ಶ್ರೀರಂಗಪಟ್ಟಣ ಮೂಲ ಮಂದಿರ ಚಲೋಗೆ ತಡೆ
ಮೈಸೂರು

ಶ್ರೀರಂಗಪಟ್ಟಣ ಮೂಲ ಮಂದಿರ ಚಲೋಗೆ ತಡೆ

June 5, 2022

ಕಿರಂಗೂರಿAದ ಆರಂಭವಾದ ಜಾಥಾಗೆ ಅಲ್ಲೇ ನಿರ್ಬಂಧ ಬ್ಯಾರಿಕೇಡ್ ಭೇದಿಸಿ ನುಗ್ಗಲು ಯತ್ನಿಸಿದ ಯುವಕ
ಮೈಸೂರು-ಬೆಂಗಳೂರು ರಸ್ತೆ ಸಂಚಾರ ಅಸ್ತವ್ಯಸ್ತ ಸಾರ್ವಜನಿಕರ ಚಲನವಲನದ ಮೇಲೆ ಹದ್ದಿನಕಣ್ಣು
ಈ ಮಧ್ಯೆ ಇಬ್ಬರು ಯುವಕರು ಜಾಮಿಯಾ ಮಸೀದಿ ಬಳಿ ಕುಳಿತು ಹನುಮ ಜಪ ಮಾಡುತ್ತಿರುವಂತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದರ ಅಸಲಿಯತ್ತಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದಂತೂ ಈಗಿನದ್ದಲ್ಲ ಎಂದು ಪೊಲೀಸರೇ ಸ್ಪಷ್ಪಪಡಿಸಿ ದ್ದಾರೆ. ಅಷ್ಟಕ್ಕೂ ಪೊಲೀಸರ ಸರ್ಪ ಗಾವಲು ಭೇದಿಸಿ ಒಳ ಪ್ರವೇಶಿಸಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಶ್ರೀರಂಗಪಟ್ಟಣದಲ್ಲಿ ಮೂಲ ಮಂದಿರ ಚಲೋ ಜಾಥಾಗೆ ತಡೆ. ಎಸ್ಪಿ ಎನ್.ಯತೀಶ್ ಸ್ಥಳದಲ್ಲೇ ಮೊಕ್ಕಾಂ.
ಶ್ರೀರAಗಪಟ್ಟಣ, ಜೂ.೪(ವಿನಯ್ ಕಾರೇಕುರ)- ವಿಶ್ವ ಹಿಂದೂ ಪರಿಷತ್, ಭಜರಂಗದಳ ಸೇರಿದಂತೆ ಹಿಂದೂ ಪರ ಕಾರ್ಯಕರ್ತರು ಕರೆ ನೀಡಿದ್ದ `ಮೂಲ ಮಂದಿರ ಚಲೋ’ ಜಾಥಾ ಪಟ್ಟಣ ಪ್ರವೇಶಿಸುವುದನ್ನು ತಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಜಾಮಿಯಾ ಮಸೀದಿಯಲ್ಲಿ ಹನುಮಂತನ ಪೂಜೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ಮೂಲ ಮಂದಿರ ಚಲೋ ಜಾಥಾಕ್ಕೆ ಶನಿವಾರ ಕರೆ ನೀಡ ಲಾಗಿತ್ತು. ಇದಕ್ಕೆ ಅವಕಾಶ ನೀಡದ ಪೊಲೀಸರು ಮಸೀದಿ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು.

೫೦೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಸರ್ಪಗಾವಲಿದ್ದರು. ಬೆಳಗ್ಗೆ ೧೧ ಗಂಟೆ ವೇಳೆಗೆ ತಾಲೂಕಿನ ಕಿರಂಗೂರು ವೃತ್ತ ದಿಂದ ಘೋಷಣೆ ಕೂಗುತ್ತಾ ಜಾಥಾ ಹೊರಟ ಬಜರಂಗ ದಳ, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗ ಸೇನೆ ಕಾರ್ಯಕರ್ತರನ್ನು ಪೊಲೀಸರು ಅಲ್ಲೇತಡೆದು ನಿಲ್ಲಿಸಿದರು. ಕಿರಂಗೂರು ವೃತ್ತದಿಂದ ಮುಂದೆ ಸಾಗದಂತೆ ಮೈಸೂರು-ಬೆಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಬ್ಯಾರಿಕೇಡ್ ಹಾಕಲಾಗಿತ್ತು. ಜೊತೆಗೆ ಕಾರ್ಯ ಕರ್ತರನ್ನು ಹಗ್ಗದ ಮೂಲಕ ನಿಯಂತ್ರಿಸಿದರು. ಬೈಕ್‌ನಲ್ಲಿ ಬಂದ ಯುವಕ ನೊಬ್ಬ ಜೈ ಶ್ರೀರಾಂ ಘೋಷಣೆ ಕೂಗುತ್ತಾ ಪಟ್ಟಣದ ಕಡೆಗೆ ಸಾಗಲು ಯತ್ನಿಸಿದ. ಎಚೆತ್ತ ಪೊಲೀಸರು ಆತನನ್ನು ಬೆನ್ನತ್ತಿ ಹಿಡಿದರು. ಹೆದ್ದಾರಿ ಪಕ್ಕದ ಬನ್ನಿ ಮಂಟಪದತ್ತ ಪ್ರತಿ ಭಟನಾಕಾರರನ್ನು ಕರೆದೊಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು. ಬನ್ನಿಮಂಟಪದಲ್ಲಿ ಬ್ಯಾರಿಕೇಡ್ ಅಳವಡಿಸಿ ಅತ್ತಿತ್ತ ಸುಳಿಯದಂತೆ ನಾಕಾಬಂಧಿ ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಸ್ಥಳದಲ್ಲೇ ಮೊಕ್ಕಾಂ ಹೂಡಿ ಭದ್ರತೆ ಮೇಲ್ವಿಚಾರಣೆ ನಡೆಸಿದರು. ಪಟ್ಟಣದ ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿಗೆ ಸಂಪರ್ಕ ಕಲ್ಪಿಸುವ ಮಾರ್ಗವನ್ನು ಬಂದ್ ಮಾಡಲಾಗಿತ್ತು. ವೆಲ್ಲೆಸ್ಲಿ ಸೇತುವೆಯಿಂದ ಮಸೀದಿಗೆ ತೆರಳುವ ಮಾರ್ಗವನ್ನು ಮುಚ್ಚಲಾಗಿತ್ತು. ಪಟ್ಟಣದ ಪೂರ್ವ ಕೋಟೆ ದ್ವಾರ, ಕೋಟೆ ಮತ್ತು ಬುರುಜುಗಳ ಮೇಲೆ ಪೊಲೀಸರನ್ನು ಕಾವಲಿರಿಸಲಾಗಿತ್ತು. ಅನುಮಾನ ಬಂದವರನ್ನು ತಡೆದು ವಾಪಸ್ ಕಳುಹಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಜಿಲ್ಲಾಡಳಿತ ಮತ್ತು ಪೊಲೀಸರು ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ಸ್ಥಳವಾದ ಜಾಮಿಯಾ ಮಸೀದಿಯತ್ತ ತೆರಳಲು ನಮ್ಮನ್ನು ಬಿಟ್ಟಿಲ್ಲ. ಆದರೆ ಕಾನೂನು ಹೋರಾಟದ ಮೂಲಕ ಮೂಲ ಮಂದಿರವನ್ನು ನಮ್ಮ ಸುಪರ್ದಿಗೆ ಪಡೆದೇ ತೀರುತ್ತೇವೆ ಎಂದು ಬಜರಂಗಸೇನೆ ರಾಜ್ಯ ಸಂಚಾಲಕ ಬಿ.ಮಂಜುನಾಥ್ ಹೇಳಿದರು.

ಪ್ರತಿಭಟನಾಕಾರರ ಅಹವಾಲು ಆಲಿಸಿದ ಉಪ ವಿಭಾಗಾಧಿಕಾರಿ ಬಿ.ಸಿ. ಶಿವಾನಂದ ಮೂರ್ತಿ ಸಂಘಟನೆಗಳ ಬೇಡಿಕೆಗಳ ಕುರಿತು ಕಾನೂನಿನ ವ್ಯಾಪ್ತಿಯಲ್ಲಿ ಪರಿಶೀಲಿಸ ಲಾಗುವುದು. ಸ್ಮಾರಕದ ವಾರಸುದಾರಿಕೆ ಮತ್ತು ಅದರ ಐತಿಹ್ಯ ಕುರಿತು ಸಂಬAಧಿಸಿದ ಇಲಾಖೆ ಜತೆಗೂ ಚರ್ಚಿಸಿ ಅಗತ್ಯ ಮಾಹಿತಿ ಪಡೆಯಲಾಗುವುದು ಎಂದು ಭರವಸೆ ನೀಡಿದರು. ತಹಶೀಲ್ದಾರ್ ಶ್ವೇತಾ ಎನ್.ರವೀಂದ್ರ ಹಾಜರಿದ್ದರು.

ಸಂಚಾರ ಅಸ್ತವ್ಯಸ್ತ: ಮೂಲ ಮಂದಿರ ಚಲೋ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ಅಡ್ಡಿಪಡಿಸಿದ ಹಿನ್ನಲೆಯಲ್ಲಿ ಮಂಡ್ಯ, ಮೈಸೂರು ವಿವಿಧೆಡೆಗಳಿಂದ ಆಗಮಿಸಿದ ಹಿಂದೂಪರ ಕಾರ್ಯರ್ತರು ಕಿರಂಗೂರು ವೃತ್ತದ ಬಳಿ ಜಮಾಯಿಸಿದ್ದರಿಂದ ಕೆಲಕಾಲ ಮೈಸೂರು-ಬೆಂಗಳೂರು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿತ್ತು.

ಜಾಥಾ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಲ್ಲಿ ಪೊಲೀಸರು ಸರ್ಪಗಾವಲು ಹಾಕಿದ್ದರು. ಅಲ್ಲದೇ ಪಟ್ಟಣ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ ಪರಿಣಾಮ ಹಾಗೂ ಮತ್ತೊಂದೆಡೆ ಹೆದ್ದಾರಿ ಸಂಚಾರ ಅಸ್ತವ್ಯಸ್ತವಾಗಿದ್ದರಿಂದ ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಗಳಿಗೆ ತೆರಳಲು ಪರದಾಡುವಂತಾಯಿತು. ಅಲ್ಲದೇ ರೈತರು ಕಷ್ಟಪಟ್ಟು ಬೆಳೆದ ಹಣ್ಣು ತರಕಾರಿ, ದವಸ ಧಾನ್ಯ ಮಾರಾಟಕ್ಕೆ ತೊಂದರೆಯಾಯಿತು.

Translate »