ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: 92 ಕಂಪನಿಗಳು ಭಾಗಿ; 1,171 ಮಂದಿಗೆ ಉದ್ಯೋಗ ಭಾಗ್ಯ
ಮೈಸೂರು

ಕರ್ನಾಟಕ ರಾಜ್ಯ ಮುಕ್ತ ವಿವಿ ಆವರಣದಲ್ಲಿ ಬೃಹತ್ ಉದ್ಯೋಗ ಮೇಳ: 92 ಕಂಪನಿಗಳು ಭಾಗಿ; 1,171 ಮಂದಿಗೆ ಉದ್ಯೋಗ ಭಾಗ್ಯ

April 8, 2022

ಮೈಸೂರು, ಏ.7(ಆರ್‍ಕೆಬಿ)- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‍ಒಯು) ಆವರಣದಲ್ಲಿ ಗುರುವಾರ ನಡೆದ ಬೃಹತ್ ಉದ್ಯೋಗ ಮೇಳದಲ್ಲಿ 92ಕ್ಕೂ ಹೆಚ್ಚು ವಿವಿಧ ಕಂಪನಿಗಳು ಪಾಲ್ಗೊಂಡಿದ್ದು, 5036 ಉದ್ಯೋಗಾಕಾಂಕ್ಷಿಗಳು ಭಾಗವಹಿ ಸಿದ್ದರು. ಈ ಪೈಕಿ 1,171 ಮಂದಿಗೆ ಸ್ಥಳ ದಲ್ಲೇ ಉದ್ಯೋಗ ಪತ್ರ ವಿತರಿಸಲಾಯಿತು.

ಮುಕ್ತ ವಿವಿ ಆವರಣ ಇಂದು ಪೂರ್ಣ ಉದ್ಯೋಗಾಕಾಂಕ್ಷಿಗಳಿಂದಲೇ ತುಂಬಿ ತುಳುಕಿತ್ತು. ಉದ್ಯೋಗ ಅರಸಿ ಬಂದಿದ್ದ ಅಭ್ಯರ್ಥಿಗಳು ತಮಗಿಷ್ಟವಾದ ಕಂಪನಿಗಳಲ್ಲಿ ಹೆಸರು ನೋಂದಾಯಿಸಿಕೊಂಡು ಸ್ಥಳ ದಲ್ಲಿಯೇ ಸಂದರ್ಶನವನ್ನು ಎದುರಿಸಿ ದರು. ಈ ಪೈಕಿ 1,171 ಮಂದಿ ಉದ್ಯೋಗ ಪತ್ರದೊಂದಿಗೆ ಹಿಂತಿರುಗಿದರು.

ಇಂಡಿಯನ್ ಆರ್ಮಿ, ಪ್ಯಾಲೇಸ್ ಹೋಂಡಾ, ಅಪೆÇಲೊ ಹೋಮ್ ಹೆಲ್ತ್‍ಕೇರ್, ಟಿವಿಎಸ್ ಮೋಟಾರ್ಸ್, ಟೊಯೊಟಾ ಕಿರ್ಲೋಸ್ಕರ್, ಎಲ್‍ಐಸಿ, ವಿಪೆÇ್ರೀ ಜಿಇ, ಕೋಟಾಕ್ ಮಹೀಂದ್ರಾ, ಇಂಡಿಯಾ ಮಾರ್ಟ್, ಸಹಾರಾ, ಎಚ್‍ಡಿಎಫ್‍ಸಿ ಬ್ಯಾಂಕ್, ಏರ್‍ಟೆಲ್, ಸ್ಟಾರ್ ಹೆಲ್ತ್ ಇನ್ಷೂರೆನ್ಸ್, ರಾಣಿ ಮದ್ರಾಸ್, ಜೆ.ಕೆ.ಟೈರ್ಸ್, ಎಜುಕೇಟ್ ಐಟಿಇಎಸ್, ಇನ್ಸ್‍ಸ್ಪೈರ್ ಹೋಂಡಾ ಇತ್ಯಾದಿ ಕಂಪನಿಗಳು ಅಭ್ಯರ್ಥಿಗಳನ್ನು ಅರಸಿ ಕೌಂಟರ್‍ಗಳನ್ನು ಇಟ್ಟಿದ್ದವು. ಈ ಎಲ್ಲಾ ಕೌಂಟರ್‍ಗಳಲ್ಲೂ ಉದ್ಯೋಗಾ ಕಾಂಕ್ಷಿಗಳು ಸರತಿಯ ಸಾಲಿನಲ್ಲಿ ನಿಂತು ತಮ್ಮ ಬಯೋಡೆಟಾ ನೀಡಿದರು.

ಸೂಕ್ತ ಉದ್ಯೋಗಾಕಾಂಕ್ಷಿಗಳನ್ನು ಆಯ್ಕೆ ಮಾಡಲು ಕಂಪನಿಗಳು ಅನೇಕ ಕೌಂಟರ್‍ಗಳನ್ನು ತೆರೆದಿದ್ದವು. ಅವರೆಲ್ಲರೂ ಅರ್ಹತೆ, ಕೌಶಲ್ಯ ಮತ್ತು ನಿರೀಕ್ಷಿತ ಉದ್ಯೋಗಿಗಳು ಸಂಪಾದಿಸಿದ ಜ್ಞಾನದ ಆಧಾರದ ಮೇಲೆ ಸ್ಥಳದಲ್ಲೇ ನೋಂದಣಿ ಮಾಡಿಕೊಂಡರು. ಇದನ್ನು ಹೊರತು ಪಡಿಸಿ, ಎಲ್ಲಾ ಕಂಪನಿಗಳು ಆನ್‍ಲೈನ್ ನೋಂದಣಿಯನ್ನೂ ನಡೆಸಿದವು.

ಮೈಸೂರು ಜಿಲ್ಲಾಡಳಿತ, ಕೌಶಲ್ಯಾ ಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋ ಪಾಯ ಇಲಾಖೆ (Sಆಇಐ), ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮತ್ತು ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ ಜಂಟಿ ಆಶ್ರಯದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿತ್ತು.

ಕೌಶಲ್ಯ ಕೊರತೆ ಗುರ್ತಿಸಿ ಸೂಕ್ತ ತರಬೇತಿ -ಸಚಿವ ಅಶ್ವತ್ಥನಾರಾಯಣ: ಇದಕ್ಕೂ ಮುನ್ನ ಕರಾಮುವಿ ಘಟಿಕೋತ್ಸವ ಸಭಾಂಗಣದಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವಥ್‍ನಾರಾಯಣ್ ಉದ್ಯೋಗ ಮೇಳವನ್ನು ಉದ್ಘಾಟಿಸಿದರು. ಇದೇ ವೇಳೆ ಅವರು, ಆನ್‍ಲೈನ್ ಆಧಾರಿತ ಕರಾಮುವಿ ರೇಡಿಯೋ ಮತ್ತು ಆಡಿಯೋ- ವೀಡಿಯೋ ಸ್ಟುಡಿಯೋ, ಮುಕ್ತ ವಿವಿ ಆವರಣದಲ್ಲಿ ನವೀಕೃತ ಕಟ್ಟಡವನ್ನು ಸಹ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉದ್ಯೋಗ ಮಾರುಕಟ್ಟೆಯು ನುರಿತ ಕೆಲಸಗಾರರನ್ನು ಬಯಸುತ್ತದೆ. ವಿದೇಶಿ ನೆಲದಲ್ಲಿಯೂ ಕೌಶಲ್ಯ ಸಂಪನ್ಮೂಲಗಳಿಗೆ ಬೇಡಿಕೆಯಿದೆ. ಕರ್ನಾಟಕದಲ್ಲಿ ಪ್ರತಿ ವರ್ಷ 75,000 ಯುವಕರಿಗೆ ವಿವಿಧ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುತ್ತಿದ್ದು, ಈ ಸಂಖ್ಯೆಯನ್ನು ಮುಂದೆ 2.5 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದರು.ಉದ್ಯೋಗ ಮೇಳದಲ್ಲಿ ಆಯ್ಕೆಯಾಗದ ಅಭ್ಯರ್ಥಿಗಳ ಕುರಿತು ಅವರನ್ನು ಏಕೆ ನಿರಾಕರಿಸಲಾಯಿತು ಎಂಬ ಬಗ್ಗೆ ಕಂಪನಿ ಗಳಿಂದ ಮಾಹಿತಿ ಪಡೆದು ಅವರಿಗೆ ಕೌಶಲ್ಯಗಳ ಕೊರತೆ ಇದ್ದರೆ, ಅಗತ್ಯ ಕೌಶಲ್ಯ ತರಬೇತಿ ನೀಡಿ, ಭವಿಷ್ಯದಲ್ಲಿ ಅವರಿಗೂ ಉದ್ಯೋಗ ಪಡೆಯಲು ಸಹಾಯ ಮಾಡಲಾಗುತ್ತದೆ ಎಂದು ಹೇಳಿದರು. ಕರ್ನಾಟಕವೊಂದರಲ್ಲೇ 1.5 ಲಕ್ಷ ಐಟಿಐ ಸೀಟುಗಳಿದ್ದು, 75 ಸಾವಿರ ಪಾಲಿಟೆಕ್ನಿಕ್ ಸೀಟುಗಳಿವೆ. ಐಟಿಐ, ಪಾಲಿಟೆಕ್ನಿಕ್‍ಗಳಿಗೆ ಉದ್ಯೋಗ ಖಾತ್ರಿ ನೀಡುತ್ತಿದ್ದರೂ ನಿರೀಕ್ಷಿತ ರೀತಿಯಲ್ಲಿ ವಿದ್ಯಾರ್ಥಿಗಳು ಸೇರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕರ್ನಾಟಕಕ್ಕೆ ಉಜ್ವಲ ಭವಿಷ್ಯ ಸೃಷ್ಟಿಸಲು ಸರ್ಕಾರವು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಗುಣಮಟ್ಟದ ಮತ್ತು ಹೊಂದಿಕೊಳ್ಳುವ ಕಲಿಕೆಯ ಅವಕಾಶಗಳನ್ನು ನೀಡುತ್ತದೆ. ಈ ಮೂಲಕ ಕರ್ನಾಟಕದಲ್ಲಿ ತರಬೇತಿ ಪಡೆದವರಿಗೆ ಉದ್ಯೋಗ ಖಾತ್ರಿ ಇದೆ ಎಂಬಂತೆ ಮಾಡಲಾಗುವುದು. ಒಂದು ವೇಳೆ ಉದ್ಯೋಗ ದೊರಕದಿರುವವರಿಗೆ ನುರಿತ ಉದ್ಯಮಿಗಳಾಗಲು ಅವಕಾಶವಿದೆ ಎಂಬ ಬಗ್ಗೆಯೂ ತರಬೇತಿ ನೀಡಲಾಗುವುದು. ಮುಂದೆ ಅವರು ಉದ್ಯಮಿಗಳಾಗಿ ಒಂದಷ್ಟು ಜನರಿಗೆ ಉದ್ಯೋಗ ನೀಡುವಂತಾಗಲು ಅವಕಾಶವಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಡಾ.ಸುಧಾಕರ ಹೊಸಳ್ಳಿ ಬರೆದ ಪುಸ್ತಕವನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್‍ನಾರಾಯಣ್ ಬಿಡುಗಡೆ ಮಾಡಿದರು. ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಶಾಸಕ ಎಸ್.ಎ. ರಾಮದಾಸ್, ಕರಾಮುವಿ ಕುಲಪತಿ ಡಾ.ವಿದ್ಯಾಶಂಕರ್, ಕಾಡಾ ಅಧ್ಯಕ್ಷ ಎನ್. ಶಿವಲಿಂಗಯ್ಯ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೃಷ್ಣಪ್ಪ, ಮೈಲ್ಯಾಕ್ ಅಧ್ಯಕ್ಷ ಎನ್.ವಿ.ಫಣೀಶ್, ಮುಡಾ ಅಧ್ಯಕ್ಷ ಎಚ್.ವಿ.ರಾಜೀವ್, ಮೇಯರ್ ಸುನಂದಾ ಪಾಲನೇತ್ರ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‍ಕುಮಾರ್ ಗೌಡ, ಕರ್ನಾಟಕ ರಾಜ್ಯ ಕೌಶಲ್ಯ ಅಭಿ ವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್‍ಗೌಡ ಇನ್ನಿತರರು ಉಪಸ್ಥಿತರಿದ್ದರು.

Translate »