ಪತ್ನಿ ಅಗಲಿಕೆ ನೋವಿನಲ್ಲೇ ಪತಿ ಆತ್ಮಹತ್ಯೆ
ಮೈಸೂರು

ಪತ್ನಿ ಅಗಲಿಕೆ ನೋವಿನಲ್ಲೇ ಪತಿ ಆತ್ಮಹತ್ಯೆ

March 28, 2022

ಮೈಸೂರು, ಮಾ.೨೭(ಎಸ್‌ಬಿಡಿ)- ಪತ್ನಿ ಸಾವಿನ ನೋವಿನಿಂದ ಹೊರಬರಲಾಗದೆ ಪತಿಯೂ ಆತ್ಮಹತ್ಯೆ ಮಾಡಿಕೊಂಡು ಇಬ್ಬರು ಪುಟ್ಟ ಮಕ್ಕಳು ತಬ್ಬಲಿಯಾಗಿರುವ ಮನಮಿಡಿ ಯುವ ಘಟನೆ ಮೈಸೂರು ತಾಲೂಕು ಹಂಚ್ಯಾ ಗ್ರಾಮದಿಂದ ವರದಿಯಾಗಿದೆ.
ಗ್ರಾಮದ ಮಹೇಶ್(೩೬) ಕ್ರಿಮಿನಾಶಕ ಸೇವಿಸಿ ಭಾನುವಾರ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ. ಇವರ ಪತ್ನಿ ಗಾಯತ್ರಿ ೨ ತಿಂಗಳ ಹಿಂದೆ ಬಿಪಿ ಮಾತ್ರೆ ಬದಲಿಗೆ ಬೇರೆ ಮಾತ್ರೆ ಸೇವಿಸಿ, ಸಾವನ್ನಪ್ಪಿದ್ದರು. ಅಪ್ಪ-ಅಮ್ಮನ ಕಳೆದುಕೊಂಡಿರುವ ೮ ವರ್ಷದ ಹೆಣ್ಣುಮಗು ಹಾಗೂ ೬ ವರ್ಷದ ಗಂಡು ಮಗುವಿನ ಸ್ಥಿತಿ ಕರುಳ ಹಿಂಡುವAತಿದೆ.

ಒAದೇ ಗ್ರಾಮದ ಮಹೇಶ್ ಹಾಗೂ ಗಾಯತ್ರಿ ೧೦ ವರ್ಷದ ಹಿಂದೆ ವಿವಾಹ ವಾಗಿದ್ದರು. ಇಬ್ಬರು ಮುದ್ದಾದ ಮಕ್ಕ ಳೊಂದಿಗೆ ಸುಂದರ ಜೀವನ ನಡೆಸುತ್ತಿದ್ದ ಈ ದಂಪತಿ ವಿಧಿಯಾಟಕ್ಕೆ ಬಲಿಯಾಗಿ ದ್ದಾರೆ. ಗಾಯತ್ರಿ ಅವರಿಗೆ ರಕ್ತದೊತ್ತಡ (ಬಿಪಿ)ದ ಸಮಸ್ಯೆಯಿದೆ ಎಂದು ಕೆಲ ತಿಂಗಳು ಮಾತ್ರೆ ಸೇವಿಸಲು ವೈದ್ಯರು ಸೂಚಿಸಿದ್ದರು. ಅದ ರಂತೆ ನಿತ್ಯ ಮಾತ್ರೆ ತೆಗೆದುಕೊಳ್ಳುತ್ತಿದ್ದ ಗಾಯತ್ರಿ, ಕಳೆದ
ಜನವರಿಯಲ್ಲಿ ಬಿಪಿ ಮಾತ್ರೆ ಬದಲಿಗೆ ಅದರ ಜೊತೆಯಿದ್ದ ಬೇರೆ ಯಾವುದೋ ಮಾತ್ರೆ ಸೇವಿಸಿದ್ದರು. ಪರಿಣಾಮ ಆರೋಗ್ಯದಲ್ಲಿ ವ್ಯತ್ಯಯವಾಗಿ ಅಸ್ವಸ್ತರಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಉಸಿರು ಚೆಲ್ಲಿದರು. ಪ್ರೀತಿಯ ಪತ್ನಿಯ ಅಗಲಿಕೆಯಿಂದ ಆಘಾತಕ್ಕೊಳಗಾದ ಮಹೇಶ್, ತಾಯಿ ಇಲ್ಲದ ತನ್ನ ಮಕ್ಕಳ ರೋಧನೆ ಕಂಡು ಜರ್ಜರಿತರಾಗಿದ್ದರು. ನೋವು ಸಹಿಸಲಾಗದೆ ಎರಡ್ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರಾದರೂ ಕುಟುಂಬದವರು, ಗ್ರಾಮಸ್ಥರು ತಡೆದು, ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದರು. ಆದರೆ ಯಾರು ಎಷ್ಟೇ ಸಂತೈಸಿದರೂ ಪತ್ನಿಯ ಸಾವಿನ ನೋವಿನಿಂದ ಮಹೇಶ್ ಹೊರಬಂದಿರಲಿಲ್ಲ. ಸದಾ ಪತ್ನಿ ನೆನಪಿನಲ್ಲೇ ಕೊರಗುತ್ತಿದ್ದರು.

ದುರ್ವಿಧಿ ಇಂದು ಮಹೇಶ್ ಅವರನ್ನು ಯಾರಿಂದಲೂ ಕಾಪಾಡಲು ಸಾಧ್ಯವಾಗಿಲ್ಲ. ಇಂದು ತೋಟಕ್ಕೆ ತೆರಳಿ ಬೆಳೆಗೆ ಬಳಸುವ ಅಪಾಯಕಾರಿ ಕಾಳುಗಳನ್ನು ಸೇವಿಸಿದ್ದಾರೆ. ಬಳಿಕ ತನ್ನ ಸಹೋದರನಿಗೆ ಕರೆ ಮಾಡಿ, `ಮಕ್ಕಳನ್ನು ಚೆನ್ನಾಗಿ ನೋಡಿಕೋ, ನಾನು ಬದುಕುವುದಿಲ್ಲ’ ಎಂದು ಹೇಳಿದ್ದಾರೆ. ತಕ್ಷಣ ಎಲ್ಲೆಡೆ ಹುಡುಕಾಡಿ ತೋಟದಲ್ಲಿ ಒದ್ದಾಡುತ್ತಿದ್ದ ಮಹೇಶ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಈ ಸಂಬAಧ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಗಿಲು ಮುಟ್ಟಿದ ಆಕ್ರಂದನ: ಪತ್ನಿ ಸಾವಿನ ಕೊರಗಿನಲ್ಲೇ ಮೃತಪಟ್ಟ ಮಹೇಶ್ ಅವರನ್ನು ನೆನೆದು ಇಡೀ ಗ್ರಾಮವೇ ಕಣ ್ಣÃರಿಟ್ಟಿತು. ತಬ್ಬಲಿಗಳಾದ ಮಕ್ಕಳ ಸ್ಥಿತಿಯನ್ನು ಕಂಡ ಸಂಬAಧಿಕರು, ಸ್ನೇಹಿತರ ಆಕ್ರಂದನ ಮುಗಿಲುಮುಟ್ಟಿತ್ತು. ಅಪ್ಪ-ಅಮ್ಮನ ಕಳೆದುಕೊಂಡು ದಿಕ್ಕುತೋಚದಂತೆ ಕಣ ್ಣÃರಿಡುತ್ತಿದ್ದ ಮಕ್ಕಳನ್ನು ಮಹೇಶ್ ಪೋಷಕರು, ಸಹೋದರರು ಹಾಗೂ ಸಂಬAಧಿಕರು ಸಂತೈಸುವ ಪ್ರಯತ್ನ ಮಾಡುತ್ತಿದ್ದ ದೃಶ್ಯ ಮನಕಲಕಿತು.

Translate »