ಜಲಶಕ್ತಿ ಅಭಿಯಾನದ  ಕಾಮಗಾರಿ ಪರಿಶೀಲನೆ
ಮೈಸೂರು

ಜಲಶಕ್ತಿ ಅಭಿಯಾನದ ಕಾಮಗಾರಿ ಪರಿಶೀಲನೆ

July 1, 2022

ಮೈಸೂರು, ಜೂ.30(ಆರ್‍ಕೆಬಿ)- ಕೇಂದ್ರ ಸರ್ಕಾರದ ಜಲ ಸಚಿವಾಲಯದ ಅಡಿಯಲ್ಲಿ ಜಲಶಕ್ತಿ ಅಭಿಯಾನ ಸಂಸ ದೀಯ ಸಲಹಾ ಸಮಿತಿ ನಿಯೋಗ ಗುರುವಾರ ಮೈಸೂರು ಜಿಲ್ಲೆಯ ಮೂರು ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿ ನಡೆದಿರುವ ಜಲಶಕ್ತಿ ಅಭಿಯಾನ ಕಾಮಗಾರಿಗಳನ್ನು ಪರಿಶೀಲಿಸಿತು.

ಕೇಂದ್ರ ಜಲಶಕ್ತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ಟುಡು ನೇತೃತ್ವದಲ್ಲಿ 10 ಮಂದಿ ಸಂಸದರು, ಕಾರ್ಯದರ್ಶಿಗಳು ಮತ್ತು ಸಚಿವಾಲ ಯದ ಹಿರಿಯ ಅಧಿಕಾರಿಗಳನ್ನು ಒಳ ಗೊಂಡಿದ್ದ ನಿಯೋಗ ಮೈಸೂರು ತಾಲೂ ಕಿನ ನಾಗವಾಲ ಗ್ರಾಮ ಪಂಚಾಯಿತಿಯ ನಾಗವಾಲ, ಹುಣಸೂರು ತಾಲೂಕಿನ ಬಿಳಿಕೆರೆ ಮತ್ತು ಹುಸೇನಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅಲ್ಲಿ ನಡೆದಿ ರುವ ಜಲಶಕ್ತಿ ಅಭಿಯಾನದ ಕಾರ್ಯ ಗಳನ್ನು ಖುದ್ದು ವೀಕ್ಷಿಸಿದರು. ನಿಯೋ ಗದಲ್ಲಿ ಕೇಂದ್ರ ಸಚಿವ ಬಿಶ್ವೇಶ್ವರ ಟುಡು ಅವರೊಂದಿಗೆ ಸಮಿತಿಯ ಸದಸ್ಯರಾದ ಬಲಕ್‍ನಾಥ್, ರಮೇಶ್‍ಭಾಯ್ ಲವ್‍ಜಿ ಭಾಯ್ ಧಾಡುಕ್, ಮುಖೇಶ್ ರಜ್‍ಪುತ್, ಡಾ.ಸಾಕ್ಷಿ ಜಿ ಸ್ವಾಮಿ ಮಹರಾಜ್, ಕೋಡಿಕುನ್ನಿಲ್ ಸುರೇಶ್, ಸಕಲ್‍ದೀಪ್ ರಾಜ್‍ಭರ್, ಸತ್ಯಪಾಲ್ ಸಿಂಗ್ ಸೇರಿದಂತೆ ಇಲಾಖೆಯ ಕಾರ್ಯ ದರ್ಶಿಗಳು, ಅಧಿಕಾರಿಗಳು ಇದ್ದರು.

ನಿಯೋಗ ನಾಗವಾಲ ಗ್ರಾಮದಲ್ಲಿ ಮುಖ್ಯ ರಸ್ತೆಯ ಕೆರೆ, ಹತ್ತಿರದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ, ಸಾಕದೇವಮ್ಮ ದೇವಸ್ಥಾನದ ಕಟ್ಟೆ ಹೂಳು ತೆಗೆದು ಅಭಿವೃದ್ಧಿಪಡಿಸಿರುವುದನ್ನು ವೀಕ್ಷಿಸಿ, ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿ, ಮೆಚ್ಚುಗೆ ವ್ಯಕ್ತಪಡಿಸಿತು. ಎಲ್ಲಾ ಜಲಮೂಲ ಗಳ ಸಂಖ್ಯೆ ಮತ್ತು ಇತರ ಪ್ರಮುಖ ಅಂಕಿ ಅಂಶಗಳ ಕುರಿತು ಮಾಹಿತಿ ಪಡೆದು ಕೊಂಡ ನಿಯೋಗ, 6 ಲಕ್ಷ ವೆಚ್ಚದಲ್ಲಿ ಸಾಂಪ್ರದಾಯಿಕ ಜಲಮೂಲಗಳ ನವೀ ಕರಣ (ಕಲ್ಯಾಣಿ ಅಭಿವೃದ್ಧಿ) ಮತ್ತು ನಾಗ ವಾಲ ಗ್ರಾಮದಲ್ಲಿ 8 ಲಕ್ಷ ರೂ. ವೆಚ್ಚದಲ್ಲಿ ಸಾಕದೇವಮ್ಮ ದೇವಸ್ಥಾನದ ಕಟ್ಟೆ ಹೂಳು ತೆಗೆಯುವುದು ಮತ್ತು ಅಭಿವೃದ್ಧಿಪಡಿ ಸುವುದು. ಜಲಸಂರಕ್ಷಣೆ ಮತ್ತು ಜಲ ಮೂಲಗಳ ಪುನಶ್ಚೇತನಕ್ಕಾಗಿ ಜೆಎಸ್‍ಎ ಯೋಜನೆ ಅಡಿಯಲ್ಲಿರುವ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳು ಸಚಿ ವರು ಮತ್ತು ನಿಯೋಗಕ್ಕೆ ವಿವರಣೆ ನೀಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಜಲಶಕ್ಕತಿ ಮತ್ತು ಬುಡಕಟ್ಟು ವ್ಯವಹಾರಗಳ ರಾಜ್ಯ ಸಚಿವ ಬಿಶ್ವೇಶ್ವರ ಟುಡು, ಜಲಜೀವನ್ ಮಿಷನ್‍ನ ಮುಖ್ಯ ಉದ್ದೇಶವೇ ನೀರಿನ ಸಂರಕ್ಷಣೆ ಮತ್ತು ಮಳೆ ನೀರು ಕೊಯ್ಲು ರಚನೆ, ನಿರ್ವಹಣೆ, ಸಾಂಪ್ರದಾಯಿಕ ಮತ್ತು ಇತರೆ ಜಲಮೂಲಗಳು, ಕೆರೆ ಕಟ್ಟೆಗಳ ನವೀಕರಣ, ಮರುಬಳಕೆಯ ಮೇಲೆ ಕೇಂದ್ರೀಕರಿಸಿದ ನೀರಿನ ಸಂರಕ್ಷಣೆಯಾಗಿದೆ ಎಂದು ಹೇಳಿದರು. ಕೊಳವೆಬಾವಿಗಳ ಮರುಪೂರಣ, ಜಲಾನಯನ ಅಭಿವೃದ್ಧಿ, ಅರಣ್ಯೀಕರಣ ಯೋಜನೆಯ ಮುಖ್ಯ ಉದ್ದೇಶವಾಗಿದೆ ಎಂದರು. ನಡೆಯುತ್ತಿರುವ ಕಾಮಗಾರಿಗಳ ಪ್ರಗತಿಗೆ ತೃಪ್ತಿ ವ್ಯಕ್ತಪಡಿಸಿದ ತುಡು, ಮಹಾತ್ಮ ಗಾಂಧಿ ರಾಷ್ಟ್ರೀಯ. ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ (ಮನರೇಗಾ) ಬೆಂಬಲದೊಂದಿಗೆ ಜಲಶಕ್ತಿ ಅಭಿಯಾನದಡಿ ನಡೆಯುತ್ತಿರುವ ಎಲ್ಲಾ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಲು ನಿಯೋಗವು ಎರಡು ದಿನಗಳ ಕಾಲ ರಾಜ್ಯಕ್ಕೆ ಭೇಟಿ ನೀಡಿದ್ದು, ಸಮಾಲೋಚನಾ ಸಮಿತಿಯು ಜಲಶಕ್ತಿ ಅಭಿಯಾನ ಅಡಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಕುರಿತು ಸ್ಥಳೀಯ ಜನರಿಗೆ ಪ್ರಯೋಜನ ಆಗುತ್ತಿರುವ ಬಗ್ಗೆ ಅಧ್ಯಯನ ಮಾಡುತ್ತಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರು ಗ್ರಾಮೀಣ ಜೀವನೋಪಾಯವನ್ನು ಸುಧಾರಿಸಲು ಮತ್ತು ಅತ್ಯುತ್ತಮ ನೀರಿನ ಸಂರಕ್ಷಣೆ ಮತ್ತು ಕೊಯ್ಲು ವಿಧಾನಗಳನ್ನು ಜಾರಿಗೆ ತರಲು ನಿರ್ಧರಿಸಿದ್ದಾರೆ. ಅವರ ಮತ್ತು ಸರ್ಕಾರದ ಆಶಯದಂತೆ ನೀರಿನ ಪುನರುಜ್ಜೀವನಕ್ಕಾಗಿ ದೇಶದ ಪ್ರತಿ ಜಿಲ್ಲೆಯಲ್ಲಿ 50 ಕೆರೆ-ಕಟ್ಟೆಗಳ ಪುನರುಜ್ಜೀವನ ಮಾಡಲು ನಿರ್ಧರಿಸಲಾಗಿದೆ. ಭಾರತ ಸ್ವಾತಂತ್ರ್ಯದ 75 ನೇ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಸಮುದ್ರಕ್ಕೆ ಹರಿದುಹೋಗುತ್ತಿರುವ ನೀರನ್ನು ಸಂಗ್ರಹಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಎಂದು ತಿಳಿಸಿದರು. ದೇಶದ ಹಲವೆಡೆ, ಅದರಲ್ಲೂ ವಿಶೇಷವಾಗಿ ಮಳೆ ಕೊರತೆ ಇರುವ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕುಸಿಯುತ್ತಿರುವ ವರದಿಗಳನ್ನು ಉಲ್ಲೇಖಿಸಿದ ಟುಡು, ಸಣ್ಣಪುಟ್ಟ ಕೆರೆ ಕಟ್ಟೆಗಳು ಸೇರಿದಂತೆ ಎಲ್ಲಾ ಜಲಮೂಲಗಳನ್ನು ಪುನರುಜ್ಜೀವನಗೊಳಿಸುವ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅಲ್ಲದೆ, ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಮತ್ತು ಸಂಗ್ರಹಿಸಲು ಉತ್ತಮ ಮಳೆನೀರು ಕೊಯ್ಲು ವಿಧಾನಗಳನ್ನು ಅಳವಡಿಸಲಾಗುತ್ತಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಜಲಶಕ್ತಿ ಅಭಿಯಾನದಡಿ ಕರ್ನಾಟಕದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ತೃಪ್ತಿ ಇದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜಲಶಕ್ತಿ ಅಭಿಯಾನದಡಿ ಉತ್ತಮ ಕೆಲಸ ಮಾಡುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ ಚೆನ್ನಾಗಿದೆ. ಮಳೆ ಕೊರತೆ ಸಂದರ್ಭದಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ರಾಜ್ಯ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Translate »