ಮೈಸೂರ್ ಸೈನ್ಸ್ ಫೌಂಡೇಷನ್‍ನ ದಶಮಾನೋತ್ಸವ ಪ್ರಯುಕ್ತಜು.9ರಂದು ಮೈಸೂರಲ್ಲಿಸೈನ್ಸ್ ಎಕ್ಸ್‍ಪೋ
ಮೈಸೂರು

ಮೈಸೂರ್ ಸೈನ್ಸ್ ಫೌಂಡೇಷನ್‍ನ ದಶಮಾನೋತ್ಸವ ಪ್ರಯುಕ್ತಜು.9ರಂದು ಮೈಸೂರಲ್ಲಿಸೈನ್ಸ್ ಎಕ್ಸ್‍ಪೋ

July 1, 2022

ಮೈಸೂರು,ಜೂ.30(ಪಿಎಂ)- ಮೈಸೂರ್ ಸೈನ್ಸ್ ಫೌಂಡೇಷನ್‍ನ ದಶಮಾ ನೋತ್ಸವದ ಅಂಗವಾಗಿ ಜು.9ರಂದು ಸೈನ್ಸ್ ಎಕ್ಸ್‍ಪೋ (ವಿಜ್ಞಾನ ವಸ್ತು ಪ್ರದರ್ಶನ) ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್‍ನ ಪ್ರಧಾನ ಕಾರ್ಯದರ್ಶಿ ಜಿ.ಬಿ.ಸಂತೋಷ್ ಕುಮಾರ್ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕಳೆದ 10 ವರ್ಷಗಳ ಹಿಂದೆ 2012ರ ಜುಲೈನಲ್ಲಿ ಸಮಾನಮನಸ್ಕ ಸರ್ಕಾರಿ ಶಾಲಾ-ಕಾಲೇಜು ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾ ಪಕರಿಂದ ನಮ್ಮ ಫೌಂಡೇಷನ್ ಪ್ರಾರಂಭ ವಾಯಿತು. ವಿದ್ಯಾರ್ಥಿಗಳು ಮತ್ತು ಜನ ಸಾಮಾನ್ಯರಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಫೌಂಡೇಷನ್ ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ದಶಮಾನೋತ್ಸವದ ಪ್ರಯುಕ್ತ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿದೆ ಎಂದು ಹೇಳಿದರು.

ವಿಜಯನಗರದ ಸದ್ವಿದ್ಯಾ ಸೆಮಿ ರೆಸಿ ಡೆನ್ಸಿಯಲ್ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಂದು ಬೆಳಗ್ಗೆ 9ರಿಂದ ಸಂಜೆ 5.30ರವರೆಗೆ ವಸ್ತು ಪ್ರದರ್ಶನ ನಡೆಯಲಿದೆ. ಅಂದು ಬೆಳಗ್ಗೆ 10ಕ್ಕೆ ಇಸ್ರೋ ಮಾಜಿ ಅಧ್ಯಕ್ಷ ಎ.ಎಸ್.ಕಿರಣ್‍ಕುಮಾರ್ ಪ್ರದ ರ್ಶನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

30ಕ್ಕೂ ಹೆಚ್ಚು ಸಂಶೋಧನಾ ಸಂಸ್ಥೆಗಳು ವಿಜ್ಞಾನ ಪ್ರದರ್ಶನ ನೀಡಲಿವೆ. ಬೆಂಗಳೂರು ಇಸ್ರೋ ಸಂಸ್ಥೆಯ `ಸ್ಪೇಸ್ ಆನ್ ವ್ಹೀಲ್ಸ್ (ಗಾಲಿಗಳ ಮೇಲೆ ಬಾಹ್ಯಾ ಕಾಶ)’ ಇದೇ ಮೊಟ್ಟಮೊದಲ ಬಾರಿಗೆ ಮೈಸೂರಿನಲ್ಲಿ ಪ್ರದರ್ಶನಗೊಳ್ಳುತ್ತಿದ್ದು, ಇದು ಈ ಎಕ್ಸ್‍ಪೋದ ಪ್ರಮುಖ ಆಕರ್ಷಣೆಯಾಗಿದೆ. ಇದರಲ್ಲಿ ವೋಲ್ವಾ ಬಸ್ ಬಳಸಿ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ರಾಕೆಟ್, ಉಪಗ್ರಹಗಳ ಮಾದರಿ ಗಳೊಂದಿಗೆ ಅವುಗಳನ್ನು ನಿಯೋಜಿಸು ವಲ್ಲಿ ಇರುವ ಒಳನೋಟಗಳನ್ನು ಇಲ್ಲಿ ಒದಗಿಸಲಾಗಿದೆ ಎಂದು ವಿವರಿಸಿದರು.

ಆರ್ಯಭಟ ಸಂಸ್ಥೆಯಿಂದ ಸಂಚಾರಿ ತಾರಾಲಯದ 3ಡಿ ವೀಡಿಯೋ ಪ್ರದ ರ್ಶನವಿದ್ದು, ಬಾಹ್ಯಾಕಾಶಕ್ಕೆ ಸಂಬಂಧಿಸಿದ 15 ನಿಮಿಷಗಳ 3ಡಿ ವೀಡಿಯೋ ಪ್ರದರ್ಶನ ಇದಾಗಿದೆ. ಮೈಸೂರು ವಿವಿಯ ಸಿಡಿಎಸ್‍ಎಸ್ ವತಿಯಿಂದ ಸಂಚಾರಿ ವಿಜ್ಞಾನ ಪ್ರಯೋಗಾಲಯ, ಸಿಎಫ್‍ಟಿಆರ್‍ಐನ ಸಂಶೋಧನೆಗಳ ಪ್ರದರ್ಶನ, ಬೆಂಗಳೂರು ಜವಾಹರಲಾಲ್ ನೆಹರು ಪ್ಲಾನೆಟೋರಿಯಂ ವತಿಯಿಂದ ವಿಜ್ಞಾನ ಮಾದರಿಗಳ ಪ್ರದರ್ಶನ ಸಹ ಇರಲಿದೆ ಎಂದರು.
ಯುವರಾಜ ಕಾಲೇಜಿನ ಆಹಾರ ಮತ್ತು ಪೌಷ್ಟಿಕ ವಿಭಾಗದಿಂದ ಆಹಾರ ಕಲಬೆರಕೆ ಪತ್ತೆ ಹಚ್ಚುವ ಬಗ್ಗೆ ಪ್ರಾತ್ಯಕ್ಷಿಕೆ ನೀಡುವ ಜೊತೆಗೆ ನ್ಯೂಟ್ರೀಷನ್ ಚಾರ್ಚ್ ತಯಾರಿಸಿ ನೀಡಲಿದ್ದಾರೆ. ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರದಿಂದ ಆರೋಗ್ಯ ತಪಾಸಣೆ, ಅಗಸ್ತ್ಯ ಇಂಟರ್ ನ್ಯಾಷನಲ್ ಫೌಂಡೇಷನ್ ಮತ್ತು ಪ್ರಥಮ್ ಸಂಸ್ಥೆಯಿಂದ ವಿಜ್ಞಾನ ಮತ್ತು ಗಣಿತದ ಮಾದರಿಗಳ ಪ್ರದರ್ಶನ ಇರಲಿದೆ. ಜಸ್ಟ್ ರೋಬಾಟಿಕ್ಸ್ ಮತ್ತು ಟೆಕ್ನೋ ಅನ್ವೇಷಣ್ ಸಂಸ್ಥೆ ವತಿಯಿಂದ ರೋಬಾಟಿಕ್ಸ್ ತಂತ್ರ ಜ್ಞಾನ ಪ್ರದರ್ಶನದೊಂದಿಗೆ ರೋಬೋ ಮಾರಾಟ ಕೂಡ ಇರಲಿದೆ ಎಂದು ತಿಳಿಸಿದರು.

ಇದಲ್ಲದೆ, ಶಾರದಾವಿಲಾಸ ಫಾರ್ಮಸಿ ಕಾಲೇಜು ವತಿಯಿಂದ ಮಾತ್ರೆ ತಯಾರಿಕೆ ಬಗ್ಗೆ ಪ್ರದರ್ಶನ ಇರಲಿದೆ. ಪುಸ್ತಕ ಮಾರಾಟ ಸಂಸ್ಥೆಗಳಿಂದ ವಿಜ್ಞಾನ ಮತ್ತು ಗಣಿತ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಕ್ರಿಯಾಶೀಲ ಶಿಕ್ಷಕರು ತಯಾರಿ ಸಿದ ವಿಜ್ಞಾನ ಮತ್ತು ಗಣಿತ ಮಾದರಿಗಳ ಪ್ರದರ್ಶನವೂ ಇರಲಿದೆ. ಓರಿಗಾಮಿ ತಜ್ಞ ವಿ.ಎಸ್.ಎಸ್.ಶಾಸ್ತ್ರಿ ಅವರಿಂದ ಗಣಿತ ಆಟಿಕೆಗಳು ಮತ್ತು ಕಾರ್ಟೂನ್ ಚಿತ್ರ ಪ್ರದರ್ಶನ, ಶಿಕ್ಷಕರಾದ ಮೋಹನ್ ಆರಾಧ್ಯ ಮತ್ತು ಮುರಳಿ ರಚಿಸಿರುವ ವಿಜ್ಞಾನಿಗಳು ಮತ್ತು ಪ್ರಕೃತಿಯ ಚಿತ್ರಗಳ ಪ್ರದರ್ಶನ ಸಹ ಇರಲಿದೆ ಎಂದು ವಿವರಿಸಿದರು.

ಎಸ್.ಎನ್.ಪ್ರಸಾದ್ ಅವರಿಂದ ದೂರ ದರ್ಶಕಗಳ ಪ್ರದರ್ಶನ, ವಿಜ್ಞಾನ ಮತ್ತು ಗಣಿತ ಮಾದರಿಗಳು ಮತ್ತು ಪ್ರಯೋಗ ಗಳ ಕಿಟ್ ಪ್ರದರ್ಶನ ಮತ್ತು ಮಾರಾಟ, ಸೌರಕನ್ನಡಕಗಳ (ಸೂರ್ಯಗ್ರಹಣ ವೀಕ್ಷಿಸಲು) ಮಾರಾಟ, ಜೆಎಸ್‍ಎಸ್ ವೈದ್ಯಕೀಯ ಕಾಲೇಜು ವತಿಯಿಂದ ಮಾನ ವನ ಅಂಗಗಳ ಮಾದರಿಗಳ ಪ್ರದರ್ಶನ, ಪ್ರಣತಿ ಇನ್ನೋವೇಟರ್ ಸಂಸ್ಥೆಯಿಂದ ಹ್ಯಾಮ್ ರೇಡಿಯೋ ಪ್ರದರ್ಶನ ಹಾಗೂ ಪರಮಾಣು ಸಂಸ್ಥೆ ವತಿಯಿಂದ ಏರೋ ಮಾಡೆಲಿಂಗ್ ಪ್ರದರ್ಶನ ಸಹ ನಡೆಯಲಿದೆ ಎಂದು ಹೇಳಿದರು.

ಎಕ್ಸ್‍ಪೋಗೆ ಪ್ರವೇಶ ಉಚಿತ: ವಿಜ್ಞಾನ ಮತ್ತು ಗಣಿತ ಮಾದರಿ ತಯಾರಿಕೆ ಕಾರ್ಯಾಗಾರ ಹಮ್ಮಿಕೊಂಡಿದ್ದು, ಇದರಲ್ಲಿ ಮಕ್ಕಳು (ಮುಂಗಡವಾಗಿ ನೋಂದಣಿ ಮಾಡಿರಬೇಕು) ಕೆಲ ವಿಜ್ಞಾನ ಮಾದರಿ ತಯಾರಿಸಿ ಕೊಂಡೊಯ್ಯುವ ಅವಕಾಶ ಕಲ್ಪಿಸಲಾಗಿದೆ. ಡಿಸಿ ಮೋಟಾರ್, ಗಣಿತ 3ಡಿ ಮಾದರಿಗಳು ಮತ್ತು ಗಣಿತ ಗಡಿಯಾರ ತಯಾರಿಸಬಹುದು. ಇದಕ್ಕೆ ಅಗತ್ಯವಿರುವ ಸಾಮಗ್ರಿ ನೀಡಿ ತಯಾರಿಕೆಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು. ಎಕ್ಸ್‍ಪೋಗೆ ಪ್ರವೇಶ ಉಚಿತವಿದ್ದು, ವಿವರಗಳಿಗೆ ಮೊ.ಸಂ. 98444 05284 ಅನ್ನು ಸಂಪರ್ಕಿಸಬಹುದು. ವಿದ್ಯಾರ್ಥಿ ಗಳು ಹಾಗೂ ಜನಸಾಮಾನ್ಯರು ಎಕ್ಸ್ ಪೋನ ಪ್ರಯೋಜನ ಪಡೆದು ಕೊಳ್ಳಬೇಕೆಂದು ಕೋರಿದರು. ಫೌಂಡೇ ಷನ್‍ನ ಮಹಾ ಪೋಷಕ ಡಾ.ಟಿ.ತಿಪ್ಪೇ ಸ್ವಾಮಿ, ಅಧ್ಯಕ್ಷ ಸಿ.ಕೃಷ್ಣೇಗೌಡ, ಖಜಾಂಚಿ ಎಂ.ಜಿ.ಎನ್.ಪ್ರಸಾದ್, ಸದಸ್ಯ ರಾದ ಸಿ.ಪುರಂದರ್, ಹೆಚ್.ವಿ. ಮುರಳೀಧರ್ ಗೋಷ್ಠಿಯಲ್ಲಿದ್ದರು.

Translate »