ಮಾರ್ಗಸೂಚಿ ಉಲ್ಲಂಘಿಸಿದ ವಾಹನಗಳ ಮಾನವೀಯ  ದೃಷ್ಟಿಯಿಂದ ಬಿಡುಗಡೆಗೆ  ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ
ಮೈಸೂರು

ಮಾರ್ಗಸೂಚಿ ಉಲ್ಲಂಘಿಸಿದ ವಾಹನಗಳ ಮಾನವೀಯ ದೃಷ್ಟಿಯಿಂದ ಬಿಡುಗಡೆಗೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ

June 11, 2021

ಮೈಸೂರು, ಜೂ.10- ಲಾಕ್‍ಡೌನ್ ಮಾರ್ಗಸೂಚಿ ಉಲ್ಲಂಘನೆ ಆರೋಪದಡಿ ವಾಹನ ಮಾಲೀಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಹಿಂಪಡೆದು, ದಂಡ ರಹಿತವಾಗಿ ವಾಹನಗಳನ್ನು ಬಿಡುಗಡೆ ಮಾಡುವಂತೆ ಮಾಜಿ ಮೇಯರ್ ಸಂದೇಶ್ ಸ್ವಾಮಿ ಮನವಿ ಮಾಡಿದ್ದಾರೆ.
ಲಾಕ್‍ಡೌನ್ ಸಂದರ್ಭದಲ್ಲಿ ರಾಜ್ಯಾದ್ಯಂತ ಲಕ್ಷಾಂತರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ನಿಯಮ ಉಲ್ಲಂಘನೆಯಡಿ ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇವರೆಲ್ಲರೂ ಅನಗತ್ಯವಾಗಿ ಓಡಾಡು ತ್ತಿದ್ದರು ಎಂದು ನಿರ್ಣಯಿಸಲಾಗಿದೆ. ಆದರೆ ಲಾಕ್‍ಡೌನ್ ಸಂದರ್ಭದಲ್ಲೂ ಅತ್ಯಗತ್ಯ ಸೇವೆಗಳಿಗೆ ವಿನಾಯ್ತಿ ನೀಡಲಾಗಿತ್ತು.

ಹಾಗಾಗಿ ಆಸ್ಪತ್ರೆ, ಮೆಡಿಕಲ್ಸ್, ಹಾಲಿನ ಕೇಂದ್ರಗಳಿಗೆ ಹೋಗುತ್ತಿದ್ದವರು, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಕೊಳ್ಳಲು ತೆರಳುತ್ತಿದ್ದವರು, ರೈತರು ಹೀಗೆ ಅಗತ್ಯ ಕೆಲಸ ನಿಮಿತ್ತ ಓಡಾಡುತ್ತಿದ್ದವರ ಪೊಲೀಸರು ತಡೆದು ನಿಲ್ಲಿಸಿ, ಸೂಕ್ತ ದಾಖಲೆ ತೋರಿಸಿಲ್ಲ ಎಂಬ ಕಾರಣಕ್ಕೆ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಪೊಲೀಸರ ವಶದಲ್ಲಿರುವ ವಾಹನಗಳನ್ನು ದಂಡ ಕಟ್ಟಿಸಿಕೊಂಡು ಬಿಡುಗಡೆ ಮಾಡು ವಂತೆ ಇತ್ತೀಚೆಗೆ ಹೈಕೋರ್ಟ್ ಸೂಚಿಸಿರುವುದು ಸ್ವಾಗತಾರ್ಹ. ಆದರೆ ಕೊರೊನಾ ದಿಂದ ತೀವ್ರ ಸಂಕಷ್ಟದಲ್ಲಿರುವ ಬಡ ಜನ ದೈನಂದಿನ ಜೀವನ ನಿರ್ವಹಣೆಗೆ ಪರದಾ ಡುತ್ತಿದ್ದಾರೆ. ಅದೆಷ್ಟೋ ಜನ ಒಂದು ಹೊತ್ತಿನ ಊಟಕ್ಕೂ ಪರಿತಪಿಸುವ ಪರಿಸ್ಥಿತಿಯಲ್ಲಿ ದ್ದಾರೆ. ನಿಯಮ ಉಲ್ಲಂಘನೆ ಸರಿ ಎಂದು ಹೇಳುವುದಿಲ್ಲ. ಆದರೆ ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಬಡವರಿಂದ ನೂರಾರೂ ರೂ. ದಂಡ ವಸೂಲಿ ಮಾಡಿ ಗಾಯದ ಮೇಲೆ ಬರೆ ಎಳೆದಂತೆ. ಸರ್ಕಾರ 2 ಬಾರಿ ನೂರಾರು ಕೋಟಿ ರೂ. ಪರಿಹಾರ ಪ್ಯಾಕೇಜ್ ನೀಡಿ ಬಡವರು, ಶ್ರಮಿಕ ವರ್ಗಕ್ಕೆ ನೆರವಾಗಿದೆ. ಹೀಗೆಯೇ ತಿಳಿದೋ ತಿಳಿಯದೆಯೋ ನಿಯಮ ಉಲ್ಲಂಘಿಸಿರುವ ವಾಹನ ಮಾಲೀಕರು, ಸವಾರರನ್ನು ಮಾನವೀಯ ನೆಲೆಗಟ್ಟಿ ನಲ್ಲಿ ಮನ್ನಿಸಿ, ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಬೇಕು. ಈ ಬಗ್ಗೆ ನ್ಯಾಯಾ ಲಯದ ಗಮನಕ್ಕೆ ತಂದು ಯಾವುದೇ ರೀತಿಯ ದಂಡ ಪಾವತಿಸಿಕೊಳ್ಳದೆ ವಾಹನಗಳನ್ನು ಬಿಡುಗಡೆ ಮಾಡಬೇಕೆಂದು ಗೃಹಸಚಿವರಲ್ಲಿ ಕೋರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Translate »