ವಸತಿ ಸಚಿವ ವಿ.ಸೋಮಣ್ಣ ಜನ್ಮದಿನ; ರಸ್ತೆಬದಿ  ವ್ಯಾಪಾರಿಗಳಿಗೆ ಕೊಡೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

ವಸತಿ ಸಚಿವ ವಿ.ಸೋಮಣ್ಣ ಜನ್ಮದಿನ; ರಸ್ತೆಬದಿ ವ್ಯಾಪಾರಿಗಳಿಗೆ ಕೊಡೆ, ಮಾಸ್ಕ್, ಸ್ಯಾನಿಟೈಸರ್ ವಿತರಣೆ

July 21, 2021

ಮೈಸೂರು,ಜು.20(ಪಿಎಂ)-ರಸ್ತೆಬದಿ ವ್ಯಾಪಾರಿಗಳಿಗೆ ಕೊಡೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಉಚಿತವಾಗಿ ವಿತರಿ ಸುವ ಮೂಲಕ ವಸತಿ ಸಚಿವರೂ ಆದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರ 70ನೇ ವರ್ಷದ ಜನ್ಮದಿನವನ್ನು ವಿ.ಸೋಮಣ್ಣ ಅಭಿಮಾನಿ ಗಳ ಬಳಗದ ವತಿಯಿಂದ ಮಂಗಳವಾರ ಅರ್ಥ ಪೂರ್ಣವಾಗಿ ಆಚರಿಸಲಾಯಿತು.

ಮೈಸೂರಿನ ದೇವರಾಜ ಮಾರುಕಟ್ಟೆ ಎದುರಿನ ಚಿಕ್ಕ ಗಡಿಯಾರ ವೃತ್ತದ ಬಳಿ ಯಲ್ಲಿ ಬಾಳೆಹಣ್ಣು, ನಿಂಬೆಹಣ್ಣು, ತರಕಾರಿ, ಚಾಪೆ ವ್ಯಾಪಾರ ಮಾಡುವ ರಸ್ತೆಬದಿ ವ್ಯಾಪಾರಿಗಳಿಗೆ ಕೊಡೆ, ಮಾಸ್ಕ್ ಮತ್ತು ಸ್ಯಾನಿಟೈಸರ್ ಅನ್ನು ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ ವಿತರಣೆ ಮಾಡಿದರು.
ಬಳಿಕ ಮಾತನಾಡಿದ ಅವರು, ನಮ್ಮೆ ಲ್ಲರ ನಾಯಕರು, ಹಿರಿಯ ಮುತ್ಸದ್ದಿ ರಾಜ ಕಾರಣಿ ಹಾಗೂ ಅಜಾತಶತ್ರುಗಳಾದ ವಿ.ಸೋಮಣ್ಣನವರಿಗೆ ಇಂದಿಗೆ 70 ವರ್ಷ ತುಂಬಿದೆ. ಅವರು ಕಳೆದ ದಸರಾ ಸಂದರ್ಭ ದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ರಾಗಿ ತುಂಬಾ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸಿ, ದಸರಾ ಮಹೋತ್ಸವ ಯಶಸ್ವಿ ಯಾಗಿ ಜರುಗಲು ಕಾರಣರಾದರು ಎಂದು ಸ್ಮರಿಸಿದರು.

ಕಳೆದ 25 ವರ್ಷಗಳ ಹಿಂದೆ ವಿ.ಸೋಮಣ್ಣ ಅಭಿಮಾನಿಗಳ ಬಳಗ ಉದ್ಘಾಟನೆಗೊಂ ಡಿತು. ಈ ದಿನ ಬಳಗದ ವತಿಯಿಂದ ಕೊಡು ತ್ತಿರುವ ಕೊಡೆ ಬಿಸಿಲು ಮತ್ತು ಮಳೆ ನಡುವೆ ವ್ಯಾಪಾರ ಮಾಡುತ್ತಿರುವವರು ರಕ್ಷಣೆ ಪಡೆ ಯಲು ಅನುಕೂಲವಾಗಲಿದೆ ಎಂದರ ಲ್ಲದೆ, ವ್ಯಾಪಾರ ಮಾಡುವ ಸಂದರ್ಭ ದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ವ್ಯಾಪಾರಿಗಳಲ್ಲಿ ಮನವಿ ಮಾಡಿದರು.

ವಿ.ಸೋಮಣ್ಣ ಅಭಿಮಾನಿ ಬಳಗದ ಸಂಚಾಲಕ ಕೇಬಲ್ ಮಹೇಶ್ ಮಾತನಾಡಿ, ಕಳೆದ ವರ್ಷ ದಸರಾ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ವಿ.ಸೋಮಣ್ಣನವರು ಸಕಾಲದಲ್ಲಿ ಕಲಾವಿದ ರಿಗೆ ಸಂಭಾವನೆ ದೊರಕಿಸಿಕೊಟ್ಟು ಮೆಚ್ಚು ಗೆಗೆ ಪಾತ್ರರಾದರು. ಜೊತೆಗೆ ಯಾವುದೇ ಅಡೆತಡೆ ಮತ್ತು ಗೊಂದಲಗಳಿಲ್ಲದೆ, ಸುಗಮವಾಗಿ ದಸರಾ ಮಹೋತ್ಸವ ಜರುಗಲು ಶ್ರಮಿಸಿದರು ಎಂದರು.

ಸೋಮಣ್ಣನವರು ತಮ್ಮ ಸುದೀರ್ಘ ರಾಜ ಕೀಯ ಜೀವನದಲ್ಲಿ ಎಲ್ಲರ ವಿಶ್ವಾಸದೊಂ ದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿ ಕರ ಸಮಸ್ಯೆಗಳ ಬಗೆಹರಿಸುವ ಬದ್ಧತೆ ಹೊಂದಿದ್ದಾರೆ. ಅವರಿಗೆ ಶುಭವಾಗಲಿ ಎಂದು ಹಾರೈಸಿದರು. ಬಿಜೆಪಿ ನಗರ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಜೋಗಿ ಮಂಜು, ಬಿಜೆಪಿ ಮಾಧ್ಯಮ ಸಹ ಸಂಚಾ ಲಕ ಪ್ರದೀಪ್‍ಕುಮಾರ್, ವಿ.ಸೋಮಣ್ಣ ಅಭಿಮಾನಿ ಬಳಗದ ಸುಚೀಂದ್ರ, ಮುಖಂಡ ರಾದ ರೇಣುಕಾರಾಜ, ಪ್ರಮೋದ್‍ಗೌಡ, ಮಂಜುನಾಥ್, ನವೀನ್, ಶಂಭು ಪಾಟೀಲ್, ಭರತ್ ಮತ್ತಿತರರು ಹಾಜರಿದ್ದರು.

Translate »