ನಾಟಕಗಳಿಂದ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಹೋಗಲು ಸಾಧ್ಯ
ಮೈಸೂರು

ನಾಟಕಗಳಿಂದ ಮಾತ್ರ ಕತ್ತಲಿನಿಂದ ಬೆಳಕಿನೆಡೆಗೆ ಹೋಗಲು ಸಾಧ್ಯ

March 28, 2022

ಮೈಸೂರು,ಮಾ.೨೭(ಎಂಟಿವೈ)- ನಾಟಕಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕರೆದೊಯ್ಯುವ ಕೆಲಸ ಮಾಡಬೇಕು ಎಂದು ನಾಟಕಕಾರ ಪ್ರೊ. ಎಂ.ಎಸ್.ವೇಣುಗೋಪಾಲ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರ ದಲ್ಲಿ ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಭಾನುವಾರ ವಿಶ್ವ ರಂಗಭೂಮಿ ದಿನದ ಅಂಗವಾಗಿ ಆಯೋಜಿಸಿದ್ದ `ನಾಟಕ, ವಿಚಾರ ಸಂಕಿರಣ, ಸಂವಾದ’ ಕಾರ್ಯ ಕ್ರಮವನ್ನು ಕಂಸಾಳೆ ಬಾರಿಸುವ ಉದ್ಘಾಟಿಸಿ ಮಾತ ನಾಡಿದ ಅವರು, ಯಾವುದೇ ಒಂದು ವಿಚಾರ ಅಥವಾ ಆದರ್ಶವನ್ನು ಜನಕ್ಕೆ ಕೊಟ್ಟಾಗ ಮಾತ್ರ ಅನಾಗರಿ ಕರನ್ನು ನಾಗರಿಕರನ್ನಾಗಿ ಪರಿವರ್ತಿಸಲು ಸಾಧ್ಯ ಎಂದರು.
ನಾಟಕ ಹಾಗೂ ಜೀವನಕ್ಕೆ ಬಹಳ ವ್ಯತ್ಯಾಸವಿದೆ. ನಾಟಕದಲ್ಲಿ ಅಭಿನಯಿಸುವ ವ್ಯಕ್ತಿಗೆ ಪಾತ್ರ, ನಾಟಕದ ಉದ್ದೇಶ, ಅಭಿನಯ, ಹೆಜ್ಜೆ, ನುಡಿಯುವ ನುಡಿಯ ಬಗ್ಗೆ ತಿಳಿದಿರುತ್ತದೆ. ಅದಕ್ಕಾಗಿ ತರಬೇತಿ ಪಡೆಯಲು ಅವಕಾಶವಿರುತ್ತದೆ. ಆದರೆ ಜೀವನಕ್ಕೆ ತರಬೇತಿಯೂ ಇರುವುದಿಲ್ಲ. ನಾಟಕದಂತೆ ವಿವಿಧ ಮಜಲುಗಳ ಬಗ್ಗೆ ಮೊದಲೇ ತಿಳಿದಿರುವುದಿಲ್ಲ. ಈ ನಿಟ್ಟಿನಲ್ಲಿ ಜೀವನವನ್ನು ನಾಟಕದಷ್ಟು ಶ್ರೇಷ್ಠ ಮಾಡುವ ಗುರಿ ನಮ್ಮಲ್ಲಿರಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವಕ್ಕೆ ಸಾವಿರಾರು ವರ್ಷಗಳಾಗಿದ್ದರೂ ಇನ್ನು ಒಂದು ಹೆಜ್ಜೆ ಮುಂದುವರೆದಿಲ್ಲವಲ್ಲ ಎಂಬ ಜಿಜ್ಞಾಸೆ ಕಾಡುತ್ತಿದೆ. ಅದನ್ನೇ ಅನಾಗರಿಕ ಅನಿಸಿಕೆ, ಬುಡಕಟ್ಟು ಜೀವನ ಎಂದು ವಿಶ್ಲೇಷಿಸಬಹುದಾಗಿದೆ ಎಂದರು.

ಮನುಷ್ಯರು ಕೇವಲ ಆಹಾರದಿಂದ ಬದುಕುವುದಿಲ್ಲ. ಹಲವು ವಿಚಾರಧಾರೆಗಳು ಮನುಷ್ಯರನ್ನು ಬೆಳೆಸುತ್ತವೆ. ಉತ್ತಮ ವಿಚಾರ, ಆದರ್ಶ, ಉತ್ತಮ ಉದ್ದೇಶ ಜೀವನ ರೂಪಿಸುತ್ತದೆ. ಇದರಿಂದ ನಾವು ಕತ್ತಲೆಯಿಂದ ಬೆಳೆಕಿನೆಡೆಗೆ ಸಾಗಬೇಕಾಗಿದೆ. ಅದನ್ನು ರಂಗಭೂಮಿ ಮುನ್ನಡೆಸಲಿದೆ ಎಂಬ ವಿಶ್ವಾಸವಿದೆ. ಈ ಹಿಂದೆ ಅಂದಿನ ನಾಟಕವನ್ನು ನೋಡುವವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, ಇಂದು ನಾಟಕ ಕ್ಷೇತ್ರದಲ್ಲಿ ನೋಡುಗರು ಮಾತ್ರ. ನಾಟಕವನ್ನು ಬದುಕಾಗಿಸುವ ಪ್ರಯತ್ನ ಮಾಡಬೇಕು. ರಂಗಕ್ಷೇತ್ರದಲ್ಲಿರುವ ನಾವೆಲ್ಲಾ ಒಂದೇ ಜಾತಿಯವರು ಹಾಗೂ ಸಹಜರು. ನಮ್ಮ ಉಸಿರಿನಲ್ಲಿ, ಬಸರಿನಲ್ಲಿ, ಕೆಸರಿನಲ್ಲಿ, ಕೊಸರಿನಲ್ಲಿ, ಹೆಸರಿನಲ್ಲಿ ನಾಟಕದ ಜೀವ ಇದೆ. ಯಾವುದೋ ರೂಪದಲ್ಲಿ ತುಡಿಯುತ್ತಿರುತ್ತದೆ ಎಂದು ಅಭಿಪ್ರಾಯಪಟ್ಟರು.
`ಮೈಸೂರು ರಂಗಭೂಮಿ ಅಂದು-ಇAದು- ಮುಂದು’ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ `ವೃತ್ತಿ ರಂಗಭೂಮಿ’ ಕುರಿತು ರಂಗಚಿAತಕ ಗೋವಿಂದೇಗೌಡ ವಿಚಾರ ಮಂಡಿಸಿ ಮಾತÀನಾಡಿ, ಮೈಸೂರಲ್ಲಿ ೧೬೮೦ರಿಂದ ನಾಟಕ ರಂಗ ಹೆಚ್ಚಿನ ಪ್ರಾಮುಖ್ಯತೆ ಪಡೆಯಿತು. ೧೬೮೦ `ಮಿತ್ರವಿಂದ ಗೋವಿಂದ’ ನಾಟಕ ರಚನೆ ಯಾಯಿತು. ಮೈಸೂರು ಅರಸರು ನಾಟಕಕ್ಕೆ ಆದ್ಯತೆ ನೀಡುವುದಕ್ಕೆ ಮುಂದಾದರು. ೧೬೮೨ರಲ್ಲಿ ಚಾಮ ರಾಜೇಂದ್ರ ನಾಟಕ ಕಂಪನಿ ಆರಂಭಿಸಿದರು. ಆಸ್ಥಾನದಲ್ಲಿದ್ದ ವಿದ್ವಾಂಸರೊAದಿಗೆ ಚರ್ಚೆ ನಡೆಸಿ ನಾಟಕ ಸಾಹಿತ್ಯ ರಚನೆಗೆ ಸೂಚಿಸಿದರು. ಇದರಿಂದ ಸಂಸ್ಕೃತದಿAದ ಕನ್ನಡಕ್ಕೆ ಹಲವಾರು ನಾಟಕವನ್ನು ಅನುವಾದ ಮಾಡಿಸಿದರು. ಆ ಸಂದರ್ಭದಲ್ಲಿ ಬಸಪ್ಪಶಾಸ್ತಿç ಗಳು, ಶ್ರೀಕಂಠೇಶಗೌಡರು ನಾಟಕಗಳನ್ನು ರೂಪಾಂತರ ಮಾಡಿ ಗಮನ ಸೆಳೆದರು ಎಂದು ವಿವರಿಸಿದರು.

ಕನ್ನಡ ಚಲನಚಿತ್ರ ರಂಗದಲ್ಲಿ ಡಾ.ರಾಜಕುಮಾರ್ ಅವರನ್ನು ವರನಟ ಎನ್ನುವಂತೆ ರಂಗಭೂಮಿ ಕ್ಷೇತ್ರದಲ್ಲಿ ಹಿರಿಯ ರಂಗ ಕಲಾವಿದರಾದ ವರದಾಚಾರ್ಯ ಅವರನ್ನು ವರನಟ ಎಂದು ಕರೆಯಲಾಗುತ್ತದೆ. ರಂಗಸಾಹಿತ್ಯದಲ್ಲಿ ೧೯೦೦-೧೯೪೦ರವರೆಗೆ ವೃತ್ತಿ ರಂಗಭೂಮಿಯಲ್ಲಿ ಸ್ವರ್ಣಯುಗ ಎನ್ನಲಾಗುತ್ತದೆ. ೧೯೦೨ರಲ್ಲಿ ರತ್ನಾವಳಿ ನಾಟಕ ಸಂಸ್ಥೆ ಆರಂಭವಾಯಿತು. ಇದರೊಂದಿಗೆ ಚಾಮರಾಜೇಂದ್ರ ನಾಟಕ ಸಭಾ, ಗುಬ್ಬಿವೀರಣ್ಣ ಕಂಪನಿ, ಚಾಮುಂಡೇಶ್ವರಿ ಕಂಪನಿ, ಹೆಚ್.ಕೆ.ಯೋಗನರಸಿಂಹ ಅವರ ಕನ್ನಡ ಥಿಯೇರ‍್ಸ್, ಡಾ.ಶ್ರೀಕಂಠಮೂರ್ತಿ ಅವರ ಶ್ರೀಕಂಠೇಶ್ವರ ನಾಟಕ ಕಂಪನಿ ಸೇರಿದಂತೆ ಅನೇಕ ನಾಟಕ ಕಂಪನಿ ಮೈಸೂರಲ್ಲಿ ಹೆಸರನ್ನು ಮಾಡಿದವು. ರಂಗನಟನೆ ಪ್ರಸಿದ್ಧಿಯಾಯಿತು. ವರದಾಚಾರ್ಯರು, ಮಳವಳ್ಳಿ ಸುಂದ್ರಮ್ಮ, ಜಿ.ನಾಗೇಶ ರಾಯರು, ಕೊಟ್ಟೂರಪ್ಪ, ಹೆಚ್.ಕೆ.ಯೋಗನರಸಿಂಹ, ಹೊನ್ನಪ್ಪ ಭಾಗವತ್ ಹಾಗೂ ಇನ್ನಿತರ ರಂಗ ದಿಗ್ಗಜರು ರಂಗಭೂಮಿಯನ್ನು ವೈಭವೀಕರಿಸಿದರು ಎಂದು ಹೇಳಿದರು.

ಇದಕ್ಕೂ ಮುನ್ನ ರಂಗಚಿAತಕ ಡಿ.ನಾಗೇಂದ್ರಕುಮಾರ್ ನೇತೃತ್ವದಲ್ಲಿ ಮಹಿಳೆಯರ ತಂಡ ರಂಗಗೀತೆ ಗಾಯನ ನಡೆಸಿದರು. ಕಾರ್ಯಕ್ರಮದ ಅಧ್ಯ ಕ್ಷತೆಯನ್ನು ರಂಗಚಿAತಕಿ ಪ್ರೊ.ಮೀರಾಮೂರ್ತಿ ವಹಿಸಿದ್ದರು. ಇದೇ ವೇಳೆ ಚಾಮರಾಜನಗರದ ವೆಂಕಟರಾಜು `ಅರೆ ವೃತ್ತಿ ಮತ್ತು ರೆಪರ್ಟರಿ ವಿಷಯ ಕುರಿತು ಮಾತನಾಡಿದರೆ, ರಂಗಚಿAತಕ ಡಿ.ನಾಗೇಂದ್ರಕುಮಾರ್ `ಹವ್ಯಾಸಿ ರಂಗಭೂಮಿ’ ಕುರಿತು ವಿಷಯ ಮಂಡಿಸಿದರು. ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸರೋಜ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ದೇಸಿರಂಗ ಸಾಂಸ್ಕೃತಿಕ ಕೃಷ್ಣ ಜನಮನ, ಪಿ.ಎಸ್.ದಿನಮಣ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »