ದಾಳಿಗೆಲ್ಲಾ ಹೆದರುವ ಮಗ ನಾನಲ್ಲ
ಮೈಸೂರು

ದಾಳಿಗೆಲ್ಲಾ ಹೆದರುವ ಮಗ ನಾನಲ್ಲ

October 6, 2020

ಬೆಂಗಳೂರು,ಅ.5- 35 ವರ್ಷಗಳ ರಾಜಕೀಯ ಜೀವನದಲ್ಲಿ ನಾನು ತಪ್ಪು ಮಾಡಿಲ್ಲ. ನನ್ನನ್ನು ಮುಗಿ ಸಲು ನಡೆಸುತ್ತಿರುವ ಇಂತಹ ರಾಜಕೀಯ ಕುತಂತ್ರಕ್ಕೆ ಹೆದರುವ ಮಗ ನಾನಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತೆ ಅಬ್ಬರಿಸಿದ್ದಾರೆ.

ಸೋಮವಾರ ಸಿಬಿಐ ದಾಳಿ ನಂತರ ಸದಾಶಿವ ನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು, ಈ ಪ್ರಕರಣ ಸಿಬಿಐಗೆ ಬರುವುದಿಲ್ಲ ಎಂದು ಅಡ್ವೊಕೇಟ್ ಜನರಲ್ ಹೇಳಿ ದ್ದರೂ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ಅನುಮತಿ ನೀಡಿದ್ದಾರೆ ಎಂದು ಆರೋಪಿಸಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ನಾನು ಹಲವಾರು ಕಾರ್ಯಕ್ರಮಗಳನ್ನು ಘೋಷಿಸಿದ ಮೇಲೆ ಸೆಪ್ಟೆಂಬರ್ 30ರಂದು ನನ್ನ ಮೇಲೆ ಸಿಬಿಐ ಎಫ್‍ಐಆರ್ ಹಾಕಲು ಅನುಮತಿ ನೀಡಲಾಗಿದೆ. ಹೀಗೆ ಕುತಂತ್ರ ನಡೆಸಿ ನನ್ನ ಬಾಯಿ ಮುಚ್ಚಿಸಬಹುದು ಎಂಬುದು ಭ್ರಮೆ ಅಷ್ಟೇ. ಯಾವ ರಾಜಕೀಯ ಕುತಂತ್ರಕ್ಕೂ ಈ ಡಿ.ಕೆ. ಶಿವಕುಮಾರ ಹೆದರುವ ಮಗನಲ್ಲ ಎಂದರು.

ಮುಖ್ಯಮಂತ್ರಿಗಳು ಅನುಮತಿ ನೀಡಿದ್ದರಿಂದ ಅಧಿಕಾರಿಗಳು ಎಫ್‍ಐಆರ್ ಹಾಕಿ ನನ್ನ ಮನೆಗೆ ಶೋಧನೆ ನಡೆಸಲು ಬಂದಿದ್ದಾರೆ. ಉಪ ಚುನಾವಣೆ ಹತ್ತಿರವಿರುವುದರಿಂದ ನನ್ನ ಹಾಗೂ ನನ್ನ ಆಪ್ತರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ನಾನು ಎಲ್ಲಿಯೂ ಓಡಿ ಹೋಗುತ್ತಿರಲಿಲ್ಲ. ಇಷ್ಟು ತರಾತುರಿಯಲ್ಲಿ ದಾಳಿ ಮಾಡುವ ಅಗತ್ಯವೂ ಇರಲಿಲ್ಲ ಎಂದರು.

ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿದ್ದೇನೆ ಎಂದು ಆರೋಪಿಸುತ್ತಿದ್ದಾರೆ. ನಾನು ರೈತ. ವೃತ್ತಿಯಲ್ಲಿ ಉದ್ಯಮಿ ಎಂದ ಅವರು, ನಾವು ಯಾವಾಗಲೋ ಖರೀದಿಸಿದ ಆಸ್ತಿಯ ಮೌಲ್ಯ ಈಗ ಸಹಜವಾಗಿಯೇ ಹೆಚ್ಚಾಗಿರುತ್ತದೆ ಎಂದ ಅವರು, ಎಸಿಬಿ ಮಾಡಬೇಕಾದ ಕೆಲಸವನ್ನು ಸಿಬಿಐ ಮಾಡುತ್ತಿದೆ. ಯಾವ ತನಿಖಾ ಸಂಸ್ಥೆ ಬೇಕಾದರೂ ತನಿಖೆ ಮಾಡಲಿ. ನನ್ನನ್ನು ಮತ್ತೆ ಜೈಲಿಗೆ ಹಾಕಲಿ. ಇದಕ್ಕೆಲ್ಲಾ ಹೆದರುವುದೇ ಇಲ್ಲ ಎಂದರು.
2017ರಲ್ಲಿ ಇದೇ ಮನೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿತ್ತು. ನಾವೆಲ್ಲಾ ಗುಜರಾತ್ ಚುನಾವಣೆಗೆ ಹೋಗಿದ್ದಕ್ಕಾಗಿ ಆ ದಾಳಿ ನಡೆದಿತ್ತು. ಆಗಲೇ ನನ್ನ ಬಂಧನ ಆಗುತ್ತದೆ ಎಂದು ಕೆಲವರು ನಿರೀಕ್ಷಿಸಿದ್ದರು. 2019ರಲ್ಲಿ ನನ್ನ ಮೇಲೆ ಇಡಿ ಅಧಿಕಾರಿಗಳು ಕೇಸ್ ಹಾಕಿ 48 ದಿನ ಜೈಲಿನಲ್ಲಿ ಇಟ್ಟಿದ್ದರು. ಈಗ ಉಪ ಚುನಾವಣೆ ಹತ್ತಿರ ಬಂದಿದ್ದರಿಂದ ಸಿಬಿಐ ದಾಳಿ ನಡೆಸಿದೆ ಎಂದು ಹೇಳಿದರು.

ಕೊರೊನಾ ಬಂದು ಜನರು ನರಳುತ್ತಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಪಕ್ಷಾತೀತವಾಗಿ ಬೆಂಬಲ ಕೊಟ್ಟಿದ್ದೆವು. ಕೇಂದ್ರ ಸರ್ಕಾರ 20 ಲಕ್ಷ ಕೋಟಿ ಹಾಗೂ ರಾಜ್ಯ ಸರ್ಕಾರ 1700 ಕೋಟಿ ರೂ. ಘೋಷಿಸಿದರೂ, ಅದು ಜನರಿಗೆ ತಲುಪಲಿಲ್ಲ. ಈ ಹಣ ಬಿಜೆಪಿಯ ಸ್ವಂತ ಬೆಳವಣಿಗೆಗೆ ಹೋಯಿತು. ರೈತರು, ಶ್ರಮಿಕರು, ಸಣ್ಣ ಪುಟ್ಟ ವ್ಯಾಪಾರಿಗಳ ನೆರವಿಗೆ ಸರ್ಕಾರ ನಿಲ್ಲಲಿಲ್ಲ. ನಾವು ನಮ್ಮ ಕೈಲಾದ ಸಹಾಯ ಮಾಡಿದೆವು. ರೈತರ ಜಮೀನಿಗೆ ಹೋಗಿ ಹಣ ಕೊಟ್ಟು ಅವರ ಬೆಳೆ ಖರೀದಿಸಿ ಜನರಿಗೆ ಹಂಚಿದೆವು. ಅದು ನಮ್ಮ ಕರ್ತವ್ಯವೂ ಆಗಿತ್ತು. ನೀವು ಹಣ ಲೂಟಿ ಮಾಡುತ್ತಿದ್ದೀರಿ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತಂದೆವು. ವಿಧಾನಸಭೆ ಹಾಗೂ ವಿಧಾನ ಪರಿಷತ್‍ನಲ್ಲಿ ಹಲವಾರು ವಿಚಾರ ಗಳನ್ನು ಹೊರಗೆಡವಿದೆವು. ಆದರೆ, ಅದ್ಯಾವುದೂ ಪ್ರಯೋಜನವಾಗಲಿಲ್ಲ. ಉತ್ತರ ಪ್ರದೇಶದಲ್ಲಿ ದಲಿತ ಯುವತಿಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಲಾಗಿದೆ. ಆ ಯುವತಿಗೆ ಆದ ದೌರ್ಜನ್ಯವನ್ನು ಕೇಳಬಾರದೇ? ಅದನ್ನು ಪ್ರಶ್ನೆ ಮಾಡಿದ್ದಕ್ಕಾಗಿ ನನ್ನ ಮೇಲೆ ಎಫ್‍ಐಆರ್ ಹಾಕಲಾಗಿದೆ. ರಾಜ್ಯಾದ್ಯಂತ ಇಂದು ಪ್ರತಿಭಟನೆ ಘೋಷಣೆ ಮಾಡಿದ್ದೆ. ನಾನು ಪ್ರತಿಭಟನೆಗೆ ಹೋಗುವ ವೇಳೆಗೆ ಸಿಬಿಐ ದಾಳಿ ನಡೆದಿದೆ. ಇಂತಹ ಕುತಂತ್ರದಿಂದ ನನ್ನ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ. 35 ವರ್ಷ ರಾಜಕಾರಣದಲ್ಲಿ ಕನಕಪುರ, ಸಾತನೂರು ಜನ ನನ್ನನ್ನು ವಿಧಾನಸಭೆಗೆ ಕಳುಹಿಸಿದ್ದಾರೆ. ನನ್ನ ಮೇಲೆ ನೀವು (ಬಿಜೆಪಿ ಯವರು) ರಾಜಕೀಯ ಕುತಂತ್ರಕ್ಕಾಗಿ ಹಾಕಿರುವ ಐಟಿ-ಇಡಿ, ಸಿಬಿಐ ಕೇಸ್‍ಗಳನ್ನು ಬಿಟ್ಟರೆ ಬೇರೆ ಯಾವುದಾದರೂ ಕೇಸ್ ಇದೆಯೇ ಎಂಬುದನ್ನು ತೋರಿಸಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರಶ್ನಿಸುವುದಾಗಿ ಅವರು ಹೇಳಿದರು.

ಕಳೆದ 30 ವರ್ಷಗಳಲ್ಲಿ ರಾಜಕಾರಣ ಮಾಡಿದ ಯಾರೂ ಏನೂ ಮಾಡಲೇ ಇಲ್ಲ, ಎಲ್ಲರೂ ಸತ್ಯಹರಿಶ್ಚಂದ್ರನ ಮೊಮ್ಮಕ್ಕಳು. ಅವರಿಗೆಲ್ಲಾ ಒಳ್ಳೆಯದಾಗಲಿ ಎಂದು ಲೇವಡಿ ಮಾಡಿದ ಶಿವಕುಮಾರ್, ಬಿಜೆಪಿಯಲ್ಲಿ ಯಾರು ಭ್ರಷ್ಟಾಚಾರ ಮಾಡಿಲ್ಲವೇ? ನಿಮ್ಮ ಕಣ್ಣಿಗೆ ಡಿ.ಕೆ.ಶಿವಕುಮಾರ್ ಮಾತ್ರನಾ ಬೀಳುವುದು? ನನ್ನ ಶಕ್ತಿದೇವರು ಅಜ್ಜಯ್ಯ ಹಾಗೂ ಜನರ ಆಶೀರ್ವಾದ ಇರುವವರೆಗೂ ನನ್ನನ್ನು ಏನೂ ಮಾಡಲು ಸಾಧ್ಯವಿಲ್ಲ ಎಂದು ಶಿವ ಕುಮಾರ್ ಹೇಳಿದರು. ಇದಕ್ಕೂ ಮುನ್ನ ತಮ್ಮ ನಿವಾಸದ ಮುಂದೆ ನೆರೆದಿದ್ದ ಕಾರ್ಯ ಕರ್ತರನ್ನುದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ತಾನಾಗಲಿ, ಕಾಂಗ್ರೆಸ್ ಪಕ್ಷವಾಗಲಿ ಇಂತಹ ರಾಜಕೀಯ ಕುತಂತ್ರಗಳಿಗೆ ಹೆದರುವುದಿಲ್ಲ ಎಂದರಲ್ಲದೆ, ಉಪಚುನಾವಣೆ ಯಲ್ಲಿ ಬಿಜೆಪಿಯನ್ನು ಸೋಲಿಸಿ, ತಕ್ಕ ಪಾಠ ಕಲಿಸಬೇಕು ಎಂದು ಮನವಿ ಮಾಡಿದರು.

ನನ್ನ ಮಕ್ಕಳು ಶೂರರು
ಬೆಂಗಳೂರು, ಅ. 5- ರಾಜಕೀಯ ಕುತಂತ್ರಗಳಿಗೆ ನನ್ನ ಮಕ್ಕಳು ಹೆದರುವು ದಿಲ್ಲ. ಅವರು ಶೂರರು ಎಂದು ಡಿ.ಕೆ.ಶಿವ ಕುಮಾರ್ ತಾಯಿ ಗೌರಮ್ಮ ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮ ಗಳ ಜೊತೆ ಇಂದು ಮಾತನಾಡಿದ ಅವರು, ನನ್ನ ಮಗನನ್ನು ಈ ಹಿಂದೆಯೂ ಬಂಧಿಸಿ ಜೈಲಿಗೆ ಹಾಕಲಾಗಿತ್ತು. ಇಂದು ಕೂಡ ಅಧಿಕಾರಿಗಳು ದಾಳಿ ನಡೆಸಿ ದ್ದಾರೆ. ಇದ್ಯಾವುದಕ್ಕೂ ಆತ ಹೆದರಲಿಲ್ಲ, ಆರಾಮವಾಗಿದ್ದಾನೆ. ನನ್ನ ಮಕ್ಕಳು ಯಾವುದೇ ರೀತಿಯ ತಪ್ಪು ಮಾಡುವವ ರಲ್ಲ. ನಾವು ಅವರನ್ನು ಹಾಗೆ ಬೆಳೆಸ ಲಿಲ್ಲ ಎಂದು ಗೌರಮ್ಮ ಹೇಳಿದರು.

Translate »