ಮೈಸೂರು ರೇಷ್ಮೆ ಕಾರ್ಖಾನೆ ಉನ್ನತೀಕರಣ
ಮೈಸೂರು

ಮೈಸೂರು ರೇಷ್ಮೆ ಕಾರ್ಖಾನೆ ಉನ್ನತೀಕರಣ

March 28, 2022

 ರೇಷ್ಮೆ ಸಚಿವ ಡಾ. ಕೆ.ಸಿ.ನಾರಾಯಣಗೌಡ ಮಾಹಿತಿ

 ಕಾರ್ಖಾನೆಯಲ್ಲಿ ಹೆಚ್ಚುವರಿಯಾಗಿ ೧೫೦ ಮಗ್ಗಗಳ ಅಳವಡಿಕೆ ಉದ್ದೇಶ

 ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆವಾಹನ ವ್ಯವಸ್ಥೆ

 ಬೆಂಗಳೂರು ಏರ್‌ಪೋರ್ಟ್ನಲ್ಲಿ ಮೈಸೂರು ಸಿಲ್ಕ್ ದೊಡ್ಡ ಮಾರಾಟ ಮಳಿಗೆ ತೆರೆಯಲು ಸಿದ್ಧತೆ

 ದೆಹಲಿ, ಮುಂಬೈನಲ್ಲೂ ಮಳಿಗೆ ತೆರೆಯುವ ಚಿಂತನೆ

ಮೈಸೂರು, ಮಾ.೨೭(ಆರ್‌ಕೆಬಿ)- ಮೈಸೂರು ರೇಷ್ಮೆ ಕಾರ್ಖಾನೆಯನ್ನು ಉನ್ನತೀಕರಣಗೊಳಿಸಲಾಗುವುದು ಎಂದು ರೇಷ್ಮೆ ಇಲಾಖೆ ಸಚಿವ ಡಾ. ಕೆ.ಸಿ. ನಾರಾಯಣಗೌಡ ಇಂದಿಲ್ಲಿ ಹೇಳಿದರು.

ಮೈಸೂರಿನ ಕಾಳಿದಾಸ ರಸ್ತೆಯ ಸಿಎಫ್‌ಟಿಆರ್‌ಐ ರೆಸಿಡೆನ್ಷಿಯಲ್ ಕಾಂಪ್ಲೆಕ್ಸ್ ಎದುರಿನ ಕಟ್ಟಡದಲ್ಲಿ ಕೆಎಸ್ ಐಸಿ ಮೈಸೂರು ಸಿಲ್ಕ್ನ ೧೬ನೇ ಮಾರಾಟ ಮಳಿಗೆಯನ್ನು (ಮೈಸೂರು ನಗರದಲ್ಲಿ ೬ನೇ ಮಳಿಗೆ) ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಸಿಲ್ಕ್ ಎಂಬುದು ಮೈಸೂರಿನ ಪರಂಪರೆ. ಮೈಸೂರು ಮಹಾರಾಜರು ಆರಂಭಿಸಿದ್ದನ್ನು ಸರ್ಕಾರ ಮುಂದುವರೆಸಿಕೊAಡು ಬಂದಿದೆ. ಮೈಸೂರು ಸಿಲ್ಕ್ ಎಂದರೆ ಮಹಿಳೆಯ ರಿಗೆ ಅಚ್ಚುಮೆಚ್ಚು. ಮೈಸೂರು ರೇಷ್ಮೆ ಕಾರ್ಖಾನೆ ಯಲ್ಲಿ ಹಾಲಿ ಇರುವುದು ಹಳೆಯ ಮಾದರಿಯ ಮಗ್ಗಗಳಾಗಿದ್ದು, ಕಾರ್ಖಾನೆಯನ್ನು ಉನ್ನತೀಕರಣಗೊಳಿಸಿ, ಹೆಚ್ಚುವರಿಯಾಗಿ ೧೫೦ ಮಗ್ಗಗಳನ್ನು ಅಳವಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಮೈಸೂರು ರೇಷ್ಮೆ ಕಾರ್ಖಾನೆಯಲ್ಲಿ ಹೊಸ ಮಾಡೆಲ್ ಮತ್ತು ಡಿಸೈನ್‌ಗಳನ್ನು ಅಳವಡಿಸಿಕೊಂಡು ಉನ್ನತ ದರ್ಜೆಗೇರಿಸಲು ಯೋಜನೆ ರೂಪಿಸಲಾಗಿದೆ. ಸ್ವಯಂಚಾಲಿತ ಇಟಾಲಿಯನ್ ಮಗ್ಗಗಳನ್ನು ಹಾಕಲಾಗು ತ್ತದೆ. ಡಿಸೈನ್ ಇನ್ನಿತರ ಕೆಲಸಗಳನ್ನು ಸ್ವಯಂಚಾಲಿತವಾಗಿ ಅದೇ ನಿರ್ವಹಿಸು ತ್ತದೆ. ಹೆಚ್ಚುವರಿಯಾಗಿ ೧೫೦ ಮಗ್ಗಗಳನ್ನು ಅಳವಡಿಸಿ ಮತ್ತೊಂದು ಪಾಳಿ ಆರಂಭಿ ಸಲು ಉದ್ದೇಶಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರನ್ನು ಮನೆಯಿಂದ ಕಾರ್ಖಾನೆಗೆ ಕರೆತಂದು ಮತ್ತೆ ಮನೆಗೆ ವಾಪಸ್ ಕರೆದೊಯ್ಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ರಿಪೇರಿ ಯಾಗಿ ಬಿದ್ದಿರುವ ೧೭೫ ಮಗ್ಗಗಳನ್ನು ಸರಿ ಪಡಿಸಿ, ಅವುಗಳಿಂದಲೂ ಕೆಲಸ ಆರಂಭಿ ಸುವ ಮೂಲಕ
ಮೈಸೂರು ಸಿಲ್ಕ್ಗೆ ಮತ್ತಷ್ಟು ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದರು. ಕಾರ್ಖಾನೆಯಲ್ಲಿ ಸೀರೆಗಳ ಉತ್ಪಾದನೆ ಹಾಗೂ ದಾಸ್ತಾನು ಕಡಿಮೆ ಇದ್ದು, ಬೇಡಿಕೆ ಹೆಚ್ಚಾಗಿದೆ. ಹೀಗಾಗಿ ಕಾರ್ಖಾನೆ ಉನ್ನತೀಕರಣಗೊಳಿಸಿ, ಮಾರುಕಟ್ಟೆಯನ್ನೂ ಕೂಡ ಉನ್ನತ ದರ್ಜೆಗೇರಿಸಲು ಪ್ರಯತ್ನಿಸಲಾಗುತ್ತಿದ್ದು, ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟಿçÃಯ ವಿಮಾನ ನಿಲ್ದಾಣದಲ್ಲಿ ಒಂದು ದೊಡ್ಡ ಮಾರಾಟ ಮಳಿಗೆ ತೆರೆಯಲು ಸಿದ್ಧತೆ ನಡೆದಿದೆ. ಅಲ್ಲದೇ ದೆಹಲಿ ಹಾಗೂ ಮುಂಬೈನಲ್ಲೂ ಮೈಸೂರು ಸಿಲ್ಕ್ ಮಾರಾಟ ಮಳಿಗೆ ತೆರೆಯುವ ಚಿಂತನೆ ಇದೆ ಎಂದರು.

ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ, ಕರ್ನಾಟಕ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಪಾಲಿಕೆ ಸದಸ್ಯರಾದ ಭಾಗ್ಯ ರಮೇಶ್, ಎಸ್‌ಬಿಎಂ ಮಂಜು, ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷ ಎಸ್.ಆರ್.ಗೌಡ, ವ್ಯವಸ್ಥಾಪಕ ನಿರ್ದೇಶಕಿ ವಾಸಿ ರೆಡ್ಡಿ ವಿಜಯ ಜ್ಯೋತ್ಸಾ, ಪ್ರಧಾನ ವ್ಯವಸ್ಥಾಪಕ (ಮಾರುಕಟ್ಟೆ) ಎಸ್.ಭಾನುಪ್ರಕಾಶ್, ಇತರ ವಿಭಾಗಗಳ ವ್ಯವಸ್ಥಾಪಕ ನಿರ್ದೇಶಕರಾದ ಸತೀಶ್, ಚಕ್ರವರ್ತಿ, ಮೈಸೂರಿನ ವ್ಯವಸ್ಥಾಪಕ ಸಿದ್ದಲಿಂಗಸ್ವಾಮಿ, ಪಾಲಿಕೆ ಮಾಜಿ ಸದಸ್ಯ ಎಂ.ಪಾರ್ಥಸಾರಥಿ ಇನ್ನಿತರರಿದ್ದರು.

Translate »