ಬ್ಯಾಡ್ಮಿಂಟನ್: ಸ್ವಿಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.ಸಿಂಧೂ!
ಮೈಸೂರು

ಬ್ಯಾಡ್ಮಿಂಟನ್: ಸ್ವಿಸ್ ಓಪನ್ ಕಿರೀಟ ಮುಡಿಗೇರಿಸಿಕೊಂಡ ಪಿ.ವಿ.ಸಿಂಧೂ!

March 28, 2022

ಬಸೆಲ್, ಮಾ.೨೭(ಸ್ವಿಜರ್ಲೆಂಡ್)- ಭಾರತದ ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧೂ ಬಿಡಬ್ಲು÷್ಯಎಫ್ ಸ್ವಿಸ್ ಓಪನ್ ೩೦೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಭಾನುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಫೈನಲ್ ಪಂದ್ಯ ದಲ್ಲಿ ಅಧಿಕಾರಯುತ ಆಟವಾಡಿದ ಸಿಂಧೂ, ಎದುರಾಳಿ ಥಾಯ್ಲೆಂಡ್‌ನ ಅನುಭವಿ ಆಟಗಾರ್ತಿ ಬುಸಾನನ್ ಆಂಗ್‌ಬಮ್ರುAಗ್ಫನ್ ಅವರನ್ನು ೨೧-೧೬, ೨೧-೮ ಅಂತರದ ನೇರ ಗೇಮ್‌ಗಳ ಅಂತರದಲ್ಲಿ ಬಗ್ಗು ಬಡಿದರು. ಪ್ರಸಕ್ತ ಸಾಲಿ ನಲ್ಲಿ ಸತತ ೨ನೇ ಟೂರ್ನಿಯಲ್ಲಿ ಫೈನಲ್ ತಲುಪಿದ ಸಾಧನೆ ಮಾಡಿದ ಸಿಂಧೂ, ಬುಸಾನನ್ ಎದುರಿನ ತಮ್ಮ ಗೆಲುವಿನ ದಾಖಲೆ ಯನ್ನು ೧೭-೧ಕ್ಕೆ ವಿಸ್ತರಿಸಿಕೊಂಡಿದ್ದಾರೆ.

೪ನೇ ಶ್ರೇಯಾಂಕಿತ ಆಟಗಾರ್ತಿ ಬುಸಾನನ್ ಎದುರು ಸಿಂಧೂ, ೨೦೧೯ ರಲ್ಲಿ ಸೇಂಟ್ ಯಾಕೊಬ್ ಶಾಲ್‌ನಲ್ಲಿ ನಡೆದ ಪಂದ್ಯದಲ್ಲಿ ಏಕೈಕ ಸೋಲನುಭವಿಸಿದ್ದರು.

ಇನ್ನು ಇದೇ ಟೂರ್ನಿಯಲ್ಲಿ ಸಿಂಧೂ ಕಳೆದ ವರ್ಷ ರನ್ನರ್ಸ್ ಅಪ್ ಸ್ಥಾನ ಪಡೆದ್ದರು. ಅಂದು ವಿಶ್ವದ ಮಾಜಿ ನಂ.೧ ಆಟಗಾರ್ತಿ ಸ್ಪೇನ್‌ನ ಕ್ಯಾರೊಲಿನಾ ಮರಿನ್ ಎದುರು ಸಿಂಧೂ ನಿರಾಶೆ ಅನುಭವಿಸಿದ್ದರು. ಇನ್ನು ೨೦೧೯ರಲ್ಲಿ ಸಿಂಧೂ, ಇದೇ ಅಂಗಣದಲ್ಲಿ ಬಿಡಬ್ಲು÷್ಯಎಫ್ ವಿಶ್ವ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು.

ಈ ವರ್ಷ ಸಿಂಧೂ ಗೆದ್ದ ಎರಡನೇ ಟೂರ್ನಿ ಇದಾಗಿದೆ. ಕಳೆದ ಜನವರಿಯಲ್ಲಿ ಆಡಿದ ಸೈಯದ್ ಮೋದಿ ಇಂಟರ್‌ನ್ಯಾಷನಲ್ಸ್ ಸೂಪರ್ ೩೦೦ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಟ್ರೋಫಿ ಗೆದ್ದಿದ್ದರು. ಸೂಪರ್ ೩೦೦ ಟೂರ್ನಿಗಳು ಬ್ಯಾಡ್ಮಿಂಟನ್ ವಿಶ್ವ ಒಕ್ಕೂಟ (ಬಿಡಬ್ಲು÷್ಯಎಫ್) ಆಯೋಜಿಸುವ ಎರಡನೇ ಮಹತ್ವದ ಟೂರ್ನಿ ಆಗಿದೆ. ೨೬ ವರ್ಷದ ಆಟಗಾರ್ತಿ ತಮ್ಮ ವೃತ್ತಿ ಬದುಕಿನಲ್ಲಿ ಈವರೆಗೆ ೧೧ ಬಿಡಬ್ಲು÷್ಯಎಫ್ ಮಹಿಳಾ ಸಿಂಗಲ್ಸ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಅಲ್ಲದೆ ರಿಯೋ ಲಿಂಪಿಕ್ಸ್ನಲ್ಲಿ ಬೆಳ್ಳಿ ಮತ್ತು ಟೋಕಿಯೋ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Translate »