ಮೋದಿ ಸಾಧನೆ ಅಸಾಮಾನ್ಯ: ಭಾರತ ವಿಶ್ವಮಾನ್ಯ
ಮೈಸೂರು

ಮೋದಿ ಸಾಧನೆ ಅಸಾಮಾನ್ಯ: ಭಾರತ ವಿಶ್ವಮಾನ್ಯ

June 5, 2022

ಅಂತಾರಾಷ್ಟಿçÃಯ ಮಟ್ಟದಲ್ಲೂ ದೇಶದ ಗೌರವ ಹೆಚ್ಚಳ ರಾಜ್ಯಕ್ಕೆ ೧,೨೩,೭೭೬ ಲಕ್ಷ ಕೋಟಿ ಅನುದಾನ ಕೊಡುಗೆ
ರಾಜ್ಯದ ಪಾಲಿಗೆ ಕಾಮಧೇನು೫ ಕೋಟಿ ಜನರಿಗೆ ಮನೆ ನೀಡುವ ಗುರಿಬಡವರಿಗೆ ಜನೌಷಧಿ ಕೇಂದ್ರ ಸ್ಥಾಪನೆ

ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಇತರರು ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಮೈಸೂರು, ಜೂ. ೪(ಎಂಟಿವೈ)-ನರೇAದ್ರ ಮೋದಿ ಯವರು ಪ್ರಧಾನಿಯಾಗಿ ೮ ವರ್ಷ ಪೂರೈಸಿದ ಹಿನ್ನೆಲೆ ಯಲ್ಲಿ ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್. ನಾಗೇಂದ್ರ ಇತರರು ಜಂಟಿ ಸುದ್ದಿಗೋಷ್ಠಿ ನಡೆಸಿ, ಮೋದಿ ಯವರ ೮ ವರ್ಷದ ಸಾಧನೆ ಅನಾವರಣಗೊಳಿಸಿದರು.

ಮೊದಲ ಅವಧಿಯಲ್ಲಿ ಮೋದಿ ಪ್ರಧಾನಿಯಾಗಿ ನಡೆಸಿದ ಆಡಳಿತ, ನೀಡಿದ ಯೋಜನೆಗಳನ್ನು ಮೆಚ್ಚಿ ದೇಶದ ಜನತೆ ೨ನೇ ಬಾರಿಗೆ ಭಾರೀ ಬಹುಮತದಿಂದ ಗೆಲ್ಲಿಸಿ, ಅವರು ಪ್ರಧಾನಿಯಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿ ದರು. ಇದುವರೆಗೂ ಯಾವ ಪ್ರಧಾನಿಗಳು ಪ್ರದರ್ಶಿಸ ದಂತಹ ಗಟ್ಟಿತನವನ್ನು ಮೋದಿ ಪ್ರದರ್ಶಿಸಿದ್ದಾರೆ. ಇದರಿಂ ದಾಗಿ ಅಂತರರಾಷ್ಟಿçÃಯ ಮಟ್ಟದಲ್ಲಿ ಭಾರತಕ್ಕೆ ಗೌರವ ಹೆಚ್ಚಾಗಿದೆ. ಮೋದಿ ಆಡಳಿತದಲ್ಲಿ ವಿದೇಶಾಂಗ ವ್ಯವಹಾರ ಗಳಲ್ಲಿ ಭಾರತ ತನ್ನ ಛಾಪು ಮೂಡಿಸುತ್ತಿದ್ದು, ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೇ ಭಾರತ ತಟಸ್ಥ ನಿಲುವು ತಾಳುವ ಮೂಲಕ ದಿಟ್ಟತನ ಪ್ರದರ್ಶಿಸಿದೆ. ಮತ್ತೊಂದೆಡೆ ರಷ್ಯಾದಿಂದ ಕಡಿಮೆ ಬೆಲೆಗೆ ಇಂಧನ ತಂದು ದೇಶದ ಜನರಿಗೆ ಪೆಟ್ರೋಲ್‌ಗೆ ಲೀ.ಗೆ ೧೦ ರೂ., ಡೀಸೆಲ್ ಲೀಟರ್‌ಗೆ ೮ ರೂ ಕಡಿಮೆ ಮಾಡಿದ್ದಾರೆ ಎಂದರು. ಕೇಂದ್ರದಲ್ಲಿ ಮೋದಿ ಅಧಿಕಾರಕ್ಕೆ ಬಂದ ದಿನದಿಂದ ಎನ್‌ಆರ್‌ಇಜಿ ಅಡಿ ೨೭,೪೧೮ ಕೋಟಿ ರೂ., ಕೃಷಿಗೆ ೧೯,೩೭೪ ಕೋಟಿ ರೂ., ಕೃಷಿ ಸಮ್ಮಾನ್ ಯೋಜನೆಯಡಿ ೪೭,೮೬,೦೦೦ ರೈತರಿಗೆ ೮,೭೦೪ ಕೋಟಿ ರೂ., ಪ್ರಧಾನಮಂತ್ರಿ ಕೃಷಿ ಕ್ರೆಡಿಟ್ ಕಾರ್ಡ್ ಯೋಜನೆಯಡಿ ೧೯ ಸಾವಿರ ಕೋಟಿ ರೂ. ನೀಡಿದ್ದಾರೆ. ರಾಷ್ಟಿçÃಯ ಹೆದ್ದಾರಿಗೆ ೩,೨೯೮ ಕಿಲೋಮೀಟರ್‌ಗೆ ೫೦,೫೨೭ ಕೋಟಿ ರೂ. ಸೇರಿದಂತೆ ವಿವಿಧ ಯೋಜನೆÀ ಮೂಲಕ ರಾಜ್ಯಕ್ಕೆ ಮೋದಿ ೧,೨೯,೭೭೬ ಲಕ್ಷ ಕೋಟಿ ರೂ. ಅನುದಾನ ನೀಡಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಹಿತಿ ನೀಡಿದರು.

ಕಾಮಧೇನು ಮೋದಿ: ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಪಾಲಿಗೆ ಕಾಮಧೇನು ಇದ್ದಂತೆ ಎಂದ ಪ್ರತಾಪ್ ಸಿಂಹ, ಮೈಸೂರು- ಬೆಂಗಳೂರು ಹೆದ್ದಾರಿ ವಿಸ್ತರಣೆ, ಮೈಸೂರು ವಿಮಾನ ನಿಲ್ದಾಣ ರನ್‌ವೇ ವಿಸ್ತರಣೆ, ಮೈಸೂರು- ಮಡಿಕೇರಿ ರಸ್ತೆ ಅಭಿವೃದ್ಧಿ, ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಗೆ ೧೫೦ ಕೋಟಿ ಮೊತ್ತದ ಅತ್ಯುನ್ನತ ಅಧ್ಯಯನ ಕೇಂದ್ರ, ಪಾಸ್‌ಪೋರ್ಟ್ ಸೇವಾ ಕೇಂದ್ರ, ನೋಟು ಮುದ್ರಣ ಇಂಕ್ ಉತ್ಪಾದನಾ ಘಟಕ ಸೇರಿದಂತೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಅದರಲ್ಲಿ ಮೈಸೂರು-ಬೆಂಗಳೂರು ನಡುವಿನ ದಶಪಥ ರಸ್ತೆ ನಿರ್ಮಾಣಕ್ಕೆ ೯,೫೫೧ ಕೋಟಿ ರೂ. ನೀಡಿದೆ. ಮೈಸೂರು- ಮಡಿಕೇರಿ ಹೆದ್ದಾರಿ ವಿಸ್ತರಣೆಗೆ ೪ ಸಾವಿರ ಕೋಟಿ, ಆತ್ಮನಿರ್ಭರ ಭಾರತ್ ಯೋಜನೆಯಡಿ ೧೦ ಸಾವಿರ ಫಲಾನುಭವಿಗಳಿಗೆ ತಲಾ ೧೦ ಸಾವಿರ ರೂ. ಕೇಂದ್ರದಿAದ ನೀಡಲಾಗುತ್ತಿದೆ. ನಾವು ಏನನ್ನೂ ಕೇಳದೆ ಎಲ್ಲವನ್ನು ಕೊಡುವ ಕಾಮಧೇನು ಪ್ರಧಾನಿ ಮೋದಿ ಎಂದು ಬಣ್ಣಿಸಿದರು.ಸುದ್ದಿಗೋಷ್ಠಿಯಲ್ಲಿ ಶಾಸಕ ಎಲ್. ನಾಗೇಂದ್ರ, ನಗರ ಬಿಜೆಪಿ ಅಧ್ಯಕ್ಷöಟಿ.ಎಸ್. ಶ್ರೀವತ್ಸ, ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ಪ್ರಭಾರ ಮೇಯರ್ ಸುನಂದಾ ಪಾಲನೇತ್ರ, ಮುಡಾ ಅಧ್ಯಕ್ಷö ಹೆಚ್.ವಿ.ರಾಜೀವ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷöಎನ್.ಆರ್. ಕೃಷ್ಣಪ್ಪಗೌಡ, ವಕ್ತಾರ ಎಂ.ವಿ.ಮೋಹನ್, ಮೈಮುಲ್ ನಿರ್ದೇಶಕ ಎಸ್.ಸಿ.ಅಶೋಕ್ ಸೇರಿದಂತೆ ಮೊದಲಾದವರು ಹಾಜರಿದ್ದರು.

Translate »