ಮೈಸೂರು, 31(ವೈಡಿಎಸ್)- ಮೈಸೂರು ಜಿಲ್ಲೆಯಲ್ಲಿ ಶನಿವಾರ 161 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯ ಒಟ್ಟು ಸೋಂಕಿತರ ಸಂಖ್ಯೆ 47,684ಕ್ಕೆ ಏರಿಕೆಯಾಗಿದೆ. 307 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 45,093 ಮಂದಿ ಗುಣಮುಖರಾದಂತಾಗಿದೆ. ಇನ್ನೂ 1,633 ಜನರಲ್ಲಿ ಸೋಂಕು ಸಕ್ರಿಯವಾಗಿದೆ. ಇಂದು ಇಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈವರೆಗೆ ಒಟ್ಟು 958 ಮಂದಿ ಸೋಂಕಿಗೆ ಬಲಿಯಾದಂತಾಗಿದೆ.
ರಾಜ್ಯದ ವಿವರ: ರಾಜ್ಯದಲ್ಲಿ ಶನಿವಾರ 3,014 ಮಂದಿಗೆ ಸೋಂಕು ತಗುಲಿದ್ದು, ಈವರೆಗಿನ ಒಟ್ಟು ಸೋಂಕಿತರ ಸಂಖ್ಯೆ 8,23,412ಕ್ಕೆ ಏರಿದೆ. ಇಂದು 7,468 ಮಂದಿ ಗುಣಮುಖರಾಗಿ ಬಿಡುಗಡೆ ಯಾಗಿದ್ದಾರೆ. ಇದರಿಂದ ಈವರೆಗೆ 7,57,208 ಮಂದಿ ಸೋಂಕು ಮುಕ್ತರಾ ದಂತಾಗಿದೆ. ಮೈಸೂರಿನ ಇಬ್ಬರು ಸೇರಿದಂತೆ ರಾಜ್ಯದಲ್ಲಿ ಇಂದು 28 ಮಂದಿ ಕೋವಿಡ್‍ನಿಂದ ಸಾವನ್ನಪ್ಪಿದ್ದಾರೆ. ಇದು ವರೆಗೆ 11,168 ಮಂದಿ ಕೋವಿಡ್‍ಗೆ ಬಲಿಯಾ ದಂತಾಗಿದೆ. ಸದ್ಯ ರಾಜ್ಯದಲ್ಲಿ ಇನ್ನೂ 55,017 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು: ಬಾಗಲಕೋಟೆ 24, ಬಳ್ಳಾರಿ 70, ಬೆಳಗಾವಿ 35, ಬೆಂಗಳೂರು ಗ್ರಾಮಾಂತರ 44, ಬೆಂಗ ಳೂರು ನಗರ 1,621, ಬೀದರ್ 3, ಚಾಮರಾಜನಗರ 28, ಚಿಕ್ಕಬಳ್ಳಾಪುರ 33, ಚಿಕ್ಕಮಗಳೂರು 35, ಚಿತ್ರದುರ್ಗ 59, ದಕ್ಷಿಣ ಕನ್ನಡ 95, ದಾವಣಗೆರೆ 47, ಧಾರ ವಾಡ 27, ಗದಗ 23, ಹಾಸನ 173, ಹಾವೇರಿ 29, ಕಲಬುರಗಿ 32, ಕೊಡಗು 17, ಕೋಲಾರ 47, ಕೊಪ್ಪಳ 8, ಮಂಡ್ಯ 89, ಮೈಸೂರು 161, ರಾಯಚೂರು 16, ರಾಮನಗರ 12, ಶಿವಮೊಗ್ಗ 18, ತುಮಕೂರು 53, ಉಡುಪಿ 49, ಉತ್ತರ ಕನ್ನಡ 24, ವಿಜಯ ಪುರ 122, ಯಾದಗಿರಿ 20 ಪ್ರಕರಣಗಳು ಶನಿವಾರ ವರದಿಯಾಗಿವೆ.