ಮೈಸೂರು ಅರಮನೆ ಆವರಣದಲ್ಲಿ ಇಂದು ಮೊದಲ ಹಂತದ ಯೋಗ ತಾಲೀಮು
ಮೈಸೂರು

ಮೈಸೂರು ಅರಮನೆ ಆವರಣದಲ್ಲಿ ಇಂದು ಮೊದಲ ಹಂತದ ಯೋಗ ತಾಲೀಮು

June 5, 2022

ಗಣಪತಿ ಸಚ್ಚಿದಾನಂದ ಶ್ರೀಗಳಿಂದ ಚಾಲನೆ ೨೦ ಸಾವಿರ ಮಂದಿ ಯೋಗ ಪ್ರದರ್ಶನ ನಿರೀಕ್ಷೆ
ಮೈಸೂರು, ಜೂ.೪(ಜಿಎ)- ಮೈಸೂರು ಅರಮನೆ ಅಂಗಳದಲ್ಲಿ ನಾಳೆ(ಜೂ.೫) ಮೊದಲ ಪೂರ್ವಭಾವಿ ಯೋಗ ತಾಲೀಮು ನಡೆಯಲಿದೆ. ಅಂತಾ ರಾಷ್ಟಿçÃಯ ಯೋಗ ದಿನಾಚರಣೆ (ಜೂ.೨೧)ಯಂದು ಮೈಸೂರಿನ ಅರ ಮನೆ ಆವರಣದಲ್ಲಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಸಾಮೂಹಿಕ ಯೋಗ ಪ್ರದರ್ಶನ ನಡೆಯಲಿದ್ದು, ಅದರ ಪೂರ್ವ ಭಾವಿಯಾಗಿ ಭಾನುವಾರ ಬೆಳಗ್ಗೆ ೬ ಗಂಟೆಗೆ ಆಯೋಜಿಸಲಾಗಿರುವ ಮೊದಲ ಯೋಗ ತಾಲೀಮಿಗೆ ಶ್ರೀ ಗಣಪತಿ ಸಚ್ಚಿ ದಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಅರಮನೆ ಮಂಡಳಿ ಕಚೇರಿ ಆವರಣ ದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ ಶಾಸಕ ಎಸ್.ಎ. ರಾಮದಾಸ್, ಯೋಗ ತಾಲೀಮು ಆಯೋಜನೆ ಬಗ್ಗೆ `ಮೈಸೂರು ಮಿತ್ರ’ನಿಗೆ ವಿವರಿಸಿದರು.
ಅಂತಾರಾಷ್ಟಿçÃಯ ಯೋಗ ದಿನಾ ಚರಣೆಯಂದು ಮೈಸೂರಿನ ಕಾರ್ಯ ಕ್ರಮದಲ್ಲಿ ಪ್ರಧಾನಿ ಮೋದಿ ಅವರು ಪಾಲ್ಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡ ಳಿತ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳು ತ್ತಿದೆ. ಯೋಗ ಪ್ರದರ್ಶನವನ್ನು ವ್ಯವಸ್ಥಿತ ವಾಗಿ ಆಯೋಜಿಸುವ ನಿಟ್ಟಿನಲ್ಲಿ ೨-೩ ಬಾರಿ ತಾಲೀಮು ನಡೆಸಲು
ನಿರ್ಧರಿಸಲಾಗಿದೆ. ಈ ಸಂಬAಧ ಸಚಿವರು ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಜವಾಬ್ದಾರಿ ವಹಿಸಿದ್ದಾರೆ ಎಂದರು. ವಿಶ್ವ ಪರಿಸರ ದಿನವಾದ ನಾಳೆ(ಜೂ.೫) ಮೊದಲ ಹಂತದ ಪೂರ್ವಭಾವಿ ಯೋಗ ತಾಲೀಮು ನಡೆಯಲಿದ್ದು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ, ಆಶೀರ್ವದಿಸಲಿದ್ದಾರೆ. ಶ್ರೀ ಭಾಷ್ಯಂ ಸ್ವಾಮೀಜಿ ಇನ್ನಿತರ ಮಹನೀಯರು ಭಾಗವಹಿಸಲಿದ್ದಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಿAದ ಬೆಳಗ್ಗೆ ೫.೩೦ಕ್ಕೆ ಕ್ರೀಡಾಪಟುಗಳು ವಾಕಾಥಾನ್ ಮೂಲಕ ಅರಮನೆ ಆವರಣ ಪ್ರವೇಶಿಸಲಿದ್ದಾರೆ. ಮೈಸೂರು ಯೋಗ ಫೆಡರೇಶನ್ ಹಾಗೂ ವಿವಿಧ ಯೋಗ ಕೇಂದ್ರದ ಯೋಗಪಟುಗಳು ಸೇರಿದಂತೆ ಮಕ್ಕಳಾದಿ ವೃದ್ಧರವರೆಗೂ ಸುಮಾರು ೨೦ ಸಾವಿರ ಮಂದಿ ಯೋಗ ಪ್ರದರ್ಶಿಸುವ ನಿರೀಕ್ಷೆ ಇದೆ. ಅದೇ ವೇಳೆ ಯೋಗ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದರು.

ಮತ್ತೆರಡು ತಾಲೀಮು: ಮುಂದಿನ ಭಾನುವಾರ(ಜೂ.೧೨) ಎರಡನೇ ಯೋಗ ತಾಲೀಮು ನಡೆಯಲಿದ್ದು, ಅಂದು ಸುತ್ತೂರು ಶ್ರೀಗಳು ಭಾಗವಹಿಸಲಿದ್ದಾರೆ. ಜೂ.೧೯ರಂದು ೩ನೇ ಹಾಗೂ ಕಡೆಯ ಯೋಗ ತಾಲೀಮು ಆಯೋಜಿಸಲಾಗುತ್ತದೆ. ಜೂ.೧೦ರ ನಂತರ ಕೇಂದ್ರದಿAದ ಎಸ್‌ಪಿಜಿ ತಂಡ ಮೈಸೂರಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ, ಶಾಸಕ ಎಲ್.ನಾಗೇಂದ್ರ, ಮುಡಾ ಅಧ್ಯಕ್ಷ ಹೆಚ್.ವಿ.ರಾಜೀವ್, ಮೈಸೂರು ಯೋಗ ಫೆಡರೇಶನ್ ಅಧ್ಯಕ್ಷ ಶ್ರೀಹರಿ ಸೇರಿದಂತೆ ನಗರ ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಭಾಗವಹಿಸಿದ್ದರು.

Translate »