ಮೈ ಟೈಮ್ಸ್ ವಿತ್ ಆರ್.ಕೆ.ಲಕ್ಷ್ಮಣ್; ನಾಗೇಂದ್ರಬಾಬು ವ್ಯಂಗ್ಯಚಿತ್ರ ಪ್ರದರ್ಶನ
ಮೈಸೂರು

ಮೈ ಟೈಮ್ಸ್ ವಿತ್ ಆರ್.ಕೆ.ಲಕ್ಷ್ಮಣ್; ನಾಗೇಂದ್ರಬಾಬು ವ್ಯಂಗ್ಯಚಿತ್ರ ಪ್ರದರ್ಶನ

November 1, 2020

ಮೈಸೂರು, ಅ.31(ಆರ್‍ಕೆಬಿ)- ಖ್ಯಾತ ವ್ಯಂಗ್ಯ ಚಿತ್ರಕಾರ ದಿ.ಆರ್.ಕೆ.ಲಕ್ಷ್ಮಣ್ ಜನ್ಮಶತಮಾನೋ ತ್ಸವ ಆಚರಣೆ ಪ್ರಯುಕ್ತ ಬೆಂಗಳೂರಿನ ಕರ್ನಾ ಟಕ ವ್ಯಂಗ್ಯಚಿತ್ರಕಾರರ ಸಂಘದ ಪ್ರಾಯೋಜಕತ್ವ ದಲ್ಲಿ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರಬಾಬು ಅವರ `ಆರ್.ಕೆ.ಲಕ್ಷ್ಮಣ್ ಅವರೊಂದಿಗಿನ ಒಡ ನಾಟ’ (ಮೈ ಟೈಮ್ಸ್ ವಿತ್ ಆರ್.ಕೆ.ಲಕ್ಷ್ಮಣ್) ವ್ಯಂಗ್ಯ ಭಾವಚಿತ್ರ, ಫೋಟೊ ಹಾಗೂ ಲೇಖನ ಗಳ ಪ್ರದರ್ಶನ ಶನಿವಾರ ನಡೆಯಿತು.

ಆರ್.ಕೆ.ಲಕ್ಷ್ಮಣ್ ಅವರೊಂದಿಗಿನ ಕ್ಷಣಗಳು, ಲಕ್ಷ್ಮಣ್ ಅವರ ವ್ಯಂಗ್ಯಭಾವಚಿತ್ರ ಮತ್ತು ಫೋಟೋ ಗಳು ರಾಮಾನುಜ ರಸ್ತೆಯ ಮೈಸೂರ್ ಆರ್ಟ್ ಗ್ಯಾಲರಿಯಲ್ಲಿ ಗಮನ ಸೆಳೆದವು. ಕಾರ್ಯಕ್ರಮ ದಲ್ಲಿ ಅತಿಥಿಯಾಗಿದ್ದ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಮಾತನಾಡಿ, ಪದ್ಮಭೂಷಣ, ಪದ್ಮವಿಭೂಷಣ ಎರಡೂ ಪ್ರಶಸ್ತಿಗಳನ್ನು ಪಡೆದ ಖ್ಯಾತ ವ್ಯಂಗ್ಯಚಿತ್ರಕಾರ ಆರ್.ಕೆ.ಲಕ್ಷ್ಮಣ್, 40 ವರ್ಷ ಗಳ ಸುದೀರ್ಘ ವೃತ್ತಿಬದುಕಿನಲ್ಲಿ ಮೊನಚು ಲೇಖನಿಯಿಂದ ರಚಿಸಿದ ವ್ಯಂಗ್ಯಚಿತ್ರಗಳಿಂದ ಪತ್ರಿಕಾ ಲೋಕಕ್ಕೆ ವಿದ್ಯುತ್ ಸ್ಪರ್ಶ ನೀಡಿದರು. ಲಕ್ಷ್ಮಣ್ ಜನ್ಮಶತಮಾನೋತ್ಸವದಲ್ಲಿ ಅವರನ್ನು ಭಾರತೀಯ ಪತ್ರಿಕೋದ್ಯಮ ಪ್ರಾಮಾಣಿಕವಾಗಿ ನೆನಪಿಸಿಕೊಳ್ಳ ಬೇಕು. ಲಕ್ಷ್ಮಣ್ ಅವರ ಹಾದಿಯಲ್ಲೇ ಸಾಗುತ್ತಾ ಮೈಸೂರಿನ ವ್ಯಂಗ್ಯಚಿತ್ರಕಾರ ಎಂ.ವಿ.ನಾಗೇಂದ್ರ ಬಾಬು, 29 ವರ್ಷಗಳಲ್ಲಿ 20 ಸಾವಿರ ವ್ಯಂಗ್ಯಚಿತ್ರ ಗಳನ್ನು ರಚಿಸಿರುವುದು ಸ್ತುತ್ಯಾರ್ಹ ಎಂದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಗಾಂಧಿವಾದಿ ಕೆ.ರಘುರಾಂ ವಾಜಪೇಯಿ, ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಆರ್.ಕೆ.ಲಕ್ಷ್ಮಣ್, ಬರಹ ಕ್ಷೇತ್ರದಲ್ಲಿ ಆರ್.ಕೆ. ನಾರಾಯಣ್, ಫೋಟೋಗ್ರಫಿ ಕ್ಷೇತ್ರದಲ್ಲಿ ಟಿ.ಎಸ್. ಸತ್ಯನ್ ಮಹಾನ್ ವ್ಯಕ್ತಿಗಳು. ಇವರೆಲ್ಲಾ ಮೈಸೂರಿ ನವರು ಎಂಬುದು ಸಂತಸದ ವಿಚಾರ ಎಂದರು.

ಆರ್.ಕೆ.ಲಕ್ಷ್ಮಣ್ ವ್ಯಂಗ್ಯಚಿತ್ರಗಳಲ್ಲಿ 1 ಕೊಡೆ, ಸಾಮಾನ್ಯ ವ್ಯಕ್ತಿ ಮತ್ತು ಕಾಗೆಗಳು ಮಾತನಾಡು ತ್ತವೆ. ಸರ್ಕಾರ ನಡೆಸುವವರಿಗೆ ಛಾಟಿ ಏಟು ನೀಡು ತ್ತಿದ್ದ ಈ ವ್ಯಂಗ್ಯಚಿತ್ರಗಳು, ಅದೇ ವೇಳೆ ಸಲಹೆ ಯನ್ನೂ ನೀಡುತ್ತಿದ್ದವು. ಅಂತಹ ಅಸಾಧಾರಣ ವ್ಯಂಗ್ಯಚಿತ್ರಕಾರನ ವ್ಯಂಗ್ಯಭಾವಚಿತ್ರವನ್ನು ನಾಗೇಂದ್ರ ಬಾಬು ರಚಿಸಿ ಪ್ರಶಂಸೆ ಪಡೆದಿದ್ದಾರೆ ಎಂದರು.

ಕಲಾಪೋಷಕ ಎಂ.ಎನ್.ದೊರೆಸ್ವಾಮಿ, ಶಿಲ್ಪ ಕಲಾವಿದ ಎಲ್.ಶಿವಲಿಂಗಪ್ಪ, ಕಸಾಪ ಮಾಜಿ ಜಿಲ್ಲಾ ಧ್ಯಕ್ಷ ಚಂದ್ರಶೇಖರ್, ಮೈಸೂರ್ ಆರ್ಟ್ ಗ್ಯಾಲರಿಯ ಬಿ.ಪಂಪಾಪತಿ, ವ್ಯಂಗ್ಯಚಿತ್ರಕಾರ ಎಂ.ವಿ. ನಾಗೇಂದ್ರಬಾಬು ಕಾರ್ಯಕ್ರಮದಲ್ಲಿದ್ದರು.

Translate »