ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಿದಲ್ಲಿ ಹೊಸ ಸಂಪುಟ!
ಮೈಸೂರು

ಪಠ್ಯಪುಸ್ತಕದಲ್ಲಿ ಬದಲಾವಣೆ ಮಾಡಿದಲ್ಲಿ ಹೊಸ ಸಂಪುಟ!

June 5, 2022

ಚಿತ್ರದುರ್ಗ, ಜೂ.೪-ಪಠ್ಯಪುಸ್ತಕ ಪರಿಷ್ಕರಣೆಗೆ ಹೊಸ ಸಮಿತಿ ರಚಿಸುವ ಪ್ರಶ್ನೆಯೇ ಇಲ್ಲ. ಈಗಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕೆಲಸ ಮುಗಿದಿರುವುದರಿಂದ ವಿಸರ್ಜನೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಹೊಸದುರ್ಗ ತಾಲೂಕುಗಳಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಗೆ ಆಗಮಿಸಿದ್ದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ಶಾಲಾ ಪಠ್ಯಪುಸ್ತಕ ಬಗ್ಗೆ ಹಲವು ಸ್ವಾಮೀಜಿಗಳು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರ ಜೊತೆ ಚರ್ಚೆ ಮಾಡುತ್ತೇವೆ. ನಮ್ಮದು ಬಸವಪಥ ಸರ್ಕಾರ, ಬಸವಣ್ಣನ ಬಗ್ಗೆ ಬಹಳಷ್ಟು ಉತ್ತಮವಾದ ವಚನಗಳು ಅನೇಕ ಇವೆ. ೨೦೧೫ರಲ್ಲಿ ಕಾಂಗ್ರೆಸ್ ಸರ್ಕಾರವಿದ್ದಾಗ ಪಠ್ಯಪುಸ್ತಕ ಪರಿಷ್ಕರಣೆ ಮಾಡಿರುವ ಬರಗೂರು ರಾಮಚಂದ್ರಪ್ಪ ಸಮಿತಿ ಮತ್ತು ಈಗ ಇರುವ ಸಮಿತಿಗೆ ಕೇವಲ ಒಂದು ವಾಕ್ಯ ವ್ಯತ್ಯಾಸವಿದೆ. ಒಟ್ಟಾರೆ ಅದನ್ನು ಸಮಗ್ರವಾಗಿ ಬದಲಾವಣೆ ಮಾಡಿ ಬಸವಣ್ಣನ ನಿಜವಾದ ಸ್ವರೂಪ ಮತ್ತು ನಿಜವಾದ ಪರಿಚಯವಾಗಬೇಕೆಂದು ಎಲ್ಲರ ಇಚ್ಛೆಯಾಗಿದೆ, ಅದಕ್ಕಾಗಿ ಎಲ್ಲರ ಸಲಹೆಯನ್ನೂ ಪರಿಗಣಿಸಲಾಗು ವುದು ಎಂದರು. ಹೆಡಗೇವಾರ್ ಪಠ್ಯ ಇರುತ್ತದೆ, ಅದರಲ್ಲಿ ತಪ್ಪೇನಿದೆ, ಈ ವಿಚಾರದಲ್ಲಿ ಏನಾದರೂ ವ್ಯತ್ಯಾಸಗಳಿದ್ದರೆ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಮೊದಲೇ ಹೇಳಿದ್ದೆವು. ಈಗ ಎಲ್ಲಿ ಬದ ಲಾವಣೆ ಮಾಡುತ್ತೇವೆಯೋ ಅಲ್ಲಿ ಹೊಸ ಸಂಪುಟ ನೀಡುತ್ತೇವೆ, ಕೂಡಲೇ ಮಾಡುವ ಕೆಲಸ ಸರ್ಕಾರ ಮಾಡುತ್ತದೆ ಎಂದು ತಿಳಿಸಿದರು.

Translate »