ಮಂಚೇಗೌಡನ ಕೊಪ್ಪಲಿನಲ್ಲಿ ಮನೆಗಳ್ಳತನ
ಮೈಸೂರು

ಮಂಚೇಗೌಡನ ಕೊಪ್ಪಲಿನಲ್ಲಿ ಮನೆಗಳ್ಳತನ

August 22, 2019

ಮೈಸೂರು,ಆ.21(ಎಸ್‍ಪಿಎನ್)-ಕಿಟಕಿ ಮೂಲಕ ಮನೆ ಮುಂಬಾಗಿಲು ತೆರೆದು ಒಳ ನುಗ್ಗಿರುವ ಖದೀಮರು ಮನೆಯಲ್ಲಿದ್ದ ಮೊಬೈಲ್, ಲ್ಯಾಪ್‍ಟಾಪ್ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿರುವ ಘಟನೆ ಮಂಚೇಗೌಡನಕೊಪ್ಪಲಿನಲ್ಲಿ ನಡೆದಿದೆ.

ಇಲ್ಲಿನ ಪೂನಮ್ ಸನಾರ್ ಎಂಬು ವರ ಮನೆಯಲ್ಲಿ ಕಳ್ಳತನವಾಗಿದೆ. ಆ.19ರಂದು ಪೂನಮ್ ಸನಾರ್ ಕರ್ತವ್ಯ ಮುಗಿಸಿ ರಾತ್ರಿ ಮನೆಗೆ ಬಂದು ರೂಮ್‍ನಲ್ಲಿ ಮಲಗಿದ್ದಾರೆ. ತಡರಾತ್ರಿ ಒಳನುಗ್ಗಿರುವ ಖದೀಮ ಮನೆ ಯಲ್ಲಿದ್ದ ಮೊಬೈಲ್, ಲ್ಯಾಪ್‍ಟಾಪ್, ಪರ್ಸ್ ನಲ್ಲಿದ್ದ 5 ಸಾವಿರ ನಗದು ಹಾಗೂ ವಿವಿಧ ಬ್ಯಾಂಕ್‍ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳನ್ನು ಕಳವು ಮಾಡಿದ್ದಾನೆ. ಅಷ್ಟರಲ್ಲಿ ಮನೆಯ ಹೊರಗೆ ಯಾರೋ ಕೂಗಿ ಕೊಂಡಿದ್ದರಿಂದ ಎಚ್ಚರಗೊಂಡ ಪೂನಮ್, ಪರಿಶೀಲಿಸಿದಾಗ ಮನೆಯ ಹಾಲ್‍ನಲ್ಲಿದ್ದ ವಸ್ತುಗಳು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »