ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ  ವಿಶೇಷ ಚೇತನರಿಗೆ ಸಾವಿರ ದಿನಸಿ ಕಿಟ್
ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಿಂದ ವಿಶೇಷ ಚೇತನರಿಗೆ ಸಾವಿರ ದಿನಸಿ ಕಿಟ್

June 11, 2021

ಮೈಸೂರು,ಜೂ.10(ಪಿಎಂ)- ಮೈಸೂ ರಿನ ನಂಜನಗೂಡು ರಸ್ತೆಯ ದತ್ತನಗರದ ಅವಧೂತ ದತ್ತಪೀಠ ಶ್ರೀಗಣಪತಿ ಸಚ್ಚಿದಾ ನಂದ ಆಶ್ರಮದ ವತಿಯಿಂದ ಮೈಸೂರು ಜಿಲ್ಲೆಯ ಸಾವಿರ ವಿಶೇಷಚೇತನರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಕೋವಿಡ್ ಲಸಿಕೆ ಪಡೆಯಲು ವಿಶೇಷ ಚೇತನರಿಗೆ ಉತ್ತೇಜನ ನೀಡಲು ಉದ್ದೇಶಿ ಸಿದ್ದು, ಲಸಿಕೆ ಪಡೆಯುವ ವಿಶೇಷಚೇತ ರಿಗೆ ಒಂದು ತಿಂಗಳಿಗೆ ಆಗುವಷ್ಟು 5 ಕೆಜಿ ಅಕ್ಕಿ ಸೇರಿದಂತೆ ಇತರೆ ದಿನಸಿ ಪದಾರ್ಥಗಳನ್ನು ಒಳಗೊಂಡಿರುವ ಕಿಟ್ ಗಳನ್ನು ನೀಡಲಾಗುತ್ತದೆ.

ಆಶ್ರಮದ ಲಕ್ಷ್ಮಿನರಸಿಂಹ ಕುಟೀರ ಸಭಾಂ ಗಣದಲ್ಲಿ ಗುರುವಾರ ಆಶ್ರಮದ ಸಂಸ್ಥಾ ಪಕ ಪೀಠಾಧ್ಯಕ್ಷರಾದ ಶ್ರೀಗಣಪತಿ ಸಚ್ಚಿದಾ ನಂದ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಮೈಸೂರು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಆರ್. ಮಾಲಿನಿ ಅವರಿಗೆ ದಿನಸಿ ಕಿಟ್‍ಗಳನ್ನು ಹಸ್ತಾಂತರ ಮಾಡಲಾಯಿತು. ಅಲ್ಲದೆ, ಸಾಂಕೇತಿಕವಾಗಿ ನಾಲ್ವರು ವಿಶೇಷಚೇತ ರಿಗೆ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಆ ಮೂಲಕ ಲಸಿಕೆ ಪಡೆದ ವಿಶೇಷ ಚೇತನರಿಗೆ ದಿನಸಿ ಕಿಟ್ ನೀಡುವ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.
ಇದೇ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ಕೋವಿಡ್ ಲಸಿಕೆ ಸಂಬಂಧ ಅಪ ಪ್ರಚಾರ ಮಾಡಿದ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಈ ಲಸಿಕೆ ಪಡೆದರೆ ದಂಪತಿಗೆ ಮಕ್ಕಳು ಆಗುವುದಿಲ್ಲ ಎಂಬುದು ಸೇರಿದಂತೆ ನಾನಾ ರೀತಿಯಲ್ಲಿ ಅಡ್ಡಪರಿಣಾಮ ಉಂಟಾಗು ತ್ತದೆ ಎಂಬ ವದಂತಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಅನೇಕರು ನನ್ನನ್ನೂ ಸಂಪರ್ಕಿಸಿ `ಅಡ್ಡ ಪರಿಣಾಮ ಉಂಟಾಗುವುದು ನಿಜವೇ ಸ್ವಾಮೀಜಿ’ ಎಂದು ಕೇಳಿದ್ದರು. ನಾನೇ ಲಸಿಕೆ ಪಡೆದಿದ್ದು, ಅವುಗಳೆಲ್ಲಾ ಸುಳ್ಳು ಸುದ್ದಿಗಳು ಎಂಬುದನ್ನು ಅವರಿಗೆ ಸ್ಪಷ್ಟಪಡಿಸಿದ್ದೆ. ವಿಶೇಷ ಚೇತನರಿಗೆ ದತ್ತಪೀಠದ ಪ್ರಸಾದವಾಗಿ ದಿನಸಿ ಕಿಟ್‍ಗಳನ್ನು ನೀಡಲಾಗುತ್ತಿದೆ ಎಂದರು.

ಶ್ರೀಗಳಿಗೆ ಭಕ್ತಿಪೂರ್ವಕ ಕೃತಜ್ಞತೆ: ಆರ್. ಮಾಲಿನಿ ಮಾತನಾಡಿ, ವಿಶೇಷಚೇತನರಲ್ಲಿ ಬಹುತೇಕ ಮಂದಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವುದಿದೆ. ಅವರ ಮನೆ ಮನೆಗೆ ಭೇಟಿ ನೀಡಿ, ಲಸಿಕೆ ಪಡೆಯಲು ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ದಲ್ಲಿ ಹಲವರು `ನಮಗೆ ಊಟ ಕೊಟ್ಟರೇ ಲಸಿಕೆ ಹಾಕಿಸಿಕೊಳ್ಳುತ್ತೇವೆ’ ಎಂದು ಹೇಳಿ ದ್ದರು. ಆಗ ಇವರಿಗೆ ದಿನಸಿ ಕಿಟ್ ಕೊಡಿ ಸುವ ಆಲೋಚನೆ ಬಂದಿತು. ಈ ಹಿನ್ನೆಲೆ ಯಲ್ಲಿ ಶ್ರೀಗಳನ್ನು ಸಂಪರ್ಕ ಮಾಡಲಾ ಯಿತು. ಶ್ರೀಗಳು ತಕ್ಷಣ ಸ್ಪಂದಿಸಿ, ಕಿಟ್ ಗಳನ್ನು ಇಂದು ಕಲ್ಪಿಸಿದ್ದಾರೆ. ಶ್ರೀಗಳಿಗೆ ಭಕ್ತಿಪೂರ್ವಕ ಕೃತಜ್ಞತೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಕೋವಿಡ್ ಲಸಿಕೆ ಅಭಿಯಾನ ಆರಂಭವಾದ ಸಂದರ್ಭ ದಲ್ಲಿ ಕೋವಿಡ್ ವಾರಿಯರ್ಸ್‍ಗೆ ಲಸಿಕೆ ನೀಡು ವಲ್ಲಿ ಮೈಸೂರು ರಾಜ್ಯದಲ್ಲಿ ಮೊದಲ ಸ್ಥಾನ ದಲ್ಲಿತ್ತು. 60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಾಗಲೂ ಮೈಸೂರು ಮುಂಚೂಣಿ ಯಲ್ಲಿತ್ತು. ಆದಾಗ್ಯೂ ಈ ನಡುವೆ ಇಡೀ ದೇಶದಲ್ಲಿ ಲಸಿಕೆ ಬಗ್ಗೆ ಅಪಪ್ರಚಾರವೂ ನಡೆಯಿತು. ಈ ಹಿನ್ನೆಲೆಯಲ್ಲಿ ದೇಶದಲ್ಲಿ ಲಸಿಕೆ ಅಭಿಯಾನಕ್ಕೆ ಸ್ಪಂದನೆ ಸಮರ್ಪಕ ವಾಗಿ ದೊರೆಯದೇ ಬೇಡಿಕೆ ಇಟ್ಟ ವಿದೇಶ ಗಳಿಗೆ ಕೊಡಬೇಕಾದ ಅನಿವಾರ್ಯತೆ ಎದುರಾಯಿತು ಎಂದರು.

ತಡವಾಗಿಯಾದರೂ ಲಸಿಕೆ ಉಪಯೋಗ ಮನದಟ್ಟು ಆಯಿತು. ಎರಡನೇ ಅಲೆಯಲ್ಲಿ ಸೋಂಕಿತರ ಸರ್ವೇ ನಡೆಸಿದಾಗ ಲಸಿಕೆ ಪಡೆದವರಲ್ಲಿ ಶೇ.90ರಷ್ಟಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ತಗುಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿತು. ಅಂದು ಲಸಿಕೆ ಬಗ್ಗೆ ಅಪ ನಂಬಿಕೆ ವ್ಯಕ್ತಪಡಿಸಿದವರೇ ಈಗ ದೇಶದಲ್ಲಿ ಲಸಿಕೆ ನೀಡದೇ ವಿದೇಶಕ್ಕೆ ಕೊಟ್ಟಿದ್ದೇಕೇ? ಎಂದು ಪ್ರಶ್ನಿಸುತ್ತಿದ್ದಾರೆ ಎಂದು ಟೀಕಿಸಿ ದರು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿ ಹೆಚ್.ವಿ.ಪ್ರಸಾದ್, ಆಶ್ರಮದ ಟ್ರಸ್ಟಿಗಳೂ ಆದ ಖ್ಯಾತ ಮೂಳೆ ತಜ್ಞವೈದ್ಯ ಡಾ.ಎನ್.ನಿತ್ಯಾನಂದ ರಾವ್, ಕಾಮಾಕ್ಷಿ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಶೆಣೈ, ಮೈಸೂರು ಎಪಿಎಂಸಿ ಅಧ್ಯಕ್ಷ ಬಸವರಾಜು ಮತ್ತಿತರರು ಹಾಜರಿದ್ದರು.

Translate »