ಬೆಚ್ಚಿಬಿದ್ದ ಹಾಸನ ಜನತೆ
ಹಾಸನ,ಅ.31-ಹೊಳೆನರಸೀಪುರದ ಕೊಂಗಲುಬೀಡು ಗ್ರಾಮದ ಕ್ರೂರಿ ಪತಿಯೊಬ್ಬ ಹಳ್ಳಿಮೈಸೂರು ರಸ್ತೆಯಲ್ಲೇ ಶನಿವಾರ ತನ್ನ ಪತ್ನಿಯ ಕತ್ತುಸೀಳಿ ಬರ್ಬರವಾಗಿ ಕೊಂದು ಹಾಕಿದ್ದಾನೆ. ದುರ್ಘಟನೆ ಕಂಡು ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಶಾಲಿನಿ ಕೊಲೆಯಾದ ದುರ್ದೈವಿ. ಪತಿ ಪುನೀತ್ ಕೊಲೆ ಆರೋಪಿ. ದಂಪತಿಗೆ 1 ವರ್ಷದ ಗಂಡು ಮಗು ಇದೆ. ಹೊಳಬಿಲ್ಲೆನಹಳ್ಳಿಯ ಶಾಲಿನಿ ಯನ್ನು 2 ವರ್ಷಗಳ ಹಿಂದೆ ಕವಿನ ಕೋಟೆ ಗ್ರಾಮದ ಪುನೀತ್‍ಗೆ ಮದುವೆ ಮಾಡಿಕೊಡಲಾಗಿತ್ತು. ಕೊಂಗಲು ಬೀಡುಗ್ರಾಮದ ಹಳ್ಳಿಮೈಸೂರು ರಸ್ತೆ ಮಧ್ಯೆ ಪತ್ನಿಯೊಂದಿಗೆ ಗಲಾಟೆ ಮಾಡುತ್ತಿದ್ದ ಪುನೀತ್, ಮಾರಕಾಸ್ತ್ರದಿಂದ ಹೆಂಡತಿಯ ಕುತ್ತಿಗೆಯನ್ನೇ ಸೀಳಿದ್ದಾನೆ. ಈ ವೇಳೆ ಶಾಲಿನಿಯ ರಕ್ಷಣೆಗೆ ಬಂದ ಗ್ರಾಮಸ್ಥರ ಮೇಲೂ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ. ತೀವ್ರ ರಕ್ತಸ್ರಾವವಾಗಿ ಶಾಲಿನಿ ಸ್ಥಳದಲ್ಲೇ ಕೊನೆಯುಸಿ ರೆಳೆದಳು. ಆರೋಪಿ ಪುನೀತ್ ತಪ್ಪಿಸಿಕೊಳ್ಳದಂತೆ ಹಿಡಿದು ಪೆÇಲೀಸರಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು