ಜು.1ರಿಂದ 14ರವರೆಗೆ ICSE 10, 12ನೇ ತರಗತಿ ಪರೀಕ್ಷೆ
ಮೈಸೂರು

ಜು.1ರಿಂದ 14ರವರೆಗೆ ICSE 10, 12ನೇ ತರಗತಿ ಪರೀಕ್ಷೆ

May 23, 2020

ನವದೆಹಲಿ: ಕೊವಿಡ್-19 ಲಾಕ್ ಡೌನ್ ಪರಿಣಾಮ ಮುಂದೂಡಿಕೆ ಯಾಗಿದ್ದ ಕೌನ್ಸಿಲ್ ಫಾರ್ ದಿ ಇಂಡಿ ಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾ ಮಿನೇಷನ್ಸ್ (ಸಿಐಎಸ್‍ಸಿಇ)ನ 10 ಮತ್ತು 12ನೇ ತರಗತಿಯ ಪರೀಕ್ಷೆಗಳು ಜುಲೈ1ರಿಂದ ಜುಲೈ 14ರವರೆಗೆ ನಡೆಯ ಲಿವೆ. ಐಸಿಎಸ್‍ಇ ಇಂದು ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, 10ನೇ ತರಗತಿಯ ಉಳಿದಿರುವ ವಿಷಯ ಗಳ ಪರೀಕ್ಷೆಗಳು ಜುಲೈ 2ರಿಂದ 12 ರವರೆಗೆ ನಡೆಯಲಿದೆ. 12ನೇ ತರಗತಿಯ ಪರೀಕ್ಷೆಗಳು ಜುಲೈ 1ರಿಂದ 14ರವರೆಗೆ ನಡೆಯಲಿವೆ. ದೇಶಾದ್ಯಂತ ಇರುವ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲೂ ಪರೀಕ್ಷೆಗಳು ನಡೆ ಯಲಿವೆ ಎಂದು ಸಿಐಎಸ್‍ಸಿಇ ತಿಳಿಸಿದೆ.

12ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 1ರ ಬೆಳಿಗ್ಗೆ 11ಕ್ಕೆ ಜೀವಶಾಸ್ತ್ರ (1ನೇ ಪೇಪರ್), ಜುಲೈ 3ರ ಬೆಳಿಗ್ಗೆ 11ಕ್ಕೆ ಬಿಜಿ ನೆಸ್ ಸ್ಟಡೀಸ್, ಜುಲೈ 5ರ ಬೆಳಿಗ್ಗೆ 11ಕ್ಕೆ ಭೂಗೋಳ ಶಾಸ್ತ್ರ, ಜುಲೈ 7ರ ಬೆಳಿಗ್ಗೆ 11ಕ್ಕೆ ಸೈಕಾಲಜಿ, ಜುಲೈ 9ರ ಬೆಳಿಗ್ಗೆ 11ಕ್ಕೆ ಸಮಾಜಶಾಸ್ತ್ರ, ಜುಲೈ 11ರ ಬೆಳಿಗ್ಗೆ 11ಕ್ಕೆ ಹೋಂ ಸೈನ್ಸ್ (1ನೇ ಪೇಪರ್), ಜುಲೈ 13ರ ಬೆಳಿಗ್ಗೆ 11ಕ್ಕೆ ಎಲೆಕ್ಟಿವ್ ಇಂಗ್ಲಿಷ್, ಜುಲೈ 14ರ ಬೆಳಿಗ್ಗೆ 11ಕ್ಕೆ ಆರ್ಟ್ 5-ಕ್ರಾಫ್ಟ್

10ನೇ ತರಗತಿ ಪರೀಕ್ಷೆ ವೇಳಾಪಟ್ಟಿ
ಜುಲೈ 2ರ ಬೆಳಿಗ್ಗೆ 11ಕ್ಕೆ ಭೂಗೋಳ ಶಾಸ್ತ್ರ ಎಚ್‍ಸಿಜಿ 2ನೇ ಪೇಪರ್, ಜುಲೈ 4ರ ಬೆಳಿಗ್ಗೆ 11ಕ್ಕೆ ಆರ್ಟ್ ಪೇಪರ್ 4 (ಅಪ್ಲೈಡ್ ಆರ್ಟ್), ಜುಲೈ 6ರ ಬೆಳಿಗ್ಗೆ 11ಕ್ಕೆ (ಗ್ರೂಪ್ 3 ಎಲೆಕ್ಟಿವ್), ಕರ್ನಾಟಕ ಸಂಗೀತ, ಕಮ ರ್ಷಿಯಲ್ ಅಪ್ಲಿಕೇಷನ್ಸ್,
ಕಂಪ್ಯೂಟರ್ ಅಪ್ಲಿಕೇಷನ್ಸ್, ಕುಕರಿ, ನಾಟಕ, ಎಕನಾಮಿಕ್ ಅಪ್ಲಿಕೇಷನ್ಸ್, ಎನ್ವಿರಾನ್‍ಮೆಂಟಲ್ ಅಪ್ಲಿಕೇಷನ್ಸ್, ಫ್ಯಾಶನ್ ಡಿಸೈನಿಂಗ್, ಫ್ರೆಂಚ್, ಜರ್ಮನ್, ಹಿಂದೂಸ್ತಾನಿ ಸಂಗೀತ, ಹೋಂ ಸೈನ್ಸ್, ಇಂಡಿಯನ್ಸ್ ಡಾನ್ಸ್, ಮಾಸ್ ಮೀಡಿಯಾ ಕಮ್ಯುನಿಕೇಷನ್, ಫಿಜಿಕಲ್ ಎಜುಕೇಷನ್, ಸ್ಪಾನಿಶ್, ವೆಸ್ಟರ್ನ್ ಮ್ಯೂಸಿಕ್, ಯೋಗ, ಟೆಕ್ನಿಕಲ್ ಡ್ರಾಯಿಂಗ್ ಅಪ್ಲಿಕೇಷನ್ಸ್, ಜುಲೈ 8ರ ಬೆಳಗ್ಗೆ 11ಕ್ಕೆ ಹಿಂದಿ, ಜುಲೈ 10ರ ಬೆಳಗ್ಗೆ 11ಕ್ಕೆ ಜೀವಶಾಸ್ತ್ರ-ವಿಜ್ಞಾನ 3ನೇ ಪೇಪರ್, ಜುಲೈ 12ರ ಬೆಳಿಗ್ಗೆ 11ಕ್ಕೆ ಎಕಾನಾಮಿಕ್ಸ್ (ಗ್ರೂಪ್ 2 ಎಲೆಕ್ಟಿವ್)

Translate »