್ಯ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಉಚಿತ ಕೋರ್ಸ್ ನಡೆಸಲಾಗುತ್ತಿದೆ. ಆಸಕ್ತರು ಪ್ರಾಂಶುಪಾಲರು, ಫುಡ್ ಕ್ರಾಫ್ಟ್ ಇನ್‍ಸ್ಟಿಟ್ಯೂಟ್, ಕನ್ನಡ ಕಾರಂಜಿ ಕಟ್ಟಡದ ಮೊದಲ ಮಹಡಿ, ದಸರಾ ವಸ್ತು ಪ್ರದರ್ಶನ ಆವರಣ, ದೊಡ್ಡಕರೆ ಮೈದಾನ, ಇಂದಿರಾನಗರ, ಮೈಸೂರು-570010 ಈ ವಿಳಾಸದಲ್ಲಿ ಅರ್ಜಿ ಸಲ್ಲಿಸಬಹುದು. ಮಾಹಿತಿಗಾಗಿ ದೂ.ಸಂ. 6362018821, 0821-2445388, 2974388 ಅನ್ನು ಸಂಪರ್ಕಿಸಬಹುದು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಪ್ರಾದೇಶಿಕ ವ್ಯವಸ್ಥಾಪಕ ಉದಯ್ ಕುಮಾರ್, ಫುಡ್ ಕ್ರಾಫ್ಟ್ ಇನ್ ಸ್ಟಿಟ್ಯೂಟ್ ಪ್ರಾಂಶುಪಾಲ ಪಿ.ಶ್ರೀಧರ್, ಮಹೇಶ್, ಕಾಮತ್ ಇದ್ದರು.

Translate »