ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಓರ್ವನ ಬಂಧನ
ಮೈಸೂರು

ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಓರ್ವನ ಬಂಧನ

August 22, 2019

ಮೈಸೂರು, ಆ.21(ಎಸ್‍ಪಿಎನ್)-ಗೃಹ ಬಳಕೆ ಸಿಲಿಂಡರ್ ಬಳಸಿಕೊಂಡು ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ ಮಳಿಗೆ ಮೇಲೆ ದಾಳಿ ನಡೆಸಿ ಓರ್ವನನ್ನು ಬಂಧಿಸಿ ರುವ ಸಿಸಿಬಿ ಪೊಲೀಸರು, ಅಕ್ರಮಕ್ಕೆ ಬಳ ಸಿದ್ದ 20 ಸಿಲಿಂಡರ್ ಹಾಗೂ ಪರಿಕರ ಗಳನ್ನು ವಶಕ್ಕೆ ಪಡೆದಿದ್ದಾರೆ. ಮೈಸೂರಿನ ಕೆ.ಆರ್.ಮೊಹಲ್ಲಾದ ನಿವಾಸಿ ಗುಲ್ಷಾದ್ ಅಹಮದ್(49)ಬಂಧಿತ ಆರೋಪಿ. ಆ.21 ರಂದು ನಂಜು ಮಳಿಗೆ ಸರ್ಕಲ್ ಬಳಿಯ ಖಾದ್ರಿಯಾ ಮಸೀದಿ ಕಟ್ಟಡದಲ್ಲಿರುವ ಕೆಜಿಎನ್ ಗ್ಯಾಸ್ ಸ್ಟೌವ್ ಸೇಲ್ಸ್ & ಸರ್ವೀಸ್ ಅಂಗಡಿಯ ಮೇಲೆ ದಾಳಿ ಮಾಡಿದ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಕೃಷ್ಣರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Translate »